»   » 'ಬಿಗ್' ಮನೆಗೆ ಕಾಲಿಟ್ಟ 'ಮಸ್ತ್ ಮಸ್ತ್ ಹುಡುಗಿ' ವೈಷ್ಣವಿ ಯಾರು.?

'ಬಿಗ್' ಮನೆಗೆ ಕಾಲಿಟ್ಟ 'ಮಸ್ತ್ ಮಸ್ತ್ ಹುಡುಗಿ' ವೈಷ್ಣವಿ ಯಾರು.?

Posted By:
Subscribe to Filmibeat Kannada
ಬಿಗ್ ಬಾಸ್ ಕನ್ನಡ ಸೀಸನ್ 5 : ವೈಷ್ಣವಿ ಚಂದ್ರನ್ ಮೆನನ್ ಕಿರುಪರಿಚಯ | Filmibeat Kannada

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ಅರ್ಧ ಭಾಗ ಮುಗಿದು ಹೋದ್ಮೇಲೆ, 'ದೊಡ್ಮನೆ'ಯೊಳಗೆ ಹೊಸ ಸ್ಪರ್ಧಿಯ ಪ್ರವೇಶ ಆಗಿದೆ. ಐವತ್ತೊಂದನೇ ದಿನ ಬೆಳ್ಳಂಬೆಳಗ್ಗೆ 'ಮಸ್ತ್ ಮಸ್ತ್ ಹುಡುಗಿ ಬಂದ್ಲು...' ಹಾಡಿನ ಮೂಲಕ ಕನ್ನಡ ನಟಿ ವೈಷ್ಣವಿ ಚಂದ್ರನ್ ಮೆನನ್ 'ಬಿಗ್' ಮನೆಯೊಳಗೆ ಕಾಲಿಟ್ಟರು.

'ಬಿಗ್' ಬ್ರೇಕಿಂಗ್: 'ಬಿಗ್ ಬಾಸ್' ಮನೆಯೊಳಗೆ ಹೊಸ ನಟಿ ಎಂಟ್ರಿ.?

'ಬಿಗ್ ಬಾಸ್' ಮನೆಯೊಳಗೆ ಎಂಟ್ರಿಕೊಡುತ್ತಿದ್ದಂತೆಯೇ, ಎಲ್ಲರೊಂದಿಗೆ ಬೆರೆಯಲು ಆರಂಭಿಸಿದ ವೈಷ್ಣವಿ ಚಂದ್ರನ್ ಮೆನನ್ ಯಾರು.? ಆಕೆಯ ಹಿನ್ನಲೆ ಏನು.? ಎಂಬುದರ ಸಂಪೂರ್ಣ ವಿವರ ಇಲ್ಲಿದೆ ನೋಡಿ...

ಕನ್ನಡ ನಟಿ ವೈಷ್ಣವಿ ಚಂದ್ರನ್ ಮೆನನ್

ಸ್ಯಾಂಡಲ್ ವುಡ್ ಗೆ ಈಗಷ್ಟೇ ಕಾಲಿಟ್ಟಿರುವ ವೈಷ್ಣವಿ ಚಂದ್ರನ್ ಮೆನನ್ ಉದಯೋನ್ಮುಖ ನಟಿ. ಸದ್ಯ ವೈಷ್ಣವಿ ಚಂದ್ರನ್ ಮೆನನ್ ಕೈಯಲ್ಲಿ ಐದು ಸಿನಿಮಾಗಳಿವೆ.

ಪ್ರಥಮ್ ಗೆ ನಾಯಕಿ ಈಕೆ.!

ವೈಷ್ಣವಿ ಚಂದ್ರನ್ ಮೆನನ್ ಸದ್ಯ 'ಬಿಗ್ ಬಾಸ್ ಕನ್ನಡ-4' ವಿಜೇತ ಪ್ರಥಮ್ ನಾಯಕನಾಗಿ ಅಭಿನಯಿಸುತ್ತಿರುವ 'ದೇವ್ರಂಥ ಮನುಷ್ಯ' ಚಿತ್ರದಲ್ಲಿ ನಾಯಕಿ ಆಗಿ ನಟಿಸಿದ್ದಾರೆ.

ವೈಷ್ಣವಿಗೆ ಇನ್ನೂ 19 ವರ್ಷ.!

ವೈಷ್ಣವಿ ಚಂದ್ರನ್ ಮೆನನ್ ವಯಸ್ಸು ಎಷ್ಟು ಅಂದುಕೊಂಡ್ರಿ.? 27 ಜುಲೈ 1998 ರಂದು ಹುಟ್ಟಿದ ಆಕೆಗಿನ್ನೂ 19 ವರ್ಷ ವಯಸ್ಸು. ಮೊದಲನೇ ವರ್ಷದ ಬಿ.ಕಾಂ ವ್ಯಾಸಂಗ ಮಾಡುತ್ತಿದ್ದಾರೆ ವೈಷ್ಣವಿ ಚಂದ್ರನ್ ಮೆನನ್.

ವೈಷ್ಣವಿ ಕುಟುಂಬ

ಸದ್ಯ ಬೆಂಗಳೂರಿನಲ್ಲಿಯೇ ನೆಲೆಸಿರುವ ವೈಷ್ಣವಿ ತಂದೆ ಹೆಸರು ರವಿ, ತಾಯಿ ಕವಿತಾ. ವೈಷ್ಣವಿಗೆ ವೈಭವಿ ಎಂಬ ಸಹೋದರಿ ಕೂಡ ಇದ್ದಾರೆ.

ಓದು ಜೊತೆಗೆ ಸಿನಿಮಾ

ಬೆಂಗಳೂರಿನ ಪ್ರತಿಷ್ಟಿತ ಮೌಂಟ್ ಕಾರ್ಮೆಲ್ ಕಾಲೇಜ್ ನಲ್ಲಿ ಪಿ.ಯು.ಸಿ ವ್ಯಾಸಂಗ ಮಾಡಿರುವ ವೈಷ್ಣವಿ ಸದ್ಯ ಮೊದಲನೇ ವರ್ಷದ ಬಿ.ಕಾಂ ಓದುತ್ತಿದ್ದಾರೆ. ಓದುವುದರ ಜೊತೆಗೆ ನಟನೆಯನ್ನೂ ಮಾಡುತ್ತಿರುವ ವೈಷ್ಣವಿ ಸದ್ಯ 'ಬಿಗ್ ಬಾಸ್' ಸ್ಪರ್ಧಿ.

ಜಗನ್ ಅಂದುಕೊಂಡಿದ್ದರಂತೆ.!

'ಮಸ್ತ್ ಮಸ್ತ್ ಹುಡುಗಿ ಬಂದ್ಲು...' ಹಾಡು ಕೇಳಿ ಯಾರೋ ಬರ್ತಾರೆ ಅಂತ ಅಂದುಕೊಂಡರಂತೆ ಜಗನ್ ಹಾಗೂ ಆಶಿತಾ ಅಂದುಕೊಂಡರಂತೆ. ಅವರು ಅಂದುಕೊಂಡಂತೆ 'ಬಿಗ್ ಬಾಸ್' ಮನೆಯೊಳಗೆ ವೈಷ್ಣವಿ ಕಾಲಿಟ್ಟರು.

ಜಯಶ್ರೀನಿವಾಸನ್ ಗೆ ಆಗ್ಬರಲ್ಲ.!

'ಬಿಗ್ ಬಾಸ್' ಮನೆಯೊಳಗೆ ವೈಷ್ಣವಿ ಕಾಲಿಟ್ಟ ಮೇಲೆ, ಜಯಶ್ರೀನಿವಾಸನ್ ತಮ್ಮ ಬೆರಳನ್ನ ಕಟ್ ಮಾಡಿಕೊಂಡರು. ಇದ್ಯಾಪ್ಪ ಅಂದ್ರೆ, ವೈಷ್ಣವಿ ಅವರ ನಂಬರ್ 9... 9ನೇ ನಂಬರ್ ಜಯಶ್ರೀನಿವಾಸನ್ ಗೆ ಆಗ್ಬರಲ್ಲವಂತೆ.

'ಬಿಗ್ ಬಾಸ್' ವೀಕ್ಷಿಸಿರುವ ವೈಷ್ಣವಿ

ಸದ್ಯ 'ಬಿಗ್ ಬಾಸ್' ಸ್ಪರ್ಧಿಯಾಗಿರುವ ವೈಷ್ಣವಿ, 'ಬಿಗ್ ಬಾಸ್' ಕಾರ್ಯಕ್ರಮದ ಕೆಲ ಸಂಚಿಕೆಯಗಳನ್ನು ವೀಕ್ಷಿಸಿದ್ದಾರಂತೆ. ಹೀಗಾಗಿ, ಯಾರ್ಯಾರು ಹೇಗ್ಹೇಗೆ ಎಂಬ ಐಡಿಯಾ ಅವರ ತಲೆಯಲ್ಲಿ ಇದೆ.

ಇದು ಅದೃಷ್ಟ.!

ಈ ತರಹ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿಕೊಡುವುದು ಅದೃಷ್ಟ ಎಂಬುದು ಚಂದನ್ ಶೆಟ್ಟಿ ವಾದ ಆದರೆ ಮಧ್ಯೆ ಬಂದು ಸೇರಿಕೊಂಡವರಿಗೆ ಹೆಚ್ಚು ಕಷ್ಟ ಎಂಬುದು ರಿಯಾಝ್ ಅವರ ವಾದ.

ವೈಷ್ಣವಿ ಗೇಮ್ ಪ್ಲಾನ್ ಏನು.?

ಈಗಾಗಲೇ ತಮ್ಮ ನೃತ್ಯದ ಮೂಲಕ 'ಬಿಗ್ ಬಾಸ್' ಮನೆ ಸದಸ್ಯರನ್ನ ಕ್ಲೀನ್ ಬೌಲ್ಡ್ ಮಾಡಿರುವ ವೈಷ್ಣವಿ ರವರ ಗೇಮ್ ಪ್ಲಾನ್ ಹೇಗಿರುತ್ತೋ, ಕಾದು ನೋಡೋಣ.

English summary
Read the article to know more about Bigg Boss kannada 5 Contestant Vaishnavi Chandran Menon

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada