For Quick Alerts
  ALLOW NOTIFICATIONS  
  For Daily Alerts

  ಎಲ್ಲಾ ಊಹಾಪೋಹಗಳ ಬಗ್ಗೆ ನಟಿ ತಾರಾ ಕೊಟ್ಟ ಸ್ಪಷ್ಟನೆ ಏನು?

  By Harshitha
  |

  ನಟಿ ಹಾಗೂ ರಾಜಕಾರಣಿ ತಾರಾ ಅನೂರಾಧ ಹೆಸರು 'ಬಿಗ್ ಬಾಸ್ ಕನ್ನಡ-4' ಸ್ಪರ್ಧಿಗಳ ಪಟ್ಟಿಯಲ್ಲಿ ಇದೆ ಎಂಬ ಸುದ್ದಿ ನಿನ್ನೆಯಷ್ಟೇ ಬಹಿರಂಗ ಆಗಿತ್ತು.

  ನಟನೆ ಜೊತೆ ರಾಜಕೀಯ ರಂಗದಲ್ಲೂ ಬಿಜಿಯಾಗಿರುವ ತಾರಾ ಅನೂರಾಧ 'ಬಿಗ್ ಬಾಸ್' ಸ್ಪರ್ಧಿ ಆಗಲು ಒಪ್ಪಿಕೊಳ್ಳುತ್ತಾರಾ ಎಂಬ ಪ್ರಶ್ನೆ ಸಹಜವಾಗಿ ಉದ್ಭವವಾಗಿತ್ತು. ಈಗ ಆ ಪ್ರಶ್ನೆಗೆ ಖುದ್ದು ತಾರಾ ಉತ್ತರ ನೀಡಿದ್ದಾರೆ.

  ''ನಾನು 'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇನೆ ಎಂಬ ರೂಮರ್ ಗಳು ಹಬ್ಬಿದೆ. ನನಗೆ 'ಬಿಗ್ ಬಾಸ್'ನಲ್ಲಿ ಭಾಗವಹಿಸುವ ಆಸಕ್ತಿ ಖಂಡಿತ ಇಲ್ಲ'' ಅಂತ ತಮ್ಮ ಫೇಸ್ ಬುಕ್ ಅಕೌಂಟ್ ನಲ್ಲಿ ತಾರಾ ಅನೂರಾಧ ಸ್ಪಷ್ಟಪಡಿಸಿದ್ದಾರೆ. [ಓಹೋ....'ಬಿಗ್ ಬಾಸ್ ಕನ್ನಡ-4' ನಲ್ಲಿ 'ಇವರೆಲ್ಲಾ' ಇರ್ತಾರಂತೆ ಸ್ವಾಮಿ.!]

  Actress Tara will not be part of Bigg Boss Kannada 4?

  ಅಲ್ಲಿಗೆ, 'ಬಿಗ್ ಬಾಸ್ ಕನ್ನಡ-4' ಕನ್ಟೆಸ್ಟೆಂಟ್ ಗಳ ಪ್ರಥಮ ಪಟ್ಟಿಯಲ್ಲಿ ಒಂದು ವಿಕೆಟ್ ಡೌನ್ ಆಯ್ತು. ಉಳಿದವರ ಪೈಕಿ ಯಾರು ಒಪ್ಪಿಕೊಳ್ಳುತ್ತಾರೋ, ಎಷ್ಟು ಸಂಭಾವನೆ ಡಿಮ್ಯಾಂಡ್ ಮಾಡ್ತಾರೋ...ಕಾದು ನೋಡ್ಬೇಕು. ['ಬಿಗ್ ಬಾಸ್ ಕನ್ನಡ-4' ಅಡ್ಡದಿಂದ ಬಂದಿರುವ 'ಬಿಗ್' ಬ್ರೇಕಿಂಗ್ ನ್ಯೂಸ್ ಇದೇ..]

  English summary
  Kannada Actress, Politician Tara has taken her Facebook Account to clarify that she is not interested to take part in 'Bigg Boss Kannada-4' reality show.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X