»   » ರಾಶ್ ಡ್ರೈವ್ :ನಟ ರೋನಿತ್ ರಾಯ್ ಬಂಧನ

ರಾಶ್ ಡ್ರೈವ್ :ನಟ ರೋನಿತ್ ರಾಯ್ ಬಂಧನ

Posted By:
Subscribe to Filmibeat Kannada
TV star Ronit Roy arrested for rash driving
ಹಿಂದಿ ಕಿರುತೆರೆಯ ಬಹು ಜನಪ್ರಿಯ ನಟ ರೋನಿತ್ ರಾಯ್ ನನ್ನು ಮುಂಬೈ ಪೊಲೀಸರು ಗುರುವಾರ(ಅ.27) ಬಂಧಿಸಿದ್ದಾರೆ. ಸಲ್ಮಾನ್ ಖಾನ್ ನಂತರ ಮತ್ತೊಬ್ಬ ಸೆಲೆಬ್ರಿಟಿಗಳ ಕಾರು ಮತ್ತೆ ಶ್ರೀಸಾಮಾನ್ಯರ ಕಾಲಿಗೆ ಬಡಿದಿದೆ.

ಮುಂಬೈನ ಅಂಬೋಲಿ ಪ್ರದೇಶದಲ್ಲಿ ರಾಶ್ ಆಗಿ ಕಾರು ಚಲಿಸುತ್ತಿದ್ದ ರಾಯ್ ಇನ್ನೊಂದು ಕಾರಿಗೆ ಢಿಕ್ಕಿ ಹೊಡೆದಿದೆ. ಈ ಘಟನೆಯಲ್ಲಿ ಮೂವರಿಗೆ ತೀವ್ರವಾದ ಗಾಯಗಳಾಗಿದೆ. ಮದ್ಯ ಸೇವಿಸಿ ಕಾರು ಚಾಲನೆ ಮಾಡಿದ ಆರೋಪವನ್ನು ನಟ ರೋನಿತ್ ಮೇಲೆ ಹೊರೆಸಿ ಬಂಧಿಸಲಾಗಿತ್ತು. ಆದರೆ, ನಂತರ ಜಾಮೀನು ಪಡೆದು ರಾಯ್ ಪೊಲೀಸ್ ವಶದಿಂದ ಹೊರ ಬಂದಿದ್ದಾರೆ.

ಆದರೆ, ಇನ್ನೂ ದೀಪಾವಳಿ ಪಾರ್ಟಿ ಮೂಡ್ ನಲ್ಲಿದ್ದ ರೋನಿತ್, ನಾನು ಕುಡಿದು ಕಾರು ಚಲಿಸಿಲ್ಲ ಎಂದು ವಾದಿಸುತ್ತಿದ್ದಾನೆ. ನಟ ರೋನಿತ್ ನ ಮರ್ಸೀಡೆಸ್ ಕಾರು ಜಜ್ಜಿ ಹೋಗಿದೆ. ಗಾಯಗೊಂಡವರಲ್ಲಿ 56 ವರ್ಷ ವಯಸ್ಸಿನ ಮಹಿಳೆಯ ಸ್ಥಿತಿ ಚಿಂತಾಜನಕವಾಗಿದ್ದು ಆಕೆಯನ್ನು ಕೂಪರ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹಿಂದಿ ಕಿರುತೆರೆಯ ಆಲ್ ಟೈಮ್ ಹಿಟ್ ಧಾರಾವಾಹಿಯಾದ 'ಕ್ಯೂಕಿ ಸಾಸ್ ಭಿ ಕಭಿ ಬಹು ಥಿ'ಯಲ್ಲ ರೋನಿತ್ ರಾಯ್ ಅಭಿನಯ ಜನ ಮೆಚ್ಚುಗೆ ಗಳಿಸಿತ್ತು. ನಂತರ ಬಂದಿನಿ, ಅದಾಲತ್ ಮುಂತಾದ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದರು. ಉಡಾನ್ ಎಂಬ ಹಿಂದಿ ಚಿತ್ರದ ನಟನೆಗೆ ಫಿಲ್ಮ್ ಫೇರ್ ಪ್ರಶಸ್ತಿಯನ್ನು ರಾಯ್ ಗಳಿಸಿದ್ದಾರೆ.

English summary
Actor Ronit Roy was arrested for rash and negligent driving today. Three people were injured the car accident, which was caused by the Television star in the Amboli area of suburban Mumbai this morning. But he has denied drunk and drive charges.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada