»   » 'ಬಿಗ್ ಬಾಸ್' ಗೆಲ್ಲುವ ನೆಚ್ಚಿನ ಸ್ಪರ್ಧಿ ಚಂದನ್ ಶೆಟ್ಟಿ: ಇವರ ಮೇಲೆ ಏಕೆ ಇಷ್ಟೊಂದು ಪ್ರೀತಿ.?

'ಬಿಗ್ ಬಾಸ್' ಗೆಲ್ಲುವ ನೆಚ್ಚಿನ ಸ್ಪರ್ಧಿ ಚಂದನ್ ಶೆಟ್ಟಿ: ಇವರ ಮೇಲೆ ಏಕೆ ಇಷ್ಟೊಂದು ಪ್ರೀತಿ.?

Posted By:
Subscribe to Filmibeat Kannada
ಚಂದನ್ ಶೆಟ್ಟಿ ಮೇಲೆ ಜನರಿಗೇಕೆ ಇಷ್ಟೊಂದು ಪ್ರೀತಿ? | Filmibeat Kannada

'ಬಿಗ್ ಬಾಸ್' ಮನೆಯೊಳಗೆ ಕಾಲಿಡುವ ಮುನ್ನ ಚಂದನ್ ಶೆಟ್ಟಿ ಅಂದ್ರೆ ಎಲ್ಲರಿಗೂ ಥಟ್ ಅಂತ ನೆನಪಾಗುತ್ತಿದ್ದದ್ದು 3 ಪೆಗ್ ಹಾಡು. ಆದ್ರೆ, 'ಬಿಗ್ ಬಾಸ್' ಮನೆಯೊಳಗೆ ಹೋದ್ಮೇಲೆ ಚಂದನ್ ಶೆಟ್ಟಿ ತಮ್ಮ ತರಹೇವಾರಿ ಹಾಡುಗಳು, ಪ್ರತಿಭೆ, ವ್ಯಕ್ತಿತ್ವದಿಂದ ಜನಪ್ರಿಯತೆ ಗಳಿಸಿದರು.

'ಬಿಗ್ ಬಾಸ್' ಮನೆಯೊಳಗೆ ಯಾವುದೇ ಸಂಗೀತ ವಾದ್ಯ ಇಲ್ಲ. ಆದ್ರೆ, ಕೈಗೆ ಸಿಕ್ಕ ಪೀಠೋಪಕರಣಗಳನ್ನಿಟ್ಟುಕೊಂಡು ಹಾಡುಗಳನ್ನ ಸಂಯೋಜಿಸಿ, ಎಲ್ಲರನ್ನೂ ತಮ್ಮ ತಾಳಕ್ಕೆ ತಕ್ಕಂತೆ ಕುಣಿಯುವಂತೆ, ಕೂತಲ್ಲೇ ತಲೆದೂಗುವಂತೆ ಮಾಡುತ್ತಿದ್ದವರು ಚಂದನ್ ಶೆಟ್ಟಿ.

ತಮ್ಮ ಭಿನ್ನ-ವಿಭಿನ್ನ ಹಾಡುಗಳ ಮೂಲಕವೇ ಅಪಾರ ಅಭಿಮಾನಿ ಬಳಗ ಹೊಂದಿರುವ ಚಂದನ್ ಶೆಟ್ಟಿ ಇದೀಗ 'ಬಿಗ್ ಬಾಸ್ ಕನ್ನಡ-5' ಗೆಲ್ಲುವ ನೆಚ್ಚಿನ ಸ್ಪರ್ಧಿ. ಅಷ್ಟಕ್ಕೂ, ಚಂದನ್ ಶೆಟ್ಟಿ ಮೇಲೆ ವೀಕ್ಷಕರಿಗೆ ಇಷ್ಟೊಂದು ಪ್ರೀತಿ ಹುಟ್ಟಲು ಕಾರಣ ಏನು.? ಸಂಪೂರ್ಣ ವಿವರ ಇಲ್ಲಿದೆ ಓದಿರಿ...

ಹೋಗಿದ್ದು ಸೆಲೆಬ್ರಿಟಿಯಾಗಿ...

ಹಾಗ್ನೋಡಿದ್ರೆ, 'ಬಿಗ್ ಬಾಸ್' ಮನೆಯೊಳಗೆ ಚಂದನ್ ಶೆಟ್ಟಿ ಕಾಲಿಟ್ಟಿದ್ದು ಸೆಲೆಬ್ರಿಟಿ ಸ್ಪರ್ಧಿಯಾಗಿ. ಆದ್ರೆ, 'ದೊಡ್ಮನೆ'ಯೊಳಗೆ ಸೆಲೆಬ್ರಿಟಿ ಆಗಿ ನಡೆದುಕೊಳ್ಳದೆ ಸೀದಾ ಸಾದಾ ಹುಡುಗನಂತೆ ಇದ್ದು ವೀಕ್ಷಕರ ಮನಗೆದ್ದವರು ಚಂದನ್ ಶೆಟ್ಟಿ.

'ಬಿಗ್ ಬಾಸ್' ಕಾರ್ಯಕ್ರಮದ ಹೊರಗಿನ ಚಂದನ್ ಶೆಟ್ಟಿ ಕಥೆ ಕೇಳಿ!

ಸಾಮಾನ್ಯರ ಸಹವಾಸ

ಇತರೆ ಸೆಲೆಬ್ರಿಟಿ ಸ್ಪರ್ಧಿಗಳ ಜೊತೆಗೆ ಅಷ್ಟಾಗಿ ಮಾತಾಡದ ಚಂದನ್ ಶೆಟ್ಟಿ, ಕಾಮನ್ ಮ್ಯಾನ್ ಸ್ಪರ್ಧಿಗಳ ಜೊತೆಗೆ ಸ್ನೇಹ ಬೆಳೆಸಿದರು. ಸಾಮಾನ್ಯರ ಜೊತೆಗೆ ಸಾಮಾನ್ಯರಾಗಿ ಗಾರ್ಡನ್ ಏರಿಯಾದಲ್ಲೇ ಹೆಚ್ಚು ಕಾಲ ಕಳೆದ ಚಂದನ್ ಶೆಟ್ಟಿ ಇದೀಗ ಗ್ರ್ಯಾಂಡ್ ಫಿನಾಲೆ ಹಂತಕ್ಕೆ ಕಾಲಿಟ್ಟಿದ್ದಾರೆ.

ತಂದೆ ಆಸೆಯನ್ನ ಈಡೇರಿಸಲು ಚಂದನ್ ಶೆಟ್ಟಿ 'ಬಿಗ್ ಬಾಸ್' ಗೆಲ್ಲಬೇಕು.!

ನಾಮಿನೇಟ್ ಅಗಿದ್ದು ಕಮ್ಮಿ

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಏಳು ವಾರಗಳ ಕಾಲ ಸತತವಾಗಿ ನಾಮಿನೇಟ್ ಆಗದೆ ಇದ್ದ ಏಕೈಕ ಸ್ಪರ್ಧಿ ಚಂದನ್ ಶೆಟ್ಟಿ. ಹೀಗಾಗಿ, ಹೊರಗೆ ಮಾತ್ರ ಅಲ್ಲ, 'ಬಿಗ್ ಬಾಸ್' ಮನೆಯೊಳಗೂ ಗೆಲ್ಲುವ ನೆಚ್ಚಿನ ಸ್ಪರ್ಧಿ ಚಂದನ್ ಶೆಟ್ಟಿ.

ಅಂತೂ ಚಂದನ್ ಶೆಟ್ಟಿ ನಂಬರ್ ಬಂದೇ ಬಿಡ್ತು: ಈ ಬಾರಿ ತಪ್ಪಿಸಿಕೊಳ್ಳಲು ಆಗ್ಲಿಲ್ಲ.!

ಟಾಸ್ಕ್ ನಲ್ಲಿ ಎತ್ತಿದ ಕೈ

ಶಕ್ತಿ ಹಾಗೂ ಯುಕ್ತಿಗೆ ಸಂಬಂಧಿಸಿದ ಯಾವುದೇ ಟಾಸ್ಕ್ ಕೊಟ್ಟರೂ ಅದರಲ್ಲಿ ಚಂದನ್ ಶೆಟ್ಟಿ ವಿಫಲರಾದ ಉದಾಹರಣೆಯೇ ಇಲ್ಲ. ಅಷ್ಟರಮಟ್ಟಿಗೆ ಎಲ್ಲ ಟಾಸ್ಕ್ ಗಳಲ್ಲೂ ಚಂದನ್ ಶೆಟ್ಟಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ.

ಗೆಳೆಯ... ಗೆಳೆಯ...

'ಬಿಗ್ ಬಾಸ್' ಮನೆಯೊಳಗೆ ಚಂದನ್ ಶೆಟ್ಟಿ ಗೆಳೆತನವನ್ನೂ ಮಾಡಿಕೊಂಡಿದ್ದಾರೆ. ಸೇಲ್ಸ್ ಮ್ಯಾನ್ ದಿವಾಕರ್ ಅಂದ್ರೆ ಚಂದನ್ ಶೆಟ್ಟಿಗೆ ಅಚ್ಚುಮೆಚ್ಚು. ದಿವಾಕರ್ ಗೆದ್ದರೆ ತಮಗೆ ಖುಷಿ ಎಂಬ ಮಾತು ಕೂಡ ಚಂದನ್ ಶೆಟ್ಟಿ ಬಾಯಿಂದ ಬಂದಿತ್ತು.

ತಾಳ್ಮೆ ಕಳೆದುಕೊಂಡಿಲ್ಲ.!

'ಬಿಗ್ ಬಾಸ್' ಮನೆಯಲ್ಲಿ ರಂಪ-ರಾಮಾಯಣ-ರಾದ್ಧಾಂತ ಎಲ್ಲವೂ ಕಾಮನ್. ಆದ್ರೆ, ಚಂದನ್ ಶೆಟ್ಟಿ ಅಷ್ಟು ಸುಲಭವಾಗಿ ಯಾವತ್ತೂ ತಾಳ್ಮೆ ಕಳೆದುಕೊಂಡಿಲ್ಲ. ಆಟದ ಬಿಸಿಯಲ್ಲಿ ದಿವಾಕರ್, ತಮ್ಮ ಶರ್ಟ್ ಹರಿದುಹಾಕಿದಾಗಲೂ ಚಂದನ್ ಶೆಟ್ಟಿ ಕೂಲ್ ಆಗಿಯೇ ಇದ್ದರು.

ಲವ್-ಡವ್

''ಶ್ರುತಿ ಪ್ರಕಾಶ್ ಮೇಲೆ ಕ್ರಷ್ ಆಗಿದೆ'' ಎಂದು 'ಬಿಗ್ ಬಾಸ್' ಮನೆಯಲ್ಲಿ 'ಲವ್ ಟ್ರ್ಯಾಕ್' ಓಪನ್ ಮಾಡಿದ ಚಂದನ್ ಶೆಟ್ಟಿ ಕಡೆಗೆ ಅದೆಲ್ಲವೂ ಡವ್ ಎಂದುಬಿಟ್ಟು ಸೇಫ್ ಆದರು.

ಜಗನ್ ಗೆ ತಿರುಗೇಟು

''ತಂಟೆಗೆ ಬಂದರೆ ತರಾಟೆಗೆ ತೆಗೆದುಕೊಳ್ಳದೆ ಬಿಡಲ್ಲ'' ಎಂಬುದನ್ನ ಜಗನ್ ವಿಷಯದಲ್ಲಿ ಚಂದನ್ ಶೆಟ್ಟಿ ಸಾಬೀತು ಪಡಿಸಿದರು. 'ಗಂಧದ ಗುಡಿ' ಟಾಸ್ಕ್ ನಲ್ಲಿ ಜಗನ್ ಕೂಗಾಡುತ್ತಿದ್ದಾಗ, ತೊಡೆ ತಟ್ಟಿ ತಿರುಗೇಟು ನೀಡಿದವರು ಬೇರೆ ಯಾರೂ ಅಲ್ಲ. ಇದೇ ಚಂದನ್ ಶೆಟ್ಟಿ.!

ಮಸ್ತ್ ಮಸ್ತ್ ಹಾಡುಗಳು

''ಗೊಂಬೆ... ಗೊಂಬೆ...'', ''ಅನು.. ಹೇಳು ಏನು ಬೇಕು ನಿಂಗೆ..'', ''ಟೆಲ್ ಮಿ ಹೂ ಆರ್ ಯು ಟು ಮಿ...'' ಸೇರಿದಂತೆ ಅನೇಕ ಹಾಡುಗಳು ಚಂದನ್ ಶೆಟ್ಟಿ ಬತ್ತಳಿಕೆಯಿಂದ ಹೊರಗೆ ಬಂದಿದ್ದು ಇದೇ 'ಬಿಗ್ ಬಾಸ್' ಮನೆಯಲ್ಲಿ.

ಚಂದನ್ ಶೆಟ್ಟಿ ಪರ ಇದೆ ಟ್ರೆಂಡ್

ದೋಸ್ತಿ ಜಾಸ್ತಿ ಮಾಡಿಕೊಂಡು, ಜಗಳ ಹಾಗೂ ವಿವಾದ ಕಮ್ಮಿ ಮಾಡಿಕೊಂಡು ಆಡಿದ್ರಿಂದ ವೀಕ್ಷಕರಿಗೆ ಚಂದನ್ ಶೆಟ್ಟಿ ಮೇಲೆ ಸಹಜವಾಗಿ ಪ್ರೀತಿ ಜಾಸ್ತಿ ಆಗಿದೆ. ಹೀಗಾಗಿ, 'ಬಿಗ್ ಬಾಸ್ ಕನ್ನಡ-5' ಗೆಲ್ಲುವ ನೆಚ್ಚಿನ ಸ್ಪರ್ಧಿಯಾಗಿದ್ದಾರೆ ಚಂದನ್ ಶೆಟ್ಟಿ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಇರುವ ಟ್ರೆಂಡ್ ಪ್ರಕಾರ, ಈ ಬಾರಿ ಚಂದನ್ ಶೆಟ್ಟಿ 'ಬಿಗ್ ಬಾಸ್' ಗೆದ್ದರೂ ಅಚ್ಚರಿ ಪಡಬೇಕಿಲ್ಲ.

English summary
Kannada Rapper Chandan Shetty is a Finalist in Bigg Boss Kannada 5 reality show. Will Chandan Shetty manage to win #BBK5 trophy.? Lets wait and Watch.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada