»   » ಸುವರ್ಣ ವಾಹಿನಿಯಲ್ಲಿ ಅಜಯ್ ರಾವ್ ಟುವ್ವಿ ಟುವ್ವಿ

ಸುವರ್ಣ ವಾಹಿನಿಯಲ್ಲಿ ಅಜಯ್ ರಾವ್ ಟುವ್ವಿ ಟುವ್ವಿ

Posted By:
Subscribe to Filmibeat Kannada

ಸುವರ್ಣ ಸೂಪರ್ ಜೋಡಿಗೆ ನಟ ಆಜಯ್‍ ರಾವ್ ವಿಶೇಷ ಅತಿಥಿಯಾಗಿ ಜು.20 ರಂದು ಶನಿವಾರ ಪ್ರಸಾರವಾಗುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸುವರ್ಣ ಸೂಪರ್ ಜೋಡಿಯ ಈ ವಾರದ ವಿಶೇಷ ಎಂದರೆ ಕನ್ನಡ ಚಿತ್ರರಂಗದ ಸುವರ್ಣ ಯುಗ ಅರ್ಥಾತ್ ರೆಟ್ರೋ ಸ್ಪೇಷಲ್.

70 - 80 ರ ದಶಕದಲ್ಲಿ ಕನ್ನಡ ಚಿತ್ರರಂಗವನ್ನು ಉತ್ತುಂಗಕ್ಕೇರಿಸಿದ ಚಿತ್ರಗಳನ್ನು ಮತ್ತೊಮ್ಮೆ ಸುವರ್ಣ ಸೂಪರ್ ಜೋಡಿಯ ವೇದಿಕೆಯಲ್ಲಿ ಮೆಲುಕು ಹಾಕಿ ಅಂದಿನ ಹಿರಿಯ ನಟ ನಟಿಯರಿಗೆ ಗೌರವ ಸಲ್ಲಿಸುವ ಪ್ರಯತ್ನವಾಗಿದೆ. ಇಂತಹ ವಿಶೇಷ ಸಂಚಿಕೆಗೆ ವಿಶೇಷ ಅತಿಥಿಯಾಗಿ ಬಂದಿದ್ದು ಎಕ್ಸ್ ಕ್ಯೂಸ್ ಮಿ , ಕೃಷ್ಣನ್ ಲವ್ ಸ್ಟೋರಿ , ತಾಜ್ ಮಹಲ್ ಚಿತ್ರದ ಖ್ಯಾತಿಯ ಅಜಯ್ ರಾವ್.

ಕನ್ನಡ ಚಿತ್ರರಂಗದ ಸುವರ್ಣಯುಗ ಹೇಗಿತ್ತು ಅಂದಿನ ವೈಭವ, ವಿಶೇಷತೆಯನ್ನು ಸುವರ್ಣ ಸೂಪರ್ ಜೋಡಿಗಳಿಗೆ ತಿಳಿಸಲು ಹಾಗೂ ಇದಕ್ಕೆ ಸಂಬಂಧಿಸಿದಂತೆಯೇ ಈ ಸಂಚಿಕೆಯಲ್ಲಿ ವಿಭಿನ್ನ ಟಾಸ್ ಗಳನ್ನು ಇಟ್ಟಿದ್ದು ಅದನ್ನು ನಮ್ಮ ಸ್ಪರ್ಧಿಗಳು ನಿಭಾಯಿಸಿದ್ದು ನಿಜಕ್ಕೂ ಸೂಪರ್ ಆಗಿತ್ತು.

Celebrity Guest Ajay Rao

ಇಷ್ಟೇ ಅಲ್ಲದೇ ಅಂಬರೀಶ್ ಅಭಿನಯದ ನಾಗರ ಹಾವು ಚಿತ್ರದ "ಏ ಬುಲ್ ಬುಲ್ ಮಾತಾಡಕ್ಕಿಲ್ವಾ.." ಎನ್ನುವ ಎವರಗ್ರೀನ್ ದೃಶ್ಯವನ್ನು ಪಾರ್ಥ-ಪ್ರಿಯ ಜೋಡಿ ಅನುಕರಣೆ ಮಾಡಿದ್ದನ್ನು ನೋಡಿ ಅಜಯ್ ರಾವ್ ಸುಸ್ತಾಗಿ ಹೋದರು.

ಇನ್ನು ಒಂದು ಹೆಜ್ಜೆ ಮುಂದೆ ಸಾಗಿ ಪ್ರಿಯಾ ಅಜಯ್ ರಾವ್ ಅವರನ್ನು ರೇಗಿಸಿ ವೇದಿಕೆಯನ್ನೇ ರಂಗಾಗಿಸಿದರು. ಇದಕ್ಕೆ ತಬ್ಬಿಬ್ಬಾದ ಅಜಯ್ ನಾನು ಸ್ಯಾಂಡಲ್‍ವುಡ್ ಕೃಷ್ಣ ಎಂದು ಸಾಬೀತು ಪಡಿಸಿದ್ದು ಮತ್ತಷ್ಟು ಕುತೂಹಲಕರಿಯಾಗಿದೆ.

ಅಜಯ್ ಅವರ ಹೊಸ ಚಿತ್ರ ಜೈ ಭಜರಂಗಬಲಿಯ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಅಜಯ್ ಸೂಪರ್ ಜೋಡಿ ಕಾರ್ಯಕ್ರಮದಲ್ಲಿ ಟುವ್ವೀ ಟುವ್ವೀ ಎನ್ನುವ ಹಾಡಿಗೆ ಹೆಜ್ಜೆ ಹಾಕಿ ಸೂಪರ್ ಜೋಡಿಗಳನ್ನು ನಕ್ಕು ನಗಿಸಿದ್ದಾರೆ.

ತಾವೊಬ್ಬ ಅತಿಥಿ ಎನ್ನುವುದಕ್ಕಿಂತ ಸ್ಪರ್ಧಾರ್ಥಿಗಳೊಂದಿಗೆ ಬೆರೆತು ಅವರಿಗೆ ನೀಡಿದ ಟಾಸ್ಕ್ ಗಳನ್ನು ತಾವು ಮಾಡಬೇಕೆನ್ನುವ ಕಾತರದಲ್ಲಿದ್ದರು. ಪ್ರತೀ ಹಂತದಲ್ಲೂ ಕಾರ್ಯಕ್ರಮವನ್ನು ಎಂಜಾಯ್ ಮಾಡಿದರು. ಇಂತಹ ರೆಟ್ರೋ ಸ್ಪೆಷಲ್ ಸಂಚಿಕೆಯನ್ನು ಮಿಸ್ ಮಾಡದೇ ನೋಡಿ ನೀವೂ ಎಂಜಾಯ್ ಮಾಡಿ. (ಒನ್ಇಂಡಿಯಾ ಕನ್ನಡ)

English summary
Suvarna Super jodi celebrity Guest Ajay Rao (ಅಜಯ್ ರಾವ್) episode will go on air on 20th July 7 th 8PM. This reality show invites like-minded couples, who go through the toughest challenges to test their strengths, weaknesses, and emotional bond.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada