Don't Miss!
- News
ವಿಮಾನದ ಕ್ಯಾಬಿನ್ ಸಿಬ್ಬಂದಿಯೊಂದಿಗೆ ಅನುಚಿತ ವರ್ತನೆ: ಪ್ರಯಾಣಿಕರ ವಿರುದ್ಧ ಕ್ರಮ
- Automobiles
ಟಾಟಾ ಹ್ಯಾರಿಯರ್, ಸಫಾರಿ ಫೇಸ್ಲಿಫ್ಟ್ ಶೀಘ್ರ ಬಿಡುಗಡೆ: ಏನೆಲ್ಲ ಹೊಸತನ ಹೊಂದಿವೆ..
- Sports
ಹ್ಯಾರಿಸ್ ರೌಫ್ ಜೊತೆ ಭಾರತದ ಈ ವೇಗಿಯನ್ನು ಹೋಲಿಸಬೇಡಿ ಎಂದ ಪಾಕ್ ಮಾಜಿ ಕ್ರಿಕೆಟಿಗ
- Finance
America IT Company Layoffs: ಐಟಿ ಕಂಪನಿಗಳಲ್ಲಿ ಉದ್ಯೋಗ ಕಡಿತ: ಲಕ್ಷಾಂತರ ವೃತ್ತಿಪರರ ಬದುಕು ಅತಂತ್ರ
- Technology
ಭಾರತದಲ್ಲಿ ವಿಶ್ವದ ಮೊದಲ PTZ ಕ್ಯಾಮೆರಾ ಪರಿಚಯಿಸಿದ ಸೋನಿ! ಇದರ ಕಾರ್ಯವೈಖರಿ ಹೇಗಿದೆ?
- Lifestyle
ಜ್ವರ ರಾತ್ರಿ ಹೊತ್ತಿನಲ್ಲಿ ಹೆಚ್ಚಾಗುವುದೇಕೆ? ಜ್ವರ ಕಡಿಮೆಯಾಗಲು ಏನು ಮಾಡಬೇಕು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಮಹಾಲಕ್ಷ್ಮಿ ಹೆಸರು ಇಟ್ಟುಕೊಂಡರೆ ಕಷ್ಟ ಅಷ್ಟಿಷ್ಟಲ್ಲ
ಲಕ್ಷ್ಮಿ ಹೆಸರು ಹೆಂಗಸರಿಗೆ ಮಾತ್ರ ನಿಷಿದ್ಧವಲ್ಲ. ಗಂಡಸರೂ ಇಟ್ಟುಕೊಳ್ಳಬಾರದು. ಲಕ್ಷ್ಮೀಪತಿ ಕೋಲಾರ, ಲಕ್ಷ್ಮೀನಾರಾಯಣ ಗಣಪತಿ, ಸಿಬಿಐ ನಿರ್ದೇಶಕ ವಿವಿ ಲಕ್ಷ್ಮೀನಾರಾಯಣ, ಲಕ್ಷ್ಮೀಶ ತೋಳ್ಪಾಡಿ. ಗುಡಿಬಂಡೆ ಲಕ್ಷ್ಮೀನರಸಿಂಹಯ್ಯ..ಈ ಬಗೆಯ ಹೆಸರುಗಳು ವರ್ಜ್ಯ. ಇಟ್ಕೊಂಡರೆ ಅಂಥ ತಪ್ಪೇನೂ ಆಗಲ್ಲ. ಆದರೆ, ಇಂಥವರಿಗೆ ಎರಡು ಮದುವೆ, ಎರಡು ಪ್ರೇಮ, ಎರಡು ಸಂಬಂಧ ಕಟ್ಟಿಟ್ಟ ಬುತ್ತಿ.
ಪರಿಸ್ಥಿತಿ ಹೀಗಿರುವಾಗ, ಈಗಾಗಲೇ ಲಕ್ಷ್ಮೀ ಹೆಸರನ್ನು ಇಟ್ಟುಕೊಂಡವರ ಪಾಡೇನು? ಇದು ಫೋನ್ ಇನ್ ಕಾರ್ಯಕ್ರಮದಲ್ಲಿ ಅನೇಕರನ್ನು ಕಳವಳಕ್ಕೇ ಈಡುಮಾಡಿದ ಪ್ರಶ್ನೆಯಾಗಿತ್ತು. ದಾಖಲೆಗಳಲ್ಲಿ ಹೆಸರುಗಳು ಹೇಗಿವೆಯೋ ಹಾಗಿರಲಿ, ಆದರೆ ನೀವು ಅವಳನ್ನು ಕರೆಯುವಾಗ ಮಾತ್ರ ಬೇರೆ ಹೆಸರು ಬಳಸಿ ಎಂದು ಜ್ಯೋತಿಷಿಗಳು ಪರಿಹಾರ ಸೂಚಿಸಿದರು.
ಏನೇ ಆಗಲಿ, ಜ್ಯೋತಿಷಿಗಳು ಹೇಳಿದ ಮಾತ್ರಕ್ಕೆ ನೀವು ಭಯಪಡುವ ಪ್ರಮೇಯವಿಲ್ಲ. ಉದಾಹರಣೆಗೆ, ನಿಮ್ಮ ಹೆಂಡತಿಯ ಹೆಸರು ಗಜಲಕ್ಷ್ಮೀ ಎಂದಿದ್ದರೆ ಇವತ್ತಿನಿಂದಲೇ ಆಕೆಯ ಹೆಸರು ಹಿಡಿದು ಕರೆಯುವುದನ್ನು ನಿಲ್ಲಿಸಿ. ನಿಮ್ಮ ನಾಲಗೆಗೆ ಇಷ್ಟವಾಗುವ ಅನ್ಯ ಹೆಸರಿನಿಂದ ಕರೆಯಲು ಶುರುಮಾಡಿ...
ಪಂಕಜ ಎನ್ನಿ, ಶಾಲ್ಮಲಿ ಎನ್ನಿ, ವಿಶಾಲಾಕ್ಷಿ ಎನ್ನಿ, ಸರೋಜ ಎನ್ನಿ. ಇವ್ಯಾವುವೂ ನಿಮಗೆ ಒಪ್ಪಿಗೆ ಆಗದಿದ್ದ ಪಕ್ಷದಲ್ಲಿ ಅವಳನ್ನು ಪ್ರೀತಿಯಿಂದ ಲಕ್ಕೀ ಲಕ್ಕೀ ಎಂದು ಕರೆದುಬಿಡಿ.