»   » ಜಾಹೀರಾತಿನಿಂದ 375ಕೋಟಿ ಬಾಚಿಕೊಳ್ಳಲು ಕೆಬಿಸಿ ರೆಡಿ

ಜಾಹೀರಾತಿನಿಂದ 375ಕೋಟಿ ಬಾಚಿಕೊಳ್ಳಲು ಕೆಬಿಸಿ ರೆಡಿ

Posted By:
Subscribe to Filmibeat Kannada
amitabh-kbc6-ad-rates-climb-sony-to-gain-rs-375-crore
ಕೌನ್ ಬನೇಗಾ ಕರೋಡ್ ಪತಿಯು 6ನೆಯ ಬಾರಿಗೆ ನಿಮಗೆಲ್ಲ ಭರಪೂರ್ ಜ್ಞಾನ-ಮನರಂಜನೆ ಒದಗಿಸಲು ನಿಮ್ಮ ಟಿವಿ ಪರದೆಯ ಮೇಲೆ ಇಂದಿನಿಂದ (ಶುಕ್ರಾವಾರ) ರಾರಾಜಿಸಲಿದೆ. ಎಂದಿನಂತೆ ಕ್ವಿಜ್ ಮಾಸ್ಟರ್ ಅಮಿತಾಬ್ ಬಚ್ಚನ್ ಸಾರಥ್ಯವಹಿಸಿದ್ದಾರೆ.

ಗಮನಾರ್ಹವೆಂದರೆ ಬಹುಮಾನದ ಮೊತ್ತದ ಅದೇ 5 ಕೋಟಿಗೆ ನಿಗದಿಯಾಗಿದೆ. ಆದರೆ ಈ ಜಾಹೀರಾತು ಇದೆಯಲ್ಲಾ ಅದು ಗಗನಕ್ಕೆ ತಲುಪಿದೆ. ನೋಡಿ ಕಳೆದ ವರ್ಷ ಕೆಬಿಸಿ ಮಧ್ಯೆ ಅತ್ತ ಅಮಿತಾಬ್ 'ಛೋಟಾ ಸಾ ಬ್ರೇಕ್' ತೆಗೆದುಕೊಂಡು ಮರೆಯಾಗುವ ವೇಳೆ ಇತ್ತ ಪರದೆಯ ಮೇಲೆ ಪ್ರದರ್ಶನವಾಗುತ್ತಿದ್ದ ಜಾಹೀರಾತಿಗೆ 10 ಸೆಕೆಂಡಿಗೆ 3.25 ಲಕ್ಷ ರೂಪಾಯಿ ನೀಡಬೇಕಾಗಿತ್ತು.

ವಾರಾಂತ್ಯಕ್ಕೆ ಶಿಫ್ಟ್: ಆದರೆ ಆ ಜಾಹೀರಾತು ದರವನ್ನು ಈಗ 10 ಸೆಕೆಂಡಿಗೆ 3.75 ಲಕ್ಷ ರೂಪಾಯಿ ಹೆಚ್ಚಿಸಲಾಗಿದೆ. ಇದರ 'ಅರ್ಥ' ಕೋಶ ಏನೆಂದರೆ ಕೆಬಿಸಿ ಪ್ರಸಾರ ಮಾಡುತ್ತಿರುವ ಸೋನಿ ಚಾನೆಲ್ ಗೆ ಈ ಬಾರಿ 375 ಕೋಟಿ ರೂ ಹಣ ಗ್ಯಾರಂಟಿ. ಅದೇ ಕಳೆದ ವರ್ಷ ಸೋನಿ 275 ಕೋಟಿ ರೂ. ಬಾಚಿತ್ತು.

ಇನ್ನು ಕೆಬಿಸಿ ಪ್ರದರ್ಶನ ದಿನಗಳು ಈ ಬಾರಿ ಬದಲಾಗಿವೆ. ಶುಕ್ರವಾರ, ಶನಿವಾರ ಮತ್ತು ಭಾನುವಾರ ರಾತ್ರಿ 8.30ರಿಂದ 10 ಗಂಟೆಯ ವರೆಗೆ ಪ್ರಸಾರವಾಗಲಿದೆ. ಹೀಗೆ ವಾರಾಂತ್ಯ ದಿನಗಳಲ್ಲಿ ಕೆಬಿಸಿ ಕಾಣಿಸಿಕೊಳ್ಳುವುದರಿಂದ ಸಾಕಷ್ಟು ಪ್ರಯೋಜನಗಳಿವೆ ಎಂದು ಸೋನಿ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಡ್ಯಾನಿಶ್ ಖಾನ್ ಸಂತಸ ವ್ಯಕ್ತಪಡಿಸಿದ್ದಾರೆ.

English summary
Amitabh Bachchan KBC6 Ad rates climb Sony to gain Rs 375 crore. The sixth season of Kaun Banega Crorepati (KBC) begins Friday with superstar Amitabh Bachchan as the host. Sony Television expects to collect revenue to the tune of Rs. 375 crore as against last season’s Rs. 275 crore.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada