»   » ಸೆಂಚುರಿ ಸ್ಟಾರ್ ಶಿವಣ್ಣನಿಗೆ 'ಕಿಕ್' ನೀಡಿದ ಕಿಚ್ಚ ಸುದೀಪ್

ಸೆಂಚುರಿ ಸ್ಟಾರ್ ಶಿವಣ್ಣನಿಗೆ 'ಕಿಕ್' ನೀಡಿದ ಕಿಚ್ಚ ಸುದೀಪ್

Posted By:
Subscribe to Filmibeat Kannada

ಗೆಳೆಯರಾದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ 'ಬಿಗ್ ಬಾಸ್ 3' ವೇದಿಕೆಯಲ್ಲಿ ಒಂದಾಗಿದ್ದರು. ತದನಂತರ ಪ್ರೇಮ್ ನಿರ್ದೇಶನದ ಹೊಸ ಚಿತ್ರದ ಮುಹೂರ್ತ ಕಾರ್ಯಕ್ರಮದಲ್ಲಿ ಒಟ್ಟಾಗಿ ಹೆಗಲ ಮೇಲೆ ಕೈ ಹಾಕಿಕೊಂಡು ಪೋಸ್ ನೀಡಿದ್ದರು.

ಇದೀಗ ಮೂರನೇ ಬಾರಿಗೆ ಮತ್ತೆ ಒಂದೇ ವೇದಿಕೆಯಲ್ಲಿ ಕುಚಿಕು ಗೆಳೆಯರಿಬ್ಬರು ಒಂದಾಗುತ್ತಿದ್ದಾರೆ. ಈ ಬಾರಿ ಈ ಆತ್ಮೀಯ ಸ್ನೇಹಿತರಿಬ್ಬರಿಗೆ ಸಕಲಕಲಾವಲ್ಲಭ ರವಿಶಂಕರ್ ಅವರು ಸಾಥ್ ನೀಡುತ್ತಿದ್ದಾರೆ.[ಕನ್ನಡ ಚಿತ್ರರಂಗದ ಇತಿಹಾಸದಲ್ಲೇ 'ಕೋಟಿ ಕಿಚ್ಚ'ನ ಹೊಸ ದಾಖಲೆ]


Actor Sudeep and Ravishankar with Shiva Rajkumar in dance show 'Kick'

ಅಂದಹಾಗೆ ಈ ಮೂವರು ಘಟಾನುಘಟಿಗಳು ಒಂದಾಗಿದ್ದು, ಸಖತ್ ಕಿಕ್ ಕೊಡೋ 'ಕಿಕ್' ಡ್ಯಾನ್ಸ್ ರಿಯಾಲಿಟಿ ಶೋ ವೇದಿಕೆಯಲ್ಲಿ. ಉದಯ ವಾಹಿನಿಯಲ್ಲಿ ಪ್ರಸಾರವಾಗುವ 'ಕಿಕ್' ಶೋಗೆ ಈ ವಾರ ಕಿಚ್ಚ ಸುದೀಪ್ ಮತ್ತು 'ಆರ್ಮುಗಂ' ರವಿಶಂಕರ್ ಅವರು ವಿಶೇಷ ತೀರ್ಪುಗಾರರಾಗಿ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ.


ನಿಧಾನಕ್ಕೆ ಪಾಪ್ಯುಲರ್ ಆಗುತ್ತಾ ಬರುತ್ತಿರುವ 'ಕಿಕ್' ರಿಯಾಲಿಟಿ ಶೋನಲ್ಲಿ ಈ ವಾರ ಕಿಚ್ಚ ಸುದೀಪ್ ಮತ್ತು ರವಿಶಂಕರ್ ಅವರು ಕಳೆದ ವಾರ ತೆರೆಕಂಡ 'ಕೋಟಿಗೊಬ್ಬ 2' ಚಿತ್ರದ ಪ್ರೊಮೋಷನ್ ಮಾಡಲಿದ್ದಾರೆ.[Rap ಸಾಂಗ್ ಹಾಡಿ ಸಖತ್ 'ಕಿಕ್' ಕೊಡ್ತಾರೆ ಪುನೀತ್]


Actor Sudeep and Ravishankar with Shiva Rajkumar in dance show 'Kick'

ಕಳೆದ ತಿಂಗಳಿನಲ್ಲಿ ಆರಂಭವಾದ 'ಕಿಕ್' ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಮಹಾಗುರುವಾಗಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕಾಣಿಸಿಕೊಂಡಿದ್ದು, ನಿರ್ದೇಶಕ ಕಮ್ ಡ್ಯಾನ್ಸ್ ಮಾಸ್ಟರ್ ಎ.ಹರ್ಷ ಮತ್ತು ನಟಿ ರಚಿತಾ ರಾಮ್ ಅವರು ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದಾರೆ.


ಈ ಕಲರ್ ಫುಲ್ ಕಾರ್ಯಕ್ರಮದಲ್ಲಿ ಕುಚಿಕು ಗೆಳೆಯರಾದ ಸೆಂಚುರಿ ಸ್ಟಾರ್ ಶಿವಣ್ಣ ಮತ್ತು ಕಿಚ್ಚ ಸುದೀಪ್, ಅಕುಲ್ ಬಾಲಾಜಿ ಅವರ ಕಾಲೆಳೆದು ಸಖತ್ ಮೋಜು-ಮಸ್ತಿ ಮಾಡಿದ್ದಾರೆ. ಈ ಎಲ್ಲಾ ಮನರಂಜನೆಯನ್ನು ಮಿಸ್ ಮಾಡದೇ ನೋಡಿ. ಶನಿವಾರ ಮತ್ತು ಭಾನುವಾರ, ರಾತ್ರಿ 9 ಗಂಟೆಯಿಂದ 10.30ರವರೆಗೆ ನಿಮ್ಮ ನೆಚ್ಚಿನ ಉದಯ ಟಿವಿಯಲ್ಲಿ ಮಾತ್ರ.[ಅಭಿಮಾನಿ ದೇವರುಗಳಿಗೆ 'ಕಿಕ್' ಕೊಡಲು ಸೆಂಚುರಿ ಶಿವಣ್ಣ ರೆಡಿ]


Actor Sudeep and Ravishankar with Shiva Rajkumar in dance show 'Kick'

ಡ್ಯಾನ್ಸ್ ರಿಯಾಲಿಟಿ ಶೋ 'ಕಿಕ್'ಗೆ ವಿಶೇಷ ಅತಿಥಿಗಳಾಗಿ ಆಗಮಿಸಿದ ಸುದೀಪ್ ಮತ್ತು ರವಿಶಂಕರ್ ಅವರ ಎಪಿಸೋಡ್ ಈಗಾಗಲೇ ಶೂಟ್ ಆಗಿದ್ದು, ಇದೇ ವಾರ ಪ್ರಸಾರ ಆಗುತ್ತಿದೆ. ಸದ್ಯಕ್ಕೆ ಪ್ರೊಮೋ ನೋಡಿ ಎಂಜಾಯ್ ಮಾಡಿ..


English summary
Kannada Actor Sudeep and Actor Ravishankar will be the special judges of the dance reality programme 'Kick' along with Kannada Actor Shivarajakumar. The two actors apart from judging the programme will also be promoting their new film 'Kotigobba 2' which was released last week (August 12th).
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada