»   » ಇದು ನಿಜವೋ...ಸುಳ್ಳೋ...'ಬಿಗ್ ಬಾಸ್' ನೀವೇ ಹೇಳಿ, ಡೌಟ್ ಕ್ಲಿಯರ್ ಮಾಡಿ.!

ಇದು ನಿಜವೋ...ಸುಳ್ಳೋ...'ಬಿಗ್ ಬಾಸ್' ನೀವೇ ಹೇಳಿ, ಡೌಟ್ ಕ್ಲಿಯರ್ ಮಾಡಿ.!

Posted By:
Subscribe to Filmibeat Kannada

ಅಂಗೈನಲ್ಲಿ ಅಂತರ್ಜಾಲ ಹಿಡಿದು ವಿಶ್ವ ದರ್ಶನ ಮಾಡುವ ಈಗಿನ ದುನಿಯಾದಲ್ಲಿ, 'ಮೊಬೈಲ್' ಮರೆತು 'ಬಿಗ್ ಬಾಸ್' ಮನೆಯಲ್ಲಿ ಸ್ಪರ್ಧಿಗಳು ಕಾಲ ಕಳೆಯಬೇಕು. ಎಲ್ಲರಿಗೂ ಗೊತ್ತಿರುವ ಹಾಗೆ 'ಬಿಗ್ ಬಾಸ್' ಮನೆಯ ರೂಲ್ ನಂಬರ್ 1 ಇದೇ.!

'ಬಿಗ್ ಬಾಸ್' ಮನೆಯಲ್ಲಿ ಮೊಬೈಲ್ ಬಳಕೆ ಮಾಡುವ ಹಾಗಿಲ್ಲ. 'ವಾಟ್ಸ್ ಆಪ್', 'ಫೇಸ್ ಬುಕ್', 'ಟ್ವಿಟ್ಟರ್' ಗೆ ಲಾಗ್ ಇನ್ ಆಗುವಂತಿಲ್ಲ. 'ಮೇಲ್' ಎಕ್ಸ್ ಚೇಂಜ್ ಅಂತೂ ಇಲ್ಲವೇ ಇಲ್ಲ. ಇನ್ನೂ ಫೋನ್ ಮಾಡಿ ಮನೆಯವರ ಜೊತೆ ಹರಟುವುದು ನಿಷಿದ್ಧ. [BBK4: ಯಾವ್ದು ಆಗ್ಬಾರ್ದು ಅಂದುಕೊಂಡ್ರೋ, ಈ ವಾರ ಅದೇ ಆಗ್ತಿದೆ.!]

ಹೀಗಿದ್ದರೂ, 'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದಲ್ಲಿ ಸ್ಪರ್ಧಿಗಳು ಮೊಬೈಲ್ ಬಳಸುತ್ತಿದ್ದಾರಾ? ಈ ಡೌಟ್ ಬರಲು ಒಂದು ಬಲವಾದ ಸಾಕ್ಷಿ ಇದೆ. ಅದೇನು ಅಂತ ತಿಳಿಯಲು ಸಂಪೂರ್ಣ ವರದಿ ಓದಿರಿ....

'ಬಿಗ್ ಬಾಸ್' ಮನೆಯಲ್ಲಿ 'ಮೊಬೈಲ್' ಮಾತು.!

'ಬಿಗ್ ಬಾಸ್' ಮನೆಯಲ್ಲಿ ಮೊಬೈಲ್ 'ನಾಟ್ ಅಲೌಡ್' ಎಂಬ ರೂಲ್ ಇದ್ದರೂ, ಸ್ಪರ್ಧಿಗಳು ಮೊಬೈಲ್ ಬಳಸುತ್ತಿದ್ದಾರೆ ಎನ್ನುವುದಕ್ಕೆ 'ಬಿಗ್ ಬಾಸ್' ಮನೆಯಲ್ಲಿ ನಡೆದ ಸಂಭಾಷಣೆಯೇ ಸಾಕ್ಷಿ. ['ಬಿಗ್ ಬಾಸ್' ಮನೆಯಲ್ಲಿ ಕುತಂತ್ರಿ, 420, ಕಪಟಿ, ಅಹಂಕಾರಿ ಯಾರು.?]

ಮೊಬೈಲ್ ತರಬೇಕಂತೆ ಕಾರುಣ್ಯ ರಾಮ್.!

'ಏಯ್..ಕಾರುಣ್ಯ ಮೊಬೈಲ್ ತಗೊಂಡು ಬಾ ಬೇಗ' ಅಂತ ಕಾರುಣ್ಯ ರಾಮ್ ಗೆ (ನಿರಂಜನ್/ಕೀರ್ತಿ.?) ಹೇಳುವ ಮಾತು ಪ್ರಸಾರ ಆಗಿದೆ. [ಬಿಗ್ ಬಾಸ್ ಮನೆಯಲ್ಲಿ ದಾಖಲೆ: ಪ್ರಥಮ್ ಫಸ್ಟ್, ಸಂಜನಾ ನೆಕ್ಸ್ಟ್]

ಯಾರು ಹೇಳಿದವರು?

'ಮೊಬೈಲ್ ತಗೊಂಡು ಬಾ ಬೇಗ' ಅಂತ ಕಾರುಣ್ಯ ರಾಮ್ ಗೆ ನಿರಂಜನ್ ದೇಶಪಾಂಡೆ ಹೇಳಿದ್ರೋ ಅಥವಾ 'ಕಿರಿಕ್' ಕೀರ್ತಿ ಹೇಳಿದ್ರೋ ಎಂಬುದು ಸ್ಪಷ್ಟವಾಗಿ ಸೆರೆಯಾಗಿಲ್ಲ. ಆದ್ರೆ ಧ್ವನಿಯಲ್ಲಿ ಮಾತ್ರ ಕ್ಲಾರಿಟಿ ಇದೆ. ['ಬಿಗ್ ಬಾಸ್ ಕನ್ನಡ-4' : ಈ ವಾರ ಗೇಟ್ ಪಾಸ್ ಯಾರಿಗೆ?]

ದೀಪಾವಳಿ ಸಂಭ್ರಮದಲ್ಲಿ ಆಗಿದ್ದು.!

'ಬಿಗ್ ಬಾಸ್' ಮನೆಯಲ್ಲಿ ದೀಪಾವಳಿ ಸಂಭ್ರಮ-ಸಡಗರ ಮುಗಿಲು ಮುಟ್ಟಿದ್ದಾಗ, ಗಾರ್ಡನ್ ಏರಿಯಾದಲ್ಲಿ ಮಾಡಲಾಗಿದ್ದ ಅಲಂಕಾರ ಅನಾವರಣ ಆದ ಸಂದರ್ಭದಲ್ಲಿ ಈ ಸಂಭಾಷಣೆ ನಡೆದಿದೆ.

ಹಾಗಾದ್ರೆ, ಮೊಬೈಲ್ ಬಳಸುತ್ತಾರಾ.?

'ಬಿಗ್ ಬಾಸ್' ಮನೆಯಲ್ಲಿ ಸ್ಪರ್ಧಿಗಳು 'ಕಂಡರೂ ಕಾಣದಂತೆ' ಮೊಬೈಲ್ ಬಳಸುತ್ತಿದ್ದಾರಾ ಎಂಬ ಅನುಮಾನ ಸದ್ಯ ವೀಕ್ಷಕರಿಗೆ ಕಾಡುತ್ತಿರುವುದು ಇದೇ ಕಾರಣಕ್ಕೆ!

ಕೋಡ್ ವರ್ಡ್ ಆಗಿರಬಹುದಾ?

'ವಾಂಗೀಬಾತ್' ಅಂತೆಲ್ಲಾ ಕೋಡ್ ವರ್ಡ್ ಬಳಸುವ 'ಬಿಗ್ ಬಾಸ್' ಸ್ಪರ್ಧಿಗಳು, 'ಮೊಬೈಲ್' ಎಂಬ ಪದಕ್ಕೂ ಬೇರೆ ಅರ್ಥ ಕಲ್ಪಿಸಿದ್ದಾರಾ.? ಗೊತ್ತಿಲ್ಲ.!

ಎಡವಟ್ಟಾಯ್ತು.?

'ಮೊಬೈಲ್' ಮಾತನ್ನ ಎಡಿಟ್ ಮಾಡದೆ ಎಡಿಟರ್ ಮಾಡಿರುವ ಎಡವಟ್ಟು ಈಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಹಿಂದೆಯೂ 'ಮೊಬೈಲ್' ಮಾತು ಕೇಳಿಬಂದಿತ್ತು.!

'ಬಿಗ್ ಬಾಸ್' ಮನೆಯಲ್ಲಿ ಕೆಲವರು ಮೊಬೈಲ್ ಬಳಸಿದ್ದಾರೆ ಎಂಬ ಗುಸು ಗುಸು ಹಿಂದಿನ ಮೂರು ಸೀಸನ್ ಗಳಲ್ಲೂ ಕೇಳಿಬಂದಿತ್ತು. ಈ ಬಾರಿ ಅದು ಪ್ರಸಾರ ಆಗಿರುವುದು ಎಲ್ಲರ ಕಣ್ಣರಳಿಸುವಂತೆ ಮಾಡಿದೆ.

ಡೌಟ್ ಕ್ಲಿಯರ್ ಮಾಡಿ.!

'ಬಿಗ್ ಬಾಸ್' ಮನೆಯಲ್ಲಿ ಸ್ಪರ್ಧಿಗಳು ಮೊಬೈಲ್ ಬಳಸುತ್ತಿದ್ದಾರಾ? ಇಲ್ವಾ? ಎಂಬ ಡೌಟ್ ನ ಸ್ವತಃ ಕಾರ್ಯಕ್ರಮದ ನಿರ್ದೇಶಕ ಪರಮೇಶ್ವರ ಗುಂಡ್ಕಲ್ ಕ್ಲಿಯರ್ ಮಾಡಬೇಕು.

ಬೇಕಾದ್ರೆ ನೀವೇ ನೋಡಿ....

22ನೇ ದಿನ 'ಬಿಗ್ ಬಾಸ್' ಮನೆಯಲ್ಲಿ ಆದ 'ಮೊಬೈಲ್ ಮಾತನ್ನ' ನೀವು ನೋಡ್ಬೇಕು ಅಂದ್ರೆ, ಈ ಲಿಂಕ್ ಕ್ಲಿಕ್ ಮಾಡಿ....

English summary
Bigg Boss Kannada 4: Day 22, Are Contestants using Mobile phone in Bigg Boss house? Read the article to know the answer.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada