»   » ಈಟಿವಿ ಡ್ಯಾನ್ಸಿಂಗ್ ಸ್ಟಾರ್ ನಿಂದ ಚಂದನ್ ಔಟ್

ಈಟಿವಿ ಡ್ಯಾನ್ಸಿಂಗ್ ಸ್ಟಾರ್ ನಿಂದ ಚಂದನ್ ಔಟ್

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ನಿಜವಾಗ್ಲೂ ನನಗೆ ಆದ ಅವಮಾನವನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ನನ್ನ ಡ್ಯಾನ್ಸ್ ಬಗ್ಗೆ ಅವರು ಟೀಕಿಸಿದ್ದರೆ ನಾನು ಸಂತೋಷವಾಗಿ ಒಪ್ಪಿಕೊಳ್ಳುತ್ತಿದ್ದೆ. ಆದರೆ, ನನ್ನ ವೈಯಕ್ತಿಕ ಬದುಕು ಹಾಗೂ ಚಾರಿತ್ರ್ಯದ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದು ಯಾಕೋ ಅತಿಯಯಿತು.

ನಾನು ಲಕ್ಷ್ಮಿ ಬಾರಮ್ಮ ಸೀರಿಯಲ್ ಟೀಂ ಜತೆ ಒಂದೂವರೆ ವರ್ಷದಿಂದ ಇದ್ದೇನೆ. ಒಂದು ತಂಡವನ್ನು ಒಂದು ದೃಷ್ಟಿಕೋನ ಇಟ್ಟುಕೊಂಡು ದುಡಿದಿದ್ದೇವೆ. ಯಾರೂ ಇದುವರೆವಿಗೂ ನನ್ನ ಬಗ್ಗೆ ವೈಯಕ್ತಿಕ ದಾಳಿ ನಡೆಸಿಲ್ಲ. ನನಗೆ ಎರಡನೇ ಮನೆ ರೀತಿ ಅನುಭವ ನೀಡಿದೆ.

After Humiliation Actor Chandan quits ETV Dancing Star Show

ಆದರೆ, ಮೇಘಾ ಎಂಬ ಡ್ಯಾನ್ಸರ್.. ಮಾಧ್ಯಮಗಳ ಮುಂದೆ ಮೊದಲ ಎಪಿಸೋಡ್ ನಲ್ಲೇ ಪ್ರೊಪೋಸ್ ಮಾಡಿದವಳು ನನ್ನ ಬಗ್ಗೆ ಇಲ್ಲಸಲ್ಲದ ಆರೋಪ ಮಾಡಿದ್ದಾಳೆ. ನಾನು ಪಕ್ಕ ಕನ್ನಡಿಗ ವೃತ್ತಿ ಪರ ನಟ.. ಆಕೆ ಹೇಳುವ ಅಡ್ಜೆಸ್ಟ್ ಮೆಂಟ್ ಅಂದ್ರೆ ಏನು ನನಗೆ ಗೊತ್ತಿಲ್ಲ. ಫೇಕ್ ಗರ್ಲ್ ಗಳನ್ನು ದೂರವಿಡುವುದು ನನಗೆ ಗೊತ್ತಿದೆ.

ಎಲಿಮಿನೇಷನ್ ರೌಂಡ್ ಅಲ್ಲದಿದ್ದರೂ ನನ್ನ ಬಗ್ಗೆ ಈ ರೀತಿ ಕಾಮೆಂಟ್ ಮಾಡಿದ್ದೇಕೆ ಎಂಬುದೇ ನನ್ನ ಪ್ರಶ್ನೆ. ನನಗೆ ನಿಜಕ್ಕೂ ತುಂಬಾ ಆಘಾತವಾಗಿದೆ.ನಾನು ಡ್ಯಾನ್ಸಿಂಗ್ ಸ್ಟಾರ್ ವೇದಿಕೆ ಮತ್ತೆ ಹತ್ತುವುದಿಲ್ಲ. ನನಗೆ ಎಸ್ ಎಂಎಸ್ ಮಾಡಿದ ಜನರಿಗೆ ಅನಂತಾನಂತ ವಂದನೆಗಳು. ನಿಮ್ಮ ಬೆಂಬಲ ಹೀಗೆ ಇರಲಿ ಎಂದು ಫೇಸ್ ಬುಕ್ ಪುಟದಲ್ಲಿ ಚಂದನ್ ಬರೆದುಕೊಂಡಿದ್ದಾರೆ.

English summary
I honestly condemn the insult made on Dancing Star stage .. I would have been happy if they had commented only on my dance performance rather than personal characters states upcoming actor Chandan's facebook wall. He has decided to quit Dancing star show
Please Wait while comments are loading...