»   » 'ಐರನ್ ಲೆಗ್' ಎಂದು ಕರೆಯುತ್ತಿದ್ದ ದಿನಗಳ ಬಗ್ಗೆ ಅರ್ಜುನ್ ಜನ್ಯ ಹೇಳಿದ್ದೇನು?

'ಐರನ್ ಲೆಗ್' ಎಂದು ಕರೆಯುತ್ತಿದ್ದ ದಿನಗಳ ಬಗ್ಗೆ ಅರ್ಜುನ್ ಜನ್ಯ ಹೇಳಿದ್ದೇನು?

Posted By:
Subscribe to Filmibeat Kannada

ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಇಂದು ಕನ್ನಡದ ಬೇಡಿಕೆ ಸಂಗೀತ ನಿರ್ದೇಕರು. ಆದರೆ ಅವರನ್ನು ಸ್ಯಾಂಡಲ್ ವುಡ್ ನಲ್ಲಿ ಐರನ್ ಲೆಗ್ ಎಂದು ಕರೆಯುವ ಕಾಲವು ಇತ್ತು.

ಅರ್ಜುನ್ ಜನ್ಯ ಅವರ ಸಂಗೀತ ನಿರ್ದೇಶಕನಾಗುವ ಕನಸು ನನಸಾಗಿದ್ದು 'ಆಟೋಗ್ರಾಫ್ ಪ್ಲೀಸ್' ಚಿತ್ರದ ಮೂಲಕ. ಅಂದಿನಿಂದ ಮ್ಯೂಸಿಕ್ ಡೈರೆಕ್ಟರ್ ಆಗಿ ಪರಿಚಯವಾದ ಅರ್ಜುನ್, ಹಾಡುಗಳನ್ನ ಜನ ಇಷ್ಟಪಟ್ಟರು ಸಹ ಸಿನಿಮಾ ಹಿಟ್ ಆಗುತ್ತಿರಲಿಲ್ಲ. ನಂತರದ ಹಲವು ಸಿನಿಮಾಗಳು ಸಹ ಹಿಟ್ ಆಗಲಿಲ್ಲ. ಹೀಗಾಗಿ ಅರ್ಜುನ್ ಜನ್ಯಾ ರವರನ್ನು ಮ್ಯೂಸಿಕ್ ಡೈರೆಕ್ಟರ್ ಆಗಿ ಹಾಕೊಂಡು ಮಾಡಿದ್ರೆ ಸಿನಿಮಾ ಓಡೊಲ್ಲ ಅಂತ ಗಾಂಧಿನಗರದ ಮಂದಿ ಪಿಸುಗುಟ್ಟುತ್ತಿದ್ದರಂತೆ.[ಇದು.. ಜನ್ಯ ಜಗಜ್ಜಾಹೀರು ಮಾಡಿದ ಅಪರೂಪದ ಲವ್ ಸ್ಟೋರಿ..]

ಅಲ್ಲದೇ 'ಐರನ್ ಲೆಗ್' ಎಂದು ಕರೀತಿದ್ದರಂತೆ. ಈ ಸ್ಟ್ರಗ್ಲಿಂಗ್ ಪೀರಿಯಡ್ ಬಗ್ಗೆ ಅರ್ಜುನ್ ಜನ್ಯ 'ವೀಕೆಂಡ್ ವಿತ್‌ ರಮೇಶ್ 3' ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದಾರೆ. ಅವರು ಸಕ್ಸಸ್ ಗಾಗಿ ಮುನ್ನೋಡುವ ದಿನಗಳ ಬಗ್ಗೆ ಕೆಲವು ನಿರ್ದೇಶಕರು ಸಹ ಮಾತನಾಡಿದ್ದಾರೆ.

ಹೆಸರು ಬರೋಕೆ ಸಿನಿಮಾ ಹಿಟ್ ಆಗಬೇಕು ಅಂತಲೇ ಗೊತ್ತಿರಲಿಲ್ಲ..

"ನಾನು ಫಸ್ಟ್ ಸಿನಿಮಾ ಮಾಡಿದಾಗ.. ಒಬ್ಬ ಟೆಕ್ನೀಷಿಯನ್ ಗೆ ಹೆಸರು ಬರಬೇಕು ಅಂದ್ರೆ ಸಿನಿಮಾ ಹಿಟ್ ಆಗಬೇಕು. ಚೆನ್ನಾಗಿ ಹೋಡಬೇಕು ಅನ್ನೋದೆ ನನಗೆ ಗೊತ್ತಿರಲಿಲ್ಲ. ನನಗೆ ನನ್ನ ಕೆಲಸವನ್ನ ಸಖತ್ತಾಗಿ ಮಾಡಬೇಕು ಅನ್ನೋದು ಅಷ್ಟೆ ಗೊತ್ತಿದ್ದು ಆಗ"- ಅರ್ಜುನ್ ಜನ್ಯ, ಸಂಗೀತ ನಿರ್ದೇಶಕ[ಅರ್ಜುನ್ ಜನ್ಯ 'ಸಂಗೀತ ಲೋಕ'ಕ್ಕೆ ಬರಲು ಬಲವಾದ ಕಾರಣ ಏನು?]

ನಿರ್ದೇಶಕನಾಗಿ ಮೊದಲ ಸಂಗೀತ ಸಂಯೋಜನೆ 'ಆಟೋಗ್ರಾಫ್ ಪ್ಲೀಸ್' ಚಿತ್ರಕ್ಕೆ

"ಮೊದಲು ನಾನು ಸಿನಿಮಾ ಒಪ್ಪಿಕೊಂಡಾಗ ಒಟ್ಟಾರೆ 25 ಅಥವಾ 30 ಸಾವಿರ ರೂಪಾಯಿಗೆ 'ಆಟೋಗ್ರಾಫ್ ಪ್ಲೀಸ್' ಒಪ್ಪಿಕೊಂಡಿದ್ದೆ. ಅದರಲ್ಲೇನೇ ಚೆನ್ನಾಗಿ ಕೇಳೋಕೆ ಏನೇನ್ ಆಗುತ್ತೆ ಅದೆಲ್ಲವನ್ನು ಮಾಡೋಕೆ ಪ್ರಯತ್ನಿಸಿದ್ದೆ. ಯಾವುದೇ ದೊಡ್ಡ ಮ್ಯೂಸಿಕ್ ಡೈರೆಕ್ಟರ್ ಕೇಳಿದ್ರು ಚೆನ್ನಾಗಿದೆ ಅನ್ನೋ ರೀತಿನೇ ಸಂಯೋಜನೆ ಮಾಡ್ತಾ ಹೋಗಿದ್ದು" -ಅರ್ಜುನ್ ಜನ್ಯ, ಸಂಗೀತ ನಿರ್ದೇಶಕ[ಅರ್ಜುನ್ ಜನ್ಯ ನೋವಿನಲ್ಲಿ ಹುಟ್ಟಿತ್ತಂತೆ 'ಅಪ್ಪಾ ಐ ಲವ್ ಯೂ' ಹಾಡು!]

'ಐರೆನ್ ಲೆಗ್' ಅಂತ ಕರಿತಾರೆ ಅನ್ನೋದು ತಿಳಿದ ಬಗ್ಗೆ ಜನ್ಯ ಹೇಳಿದ್ದು..

"ಸಿನಿಮಾಗಳ ಸಿಡಿ ರಿಲೀಸ್ ಮಾಡಿದಾಗಲೆಲ್ಲಾ ಈ ಹುಡುಗ ಸಖತ್ತಾಗಿ ಮ್ಯೂಸಿಕ್ ಕಂಪೋಸ್ ಮಾಡಿದಾನೆ ಅಂತ ಹೇಳ್ತಿದ್ರು. ಅದನ್ನೇ ಕೇಳಿಸ್ ಕೊಂಡು ಮನೆಗೆ ಬರ್ತಿದ್ದೆ. ಸಿನಿಮಾ ಹೋಡ್ತಿಲ್ಲಾ ಅನ್ನೋದು ನನಗೆ ಗೊತ್ತಿಲ್ಲ. ಆದ್ರೆ ಯಾವಾಗ್ಲೋ ಒಮ್ಮೆ ನನಗೆ ಗೊತ್ತಿಲ್ಲದ ಹಾಗೆ ಆಚೆ...ಇಲ್ಲ.. ಹುಡುಗ ಮಾಡೋ ಹಾಡುಗಳು ಹಿಟ್ ಆಗುತ್ತೆ. ಚೆನ್ನಾಗಿರುತ್ತವೆ. ಆದ್ರೆ ಸಿನಿಮಾ ಹೋಡೊಲ್ಲ ಅಂತ ಮಾತಾಡಿ ಕೊಳ್ಳೋದು, ಐರನ್ ಲೆಗ್ ಅಂತ ಕರೀತಾರೆ ಅನ್ನೋ ಮಾತು ಬಂದಿತ್ತು ಅನ್ನೋ ವಿಷಯ ಗೊತ್ತಾಗಿತ್ತು" - ಅರ್ಜುನ್ ಜನ್ಯ, ಸಂಗೀತ ನಿರ್ದೇಶಕ

ಅರ್ಜುನ್ ನೋವಿನ ದಿನಗಳ ಬಗ್ಗೆ ಕವಿರಾಜ್ ಮಾತು

"ನಾನು ಅರ್ಜುನ್ ಜನ್ಯ ನೋಡಿದ್ದು 'ಆಟೋಗ್ರಾಫ್ ಪ್ಲೀಸ್' ಚಿತ್ರದಲ್ಲಿ. ಅವರನ್ನ ನೋಡಿದಾಗ ಇಷ್ಟು ಚಿಕ್ಕ ಹುಡುಗ ಮ್ಯೂಸಿಕ್ ಡೈರೆಕ್ಟರಾ... ಅನಿಸಿತ್ತು. ಮೊದಲನೇ ಸಕ್ಸಸ್ ಪಡೆಯೋಕೆ ಅರ್ಜುನ್ ಬಹಳ ಕಷ್ಟಪಡುತ್ತಿದ್ದರು...ಬಹಳ ಒಳ್ಳೇ ಸಾಂಗ್ ಕೊಡ್ತಿದ್ರು. ಆದ್ರು ಎಲ್ಲೋ ಒಂದ್ ಬಿಗ್ ಬ್ರೇಕ್ ಬೇಕು ಅಂತ ಅವರೇ ಎಷ್ಟೋ ಬಾರಿ ಹೇಳ್ತಿದ್ರು. ಆದ್ರೆ ಇಡೀ ಸಿನಿಮಾಗೆ ಸಕ್ಸಸ್ ಅಂದಿನ ದಿನಗಳಲ್ಲಿ ಸಿಕ್ಕಿರಲಿಲ್ಲ" - ಕವಿರಾಜ್, ಸಾಹಿತಿ

ಅರ್ಜುನ್ ಜನ್ಯ ರನ್ನು ಅನ್ ಲಕ್ಕಿ ಅನ್ನೋರು..

"ಆ ಡೇಸ್ ನಲ್ಲಿ ಅರ್ಜುನ್ ಸ್ಟ್ರಗ್ಲಿಂಗ್ ಫಾರ್ ಸಕ್ಸಸ್. ಆತ ಮಾಡಿದ ಸಿನಿಮಾಗಳು ಚೆನ್ನಾಗೆ ಆಗುತ್ತಿತ್ತು. ಆದರೆ ಸಿನಿಮಾಗಳು ಗೆದ್ದಿರಲಿಲ್ಲ. ಒಳ್ಳೇದೋ ಕೆಟ್ಟುದ್ದೋ ನಮ್ ಇಂಡಸ್ಟ್ರಿಯಲ್ಲಿ, ಆಗ ಆತ ಮ್ಯೂಸಿಕ್ ಮಾಡಿರುವ ಸಿನಿಮಾಗಳು ಗೆದ್ದಿಲ್ಲ ಅಂದ್ರೆ ಆತ ಏನೋ ಅನ್ ಲಕ್ಕಿ ಅನ್ನೋದು, ಹಾಗೆ ಟ್ಯಾಗ್ ಮಾಡಿ ಅವಾಯ್ಡ್ ಮಾಡ್ತಿದ್ರು. 'ಜರಾಸಂದ' ಗೆ ಸಂಗೀತ ನಿರ್ದೇಶಕನಾಗಿ ಆಯ್ಕೆ ಮಾಡುವಾಗಲು ಅರ್ಜುನ್ ಬಗ್ಗೆ ಆ ರೀತಿ ಮಾತುಗಳು ಬಂದಿದ್ದವು" ಶಶಾಂಕ್, ನಿರ್ದೇಶಕ

ಅರ್ಜುನ್ ಸಿನಿಮಾ ಟೇಕಪ್ ಆಗೊಲ್ಲ ಅಂತ ಹೇಳ್ತಿದ್ರು

"ದುನಿಯಾ ಕೋ-ಡೈರೆಕ್ಟರ್ ಆಗಿ ವರ್ಕ್ ಮಾಡಬೇಕಾದರೆ 'ಯುಗ' ಪ್ರಾಜೆಕ್ಟ್ ಸಿಕ್ಕಿತು. ಮ್ಯೂಸಿಕ್ ಡೈರೆಕ್ಟರ್ ಅರ್ಜುನ್. ಅವರ ಕೈಯಲ್ಲೇ 'ಯುಗ' ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿಸಬೇಕು ಅಂತ ಡಿಸೈಡ್ ಮಾಡಿದ್ವಿ. ಎಲ್ಲಾ ಓಕೆ ಅಂದ ಮೇಲೆ ಯಾರೋ ಒಂದಷ್ಟು ಜನ ಅವರನ್ನು(ಅರ್ಜುನ್ ಜನ್ಯ) ಹಾಕೊಂಡ್ರೆ ಸಿನಿಮಾ ಟೇಕಪ್ ಆಗಲ್ಲ. ಟೇಕಪ್ ಆದ್ರು ರಿಲೀಸ್ ಆಗೊಲ್ಲ. ಇತರದೆಲ್ಲ ಇದೆ. ಬೇರೆಯಾರನ್ನಾದರು ಹಾಕಬೋದಿತ್ತಲ್ಲ ಅಂದಿದ್ರು" -ಚಂದ್ರ, ನಿರ್ದೇಶಕ

ಅರ್ಜುನ್ ಜನ್ಯ ಬಗ್ಗೆ ನಿರ್ದೇಶಕ ಹರ್ಷ ಹೇಳಿದ್ದೇನು?

."'ಯುಗ ಸಿನಿಮಾದ ಹಾಡನ್ನು ಕೇಳಿ ತುಂಬಾ ಇಷ್ಟ ಆಗಿ, 'ಬಿರುಗಾಳಿ' ಸಿನಿಮಾಗೆ ಮ್ಯೂಸಿಕ್ ಕಂಪೋಸ್ ಮಾಡಿ ಅಂತ ನಿಮ್ಮತ್ರ ಬಂದಿದ್ದೆ. ನನಗೆ ಈಗಲು ನೆನಪಿದೆ 'ಮಧುರ ಪಿಸು ಮಾತಿಗೆ' ಹಾಡು ಕಂಪೋಸ್ ಮಾಡಿದಾಗ ನನಗೂ ಕಾನ್ಫಿಡೆಂಟ್ ಕೊಟ್ಟಿದ್ರಿ. ಅದನ್ನ ಜಯಂತ್ ಸರ್ ಕೈಲಿ ಲಿರಿಕ್ಸ್ ಬರೆಸಿದ್ವಿ. ಅದು ನಮ್ಮ ಫಸ್ಟ್ ಸಕ್ಸಸ್. ನಿಮ್ಮ ಮ್ಯೂಸಿಕ್ ಯಾವಾಗಲು ಟ್ರೆಂಡಿ ಆಗಿರುತ್ತೆ. ಅದು ನನಗೆ ತುಂಬಾ ಇಷ್ಟ. ನೀವು ತುಂಬಾ ಖುಷಿಪಟ್ಟಿದ್ದು ಯಾವಾಗ ಅಂದ್ರೆ 'ನೋ ಪ್ರಾಬ್ಲಂ' ಸಾಂಗ್ ನ ಯಾರಕೈಲಿ ಹಾಡಿಸೋಣ ಅಂದಾಗ ಧನುಷ್ ಕೈಲಿ ಹಾಡಿಸಿದ್ರೆ ತುಂಬಾ ಚೆನ್ನಾಗಿರುತ್ತೆ ಅಂದಿದ್ರಿ. ಅವರು ಡೇಟ್ ಕೊಟ್ಟಿದ್ದಾರೆ ಅಂದಾಗ ತುಂಬಾ ಹ್ಯಾಪಿ ಆಗಿದ್ರು. ಅದರ ಕ್ರೆಡಿಟ್ ಅವರಿಗೇನೆ. ಅರ್ಜುನ್ ನೀವು ಕನ್ನಡ ಇಂಡಸ್ಟ್ರಿಗೆ ಒಂದು ಅಸೆಟ್ ಅಂತ ಹೇಳೋಕೆ ಇಷ್ಟ ಪಡ್ತೀನಿ' ಹರ್ಷ, ನಿರ್ದೇಶಕ

English summary
Music Director Arjun Janya spoked his life struggling period in in 'Weekend with Ramesh 3'.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada