For Quick Alerts
  ALLOW NOTIFICATIONS  
  For Daily Alerts

  ಕೆರಳಿದ ಕಿಚ್ಚ ಸುದೀಪ್ ಗೆ ಓಪನ್ ಚಾಲೆಂಜ್ ಹಾಕಿದ ಹುಚ್ಚ ವೆಂಕಟ್.!

  By Harshitha
  |

  ವೀಕ್ಷಕರ ಒತ್ತಾಯದ ಮೇರೆಗೆ 'ಬಿಗ್ ಬಾಸ್-3' ಕಾರ್ಯಕ್ರಮಕ್ಕೆ ಬಂದ ಹುಚ್ಚ ವೆಂಕಟ್ ಎಡಗಾಲಿಟ್ಟು 'ಬಿಗ್ ಬಾಸ್' ಮನೆಗೆ ಅಂದರ್ ಆದರು.

  ಅದಕ್ಕೂ ಮುನ್ನ ಸುದೀಪ್ ಜೊತೆ ಏಕವಚನದಲ್ಲಿ ಮಾತನಾಡಿ ಕಿಚ್ಚನ ಅಭಿಮಾನಿಗಳನ್ನ ಕೆರಳಿಸಿದ ಹುಚ್ಚ ವೆಂಕಟ್ ಗಾಯಕ ರವಿ ಮುರೂರು ಮೇಲೆ ಹಲ್ಲೆ ಮಾಡಿ 'ಬಿಗ್ ಬಾಸ್' ರಿಯಾಲಿಟಿ ಶೋನಿಂದ ಗೇಟ್ ಪಾಸ್ ಪಡೆದಿದ್ದಾರೆ. ['ಬಿಗ್ ಬಾಸ್' ಮನೆಯಿಂದ ಹುಚ್ಚ ವೆಂಕಟ್ 'ಕಿಕ್'ಔಟ್ ಆಗಿದ್ಯಾಕೆ?]

  ಹುಚ್ಚ ವೆಂಕಟ್ ನಡವಳಿಕೆ ಕಂಡು ಶಾಕ್ ಆದ ಸುದೀಪ್ ತಮ್ಮ ಮಾತಲ್ಲೇ ಹುಚ್ಚ ವೆಂಕಟ್ ಗೆ ಬಿಸಿ ಮುಟ್ಟಿಸಿದರು. ಸುದೀಪ್ ಎದುರಿಗೆ ತುಟಿಕ್ ಪಿಟಿಕ್ ಅನ್ನದ ಯೂಟ್ಯೂಬ್ ಸ್ಟಾರ್...ಟಿ.ಆರ್.ಪಿ ಕಾ ಮಾಮ್ಲ ಹುಚ್ಚ ವೆಂಕಟ್ ಮಾಧ್ಯಮಗಳ ಮುಂದೆ ಬಂದು ಕಿಚ್ಚ ಸುದೀಪ್ ಗೆ ಟಾಂಗ್ ನೀಡಿದ್ದಾರೆ. [ಟಿ.ಆರ್.ಪಿ ಕಿಂಗ್ ಹುಚ್ಚ ವೆಂಕಟ್ ವಿರುದ್ಧ ಗುಡುಗಿದ ಕಿಚ್ಚ ಸುದೀಪ್.!]

  ಸಾಲದಕ್ಕೆ ಕಿಚ್ಚ ಸುದೀಪ್ ಗೊಂದು ಓಪನ್ ಚಾಲೆಂಜ್ ಹಾಕಿದ್ದಾರೆ. 'ಬಿಗ್ ಬಾಸ್' ಮನೆಯಿಂದ ಹೊರ ಬಂದ ಕೂಡಲೆ ಮಾಧ್ಯಮಗಳಿಗೆ ಹುಚ್ಚ ವೆಂಕಟ್ ನೀಡಿರುವ ಹೇಳಿಕೆಯ ಯಥಾವತ್ ರೂಪ ಇಲ್ಲಿದೆ. ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ಕಿಸುತ್ತಾ ಹೋಗಿ......

  ನನಗೆ ಸಪೋರ್ಟ್ ಮಾಡ್ಲಿಲ್ಲ.!

  ನನಗೆ ಸಪೋರ್ಟ್ ಮಾಡ್ಲಿಲ್ಲ.!

  ''ಸುದೀಪ್....ನೀನು ಅವರನ್ನ ಸಪೋರ್ಟ್ ಮಾಡ್ದೆ. ನನಗೆ ಸಪೋರ್ಟ್ ಮಾಡ್ಲಿಲ್ಲ. 'ಕೆಂಪೇಗೌಡ' ಸಿನಿಮಾ ಡೈಲಾಗ್ ಹೊಡ್ದೆ. 'ಎಕ್ಕಡ' ಬಗ್ಗೆ ಮಾತಾಡ್ದೆ'' - ಹುಚ್ಚ ವೆಂಕಟ್ [ಟಿ.ಆರ್.ಪಿ ಕಿಂಗ್ ಹುಚ್ಚ ವೆಂಕಟ್ ವಿರುದ್ಧ ಗುಡುಗಿದ ಕಿಚ್ಚ ಸುದೀಪ್.!]

  ಕೆಂಪೇಗೌಡನಾ ನಿನ್ನ ಹೆಸರು?

  ಕೆಂಪೇಗೌಡನಾ ನಿನ್ನ ಹೆಸರು?

  ''ಕೆಂಪೇಗೌಡನಾ ನಿನ್ನ ಹೆಸರು? ನೀನು ರಿಯಲ್ ಹೀರೋನಾ? ನಾನು ರಿಯಲ್ ಹೀರೋ.! ಬೇರೆಯವರ ಹೆಸರಿಟ್ಟುಕೊಂಡು ನಾನು ಫೇಮಸ್ ಆಗಿಲ್ಲ'' - ಹುಚ್ಚ ವೆಂಕಟ್ [ಯಾರೀ ಹುಚ್ಚ ವೆಂಕಟ್? ನಿಮಗೆ ಗೊತ್ತಿಲ್ಲದ ಸತ್ಯ ಸಂಗತಿ]

  ಓಪನ್ ಚಾಲೆಂಜ್

  ಓಪನ್ ಚಾಲೆಂಜ್

  ''ನೀನೇ ಬಾ. ನಾನು ನೀನು ಇಬ್ಬರು ನಿಂತುಕೊಳ್ಳೋಣ. ಯಾರಿಗೆ ಶಕ್ತಿ ಇದೆ ಅಂತ ಜನರೇ ಹೇಳ್ಲಿ. ನೀನು ರಿಯಲ್ ಹೀರೋನಾ ಇಲ್ಲ ನಾನಾ'' - ಹುಚ್ಚ ವೆಂಕಟ್

  ಒನ್ ಅಂಡ್ ಒನ್ಲಿ ಹುಚ್ಚ ವೆಂಕಟ್

  ಒನ್ ಅಂಡ್ ಒನ್ಲಿ ಹುಚ್ಚ ವೆಂಕಟ್

  ''ನಾನು ಹುಚ್ಚ ವೆಂಕಟ್ ಆಗೇ ಒಳಗೆ ಹೋಗಿದ್ದು. ಹುಚ್ಚ ವೆಂಕಟ್ ಆಗೇ ಹೊರಗೆ ಬಂದಿದ್ದು. ಬೇರೆಯವರ ಹೆಸರಲ್ಲಿ ನಾನು ಫೇಮಸ್ ಆಗಿಲ್ಲ'' - ಹುಚ್ಚ ವೆಂಕಟ್

  ಫೇಮಸ್ ಆಗಿದ್ಹೇಗೆ?

  ಫೇಮಸ್ ಆಗಿದ್ಹೇಗೆ?

  ''ಹುಚ್ಚ ವೆಂಕಟ್ ಸಿನಿಮಾ ಇಂದ ನಾನು ಫೇಮಸ್ ಆಗಿಲ್ಲ. ಹುಚ್ಚ ವೆಂಕಟ್ ಫೇಮಸ್ ಆಗಿದ್ದು ಹೆಣ್ಮಕ್ಕಳಿಂದ ತಾನೆ. ತುಂಡುಬಟ್ಟೆ ಹಾಕಿದ್ರೂ ಅವರ ತರ ಬಿಡಬೇಕಂತೆ. ಹೆಣ್ಮಕ್ಕಳ ವಿಚಾರವಾಗಿ ನಾನು ಫೇಮಸ್ ಆಗಿದ್ದು'' - ಹುಚ್ಚ ವೆಂಕಟ್

  ಸುದೀಪ್ ಗೆ ಮತ್ತೆ ಏಕವಚನ ಪ್ರಯೋಗ

  ಸುದೀಪ್ ಗೆ ಮತ್ತೆ ಏಕವಚನ ಪ್ರಯೋಗ

  ಮಾಧ್ಯಮಗಳ ಮುಂದೆ ಇಷ್ಟೆಲ್ಲಾ ಹೇಳುವಾಗ ಹುಚ್ಚ ವೆಂಕಟ್ ಸುದೀಪ್ ಬಗ್ಗೆ ಏಕವಚನದಲ್ಲೇ ಮಾತಿಗಿಳಿದರು. ಅಷ್ಟೇ ಅಲ್ಲ, ಸುದೀಪ್ ಜೊತೆ 'ವಾರದ ಕಥೆ ಕಿಚ್ಚನ ಕಥೆ' ಕಾರ್ಯಕ್ರಮದಲ್ಲಿ ಮಾತನಾಡುವಾಗಲೂ ಹುಚ್ಚ ವೆಂಕಟ್ ಬಹುವಚನ ಉಪಯೋಗಿಸಲಿಲ್ಲ.!

  ಹುಚ್ಚ ವೆಂಕಟ್-ಸುದೀಪ್ ನಡುವಿನ ಸಂಭಾಷಣೆ

  ಹುಚ್ಚ ವೆಂಕಟ್-ಸುದೀಪ್ ನಡುವಿನ ಸಂಭಾಷಣೆ

  ಸುದೀಪ್ - ''ಮಿಸ್ಟರ್ ವೆಂಕಟ್''
  ಹುಚ್ಚ ವೆಂಕಟ್ - ''ಹೇಳು ಸುದೀಪ್''
  ಸುದೀಪ್ - ''ಹೇಳ್ತಾಯಿದ್ದೀನಿ ವೆಂಕಟ್ ಸರ್. ಕೈ ಎತ್ತಕ್ಕಿನ್ನ ಮುಂಚೆ ಸ್ವಲ್ಪ ಯೋಚನೆ ಮಾಡಿ. ನನ್ನ ಶೋ ಒಳಗೆ ನನ್ನ Contestants ನನ್ನ ಫ್ಯಾಮಿಲಿ ಇದ್ದ ಹಾಗೆ. ನನಗೆ ಏಕವಚನದಲ್ಲಿ ಕರೀರಿ. ನಾನು ಮಾತಾಡ್ತೀನಿ ಪರ್ವಾಗಿಲ್ಲ. ನಾನು ತಲೆ ಬಗ್ಗಿಸ್ತೀನಿ ನಿಮಗೆ. ನಾನ್ ಚಿಕ್ಕವನಾಗಲ್ಲ. ನನ್ನ Contestants ಬಗ್ಗೆ, ನನ್ನ ಕುಟುಂಬದವರ ಬಗ್ಗೆ ಏನಾದ್ರೂ ಮಾತಾಡಿದ್ರೆ, ಕೈ ಎತ್ತಿದ್ದು ಗೊತ್ತಾದ್ರೆ ಮಾತ್ರ ಅಲ್ಲಿರೋರಿಗೆ ಅಲ್ಲ ನಿಮಗೆ ನಮಗೂ..!!''

  ಹುಚ್ಚ ವೆಂಕಟ್ ಬಗ್ಗೆ ಸುದೀಪ್ ಹೇಳಿದ್ದೇನು?

  ಹುಚ್ಚ ವೆಂಕಟ್ ಬಗ್ಗೆ ಸುದೀಪ್ ಹೇಳಿದ್ದೇನು?

  ''ನಮ್ಮನ್ನೇಲಿ ಇರುವ ಹೆಣ್ಮಕ್ಕಳನ್ನ ನೋಡಿಕೊಳ್ಳುವುದಕ್ಕೆ ಹೊರಗಡೆ ಇರುವ ಗಂಡಸು ಬೇಕಾಗಿಲ್ಲ ನಮಗೆ'' - ಸುದೀಪ್

  ಗೌರವದ ಬಗ್ಗೆ ಸುದೀಪ್ ಮಾತು

  ಗೌರವದ ಬಗ್ಗೆ ಸುದೀಪ್ ಮಾತು

  ''ಫಸ್ಟ್ ನೀವು ಮಾತಾಡುವುದನ್ನ ಕೇಳಿ ನಾನು ಮಾತನಾಡಬೇಕಾದರೆ. ರೆಸ್ಪೆಕ್ಟ್ ಬೇಕಾದವರು ಮೊದಲು ರೆಸ್ಪೆಕ್ಟ್ ಕೊಡೋದನ್ನ ಕಲೀಬೇಕು'' - ಸುದೀಪ್

  'ಎಕ್ಕಡ' ಬಗ್ಗೆ ಸುದೀಪ್ ಹೇಳಿದ್ದೇನು?

  'ಎಕ್ಕಡ' ಬಗ್ಗೆ ಸುದೀಪ್ ಹೇಳಿದ್ದೇನು?

  ''ಮಾತು ಕಮ್ಮಿ ಆಡಿದ್ದೀರಾ ನೀವು. ಮಾತ್ ಎತ್ತಿದ್ರೆ ಎಕ್ಕಡ ಎಕ್ಕಡ ಅಂತೀರಾ. ಏನ್ ಎಕ್ಕಡ? ಅದು ಎಕ್ಕಡ ಕಾಲಲ್ಲಿ ಇರ್ಬೇಕು. ನಿಮಗೆ ಹಿಂಗೆ ಮಾತನಾಡಿದ್ರೆ ಆಗಲ್ಲ. ಬೇರೆಯವರು ಹಿಂಗೆಲ್ಲಾ ಕೂಗಿದ್ರೆ ಆಗಲ್ಲ. ನಾನು ಮಗು ತರಹ ಟ್ರೀಟ್ ಮಾಡ್ತಾಯಿದ್ದೀನಿ. ಒಂದು ಮಾತು ಹೇಳ್ತೀನಿ ವೆಂಕಟ್, ಗೌರವ ಸಂಪಾದಿಸಬೇಕು. ಕಿತ್ಕೊಳ್ಳೋಕೆ ಆಗಲ್ಲ. ಓಕೆ'' - ಸುದೀಪ್

  English summary
  After getting evicted from Bigg Boss Kannada 3, Huccha Venkat challenged Kiccha Sudeep during media interaction. Read the article to know what Huccha Venkat told about Sudeep.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X