»   » ನನ್ನ ಪತಿ ಹೀಗಿರಬೇಕೆಂದು ರಾಧಿಕಾ ಹೇಳಿದ್ದು ಯಾರಿಗೆ?

ನನ್ನ ಪತಿ ಹೀಗಿರಬೇಕೆಂದು ರಾಧಿಕಾ ಹೇಳಿದ್ದು ಯಾರಿಗೆ?

Posted By:
Subscribe to Filmibeat Kannada

ಟಿಆರ್ಪಿಯಲ್ಲಿ ಮುನ್ನುಗ್ಗುತ್ತಿರುವ 'ವೀಕೆಂಡ್ ವಿತ್ ರಮೇಶ್ 'ಕಾರ್ಯಕ್ರಮದಲ್ಲಿ ಇದೇ ಮೊದಲ ಬಾರಿಗೆ ನಾಯಕಿಯೊಬ್ಬರು ಸಾಧಕರ ಸೀಟಿನಲ್ಲಿ ಕೂತಿದ್ದು ಈ ವಾರದ ಎಪಿಸೋಡಿನ ವಿಶೇಷವಾಗಿತ್ತು.

ಮಾರ್ಚ್ 7ರಂದು (ಜನಿಸಿದ ವರ್ಷ ಬಹಿರಂಗ ಪಡಿಸಲಿಲ್ಲ) ಬೆಂಗಳೂರಿನಲ್ಲಿ ಜನಿಸಿದ ರಾಧಿಕಾ ಪಂಡಿತ್ ಶನಿವಾರದ (ಸೆ 13) ಕಾರ್ಯಕ್ರಮದಲ್ಲಿ ಅತಿಥಿಯಾಗಿದ್ದರು. ಕಾರ್ಯಕ್ರಮದಲ್ಲಿ ನಾನು ಮದುವೆಯಾಗುವ ಹುಡುಗ ಹೇಗಿರಬೇಕೆಂದು ರಾಧಿಕಾ ವಿವರಿಸಿದ್ದಾರೆ. (ಪ್ರಚಂಡ ಕುಳ್ಳ ದ್ವಾರಕೀಶ್ ಮೋಸಂಬಿ ಮಾರಿದ ಕಥೆ)

ದೊಡ್ದ ಪರದೆಗೆ ಬರುವ ಮುನ್ನ ಎರಡು ಧಾರವಾಹಿಯಲ್ಲಿ ನಟಿಸಿದ್ದ ರಾಧಿಕಾ ನಂತರ ಕನ್ನಡ ಬೆಳ್ಳಿತೆರೆಗೆ ಅಡಿಯಿಟ್ಟರು. 18ನೇ ಕ್ರಾಸ್ ಈಕೆ ನಟಿಸಿದ್ದ ಮೊದಲ ಚಿತ್ರವಾಗಿದ್ದರೂ, ಬಿಡುಗಡೆಯಾದ ಮೊದಲ ಚಿತ್ರ ಶಶಾಂಕ್ ನಿರ್ದೇಶನದ ಮೊಗ್ಗಿನ ಮನಸ್ಸು.

ಬಿಡುಗಡೆಯಾದ ಮೊದಲ ಚಿತ್ರದಲ್ಲೇ ಫಿಲಂಫೇರ್ ಪ್ರಶಸ್ತಿ ಪಡೆದ ನಂತರ ಮತ್ತೆ ಎರಡು ಸಿನಿಮಾಗಳಿಗೆ ಸತತವಾಗಿ (ಲವ್ ಗುರು, ಕೃಷ್ಣನ್ ಲವ್ ಸ್ಟೋರಿ) ಫಿಲಂಫೇರ್ ಸೌತ್ ಪ್ರಶಸ್ತಿ ಪಡೆಯುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದ ಕನ್ನಡದ ಏಕೈಕ ನಟಿ ರಾಧಿಕಾ ಪಂಡಿತ್.

ಕನ್ನಡದ ಟಾಪ್ ನಟಿಯರಲ್ಲಿ ಒಬ್ಬರಾಗಿದ್ದರೂ ಯಾವುದೇ ವಾದ, ಗಾಸಿಪ್ ನಲ್ಲಿರದೇ ತನ್ನ ಪ್ರಬುದ್ದ ನಟನೆಯಿಂದ ಕನ್ನಡಿಗರ ಮನ ಗೆದ್ದಿರುವ ರಾಧಿಕಾ ಪಂಡಿತ್, ಈ ಕಾರ್ಯಕ್ರಮದಲ್ಲಿ ಹೇಳಿದ ತನ್ನ ಮನದಾಳದ ಮಾತಿನ ಸಾರಾಂಶ ಸ್ಲೈಡಿನಲ್ಲಿ...

ಪಕ್ಕದ ಮನೆಯವರ ಒತ್ತಡ

ಶಾಲಾ ದಿನಗಳಲ್ಲಿ ಬಹಳಷ್ಟು ಡ್ಯಾನ್ಸ್ ಕಾರ್ಯಕ್ರಮದಲ್ಲಿ ನಾನು ಭಾಗವಹಿಸುತ್ತಿದ್ದೆ. ನನ್ನ ಪಕ್ಕದ ಮನೆಯವರು ಧಾರವಾಹಿಯಲ್ಲಿ ನಟಿಸುವಂತೆ ನನ್ನ ತಂದೆ, ತಾಯಿಯ ಮೂಲಕ ಒತ್ತಡ ಹೇರುತ್ತಿದ್ದರು.

ನಂದಗೋಕುಲ ಧಾರವಾಹಿಯ ನಿರ್ಮಾಪಕರು ಹೇಳಿದ್ದು

ನಂದಗೋಕುಲ ಧಾರವಾಹಿಯ ಶೂಟಿಂಗ್ ಬೆಳೆಯುತ್ತಲೇ ಇತ್ತು. ಆ ಸಮಯದಲ್ಲಿ ರಾಧಿಕಾ ಸಿನಿಮಾದಲ್ಲಿ ಬ್ಯೂಸಿಯಾಗಿದ್ದರು. ಎಷ್ಟು ಎಪಿಸೋಡ್ ಬೇಕಾದರೂ ಮಾಡಿ, ನಾನು ಶೂಟಿಂಗಿಗೆ ಬರುತ್ತೇನೆಂದು ರಾಧಿಕಾ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು.

ಕ್ಯಾನ್ಸರ್ ರೋಗಿಗೆ ರಾಧಿಕಾ ಸಹಾಯ ಮಾಡಿದ್ದು ಹೀಗೆ

ನಂದಗೋಕುಲ ಧಾರವಾಹಿಯ ಪ್ರಮುಖ ಪಾತ್ರಧಾರಿ ರಾಧಿಕಾ ಪಂಡಿತ್ ಚಿತ್ರೀಕರಣದಲ್ಲಿ ಸರಿಯಾದ ಸಮಯದಲ್ಲಿ ಭಾಗವಹಿಸಿದ್ದರಿಂದ ಚಿತ್ರೀಕರಣ ಮುಗಿಸಲಾಯಿತು. ನನ್ನ ಪತಿ ಅಶೋಕ್ ಕಶ್ಯಪ್ ಕ್ಯಾನ್ಸರಿನಿಂದ ಬಳಲುತ್ತಿದ್ದರು. ರಾಧಿಕಾ ಧಾರವಾಹಿ ಮುಗಿಸಿ ಕೊಟ್ಟಿದ್ದರಿಂದ ಆಸ್ಪತ್ರೆಯ ಬಿಲ್ ಭರಿಸಲು ನಾನು ಶಕ್ತನಾದೆ ಎಂದು ಧಾರವಾಹಿಯ ನಿರ್ಮಾಪಕಿ ರೇಖಾ ರಾಣಿ, ರಾಧಿಕಾ ಅಂದು ಮಾಡಿದ ಸಹಾಯವನ್ನು ನೆನೆಸಿ ಕಣ್ಣೀರಿಟ್ಟಿದ್ದಾರೆ. (ಕ್ಯಾನ್ಸರ್ ಇದೆ; ಆದರೆ ಚಿಂತೆ ಇಲ್ಲ)

ಗೆಳತಿಯರ ಜೊತೆಗೆ ಕಾರ್ಯಕ್ರಮದಲ್ಲಿ ಡ್ಯಾನ್ಸ್ ಮಾಡಿದ ರಾಧಿಕಾ

ಕಾರ್ಯಕ್ರಮದಲ್ಲಿ ರಾಧಿಕಾ ಬಾಲ್ಯ ಸ್ನೇಹಿತರು, ಸಹಪಾಠಿಗಳು ಭಾಗವಹಿಸಿದ್ದರು. ತನ್ನ ಬಾಲ್ಯ ಜೀವನವನ್ನು ನೆನೆಸಿಕೊಂಡ ರಾಧಿಕಾ ಕಾರ್ಯಕ್ರಮದ ಸೆಟ್ಟಿನೊಳಗೆ ಬಾಸ್ಕೆಟ್ ಬಾಲ್ ಆಡಿದರು. ನಂತರ ಗೆಳತಿಯರ ಜೊತೆ ಸೇರಿ ಹುಡುಗರು ಚಿತ್ರದ ಹಾಡಿಗೆ ಸ್ಟೆಪ್ಸ್ ಹಾಕಿದರು.

ಯಶ್ ತಾಯಿಯಿಂದ ರಾಧಿಕಾಗೆ ಕರೆ

ಕಾರ್ಯಕ್ರಮದಲ್ಲಿ ರಾಕಿಂಗ್ ಸ್ಟಾರ್ ಯಶ್ ತಾಯಿ ರಾಧಿಕಾಗೆ ಫೋನ್ ಮಾಡಿದರು. ಅವಳು ನನ್ನ ಮನೆಯ ಹುಡುಗಿ ಎಂದು ಅಭಿಮಾನದ ಮಾತನ್ನಾಡಿದ್ದಾರೆ.

ನನ್ನ ಪತಿ ಹೀಗಿರಬೇಕು

ಕಾರ್ಯಕ್ರಮದಲ್ಲಿ ರಮೇಶ್ ನೀವು ಮದುವೆಯಾಗುವ ಹುಡುಗ ಹೇಗಿರಬೇಕೆಂದು ಕೇಳಿದ ಪ್ರಶ್ನೆಗೆ ರಾಧಿಕಾ ಉತ್ತರಿಸುತ್ತಾ, ನಾನು ಮದುವೆಯಾಗುವ ಹುಡುಗ ನನಗಿಂತ ಉದ್ದಗಿರಬೇಕು, ನಾನು ಹೀಲ್ಸ್ ಚಪ್ಪಲಿ ಹಾಕಿದರೂ ನನಗಿಂತ ಉದ್ದವಿರಬೇಕು. ಮೊಗ್ಗಿನ ಮನಸ್ಸಿನಂತೆ ನನ್ನನ್ನು ನೋಡಿಕೊಳ್ಳಬೇಕು. ಗಜನಂತೆ ಧೈರ್ಯವಂತನಾಗಿರಬೇಕು, ನನ್ನನ್ನು ಪ್ರೀತಿಯಿಂದ ಸ್ಟಾರ್ ತರ ನೋಡಿಕೊಳ್ಳಬೇಕೆಂದು ವಿವರಿಸಿದ್ದಾರೆ.

ಕಾರ್ಯಕ್ರಮದ ವಿಡಿಯೋ

ನನ್ನ ಪತಿ ಹೀಗಿರಬೇಕೆಂದು ರಾಧಿಕಾ ಹೇಳಿದ್ದು ಯಾರಿಗೆ?

English summary
Leading Kannada actrees Radhika Pandit in Weekend with Ramesh programme, telecasted on Saturday Sep 13 in Zee Kannada.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada