»   » ಉತ್ತರ ಕರ್ನಾಟಕದ ಕಲಿ ಸುನೀಲ್ ಗೆಲುವಿಗೆ ಕಾರಣ ಕೊಟ್ಟ ಅರ್ಜುನ್ ಜನ್ಯ

ಉತ್ತರ ಕರ್ನಾಟಕದ ಕಲಿ ಸುನೀಲ್ ಗೆಲುವಿಗೆ ಕಾರಣ ಕೊಟ್ಟ ಅರ್ಜುನ್ ಜನ್ಯ

Posted By:
Subscribe to Filmibeat Kannada

'ಜೀ ಕನ್ನಡ' ವಾಹಿನಿಯ 'ಸರಿಗಮಪ ಸೀಸನ್ 13' ಕಾರ್ಯಕ್ರಮದ ತೀರ್ಪು ಕೆಲವರಲ್ಲಿ ಅಸಮಾಧಾನ ಉಂಟು ಮಾಡಿತ್ತು. ಸುನೀಲ್ ಗೆಲುವಿನ ಬಗ್ಗೆ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಬೇಸರ ವ್ಯಕ್ತಪಡಿಸಿ ಕಾಮೆಂಟ್ ಮಾಡುತ್ತಿದ್ದರು. ಆದರೆ ಸುನೀಲ್ ಗೆಲುವಿಗೆ ಕಾರಣವಾದ ಅಂಶಗಳ ಬಗ್ಗೆ ಸಂಗೀತ ನಿರ್ದೇಶಕ ಮತ್ತು ಕಾರ್ಯಕ್ರಮ ತೀರ್ಪುಗಾರರಲ್ಲಿ ಒಬ್ಬರಾಗಿದ್ದ ಅರ್ಜುನ್ ಜನ್ಯ ಈಗ ಮಾತನಾಡಿದ್ದಾರೆ.

'ಸರಿಗಮಪ ಸೀಸನ್ 13' ಕಾರ್ಯಕ್ರಮದಲ್ಲಿ ಯಾರಿಗೆ ಎಷ್ಟು ವೋಟು ಬಂದಿತ್ತು?

''ಫೈನಲ್ ವೇದಿಕೆಯಲ್ಲಿ ಸುನೀಲ್ ಗಿಂತ ಚೆನ್ನಾಗಿ ಹಾಡುವವರು ಇದ್ದರು. ಆದರೆ ಅಂದಿನ ಹಾಡುಗಾರಿಕೆಯಲ್ಲಿ ಹೆಚ್ಚು ಇಷ್ಟವಾಗಿದ್ದು ಸುನೀಲ್ ಹಾಡು. ಸುನೀಲ್ ತನಗೆ ಒಪ್ಪುವಂತಹ ಹಾಡನ್ನು ಆಯ್ಕೆ ಮಾಡಿಕೊಂಡು ಚೆನ್ನಾಗಿ ಹಾಡಿದ. ಉಳಿದವರು ಕಠಿಣ ಗೀತೆಯನ್ನು ಆಯ್ಕೆ ಮಾಡಿಕೊಂಡು ಅದನ್ನು ಪ್ರೆಸೆಂಟ್ ಮಾಡುವಲ್ಲಿ ಎಡವಿದರು'' ಅಂತ ಅರ್ಜುನ್ ಜನ್ಯ ಸ್ಪಷ್ಟನೆ ನೀಡಿದ್ದಾರೆ.

ಸಾಮಾನ್ಯ ಹುಡುಗನಾಗಿದ್ದ 'ಸುನೀಲ'ನ ಸ್ಫೂರ್ತಿದಾಯಕ 'ಸರಿಗಮಪ' ಜರ್ನಿ

Arjun Janya spoke about 'Sarigamapa Season 13' winner Sunil.

ಸರಿಗಮಪ-13 ನೇ ಆವೃತ್ತಿಯ ಅಂತಿಮ ಘಟ್ಟಕ್ಕೆ ಶ್ರೀಹರ್ಷ, ಮೆಹಬೂಬ್ ಸಾಬ್, ಅರವಿಂದ್, ಧನುಷ್, ದೀಕ್ಷಾ, ಸುನಿಲ್ ಪ್ರವೇಶ ಪಡೆದಿದ್ದರು. ಈ 6 ಜನರಲ್ಲಿ ಶ್ರೀ ಪುಟ್ಟರಾಜ ಗವಾಯಿಗಳ ಸಂಗೀತ ಪರಂಪರೆಯ ಶ್ರದ್ಧಾವಂತ ವಿದ್ಯಾರ್ಥಿ ಸುನಿಲ್, ಜನರ ಆಯ್ಕೆಯಂತೆ 'ಸರಿಗಮಪ ಸೀಸನ್-13'ರ ವಿನ್ನರ್ ಆಗಿ ಹೊರಹೊಮ್ಮಿದ್ದರು.

sa re ga ma pa season 13 : Zee Kannada Business Head Reacts | Filmibeat Kannada
English summary
Music Director Arjun Janya spoke about Zee Kannada channel's 'Sarigamapa Season 13' winner Sunil.
Please Wait while comments are loading...