»   » ಕಸ್ತೂರಿ ವಾಹಿನಿ ನಿರೂಪಕಿಯಾಗಿ ಪೂಜಾಗಾಂಧಿ

ಕಸ್ತೂರಿ ವಾಹಿನಿ ನಿರೂಪಕಿಯಾಗಿ ಪೂಜಾಗಾಂಧಿ

Posted By:
Subscribe to Filmibeat Kannada

ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರ ಪತ್ನಿಅನಿತಾ ಕುಮಾರಸ್ವಾಮಿ ಒಡೆತನದ ಕಸ್ತೂರಿ ವಾಹಿನಿಯ ನಿರೂಪಕಿಯಾಗಿ ಪೂಜಾಗಾಂಧಿ ಕಾಣಿಸಲಿದ್ದಾರೆ. ಇದು ಯಾವುದೇ ಚಿತ್ರವೊಂದರ ಸನ್ನಿವೇಶವಲ್ಲ. ನಿಜಕ್ಕೂ ಪೂಜಾಗಾಂಧಿ ನಿರೂಪಕಿಯಾಗಲಿದ್ದಾರೆ.

'ಹೀರೋ ನಂ.1' ಕಾರ್ಯಕ್ರಮಕ್ಕಾಗಿ ಪೂಜಾಗಾಂಧಿ ಅವರು ರಾಜ್ಯದಾದ್ಯಂತ ಸಂಚರಿಸಿ 25 ಮಂದಿಯನ್ನು ಆಯ್ಕೆಮಾಡಿದ್ದಾರೆ. ಇಪ್ಪತ್ತೈದು ಕಂತುಗಳಲ್ಲಿ ಈ ಕಾರ್ಯಕ್ರಮ ಪ್ರಸಾರವಾಗಲಿದೆ. ಈ ರಿಯಾಲಿಟಿ ಕಾರ್ಯಕ್ರಮದ ಮತ್ತೊಂದು ವಿಶೇಷವೆಂದರೆ, ಅಂತಿಮವಾಗಿ ಗೆದ್ದ ಸ್ಪರ್ಧಿಗೆ ಅನಿತಾಕುಮಾರಸ್ವಾಮಿ ನಿರ್ಮಿಸಲಿರುವ ಚಿತ್ರದಲ್ಲಿ ನಾಯಕ ನಟನಾಗಿ ಅಭಿನಯಿಸುವ ಅವಕಾಶ ಸಿಗಲಿದೆ.

ಏತನ್ಮಧ್ಯೆ ಪೂಜಾಗಾಂಧಿ ಅಭಿನಯಿಸುತ್ತಿರುವ ದ್ವಿಪಾತ್ರಾಭಿನಯದ 'ರಾಣಿ ಮಹಾರಾಣಿ' ಚಿತ್ರದ ಚಿತ್ರೀಕರಣ ನೆನೆಗುದಿಗೆ ಬಿದ್ದಿದೆ. ನಿರ್ಮಾಪಕ ಜೈ ಜಗದೀಶ್ ಅವರ ಸಲಹೆ ಮತ್ತು ಸೂಚನೆ ಮೇರೆಗೆ ನಿರ್ದೇಶಕ ಬಿ ರಾಮಮೂರ್ತಿ ಅವರು ರಾಣಿ ಮಹಾರಾಣಿ ಚಿತ್ರವನ್ನು ಕೈಬಿಟ್ಟಿದ್ದಾಗಿ ತಿಳಿಸಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada