For Quick Alerts
  ALLOW NOTIFICATIONS  
  For Daily Alerts

  ಎಲ್ಲರಿಗೂ ಕಿರಿಕಿರಿ ಕೊಟ್ಟ ದೀಪಕ್ 'ಬಿಗ್ ಬಾಸ್' ಗೆಲ್ಲಲು ಸಾಧ್ಯವೇ.?

  |

  'ಬಿಗ್ ಬಾಸ್-12' ಕಾರ್ಯಕ್ರಮದಲ್ಲಿ ಅತ್ಯಂತ ಕಿರಿಕಿರಿ ಉಂಟು ಮಾಡಿದ ಸ್ಪರ್ಧಿ ಯಾರು ಅಂತ ಕೇಳಿದ್ರೆ, ಎಲ್ಲರ ಬಾಯಿಂದ ಥಟ್ ಅಂತ ಬರುವ ಉತ್ತರ ದೀಪಕ್ ಠಾಕೂರ್. ಯಾಕಂದ್ರೆ, ''ದೀಪಕ್ ಠಾಕೂರ್ ಇರಿಟೇಟಿಂಗ್'' ಎಂಬ ಮಾತು ಹೋಸ್ಟ್ ಸಲ್ಮಾನ್ ಖಾನ್ ಬಾಯಿಂದ್ಲೇ ಬಂದಿತ್ತು.!

  ಆಟದಲ್ಲಿ ಮೇಲುಗೈ ಸಾಧಿಸಲು, ಹೆಚ್ಚು ಫುಟೇಜ್ ಪಡೆಯಲು, ಟಿ.ಆರ್.ಪಿ ಗಳಿಸಲು ದೀಪಕ್ ಠಾಕೂರ್ ಬೇಕು ಬೇಕು ಅಂತ ಹಲವು ಬಾರಿ 'ಬಿಗ್ ಬಾಸ್' ಮನೆಯಲ್ಲಿ ಕ್ಯಾತೆ ತೆಗೆದಿದ್ದಾರೆ. ಬೇಕಾಬಿಟ್ಟಿ ಮಾತನಾಡಿ ಇತರೆ ಸ್ಪರ್ಧಿಗಳ ತಾಳ್ಮೆ ಪರೀಕ್ಷೆ ಮಾಡಿದ್ದಾರೆ ದೀಪಕ್ ಠಾಕೂರ್.

  'ಬಿಗ್ ಬಾಸ್' ಮನೆಗೆ ಕಾಮನ್ ಮ್ಯಾನ್ ಆಗಿ ಎಂಟ್ರಿಕೊಟ್ಟ ದೀಪಕ್ ಠಾಕೂರ್ ಇದೀಗ ಗ್ರ್ಯಾಂಡ್ ಫಿನಾಲೆ ಹಂತ ತಲುಪಿದ್ದಾರೆ. ಇಷ್ಟು ದಿನ ಕಾಮನ್ ಮ್ಯಾನ್ ದೀಪಕ್ ಗೆ ಸಾಥ್ ಕೊಟ್ಟ ಭಾರತ ಜನತೆ ಫಿನಾಲೆಯಲ್ಲೂ ಬೆಂಬಲ ಕೊಡುತ್ತಾರಾ.? ಈ ಪ್ರಶ್ನೆಗೆ ಉತ್ತರ ತಿಳಿದುಕೊಳ್ಳುವ ಮುನ್ನ 'ಬಿಗ್ ಬಾಸ್' ಮನೆಯಲ್ಲಿ ದೀಪಕ್ ಠಾಕೂರ್ ಜರ್ನಿ ಹೇಗಿತ್ತು ಅಂತ ನೋಡಿಕೊಂಡು ಬರೋಣ ಬನ್ನಿ...

  ಯಾರೀ ದೀಪಕ್ ಠಾಕೂರ್.?

  ಯಾರೀ ದೀಪಕ್ ಠಾಕೂರ್.?

  ಬಿಹಾರದ ಬಡ ಹುಡುಗ ಈ ದೀಪಕ್ ಠಾಕೂರ್. ಸಂಗೀತ ಕಲಿತಿರುವ ದೀಪಕ್ ಠಾಕೂರ್ ಅದಾಗಲೇ ಹಿಂದಿ ಚಿತ್ರ 'ಗ್ಯಾಂಗ್ಸ್ ಆಫ್ ವಸ್ಸೇಪುರ್'ನಲ್ಲಿನ ಹಾಡೊಂದಕ್ಕೆ ದನಿ ಆಗಿದ್ದಾರೆ. 'ಬಿಗ್ ಬಾಸ್-12' ಕಾರ್ಯಕ್ರಮದಲ್ಲಿ 'ವಿಚಿತ್ರ ಜೋಡಿ' ಕಾನ್ಸೆಪ್ಟ್ ಅನ್ವಯ ತಮ್ಮ ಗಾಯನದ ಅಭಿಮಾನಿ ಊರ್ವಶಿ ವಾಣಿ ಜೊತೆಗೆ ದೀಪಕ್ ಠಾಕೂರ್ ಸ್ಪರ್ಧಿಯಾಗಿ ಕಣಕ್ಕೆ ಇಳಿದರು.

  ಬಿಗ್ ಬಾಸ್-12: 'ಇವರೇ' ನೋಡಿ ವಿಚಿತ್ರ ಜೋಡಿಗಳು, ಸೆಲೆಬ್ರಿಟಿ ಸ್ಪರ್ಧಿಗಳು.!

  ಆರಂಭದಲ್ಲಿ ಎಲ್ಲರ ಮನಗೆದ್ದ ದೀಪಕ್

  ಆರಂಭದಲ್ಲಿ ಎಲ್ಲರ ಮನಗೆದ್ದ ದೀಪಕ್

  'ಬಿಗ್ ಬಾಸ್-12' ಆರಂಭದಲ್ಲಿ ತಮ್ಮ ಗಾಯನದಿಂದ ಹಾಗೂ ಹಾಸ್ಯ ಮನೋಭಾವದಿಂದ ದೀಪಕ್ ಠಾಕೂರ್ ಎಲ್ಲರ ಮನಗೆದ್ದರು. ಸೆಲೆಬ್ರಿಟಿ ಸ್ಪರ್ಧಿಗಳ ಹೃದಯ ಗೆದ್ದಿದ್ದ ಪರಿಣಾಮ, ಮೊದಲ ಕೆಲವು ವಾರಗಳು ದೀಪಕ್ ಠಾಕೂರ್ ನಾಮಿನೇಟ್ ಆಗದೇ ಸೇಫ್ ಆಗಿಯೇ ಉಳಿದಿದ್ದರು.

  'ಬಿಗ್ ಬಾಸ್' ವಿನ್ನರ್ ಆದವರು ಈಗೆಲ್ಲಿದ್ದಾರೆ.? ಏನು ಮಾಡುತ್ತಿದ್ದಾರೆ.?

  ಊರ್ವಶಿ ವಾಣಿ ಜೊತೆಗೆ ಕಲಹ

  ಊರ್ವಶಿ ವಾಣಿ ಜೊತೆಗೆ ಕಲಹ

  ಜೋಡಿಯಾಗಿ ಎಂಟ್ರಿಕೊಟ್ಟಿದ್ದರೂ, 'ಬಿಗ್ ಬಾಸ್' ಮನೆಯೊಳಗೆ ದೀಪಕ್ ಹಾಗೂ ಊರ್ವಶಿ ನಡುವೆ ಜಗಳ ನಡೆಯಿತು. ಬಳಿಕ ಜೋಡಿಗಳ ಬ್ರೇಕಪ್ ಆದ್ಮೇಲೆ, ಊರ್ವಶಿಗೆ ದೀಪಕ್ ಸಾಥ್ ಕೊಡಲಿಲ್ಲ. ಶೋನಲ್ಲಿ ಹೆಚ್ಚು ದಿನ ಉಳಿದುಕೊಳ್ಳಲು ದೀಪಕ್ ಬೇರೆ ಬೇರೆ ಸ್ಟ್ರಾಟೆಜಿ ಮಾಡಲು ಶುರುಮಾಡಿದ್ದು ಇಲ್ಲಿಂದಲೇ.

  'ಬಿಗ್ ಬಾಸ್' ಗ್ರ್ಯಾಂಡ್ ಫಿನಾಲೆ ತಲುಪಿರುವ ದೀಪಿಕಾ ಕಕ್ಕರ್ ಯಾರು.?

  ಹ್ಯಾಪಿ ಕ್ಲಬ್ ಮೆಂಬರ್

  ಹ್ಯಾಪಿ ಕ್ಲಬ್ ಮೆಂಬರ್

  ಸೆಲೆಬ್ರಿಟಿ ಸ್ಪರ್ಧಿಗಳಿಗೆ ಠಕ್ಕರ್ ಕೊಡಲು ರೋಮಿಲ್ ಚೌಧರಿ, ಸುರ್ಭಿ ರಾಣಾ, ಸೋಮಿ ಖಾನ್ ಮತ್ತು ದೀಪಕ್ ಠಾಕೂರ್ ಹ್ಯಾಪಿ ಕ್ಲಬ್ ಮಾಡಿಕೊಂಡರು. ಕ್ಯಾಪ್ಟನ್ ಆಗಿ ನಾಮಿನೇಷನ್ ಪ್ರಕ್ರಿಯೆಯಲ್ಲಿ ಸೇಫ್ ಆಗಿ ಉಳಿಯುವುದೇ ಹ್ಯಾಪಿ ಕ್ಲಬ್ ಉದ್ದೇಶ ಆಗಿತ್ತು.

  ಕಾಲು ಕೆರೆದುಕೊಂಡು ಜಗಳಕ್ಕೆ ನಿಲ್ಲುತ್ತಿದ್ದ ದೀಪಕ್

  ಕಾಲು ಕೆರೆದುಕೊಂಡು ಜಗಳಕ್ಕೆ ನಿಲ್ಲುತ್ತಿದ್ದ ದೀಪಕ್

  ಚಟುವಟಿಕೆಗಳಲ್ಲಿ ಸೆಲೆಬ್ರಿಟಿಗಳ ಮೈಂಡ್ ಡೈವರ್ಟ್ ಮಾಡಲು ದೀಪಕ್ ಕಾಲು ಕೆರೆದುಕೊಂಡು ಜಗಳಕ್ಕೆ ನಿಂತಿದ್ದೂ ಇದೆ. ಜಸ್ಲೀನ್ ಮಥಾರು, ಮೇಘಾ ಧಾಡೆ, ಶ್ರೀಶಾಂತ್, ದೀಪಿಕಾ ಕಕ್ಕರ್ ಸೇರಿದಂತೆ ಹಲವರ ಬಗ್ಗೆ ಬಾಯಿಗೆ ಬಂದ ಹಾಗೆ ಮಾತನಾಡಿ ತಾಳ್ಮೆ ಪರೀಕ್ಷೆ ಮಾಡಿದ್ದಾರೆ ದೀಪಕ್.

  ಲವ್ ಸ್ಟೋರಿ

  ಲವ್ ಸ್ಟೋರಿ

  ಸ್ಪರ್ಧಿ ಸೋಮಿ ಖಾನ್ ಕಂಡ್ರೆ ಇಷ್ಟ ಅಂತ ಹೇಳಿಕೊಂಡು 'ಬಿಗ್ ಬಾಸ್' ಮನೆಯಲ್ಲಿ ಲವ್ ಸ್ಟೋರಿಗೂ ದೀಪಕ್ ನಾಂದಿ ಹಾಡಿದ್ದರು. ಇದು ಕೇವಲ ಫುಟೇಜ್ ಗಾಗಿಯೋ, ಅಥವಾ ನಿಜಕ್ಕೂ ದೀಪಕ್ ಗೆ ಸೋಮಿ ಮೇಲೆ ಪ್ರೀತಿ ಇದೆಯೋ, ಗೊತ್ತಿಲ್ಲ. ಒಟ್ನಲ್ಲಿ, ಸೋಮಿಗಾಗಿ ದೀಪಕ್ ಒಮ್ಮೆ ನಾಮಿನೇಟ್ ಕೂಡ ಆಗಿದ್ದರು.

  ಕಿರಿಕಿರಿ ಉಂಟು ಮಾಡಿದ ಸ್ಪರ್ಧಿ

  ಕಿರಿಕಿರಿ ಉಂಟು ಮಾಡಿದ ಸ್ಪರ್ಧಿ

  ಇನ್ನೊಬ್ಬರನ್ನು ಮಾತಲ್ಲೇ ಕೆಣಕುವುದರಲ್ಲಿ ದೀಪಕ್ ಠಾಕೂರ್ ಎಕ್ಸ್ ಪರ್ಟ್. ಹೀಗೆ ಮಾತಲ್ಲೇ ಇತರೆ ಸ್ಪರ್ಧಿಗಳಿಗೆ ಕಿರಿಕಿರಿ ಉಂಟು ಮಾಡಿ, 'ಬಿಗ್ ಬಾಸ್' ಮನೆಯ ವಾತಾವರಣವನ್ನೇ ಹಲವು ಬಾರಿ ಹಾಳು ಮಾಡಿದ್ದರು ದೀಪಕ್ ಠಾಕೂರ್.

  'ಬಿಗ್ ಬಾಸ್' ಗೆಲ್ತಾರಾ ದೀಪಕ್.?

  'ಬಿಗ್ ಬಾಸ್' ಗೆಲ್ತಾರಾ ದೀಪಕ್.?

  'ಬಿಗ್ ಬಾಸ್' ಜರ್ನಿಯಲ್ಲಿ ದೀಪಕ್ ಗೆ ಪ್ಲಸ್ ಮತ್ತು ಮೈನಸ್... ಎರಡೂ ಇದೆ. ಇಲ್ಲಿಯವರೆಗೂ ದೀಪಕ್ ಗೆ ವೀಕ್ಷಕರು ಸಪೋರ್ಟ್ ಮಾಡಿದ್ದಾರೆ. ಗ್ರ್ಯಾಂಡ್ ಫಿನಾಲೆಯಲ್ಲೂ ವೀಕ್ಷಕರ ಬೆಂಬಲ ಸಿಕ್ಕಿದರೆ, ದೀಪಕ್ ಠಾಕೂರ್ 'ಬಿಗ್ ಬಾಸ್' ವಿನ್ನರ್ ಆಗಬಹುದು.

  English summary
  Deepak Thakur, Bigg Boss 12 Contestant, Grand Finalist is a Singer. Will Deepak Thakur win #BB12 trophy.? Lets wait and watch.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X