For Quick Alerts
  ALLOW NOTIFICATIONS  
  For Daily Alerts

  ಬಿಗ್ ಬಾಸ್ ಸೀಸನ್ 8 ಕನ್ನಡದಲ್ಲಿ ಇರ್ತಾರಾ 'ಎಕ್ಸ್ ಕ್ಯೂಸ್ ಮೀ' ನಟ ಸುನಿಲ್ ರಾವ್

  |

  ಬಿಗ್ ಬಾಸ್ ಸೀಸನ್ 8 ಕನ್ನಡ ರಿಯಾಲಿಟಿ ಶೋಗಾಗಿ ಕಿರುತೆರೆ ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ. ಇನ್ನೇನು ಬಿಗ್ ಬಾಸ್ ಪ್ರಾರಂಭಕ್ಕೆ ಕೆಲವೇ ಕೆಲವು ದಿನಗಳು ಬಾಕಿ ಇದೆ. ಈ ಬಾರಿಯ ಬಿಗ್ ಬಾಸ್ ನಲ್ಲಿ ಯಾರೆಲ್ಲ ಇರಲಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ. ಈಗಾಗಲೇ ಸಾಕಷ್ಟು ಕಲಾವಿದರ ಹೆಸರುಗಳು ಜೋರಾಗಿ ಕೇಳಿಬರುತ್ತಿದೆ.

  ಸಂಭಾವ್ಯ ಸ್ಪರ್ಧಿಗಳ ಹೆಸರುಗಳಲ್ಲಿ ನಟ ಸುನಿಲ್ ರಾವ್ ಹೆಸರು ಸಹ ಸೇರಿಕೊಂಡಿದೆ. ಈ ಬಾರಿಯ ಬಿಗ್ ಬಾಸ್ ಮನೆಯಲ್ಲಿ ಸುನಿಲ್ ರಾವ್ ಇರಲಿದ್ದಾರೆ ಎನ್ನುವ ಮಾತುಗಳು ಜೋರಾಗಿ ಕೇಳಿಬರುತ್ತಿದೆ. ಇದೇ ತಿಂಗಳು ಕೊನೆಯಲ್ಲಿ ಅಂದರೆ ಫೆಬ್ರವರಿ 28ರಂದು ಬಿಗ್ ಬಾಸ್ ಆರಂಭವಾಗಲಿದೆ ಎನ್ನುವ ಮಾತುಗಳು ಕೇಳಿಬರುತ್ತಿದೆ.

  ಈ ಬಾರಿ 'ಬಿಗ್ ಬಾಸ್' ಮನೆಯಲ್ಲಿ ಇರ್ತಾರಾ 'ಬ್ರಹ್ಮಗಂಟು' ನಟಿ? ಈ ಬಗ್ಗೆ ಗೀತಾ ಹೇಳಿದ್ದೇನು?

  ನಟ ಸುನಿಲ್ ಬಾಲಕಲಾವಿದನಾಗಿ ಚಿತ್ರರಂಗ ಪ್ರವೇಶ ಮಾಡಿದವರು. ಬಳಿಕ ಎಕ್ಸ್ ಕ್ಯೂಸ್ ಮೀ ಸಿನಿಮಾದಲ್ಲಿ ನಾಯಕಿನಾಗಿ ಮಿಂಚುವ ಮೂಲಕ ದೊಡ್ಡ ಮಟ್ಟದ ಖ್ಯಾತಿ ಗಳಿಸಿದರು. ಕೆಲವು ಸಿನಿಮಾಗಳಲ್ಲಿ ನಟಿಸಿದ್ದ ಸುನಿಲ್ ರಾವ್ ಬಳಿಕ ಚಿತ್ರರಂಗದಿಂದ ದೂರ ಸರಿದಿದ್ದರು. ನಂತರ 2017ರಲ್ಲಿ ವೆಬ್ ಸೀರಿಸ್ ಮೂಲಕ ಮತ್ತೆ ಬಣ್ಣದ ಲೋಕಕ್ಕೆ ವಾಪಸ್ ಆಗಿದ್ದ ಸುನಿಲ್ ಮೊದಲಿನ ಸಕ್ಸಸ್ ಪಡೆಯಲು ಸಾಧ್ಯವಾಗಿಲ್ಲ.

  ಸುನಿಲ್ ರಾವ್ ಖ್ಯಾತ ಗಾಯಕಿ ಬಿ.ಕೆ ಸುಮಿತ್ರಾ ಅವರ ಪುತ್ರ. ಸುನಿಲ್ ಒಬ್ಬ ನಟ ಮಾತ್ರವಲ್ಲದೇ ಉತ್ತಮ ಹಾಡುಗಾರ ಕೂಡ ಹೌದು. ಈ ಬಾರಿಯ ಬಿಗ್ ಬಾಸ್ ಮನೆಯಲ್ಲಿ ಸುನಿಲ್ ರಾವ್ ಇರಲಿದ್ದಾರೆ ಎನ್ನುವ ನಿರೀಕ್ಷೆ ಬಲವಾಗಿದೆ. ಬಿಗ್ ಬಾಸ್ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಾರಾ ಕಾದು ನೋಡಬೇಕು.

  English summary
  Actor Sunil Raoh likely to enter Bigg Boss Kannada season 8.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X