»   » 'ಬಿಗ್ ಬಾಸ್' ಗೆದ್ದ ಶ್ರುತಿ; ನಮ್ಮ ಜನಕ್ಕೆ ಸಮಾಧಾನವೇ ಇಲ್ಲ ಬಿಡಿ!

'ಬಿಗ್ ಬಾಸ್' ಗೆದ್ದ ಶ್ರುತಿ; ನಮ್ಮ ಜನಕ್ಕೆ ಸಮಾಧಾನವೇ ಇಲ್ಲ ಬಿಡಿ!

Posted By:
Subscribe to Filmibeat Kannada

ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ 'ಬಿಗ್ ಬಾಸ್-3' ಕಾರ್ಯಕ್ರಮದ ವಿಜೇತರಾಗಿ ನಟಿ ಶ್ರುತಿ ಹೊರಹೊಮ್ಮಿದ್ದಾರೆ ಎನ್ನುವ ಸುದ್ದಿ ಲೀಕ್ ಆಗಿದ್ದೇ ತಡ, ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರೂ 'ಬಿಗ್ ಬಾಸ್'ಗೆ ಹಿಡಿ ಶಾಪ ಹಾಕುತ್ತಿದ್ದಾರೆ.

ಎಲ್ಲೆಡೆ 'ಬಿಗ್ ಬಾಸ್' ವೀಕ್ಷಕರ ಕಾಮೆಂಟ್ಸ್ ಗಮನಿಸಿರುವ ಯೋಗರಾಜ್ ಭಟ್ ಶಿಷ್ಯ, ಕನ್ನಡ ನಿರ್ದೇಶಕ ವೀರೇಂದ್ರ, ತಮ್ಮ ಫೇಸ್ ಬುಕ್ ನಲ್ಲಿ ಬರೆದುಕೊಂಡಿರುವುದು ಹೀಗೆ -

Actress Shruthi winner of Bigg Boss Kannada 3; Director Veerendra's reaction

''ಅರುಣ್ ಸಾಗರ್ ಗೆಲ್ಲಬೇಕಿತ್ತು, ವಿಜಯರಾಘವೇಂದ್ರಗೆ ಕೊಟ್ಟಿದ್ದು ಸರಿಯಿಲ್ಲ...ಸೃಜನ್ ವಾಸ್ ದ ರಿಯಲ್ ವಿನ್ನರ್, ಅಕುಲ್ ಬಾಲಾಜಿ ವೇಸ್ಟು...ಈಗ... ಮಾಸ್ಟರ್ ಆನಂದ್ ವಿನ್ನಿಂಗ್ ಮಾಸ್ಟರ್...ಶೃತಿಗೆ ಬಿಗ್ ಬಾಸ್ ಕಿರೀಟ ಅನ್ಯಾಯ...['ಬಿಗ್ ಬಾಸ್ ಕನ್ನಡ 3' ರಿಯಾಲಿಟಿ ಶೋ ಗೆದ್ದು ಬಿಟ್ಟರೆ ನಟಿ ಶ್ರುತಿ?]

ನಮ್ ಜನಕ್ಕೆ ಸಮಾಧಾನಾನೇ ಆಗಲ್ಲಪ್ಪ...ಅರುಣ್ ಸಾಗರ್ ಗೆ ಬಂದಿದ್ರೆ ವಿಜಯ್ ರಾಘವೇಂದ್ರ ಮೇಲೆ ಸಿಂಪತಿ...ಸೃಜನ್ ಗೆದ್ದಿದ್ರೆ..grrrr ಅಕುಲ್ ನಂಗೂ ಇಷ್ಟ ಇಲ್ಲ ಬಿಡಿ...

ಮಾಸ್ಟರ್ ಆನಂದ್ ಗೆದ್ದಿದ್ರೆ "ಅಯ್ಯೋ ಪಾಪ ಆವಮ್ಮ ಶೃತಿ ಅಷ್ಟು ದಿನ ಕಷ್ಟ ಪಟ್ಟವ್ರೆ ಈ ವಯಸ್ಸಲ್ಲಿ... ಅವರಿಗೆ ಬರಬೇಕಿತ್ತು" ಅಂತ ಅನುಕಂಪ...
ಹೆಂಗಿದ್ರೂ ಸಮಾಧಾನ ಆಗಲ್ಲ ಬಿಡಿ...

ಅಷ್ಟಕ್ಕೂ ಇನ್ನ ಯಾರ್ ಗೆದ್ದವ್ರೆ ಅನ್ನೋದು ಅಫಿಷಿಯಲ್ ಅನೌನ್ಸ್ ಆಗೇ ಇಲ್ಲ.. ಅಷ್ಟ್ ಬೇಗ ಸುದ್ಧಿ leeeeeeeeeeeeeak ಆಗೋಗಿರೋದು ಅಡ್ವಾನ್ಸಾಗಿ ಅನುಕಂಪದ ಸುರಿಮಳೆಗೆ ಕಾರಣ..'' - ವೀರೇಂದ್ರ, ನಿರ್ದೇಶಕ

ವೀರೇಂದ್ರ ಹೇಳಿರುವ ಮಾತುಗಳನ್ನ ನೀವು ಒಪ್ತೀರಾ..?

    English summary
    Director Veerendra has taken his social networking site to comment on Kannada Actress Shruthi over winning Bigg Boss Kannada 3 reality show.

    ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada