twitter
    For Quick Alerts
    ALLOW NOTIFICATIONS  
    For Daily Alerts

    ಸತ್ಯಮೇವ ಜಯತೆ ಕನ್ನಡದಲ್ಲಿ ಡಬ್ಬಿಂಗ್ ಇಲ್ಲ

    |

    Aamir Khan's Satyamev Jayate will not have Kannada version
    ಬಿಡುಗಡೆಗೆ ಮುನ್ನವೇ ವಿವಾದದ ಅಲೆ ಎಬ್ಬಿಸಿರುವ ಅಮೀರ್ ಖಾನ್ ಅವರ ರಿಯಾಲಿಟಿ ಶೋ 'ಸತ್ಯಮೇವ ಜಯತೆ' ಕನ್ನಡಕ್ಕೆ ಡಬ್ ಆಗುತ್ತಿಲ್ಲ.

    ಕನ್ನಡ ಚಿತ್ರರಂಗ ಮತ್ತು ಕನ್ನಡ ಟಿವಿ ವಾಹಿನಿಯವರ ತೀವ್ರ ಒತ್ತಡದಿಂದ ಡಬ್ ಮಾಡುವ ನಿರ್ಧಾರದಿಂದ ಆಮೀರ್ ಖಾನ್ ಹಿಂದೆ ಸರಿದಿದ್ದಾರೆ ಎನ್ನಲಾಗಿದೆ. ಇದೇ ವೇಳೆ, ಪಶ್ಚಿಮ ಬಂಗಾಳದಲ್ಲೂ ಒತ್ತಡ ಹೆಚ್ಚಾದ ಹಿನ್ನಲೆಯಲ್ಲಿ ಬೆಂಗಾಲಿ ಭಾಷೆಯಲ್ಲೂ ಈ ರಿಯಾಲಿಟಿ ಶೋ ಡಬ್ ಆಗುತ್ತಿಲ್ಲ.ಆದರೆ ಈ ಶೊ ತೆಲುಗು, ಮಲಯಾಳಂ, ತಮಿಳು ಹಾಗೂ ಹಿಂದಿಯಲ್ಲಿ ಮೂಡಿಬರುತ್ತಿದೆ.

    ಕಳೆದ ವಾರ ಕನ್ನಡ ಚಿತ್ರರಂಗ ಮತ್ತು ಕನ್ನಡ ಟಿವಿ ವಾಹಿನಿಯ 30 ಮಂದಿ ಪ್ರತಿನಿಧಿಗಳು ಆಮೀರ್ ಖಾನ್ ಪ್ರೊಡಕ್ಷನ್ ಮ್ಯಾನೇಜರ್ ಅವರನ್ನು ಭೇಟಿ ಮಾಡಿ ಕನ್ನಡಕ್ಕೆ ಕಾರ್ಯಕ್ರಮ ಡಬ್ ಆಗುವ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತ ಪಡಿಸಿದ್ದರು.

    ಮನವಿಗೆ ಸ್ಪಂದಿಸಿದ ಆಮಿರ್ ಖಾನ್ ಪ್ರೊಡಕ್ಷನ್ ಸಂಸ್ಥೆಯ ಮ್ಯಾನೇಜರ್ " ಸತ್ಯಮೇವ ಜಯತೆಯನ್ನು ಕನ್ನಡದಲ್ಲಿ ಡಬ್ಬಿಂಗ್ ಮಾಡುವುದಿಲ್ಲ" ಎಂದು ಪ್ರತಿನಿಧಿಗಳಿಗೆ ಮೌಖಿಕ ಭರವಸೆ ನೀಡಿದರು. ಕರ್ನಾಟಕ ಟೆಲಿವಿಷನ್ ಅಸೋಸಿಯೇಶನ್ ಪ್ರತಿನಿಧಿ ಬಿ ಸುರೇಶ್ ಈ ಬಗ್ಗೆ ಪ್ರತಿಕ್ರಯಿಸಿ, "ನಾವು ಡಬ್ಬಿಂಗ್ ವಿರೋಧಿಯಲ್ಲ. ಕಾರ್ಟೂನ್, ವಿಜ್ಞಾನ ಮುಂತಾದ ಕಾರ್ಯಕ್ರಮಗಳು ಡಬ್ಬಿಂಗ್ ಆಗುವುದಕ್ಕೆ ನಮ್ಮ ವಿರೋಧವಿಲ್ಲ" ಎಂದು ಹೇಳಿದರು.

    ಕರ್ನಾಟಕ ಟೆಲಿವಿಷನ್ ಅಸೋಸಿಯೇಶನ್ ನಿರ್ಧಾರಕ್ಕೆ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷೆ ತಾರಾ ವೇಣು ಸಹಮತ ವ್ಯಕ್ತ ಪಡಿಸಿದ್ದಾರೆ. ಕನ್ನಡ ಚಿತ್ರೋದ್ಯಮವನ್ನು ಉಳಿಸುವ ಸಲುವಾಗಿ ನಾವು ಡಬ್ಬಿಂಗ್ ವಿರೋಧಿಸುತ್ತಿದ್ದೇವೆ ಎಂದು ತಾರಾ ದನಿಗೂಡಿಸಿದರು.

    ಸತ್ಯಮೇವ ಜಯತೆ ರಿಯಾಲಿಟಿ ಶೋ ಸ್ಟಾರ್ ಪ್ಲಸ್ ಮತ್ತು ದೂರದರ್ಶನದಲ್ಲಿ ಪ್ರಸಾರವಾಗಲಿದೆ. ಹಾಗೂ ದೂರದರ್ಶನದ ಭಾಷಾ ಚಾನೆಲ್ ಗಳಲ್ಲಿ ಇದರ ಡಬ್ಬಿಂಗ್ ಆವೃತ್ತಿ ಆಯಾಯ ಭಾಷೆಗಳಲ್ಲಿ ಪ್ರಸಾರವಾಗಲಿದೆ.

    English summary
    Aamir Khan Productions have clarified that they have dropped the project of dubbing " Satya Meva Jayate" reality show to Kannada. Earlier, Karnataka TV association had urged Star Plus TV to abstain from dubbing in the interest of Kannada movie industry.
    Wednesday, April 25, 2012, 13:35
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X