»   » ವಾರಾಂತ್ಯದಲ್ಲಿ ತಪ್ಪದೇ ವೀಕ್ಷಿಸಿ ಬಾಂಧವ್ಯ ಬೆಸೆಯುವ 'ಅನುಬಂಧ ಅವಾರ್ಡ್ಸ್'

ವಾರಾಂತ್ಯದಲ್ಲಿ ತಪ್ಪದೇ ವೀಕ್ಷಿಸಿ ಬಾಂಧವ್ಯ ಬೆಸೆಯುವ 'ಅನುಬಂಧ ಅವಾರ್ಡ್ಸ್'

Posted By:
Subscribe to Filmibeat Kannada

ಕಲರ್ಸ್ ಕನ್ನಡ ವಾಹಿನಿಯ ಧಾರಾವಾಹಿ, ರಿಯಾಲಿಟಿ ಶೋಗಳ ವೀಕ್ಷಕರಾಗಿ ನೀವು ಮೆಚ್ಚುಗೆ ನೀಡಿ, ಪರದೆಯ ಮೇಲೆ ಬರುವ ಪಾತ್ರಗಳನ್ನು ನಿಮ್ಮ ಮನೆಯವರಂತೆ ಸ್ವೀಕರಿಸಿದ್ದೀರಿ.

ನೀವು ಪ್ರೀತಿ ನೀಡಿ ಬೆಳೆಸಿರುವ ನಿಮ್ಮ ಅಚ್ಚು ಮೆಚ್ಚಿನ ಕಲಾವಿದರನ್ನು ವೇದಿಕೆಯ ಮೇಲೆ ಆಹ್ವಾನಿಸಿ, ಅವರೊಂದಿಗೆ ನಿಮಗಿರುವ ನಂಟು, ಕಾಳಜಿಯನ್ನು ಸಂಭ್ರಮಿಸುವ ಅಭೂತಪೂರ್ವ ಕಾರ್ಯಕ್ರಮ 'ಅನುಬಂಧ ಅವಾರ್ಡ್ಸ್'.

ಜೊತೆಗೆ ಕತೆ ಮತ್ತು ಪಾತ್ರಗಳನ್ನು ರೂಪಿಸಿ ತೆರೆಯ ಮೇಲೆ ಪ್ರಸ್ತುತ ಪಡಿಸಿದ ತಾಂತ್ರಿಕ ವರ್ಗದವರೆಲ್ಲರ ಪರಿಶ್ರಮಕ್ಕೆ ನೀಡುವ ಉಡುಗೊರೆ ಈ 'ಅನುಬಂಧ ಅವಾರ್ಡ್ಸ್'. ಮುಂದೆ ಓದಿರಿ...

ಈ ವೀಕೆಂಡ್ ನಲ್ಲಿ 'ಅನುಬಂಧ ಅವಾರ್ಡ್-2017' ಪ್ರಸಾರ

ವೀಕ್ಷಕರು ಮತ್ತು ಕಲಾವಿದರ ಮಧ್ಯೆ ಬೆಸುಗೆಯಾಗಿರುವ ಈ 'ಅನುಬಂಧ ಅವಾರ್ಡ್ಸ್-2017' ಇದೇ ಸೆಪ್ಟೆಂಬರ್ 9 ಮತ್ತು 10ರ ಶನಿವಾರ ಮತ್ತು ಭಾನುವಾರ ರಾತ್ರಿ 8 ಗಂಟೆಗೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಲಿದೆ.

ಪ್ರಿಯಾಮಣಿ ನಿರೂಪಣೆ

ಬಾಂಧವ್ಯ ಬೆಸೆಯುವ 'ಅನುಬಂಧ ಅವಾರ್ಡ್ಸ್'ನ 4ನೇ ಸರಣಿಯು ಪ್ರತಿ ವರ್ಷದಂತೆ ಅದ್ಧೂರಿಯಾಗಿದ್ದು, ವೀಕ್ಷಕರಿಗೆ ಈ ಬಾರಿಯೂ ಸಾಕಷ್ಟು ವಿಶೇಷಗಳನ್ನು ಹೊತ್ತು ತಂದಿದೆ. ಡಾನ್ಸಿಂಗ್ ಸ್ಟಾರ್ ಕಾರ್ಯಕ್ರಮದ ಮೂಲಕ ನೋಡುಗರ ಮನೆಮಗಳಾಗಿರುವ, ರಾಷ್ಟ್ರ ಪ್ರಶಸ್ತಿ ಪುರಸ್ಕೃತೆ, ಬಹುಭಾಷಾ ತಾರೆ ಪ್ರಿಯಾಮಣಿ ಮೊಟ್ಟಮೊದಲ ಬಾರಿಗೆ ನಿರೂಪಕಿಯಾಗಿ ಕಾಣಿಸಿಕೊಳ್ಳುತ್ತಿರುವುದು ಈ ಬಾರಿಯ 'ಅನುಬಂಧ ಅವಾರ್ಡ್ಸ್' ವಿಶೇಷ.

ವಿಜಯ್ ರಾಘವೇಂದ್ರ, ಅಕುಲ್ ಬಾಲಾಜಿ ಸಾಥ್

ಅನುಬಂಧಕ್ಕೆ ಅವಿನಾಭಾವ ಸಂಬಂಧವಿರುವ ವಿಜಯ್ ರಾಘವೇಂದ್ರ ಈ ಬಾರಿಯೂ ನಿರೂಪಣೆ ಮಾಡುತ್ತಿದ್ದು ಜೊತೆಗೆ ರಿಯಾಲಿಟಿ ಸ್ಟಾರ್ ಅಕುಲ್ ಬಾಲಾಜಿ ಸಾಥ್ ನೀಡಿದ್ದಾರೆ.

ಕತೆ ಹಿಂದಿನ ಕತೆ

ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಜೊತೆಗೆ, ಕಲಾವಿದನ ನಿಜ ಜೀವನದಲ್ಲಿರುವ ತಲ್ಲಣಗಳನ್ನು ಪರಿಚಯಿಸುವ ಪ್ರಯತ್ನ 'ಕತೆಯ ಹಿಂದಿನ ಕತೆ' ನೋಡುಗರಲ್ಲಿ ಕಂಬನಿ ಮೂಡಿಸುತ್ತದೆ.

ಚಲನಚಿತ್ರ ಗಣ್ಯರ ಉಪಸ್ಥಿತಿ

'ಅನುಬಂಧ ಅವಾರ್ಡ್ಸ್' ಸಮಾರಂಭಕ್ಕೆ ಕನ್ನಡ ಚಲನಚಿತ್ರ ತಾರೆಯರಾದ ಪ್ರಜ್ವಲ್ ದೇವರಾಜ್, ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ, ಕಿಶೋರ್, ಮಾಳವಿಕಾ ಅವಿನಾಶ್, ರಚಿತಾ ರಾಮ್, ಲೋಕನಾಥ್, ಶಿವರಾಂ, ಅಮೂಲ್ಯ & ಜಗದೀಶ್ ಮೊದಲಾದವರು ಉಪಸ್ಥಿತರಿದ್ದರು.

English summary
'Anubandha Awards-2017' to telecast on Sept 9th and 10th 8pm in Colors Kannada Channel.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada