For Quick Alerts
  ALLOW NOTIFICATIONS  
  For Daily Alerts

  ಬಿಗ್‌ಬಾಸ್‌ಗೆ ಅತ್ಯಾಚಾರ ಆರೋಪಿ: ತೀವ್ರ ಆಕ್ರೋಶ

  By ಫಿಲ್ಮಿಬೀಟ್ ಡೆಸ್ಕ್
  |

  ಬಿಗ್‌ಬಾಸ್‌ ರಿಯಾಲಿಟಿ ಶೋಗಳಿಗೆ ತುಸು ವಿವಾದಾತ್ಮಕ, ವಿಚಿತ್ರ ಸ್ವಭಾವದ ಅಥವಾ ಗ್ಲಾಮರಸ್ ವ್ಯಕ್ತಿಗಳನ್ನು , ಸೆಲೆಬ್ರಿಟಿಗಳನ್ನು ಸ್ಪರ್ಧಿಗಳಾಗಿ ಕರೆಸುವುದು ಸಾಮಾನ್ಯ.

  ತೆಲುಗು ಬಿಗ್‌ಬಾಸ್ 05 ಇದೀಗ ಮತ್ತೆ ಆರಂಭವಾಗಿದ್ದು ಈ ಬಾರಿ ಯಾರ್ಯಾರು ಸ್ಪರ್ಧಿಗಳಾಗಿ ಬಿಗ್‌ಬಾಸ್ ಮನೆಯ ಒಳಗೆ ಹೋಗಲಿದ್ದಾರೆ ಎಂಬ ಪಟ್ಟಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಪಟ್ಟಿಯಲ್ಲಿ ಅತ್ಯಾಚಾರ ಆರೋಪಿಯೊಬ್ಬನ ಹೆಸರಿರುವುದು ನೆಟ್ಟಿಗರನ್ನು ಕೆರಳಿಸಿದೆ.

  ಫನ್ ಬಕೆಟ್ ಭಾರ್ಗವ್ ಹೆಸರಿನ ಟಿಕ್‌ಟಾಕ್ ಸ್ಟಾರ್ ಕೆಲವು ತಿಂಗಳ ಹಿಂದೆ ಅತ್ಯಾಚಾರ ಆರೋಪದಲ್ಲಿ ಬಂಧನಕ್ಕೆ ಒಳಗಾಗಿದ್ದ, ಜಾಮೀನಿನ ಮೇಲೆ ಹೊರಗಿರುವ ಆತನನ್ನು ಬಿಗ್‌ಬಾಸ್ ಸ್ಪರ್ಧಿಯಾಗಿ ಕರೆತರಲಾಗುತ್ತಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಜೋರಾಗಿ ಹರಿದಾಡುತ್ತಿದೆ.

  ಇದಕ್ಕೆ ತೀವ್ರ ವಿರೋಧವನ್ನು ವ್ಯಕ್ತಪಡಿಸಲಾಗಿದ್ದು, ಒಂದೊಮ್ಮೆ ಅತ್ಯಾಚಾರ ಆರೋಪಿ ಫನ್ ಬಕೆಟ್ ಭಾರ್ಗವ್ ಅನ್ನು ಶೋಗೆ ಕರೆತಂದರೆ ಶೋ ಮತ್ತು ಚಾನೆಲ್‌ನ ಮರ್ಯಾದೆ ಮಣ್ಣು ಪಾಲಾಗುತ್ತದೆ. ವೀಕ್ಷಕರು ಸಹ ಶೋ ಅನ್ನು ಬಹಿಷ್ಕರಿಸುತ್ತಾರೆ ಎಂದು ಎಚ್ಚರಿಕೆಯನ್ನು ಹಲವರು ನೀಡಿದ್ದಾರೆ. ಫನ್ ಬಕೆಟ್ ಭಾರ್ಗವ್ ಬಿಗ್‌ಬಾಸ್‌ ಸ್ಪರ್ಧಿಯಾಗಿ ಬಂದರೆ ಚಾನೆಲ್‌ಗೆ ಮುತ್ತಿಗೆ ಹಾಕುವುದಾಗಿಯೂ ಕೆಲವರು ಎಚ್ಚರಿಸಿದ್ದಾರೆ.

  ಸ್ಪಷ್ಟನೆ ನೀಡಿರುವ ಚಾನೆಲ್

  ಸ್ಪಷ್ಟನೆ ನೀಡಿರುವ ಚಾನೆಲ್

  ಆದರೆ ಈ ಬಗ್ಗೆ ಸ್ಪಷ್ಪನೆ ನೀಡಿರುವ ಚಾನೆಲ್‌ ಅತ್ಯಾಚಾರ ಆರೋಪಿ ಫನ್ ಬಕೆಟ್ ಭಾರ್ಗವ್ ಅನ್ನು ಬಿಗ್‌ಬಾಸ್ ಸ್ಪರ್ಧಿಯಾಗಿ ಕರೆತರಲಾಗುತ್ತದೆ ಎಂಬುದು ಸುಳ್ಳು, ನಾವು ಯಾವುದೇ ಕಾರಣಕ್ಕೆ ಅತ್ಯಾಚಾರ ಆರೋಪಿಯನ್ನು ಕಾರ್ಯಕ್ರಮಕ್ಕೆ ಕರೆತರುವುದಿಲ್ಲ. ನಾವು ಆತನನ್ನು ಸಂಪರ್ಕ ಸಹ ಮಾಡಿಲ್ಲ ಎಂದು ಹೇಳಿಕೆ ಬಿಡುಗಡೆ ಮಾಡಲಾಗಿದೆ.

  ಸಿನಿಮಾಗಳಲ್ಲಿ ಬ್ಯುಸಿಯಾಗಿ ನಿತ್ಯಾ

  ಸಿನಿಮಾಗಳಲ್ಲಿ ಬ್ಯುಸಿಯಾಗಿ ನಿತ್ಯಾ

  ಫನ್ ಬಕೆಟ್ ಭಾರ್ಗವ್ ಟಿಕ್‌ ಟಾಕ್‌ ವಿಡಿಯೋಗಳಿಂದ ಬಹಳ ಖ್ಯಾತರಾಗಿದ್ದರು. 'ಓ ಮೈ ಗಾಡ್, ಓ ಮೈ ಗಾಡ್' ಎನ್ನುತ್ತಿದ್ದ ಹಡುಗಿಯೊಂದಿಗೆ ಸೇರಿ ಹಲವು ವಿಡಿಯೋಗಳನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು ಆ ವಿಡಿಯೋಗಳು ಜನಪ್ರಿಯವಾಗಿದ್ದರು, ಫನ್ ಬಕೆಟ್‌ ಭಾರ್ಗವ್‌ಗೆ ಸಾಕಷ್ಟು ಜನ್ರಪಿಯತೆ ಬಂದಿತ್ತು. ನಂತರ ಓ ಮೈ ಗಾಡ್ ಹುಡುಗಿ ನಿತ್ಯಾ ಆತನಿಂದ ದೂರಾಗಿ ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದಳು.

  ಪೊಲೀಸರು ಭಾರ್ಗವ್ ಅನ್ನು ಬಂಧಿಸಿದ್ದರು

  ಪೊಲೀಸರು ಭಾರ್ಗವ್ ಅನ್ನು ಬಂಧಿಸಿದ್ದರು

  ಅದೇ ಸಮಯದಲ್ಲಿ ಇನ್‌ಸ್ಟಾಗ್ರಾಂನಲ್ಲಿ ಯುವತಿಯೊಬ್ಬಳನ್ನು ಸಂಪರ್ಕಿಸಿದ ಭಾರ್ಗವ್ ತನ್ನೊಂದಿಗೆ ಜಂಟಿಯಾಗಿ ವಿಡಿಯೋ ಮಾಡಲು ಆಹ್ವಾನಿಸಿ ಆಕೆಯನ್ನು ನಂಬಿಸಿ ಆಕೆಯೊಂದಿಗೆ ಲೈಂಗಿಕ ಸಂಪರ್ಕ ನಡೆಸಿ ಆಕೆ ತಾಯಿಯಾಗುವಂತೆ ಮಾಡಿದ್ದಾನೆ. ಆಕೆ ಇನ್ನೂ ಅಪ್ರಾಪ್ತೆಯಾಗಿದ್ದು ಯುವತಿಯ ತಾಯಿ ನೀಡಿದ ದೂರಿನ ಆಧಾರದಲ್ಲಿ ಫನ್ ಬಕೆಟ್ ಭಾರ್ಗವ್ ಅನ್ನು ಪೊಲೀಸರು ಕೆಲವು ತಿಂಗಳ ಹಿಂದೆ ಬಂಧಿಸಿದ್ದರು. ಈ ಸುದ್ದಿ ತೆಲುಗು ರಾಜ್ಯಗಳಲ್ಲಿ ಬಹು ದೊಡ್ಡ ಸುದ್ದಿಯಾಗಿತ್ತು. ತನ್ನ ಜೊತೆಗೆ ವಿಡಿಯೋ ಮಾಡುತ್ತಿದ್ದ ಯುವತಿಯ ಮೇಲೆಯೇ ಭಾರ್ಗವ್ ಅತ್ಯಾಚಾರ ಮಾಡಿದ್ದಾನೆ ಎನ್ನಲಾಗಿತ್ತು, ಆದರೆ ನಿತ್ಯಾ ಹಾಗೂ ಆಕೆಯ ತಾಯಿ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಭಾರ್ಗವ್‌ ನಿಂತ ತೊಂದರೆಗೆ ಸಿಲುಕಿದ ಯುವತಿ ನಾನಲ್ಲ. ಆತ ನನ್ನೊಂದಿಗೆ ಕೆಟ್ಟದಾಗಿ ವರ್ತಿಸಿರಲಿಲ್ಲ. ಆದರೆ ಈಗ ಯುವತಿಯೊಬ್ಬಳಿಗೆ ಅನ್ಯಾಯವಾಗಿರುವುದು ಮನಸ್ಸಿಗೆ ತೀವ್ರ ನೋವುಂಟು ಮಾಡಿದೆ ಎಂದಿದ್ದರು.

  ಬಿಗ್‌ಬಾಸ್ 05 ಶೀಘ್ರವೇ ಪ್ರಾರಂಭ

  ಬಿಗ್‌ಬಾಸ್ 05 ಶೀಘ್ರವೇ ಪ್ರಾರಂಭ

  ಇದೀಗ ಆರಂಭವಾಗಿರುವ ಬಿಗ್‌ಬಾಸ್ 05ಗೆ ಕಾಸ್ಕೊ ಸುನಿಲ್, ಪ್ರಿಯಾಂಕಾ ನಿಗ್, ಲೋಬೊ, ಆಂಕರ್ ವರ್ಷಿಣಿ, ಪ್ರಿಯಾ ರಾಮನ್, ಶ್ರೀ ಹನುಮಂತ, ಷಣ್ಮುಖ್ ಜಸ್ವಂತ್, ಆಂಕರ್ ರವಿ, ಆರ್‌ಜೆ ಕಾಜಲ್, ಜಸ್ವಂತ್ ಪಡಾಲ, ವಿಜಿ ಸನ್ನಿ, ನವ್ಯಾ ಸಾಮಿ ಇನ್ನೂ ಕೆಲವರು ಬಿಗ್‌ಬಾಸ್ ಮನೆ ಸೇರಲಿದ್ದಾರೆ ಎನ್ನಲಾಗುತ್ತಿದೆ. ಇಂದಷ್ಟೆ ಬಿಗ್‌ಬಾಸ್ 5ನ ಪ್ರೊಮೊ ಬಿಡುಗಡೆ ಆಗಿದ್ದು, ಈ ಬಾರಿಯೂ ನಾಗಾರ್ಜುನ ಅವರೇ ಶೋ ಅನ್ನು ನಿರೂಪಣೆ ಮಾಡಲಿದ್ದಾರೆ. ಶೀಘ್ರವಾಗಿಯೇ ಶೋ ಪ್ರಸಾರವಾಗಲಿದೆ.

  English summary
  Rape accused fun bucket Bhargav is not approached to be contest in Telugu Bigg Boss 05 says channel.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X