twitter
    For Quick Alerts
    ALLOW NOTIFICATIONS  
    For Daily Alerts

    ಟಿವಿ ವಾಹಿನಿಗಳಿಗೆ ಸೆನ್ಸಾರ್‌ಶಿಪ್ ಬೇಕು

    By * ವಿವೇಕಾನಂದ, ಪುತ್ತೂರು
    |

    ಜಗತ್ತಿನಲ್ಲಿ ಲೈಂಗಿಕತೆ ಮಾರಾಟವಾಗುತ್ತೆ ಎನ್ನುವುದು ಬಹು ಪ್ರಚಲಿತವಿರುವ ಹಾಗೂ ಚಾಲ್ತಿಯಲ್ಲಿರುವ ವಾಸ್ತವ ಕಥಾನಕ. ಸಿನಿಮಾ ಲೋಕಕ್ಕೆ ಮಾತ್ರ ಮೀಸಲಾಗಿದ್ದ ಈ ಕಲ್ಪನೆಗಳು, ಇದೀಗ ನಿಧಾನವಾಗಿ ಮನೆಯ ಪಡಸಾಲೆಯನ್ನೂ ಪ್ರವೇಶಿಸಿವೆ.

    ಬಿಗ್ ಬಾಸ್, ರಾಕಿ ಕಾ ಇನ್‌ಸಾಫ್ ಇರಬಹುದು ಅಥವಾ ಎಮೋಷನಲ್ ಅತ್ಯಾಚಾರ್‌ಗಳಂತಹ ರಿಯಾಲಿಟಿ ಶೋಗಳಿರಬಹುದು. ಇದರಲ್ಲಿನ ಲೈಂಗಿಕ ವಿಕೃತಿಗಳು ಹಾಗೂ ಆಕ್ಷೇಪಾರ್ಹ ದೃಶ್ಯಗಳು ಯಾವುದೇ ಕತ್ತರಿ ಪ್ರಯೋಗಕ್ಕೆ ಒಳಗಾಗದೆ ಸುಲಭದಲ್ಲಿ ಪ್ರಸಾರವಾಗುತ್ತವೆ. ಎಲ್ಲದಕ್ಕಿಂತಲೂ ಹೆಚ್ಚಾಗಿ ಈ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ, ಸೆನ್ಸಾರ್‌ಗೆ ಒಳಪಡದ ದೃಶ್ಯಗಳು ಹಾಗೂ ಅಡಿ ಬರಹಗಳನ್ನು ಅಂತರ್ಜಾಲದಲ್ಲಿ ಸುಲಭವಾಗಿ ದಕ್ಕಿಸಿಕೊಳ್ಳಬಹುದಾಗಿದ್ದು, ಆಬಾಲ ವಯಸ್ಕರಾದಿಯಾಗಿ ಯಾರು ಬೇಕಾದರೂ ಪಡೆಯಬಹುದು.

    ಅರ್ಮಾನೋಂ ಕಾ ಬಲಿದಾನ್'ನಲ್ಲಿ ಅನಗತ್ಯ ಹಿಂಸಾಚಾರವನ್ನು ಪ್ರದರ್ಶಿಸಿದ್ದಕ್ಕಾಗಿ ಟೆಲಿವಿಜನ್ ಸೆನ್ಸಾರ್‌ಶಿಪ್ ಕುರಿತಾಗಿ ಸರ್ಕಾರ, ಜನ ಹಾಗೂ ಸಂಘಟನೆಗಳ ನಡುವೆ ಚರ್ಚೆ ಹುಟ್ಟಿಕೊಂಡಿತು. ಇಂದಿನವರೆಗೆ ನಮ್ಮ ದೇಶದಲ್ಲಿ ಟೆಲಿವಿಜನ್ ನಿಯಂತ್ರಣಾ ಮಂಡಳಿ ಜಾರಿಗೆ ಬಂದಿಲ್ಲ.

    ಟಿವಿ ಚಾನಲ್‌ಗಳಲ್ಲಿ ಪ್ರಸಾರವಾಗುವ ಎಲ್ಲಾ ಕಾರ್ಯಕ್ರಮಗಳು ಕೇಬಲ್ ಟೆಲಿವಿಜನ್ ನೆಟ್‌ವರ್ಕ್ ನಿಯಂತ್ರಣಾ ಕಾಯ್ದೆಯ ಕಾರ್ಯಕ್ರಮ ಹಾಗೂ ಜಾಹೀರಾತು ಸಂಹಿತೆಯಡಿ ಪ್ರಸಾರವಾಗತಕ್ಕದ್ದು. ಅಂತಹ ಸಂಹಿತೆಗಳು ಇಲ್ಲವೆಂದರೆ ಪ್ರಸಾರಕರು ಮನಸ್ಸಿಗೆ ಬಂದಂತೆ
    ಕಾರ್ಯಕ್ರಮ ಪ್ರಸಾರ ಮಾಡುತ್ತಾರೆ. ತಡ ರಾತ್ರಿಯಲ್ಲಿ ಮಾತ್ರ ಪ್ರಸಾರ ಮಾಡತಕ್ಕ ವಯಸ್ಕ ಚಿತ್ರಗಳು ಹಾಗೂ ಬಿಗ್ ಬಾಸ್‌ನಂತಹ ರಿಯಾಲಿಟಿ ಶೋಗಳನ್ನು ಅಪರಾಹ್ನ ವೇಳೆಯಲ್ಲೂ ಬಿತ್ತರಿಸುತ್ತಾರೆ.

    English summary
    The Centre has decided to set up a content-monitoring council in view of growing complaints of vulgarity on TV shows. But, Reality Shows, adult content on TV channel are irritating public. Censorship for television is needed
    Tuesday, April 26, 2011, 10:57
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X