For Quick Alerts
  ALLOW NOTIFICATIONS  
  For Daily Alerts

  ಇದು.. ಜನ್ಯ ಜಗಜ್ಜಾಹೀರು ಮಾಡಿದ ಅಪರೂಪದ ಲವ್ ಸ್ಟೋರಿ..

  By Suneel
  |

  ಕನ್ನಡ ಚಿತ್ರರಂಗದ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಸಂಗೀತ ಕ್ಷೇತ್ರಕ್ಕೆ ಬರಲು ಕಾರಣವೇನು ಎಂಬ ಮಾಹಿತಿಯನ್ನ ನೀವೆಲ್ಲಾ ತಿಳಿದಿದ್ದು ಆಯಿತು. ಇನ್ನೊಂದು ಕುತೂಹಲಕಾರಿ ವಿಷಯ ಅಂದ್ರೆ ಅರ್ಜುನ್ ಜನ್ಯ ರವರ ಸಂಗೀತ ಕ್ಷೇತ್ರದ ಜೀವನ ಎಷ್ಟು ಇಂಟ್ರೆಸ್ಟಿಂಗ್ ಆಗಿದೆಯೋ, ಅಷ್ಟೇ ಇಂಟ್ರೆಸ್ಟಿಂಗ್ ಆಗಿದೆ ಅವರ ಲವ್ ಸ್ಟೋರಿ. ಹಾಗೆ ಅವರ ವೈಯಕ್ತಿಕ ಜೀವನ ಸಹ ಹಲವು ಹಿತಕರ ವಿಷಯಗಳಿಂದ ಕೂಡಿದೆ.[ಅರ್ಜುನ್ ಜನ್ಯ ನೋವಿನಲ್ಲಿ ಹುಟ್ಟಿತ್ತಂತೆ 'ಅಪ್ಪಾ ಐ ಲವ್ ಯೂ' ಹಾಡು!]

  ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಗೆ, ಮ್ಯೂಸಿಕ್ ಲೈಫ್ ಗೆ ಬಂದ ಮೇಲೆ ಲವ್ ಶುರು ಆಗಿದ್ದ.. ಅಥವಾ ಲವ್ ಲೈಫ್ ಶುರು ಆದ ನಂತರ ಮ್ಯೂಸಿಕ್ ಲೈಫ್ ಶುರುವಾಯಿತಾ... ಎಂಬುದನ್ನ ತಿಳಿದುಕೊಳ್ಳುವ ಕುತೂಹಲ ಯಾರಿಗೂ ಕಾಡದೇ ಇರದು. ಆ ಕ್ಯೂರಿಯಾಸಿಟಿಗೆ ಅರ್ಜುನ್ ಜನ್ಯ ರವರೇ ಬ್ರೇಕ್ ಹಾಕಿದ್ದಾರೆ.

  'ವೀಕೆಂಡ್ ವಿತ್ ರಮೇಶ್' ಸೀಸನ್ 3 ರಲ್ಲಿ ಅರ್ಜನ್ ಜನ್ಯ ಅವರೇ ತಮ್ಮ ಪ್ರೇಮ ಕಹಾನಿ ಬಿಚ್ಚಿಟ್ಟಿದ್ದು, ಅವರ ಲವ್ ಸ್ಟೋರಿ ಶುರುವಾಗಿದ್ದು ಹೇಗೆ ಎಂಬ ಇಂಟ್ರೆಸ್ಟಿಂಗ್ ಸ್ಟೋರಿ ಅವರೇ ಹೇಳಿದ್ದು ಇಲ್ಲಿದೆ. ಮುಂದೆ ಓದಿ..

  ಅರ್ಜುನ್ ಜನ್ಯ ಲವ್ ಸ್ಟೋರಿ ಆರಂಭ ಆಗಿದ್ದು 1999

  ಅರ್ಜುನ್ ಜನ್ಯ ಲವ್ ಸ್ಟೋರಿ ಆರಂಭ ಆಗಿದ್ದು 1999

  " 1999 ನಲ್ಲಿ ನಮ್ಮ ರಿಲೇಶನ್ ಮದುವೆ ಇತ್ತು. ಮದ್ವೆ ಚೌಟ್ರಿ ಒಳಗಡೆ ಹೋಗಿದ್ ತಕ್ಷಣ ನಾನು ನೋಡಿದ ಫಸ್ಟ್ ಹುಡುಗಿ ಇವಳೇ. ನಾನು ಕಾಲಿಟ್ಟೆ ತಕ್ಷಣ ಆ ಕಡೆ ಯಾರೋ ಬ್ರೈಟ್ ಆಗಿ ಕಂಡ ಹಾಗೆ ಆಯ್ತು. ಹಾಗೆ ಅಟ್ರ್ಯಾಕ್ಷನ್ ಸಹ ಸ್ಟಾರ್ಟ್ ಅಗಿತ್ತು" -ಅರ್ಜುನ್ ಜನ್ಯ, ಸಂಗೀತ ನಿರ್ದೇಶಕ [ನೀರಿಲ್ಲದ ಬಾವಿಗೆ ಅರ್ಜುನ್ ಜನ್ಯ ಬಿದ್ದಿದ್ಯಾಕೆ?]

  ಗೀತಾ'ರನ್ನು ಮೊದಲು ನೋಡಿದ್ದು ಮದುವೆ ಮನೇಲಿ

  ಗೀತಾ'ರನ್ನು ಮೊದಲು ನೋಡಿದ್ದು ಮದುವೆ ಮನೇಲಿ

  "ಅವತ್ತೇ ಮದುವೆ ಮನೇಲಿ ಅವರ ಜೊತೆ ಮಾತಾಡಿದ್ದೆ. ಹಾಗೆ ಜೊತೇಲಿ ಊಟ ಸಹ ಮಾಡಿದ್ದು ಆಯ್ತು. ಮದುವೆ ಆದ ನಂತರ ಮನೆಗೆ ಬಂದೆ. ನನ್ನ ಫ್ರೆಂಡ್ ಪ್ರಕಾಶ್ ನನ್ನ ನೋಡಿದ ತಕ್ಷಣ ಏನಾದ್ರು ಚೇಂಜ್ ಇದ್ರೆ ಕಂಡುಹಿಡಿದು ಬಿಟ್ತಾನೆ. ನೋಡಿದ್ ಮೇಲೆ ಇವನು ಮೊದಲಿನ ತರ ಇಲ್ಲವಲ್ಲ. ತುಂಬಾ ಖುಷಿ ಆಗಿದಾನೆ. ಟೀ ಶರ್ಟ್ ಎಲ್ಲಾ ಚೇಂಜ್ ಮಾಡೋದು. ಎಲ್ಲೋ ಹೋಗ ಬೇಕು ಅನ್ನೋದು ಏನೋ ಮಾಡ್ತಾವನಲ್ಲ ಅಂತ ಅಂದ. ಅದಿಕ್ಕೆ ನಾನು ಒಂದು ಹುಡುಗಿ ನೋಡ್ದೆ. ನಮ್ಮ ರಿಲೇಟಿವ್ ಅಂತೆ. ಇಷ್ಟ ಆದ್ಲು ಅಂದೆ" - ಅರ್ಜುನ್ ಜನ್ಯ, ಸಂಗೀತ ನಿರ್ದೇಶಕ['ಲೋಕೇಶ್ ಕುಮಾರ್'ಗೆ ಅರ್ಜುನ್ ಎಂದು ಹೆಸರಿಟ್ಟಿದ್ದು ಒಬ್ಬ ಸಾಹಿತಿ!]

  ಯಾವ ರಿಲೇಟಿವ್ ಪತ್ತೆ ಹಚ್ಚೋಕೆ ಶುರು

  ಯಾವ ರಿಲೇಟಿವ್ ಪತ್ತೆ ಹಚ್ಚೋಕೆ ಶುರು

  " ನಂತರ ಅವರು ಯಾರು, ಯಾವ ರಿಲೇಟಿವ್ ಅಂತ ಫೈಂಡೌಟ್ ಮಾಡಿದ್ವಿ. ಹಾಗೆ ನಂಬರ್ ತಗೊಂಡು ಈತರ ಲವ್ ಮಾಡ್ತೀನಿ ಅನ್ನೋ ವಿಷಯಾನ ಬೇರೆಯವರ ಮೂಲಕ ಹೇಳಿ ಕಳಿಸಿದೆ" - ಅರ್ಜುನ್ ಜನ್ಯ, ಸಂಗೀತ ನಿರ್ದೇಶಕ

  ಗೀತಾ ಕಡೆಯಿಂದ ಬಂದ ಉತ್ತರ

  ಗೀತಾ ಕಡೆಯಿಂದ ಬಂದ ಉತ್ತರ

  " ಆಗ ಸಖತ್ ಆಗಿ ಒಂದ್ ಡೈಲಾಗ್ ಹೇಳಿದಾಳೆ. ಯಾರ್ ಅವನು. ಏನು? ಯಾರನ್ನ ಲವ್ ಮಾಡ್ತಾನಂತೆ. ಅವನಿಗೆ ಯಾವುದ್ರಲ್ಲೋ ಹೋಡಿತೀನಿ ಅಂತ ಹೇಳಿದಾಳೆ. ಅದೇ ನ್ಯೂಸ್ ನನ್ ಕಿವಿಗೆ ಬಂದು ಬಿತ್ತು. ನಾನ್ ಅಯ್ಯಯ್ಯೋ ಇದು ಫೇಲ್ಯೂರ್ರಾ... ಅಂತ ಸುಮ್ನೆ ಆಗಿಬಿಟ್ಟೆ. ಆದಾದ ನಂತರ ಕಟ್" - ಅರ್ಜುನ್ ಜನ್ಯ, ಸಂಗೀತ ನಿರ್ದೇಶಕ

  5 ವರ್ಷ ಗ್ಯಾಪ್

  5 ವರ್ಷ ಗ್ಯಾಪ್

  " 1999 ರಿಂದ 5 ವರ್ಷಗಳ ಕಾಲ ಕಟ್. ಇವಳ್ಯಾರು ಏನು ಅಂತ ನಾನು ವಿಚಾರಿಸೋಕೆ ಹೋಗ್ಲಿಲ್ಲ. ಸುಮ್ಮನಾಗಿ ಬಿಟ್ಟಿದ್ದೆ" -ಅರ್ಜುನ್ ಜನ್ಯ, ಸಂಗೀತ ನಿರ್ದೇಶಕ

  ಮತ್ತೆ ಲವ್ ಸ್ಟೋರಿ ಕಂಟಿನ್ಯೂ ಹಾಗಿದ್ದು ಹೇಗೆ?

  ಮತ್ತೆ ಲವ್ ಸ್ಟೋರಿ ಕಂಟಿನ್ಯೂ ಹಾಗಿದ್ದು ಹೇಗೆ?

  "ಇವರ ಸಿಸ್ಟರ್ ಒಬ್ರು ಇದಾರೆ. ಅವರ ಮೂಲಕನೇ ಹೇಳಿ ಕಳಿಸಿದ್ದು. ಅವರು ಐದು ವರ್ಷದ ಮೇಲೆ ಒಂದು ದಿನ ಫೋನ್ ಮಾಡಿ, ಅಣ್ಣ ಗೀತಾ ವಾಪಸ್ಸು ಬೆಂಗಳೂರಿಗೆ ಬಂದಿದ್ದಾರೆ ಅಂದ್ರು. ನಾನ್ ಯಾವ್ ಗೀತಾ.. ಅಂದೆ. ಯಾಕಂದ್ರೆ ಅಷ್ಟೊತ್ತಿಗೆ ಆಗ್ಲೆ ಕೆಲಸ ಅಂತ ನಾನ್ ಬೇರೆ ತರಾನೆ ಆಗ್ಬಿಟ್ಟಿದ್ದೆ. ಅದೇ ಅಣ್ಣ.. ಅವಾಗ ಪ್ರಪೋಸ್ ಎಲ್ಲಾ ಮಾಡಿದ್ರಲ್ಲಾ ಅವರು ನಿಮ್ನ ಕೇಳಿದ್ರು ಅಂದ್ಲು. ಅದಿಕ್ಕೆ ನಾನ್ ನಂಬರ್ ಕೊಡಿ ಅಂದೆ" - ಅರ್ಜುನ್ ಜನ್ಯ, ಸಂಗೀತ ನಿರ್ದೇಶಕ

  ಗೀತಾಗೂ ಹಾಗೆ ಹೇಳಿದ್ದ ಗೀತಾ ಸಂಬಂಧಿ ಅರ್ಚನಾ!

  ಗೀತಾಗೂ ಹಾಗೆ ಹೇಳಿದ್ದ ಗೀತಾ ಸಂಬಂಧಿ ಅರ್ಚನಾ!

  " ಅದೇ ರೀತಿ ಇವಳು(ಅರ್ಚನಾ), ಗೀತಾ ಹತ್ರಾನು ಹಾಗೆ ಹೇಳಿದ್ದಳಂತೆ. ಆಮೇಲೆ ಒಂದು ದಿನ ಇಮಿಡಿಯೇಟ್ ಆಗಿ ಫೋನ್ ಬಂತು. ಇವಳೇ(ಗೀತಾ) ಮೊದ್ಲು ಫೋನ್ ಮಾಡಿದ್ದು. ಆಮೇಲೆ ಹಾಗೆ ಮತ್ತೆ ಕನೆಕ್ಷನ್ ಆಯಿತು. ಆ ಐದು ವರ್ಷದ ಗ್ಯಾಪ್ ನಂತರ ಸುಮ್ನೆ ಫೋನ್ ನಲ್ಲಿ ಮಾತಾಡಿದ್ದು ಅಷ್ಟೆ. ನನಗೆ ಮೊದಲೇ ಭಯ. ಮತ್ತೆ ಅದೇ ಹಳೇ ಡೈಲಾಗ್ ಹೇಳಿದ್ರೆ ಅಂತ. ನನ್ ಪಾಡಿಗ್ ನಾನು ಸುಮ್ನೆ ಇದ್ದೆ. ಬಟ್ ಫೋನ್ ನಲ್ಲಿ ತುಂಬಾ ಕ್ಲೋಸ್ ಆಗಿದ್ವಿ. ಆ ರೀತಿ ಪ್ರೀತಿ ಗೀತಿ ಅಂತ ಹಂಚಿಕೊಂಡಿರಲಿಲ್ಲ" - ಅರ್ಜುನ್ ಜನ್ಯ, ಸಂಗೀತ ನಿರ್ದೇಶಕ

  ಗೀತಾಗೆ ಡ್ರಾಪ್ ಕೊಡುತ್ತಿದ್ದ ಅರ್ಜುನ್ ಜನ್ಯ

  ಗೀತಾಗೆ ಡ್ರಾಪ್ ಕೊಡುತ್ತಿದ್ದ ಅರ್ಜುನ್ ಜನ್ಯ

  " ನಮ್ಮ ಮನೆಯಿಂದ ಒಂದು ಕಿಲೋ ಮೀಟರ್ ದೂರದಲ್ಲಿ ಇವರ ಬ್ಯಾಂಕ್ ಇದ್ದಿದ್ದು. ಇವರಿಗೆ ಡ್ರಾಪ್ ಕೋಡೋದು ಅವೆಲ್ಲಾ ಮಾಡ್ತಿದ್ದೆ. ಆದ್ರೆ ನಾನ್ ಸುಮ್ನೆ ಇದ್ದೆ. ಯಾಕಂದ್ರೆ ರಿಸ್ಕ್ ಬೇಡ. ಪ್ರಪೋಸ್ ಮಾಡೋದು ಬೇಡ ಅಂದುಕೊಂಡಿದ್ದೆ" - ಅರ್ಜುನ್ ಜನ್ಯ, ಸಂಗೀತ ನಿರ್ದೇಶಕ

  ಮದುವೆ ಆಗೋದು ಯಾವಾಗ ಎಂದು ಕೇಳಿದ್ದು ಗೀತಾ

  ಮದುವೆ ಆಗೋದು ಯಾವಾಗ ಎಂದು ಕೇಳಿದ್ದು ಗೀತಾ

  " ಒಂದು ದಿನ ನಾನು ನಮ್ಮ ಮನೆ ಹತ್ತಿರ ಪೋನ್ ನಲ್ಲಿ ಮಾತಾಡ್ತಾ ನಿಂತಿದ್ದೆ. ಆಗ ಮತ್ತೆ ಅಂದ್ಲು. ಮತ್ತೆ ಏನ್ ಅಂದೆ. ಆಮೇಲೆ ಮುಂದಿಕೆ ಅಂದ್ಲು. ಮುಂದಾ ಏನು ಅಂದೆ. ಅಂದ್ರೆ ಐ ಲವ್ ಅಂತ ಹೇಳೋಕೆ ಇಬ್ಬರಿಗೂ ಗೊತ್ತಿಲ್ಲ. ಮತ್ತೆ ಯಾವಾಗ ಮದುವೆ ಆಗೋದು ಅಂದ್ಲು. ಪ್ರಪೋಸ್ ಮಾಡಿದ್ದು ನಾನೆ ಮೊದ್ಲು. ಮದುವೆ ಆಗೋಣ ಅಂತ ಮೊದಲು ಅಂದಿದ್ದು ಗೀತಾ" -ಅರ್ಜುನ್ ಜನ್ಯ, ಸಂಗೀತ ನಿರ್ದೇಶಕ

  ಅರ್ಜುನ್ ಜನ್ಯ ಮತ್ತು ಗೀತಾ ಪ್ರೇಮ ಕಹಾನಿ ಬಗ್ಗೆ ಅರ್ಚನಾ ಹೇಳಿದ್ದು..!

  ಅರ್ಜುನ್ ಜನ್ಯ ಮತ್ತು ಗೀತಾ ಪ್ರೇಮ ಕಹಾನಿ ಬಗ್ಗೆ ಅರ್ಚನಾ ಹೇಳಿದ್ದು..!

  " ಮೊದಲು ಆರಂಭದಲ್ಲಿ ಇವರ ವಿಷಯ(ಅರ್ಜುನ್ ಮತ್ತು ಗೀತಾ) ಮನೇಲಿ ಗೊತ್ತಾಗಿ ಪ್ರಾಬ್ಲಮ್ ಆಗಿ ಇಬ್ಬರು ಸೆಪರೇಟ್ ಆಗಲು ಡಿಸೈಡ್ ಮಾಡಿದ್ರು. ಆದ್ರೆ 5 ವರ್ಷಗಳ ನಂತರ ಮತ್ತೆ ಮೀಟ್ ಆದ್ರು. ಮತ್ತೆ ಫೀಲಿಂಗ್ ಸ್ಟಾರ್ಟ್ ಆಯ್ತು ಅನಿಸುತ್ತೆ. ಆದ್ರೆ ಅರ್ಜುನ್ ಜನ್ಯ ಅವರೇ ನನ್ನತ್ರ ನನಗೆ ಗೀತಾ ನಂಬರ್ ಬೇಕು ಅಂತ ಕೇಳಿದ್ರು. ಅದಕ್ಕೆ ನಾನು ಗೀತಾ ಹತ್ತಿರ ನಮ್ಮ ಅಣ್ಣ ನಂಬರ್ ಕೇಳ್ತಿದ್ದಾರೆ ಕೊಡ್ಲ ಅಂದಿದಕ್ಕೆ ಗೀತಾ ಕೊಡು ಅಂತ ಹೇಳಿದ್ಲು. ನಂತರ ಮತ್ತೆ ಇಬ್ಬರ ಲವ್ ಸ್ಟೋರಿ ಸ್ಟಾರ್ಟ್ ಆಯ್ತು" - ಅರ್ಚನಾ, ಗೀತಾ ಸಂಬಂಧಿ

  English summary
  Music Director Arjun Janya revealed his love story in 'Weekend with Ramesh 3'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X