»   » ಯೂಟ್ಯೂಬ್ ಸ್ಟಾರ್ ಹುಚ್ಚ ವೆಂಕಟ್ ಗೆ ಪೊಗರು ಎಷ್ಟಿರಬೇಕು?

ಯೂಟ್ಯೂಬ್ ಸ್ಟಾರ್ ಹುಚ್ಚ ವೆಂಕಟ್ ಗೆ ಪೊಗರು ಎಷ್ಟಿರಬೇಕು?

Posted By:
Subscribe to Filmibeat Kannada

ಈ ಪ್ರಶ್ನೆಯನ್ನ ನಾವ್ ಕೇಳ್ತಿಲ್ಲ. ಕಿಚ್ಚ ಸುದೀಪ್ ಅಭಿಮಾನಿಗಳು ಕೇಳ್ತಿದ್ದಾರೆ.

ಸುದ್ದಿ ಮಾಧ್ಯಮಗಳ ಅಚ್ಚುಮೆಚ್ಚಿನ ಟಿ.ಆರ್.ಪಿ. ಕಾ ಮಾಮ್ಲ ಹುಚ್ಚ ವೆಂಕಟ್ ಸಖತ್ ಮನರಂಜನೆ ನೀಡಬಹುದು. ''ನನ್ ಮಗಂದ್....ನನ್ ಎಕ್ಕಡ'' ಡೈಲಾಗ್ಸ್ ಮೂಲಕ ಪಾಪ್ಯುಲರ್ ಆಗಿರ್ಬಹುದು. ಹುಚ್ಚುಚ್ಚಾಗಿ ಬಾಯಿಗೆ ಬಂದ ಹಾಗೆ ಮಾತನಾಡಿ ಎಲ್ಲರನ್ನ ನಕ್ಕು ನಲಿಸಬಹುದು. ಆದ್ರೆ, ಅದೇ ಅತಿರೇಕವಾದರೆ?

ಹುಚ್ಚ ವೆಂಕಟ್ ಗೆ ಒಬಾಮಾ ಕ್ಲೋಸ್ ಫ್ರೆಂಡ್ ಆಗಿರ್ಬಹುದು. ಹಾಗಂತ ಬೇರೆಯವರೆಲ್ಲಾ ಕೀಳಾ? ಸ್ಯಾಂಡಲ್ ವುಡ್ ಸೇರಿದಂತೆ ಟಾಲಿವುಡ್ ಮತ್ತು ಕಾಲಿವುಡ್ ನಲ್ಲಿ ಬಹು ಬೇಡಿಕೆ ಸೃಷ್ಟಿಸಿಕೊಂಡಿರುವ ನಟ ಸುದೀಪ್ ಗೆ ಏಕವಚನದಲ್ಲಿ ಮಾತನಾಡಿಸುವುದು ಸರೀನಾ? [ಯಾರೀ ಹುಚ್ಚ ವೆಂಕಟ್? ನಿಮಗೆ ಗೊತ್ತಿಲ್ಲದ ಸತ್ಯ ಸಂಗತಿ]

ಈ ಎಲ್ಲಾ ಪ್ರಶ್ನೆಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಎದ್ದಿವೆ. ವೀಕ್ಷಕರ ಒತ್ತಾಯದ ಮೇರೆಗೆ 'ಬಿಗ್ ಬಾಸ್-3' ಕಾರ್ಯಕ್ರಮದಲ್ಲಿ ಭಾಗಿಯಾದ ಹುಚ್ಚ ವೆಂಕಟ್, ಕಿಚ್ಚ ಸುದೀಪ್ ರನ್ನ ಏಕವಚನದಲ್ಲಿ ಮಾತನಾಡಿಸಿದರು.

ಅದಕ್ಕೆ ಸಮರ್ಥನೆ ಬೇರೆ ಕೊಟ್ಟ ಹುಚ್ಚ ವೆಂಕಟ್, 'ಬಿಗ್ ಬಾಸ್' ಮನೆಯಿಂದ ಹೊರಬಂದ ಮೇಲೂ ಕಿಚ್ಚ ಸುದೀಪ್ ವಿರುದ್ಧ ಕಿಡಿಕಾರಿದ್ದಾರೆ. ಬಲವಂತದಿಂದ 'ನಲ್ಲ' ಸುದೀಪ್ ಗೆ 'ಸಾರಿ ಕಣೋ' ಅಂತ 'ಏಕವಚನ'ದಲ್ಲಿ ಕ್ಷಮೆ ಕೇಳಿದ್ದಾರೆ. ಮುಂದೆ ಓದಿ.....

ಖಾಸಗಿ ವಾಹಿನಿಗೆ ಸಂದರ್ಶನ

'ಬಿಗ್ ಬಾಸ್' ಮನೆಯಿಂದ ಹೊರಬಂದ ಮೇಲೆ ಟಿವಿ9 ಕನ್ನಡ ಸುದ್ದಿ ವಾಹಿನಿಗೆ ಸಂದರ್ಶನ ನೀಡಿದ ಹುಚ್ಚ ವೆಂಕಟ್ ಕಿಚ್ಚ ಸುದೀಪ್ ಗೆ ಓಪನ್ ಚಾಲೆಂಜ್ ಹಾಕಿದರು. [ಟಿ.ಆರ್.ಪಿ ಕಿಂಗ್ ಹುಚ್ಚ ವೆಂಕಟ್ ವಿರುದ್ಧ ಗುಡುಗಿದ ಕಿಚ್ಚ ಸುದೀಪ್.!]

ಚಾಲೆಂಜ್ ಏನು?

''ಕೆಂಪೇಗೌಡನಾ ನಿನ್ನ ಹೆಸರು? ನೀನು ರಿಯಲ್ ಹೀರೋನಾ? ನಾನು ರಿಯಲ್ ಹೀರೋ.! ಬೇರೆಯವರ ಹೆಸರಿಟ್ಟುಕೊಂಡು ನಾನು ಫೇಮಸ್ ಆಗಿಲ್ಲ. ನೀನೇ ಬಾ. ನಾನು ನೀನು ಇಬ್ಬರು ನಿಂತುಕೊಳ್ಳೋಣ. ಯಾರಿಗೆ ಶಕ್ತಿ ಇದೆ ಅಂತ ಜನರೇ ಹೇಳ್ಲಿ.'' ಅಂತ ಚಾಲೆಂಜ್ ಮಾಡಿದರು. ['ಬಿಗ್ ಬಾಸ್ 3' ಮೂಲಕ ಸಾವಿರಾರು ಮನಸ್ಸುಗಳನ್ನು ಗೆದ್ದ ಕಿಚ್ಚ..!]

ಏಕವಚನ ಯಾಕೆ?

''ಸುದೀಪ್ ದೊಡ್ಡ ಸ್ಟಾರ್ ಅವರಿಗೆ ಏಕವಚನ ಬಳಸುವುದು ತಪ್ಪು'' ಅಂತ ನಿರೂಪಕರು ಹೇಳಿದಾಗ ಹುಚ್ಚ ವೆಂಕಟ್ ಕೊಟ್ಟ ರಿಯಾಕ್ಷನ್ ಕಿಚ್ಚ ಸುದೀಪ್ ಅಭಿಮಾನಿಗಳನ್ನ ಕೆರಳಿಸಿತು. [ಕೆರಳಿದ ಕಿಚ್ಚ ಸುದೀಪ್ ಗೆ ಓಪನ್ ಚಾಲೆಂಜ್ ಹಾಕಿದ ಹುಚ್ಚ ವೆಂಕಟ್.!]

ಇರೋದು ಒಬ್ಬರೇ ಸ್ಟಾರ್.!

''ಯಾರು ಸ್ಟಾರ್? ಯಾರೂ ಸ್ಟಾರ್ ಅಲ್ಲ. ಇರೋದು ಒಬ್ಬರೇ ಸ್ಟಾರ್. ಅದು ಸಾಹಸಸಿಂಹ ವಿಷ್ಣುವರ್ಧನ್ ಮಾತ್ರ'' - ಹುಚ್ಚ ವೆಂಕಟ್ [ಹುಚ್ಚ ವೆಂಕಟ್ ಅಭಿಮಾನಿಯಿಂದ ಸುದೀಪ್ ಗೆ ಖಡಕ್ ಪ್ರಶ್ನೆ]

ಏಕವಚನದಲ್ಲೇ ಮಾತನಾಡಿಸುವುದು.!

''ಸುದೀಪ್ ನ ನಾನು ಹಾಗೇ ಕರೆಯೋದು. ನಾನು ಇರೋದೇ ಹಾಗೆ. ನಾನು ಬದಲಾಗಲ್ಲ. ಅವರು ನನ್ನ ಸಹೋದರ ಇದ್ದ ಹಾಗೆ. ನಾನು ಪ್ರೀತಿಯಿಂದ ಹೋಗೋ ಬಾರೋ ಅಂತ ಕರೆಯೋದು. ಯಾಕಂದ್ರೆ ಅದರಲ್ಲಿ ಪ್ರೀತಿ ಇದೆ. ಅವ್ನು ನಾನು ಹಾಗೇ ಇರ್ತೀವಿ.'' - ಹುಚ್ಚ ವೆಂಕಟ್. [ಹುಚ್ಚ ವೆಂಕಟ್ ಗೆ ಸುದೀಪ್ 'ಐ ಲವ್ ಯು' ಎಂದಾಗ...]

ಸುದೀಪ್ ಹೇಳಿದ ಮಾತು....

'ಬಿಗ್ ಬಾಸ್' ಮನೆಯೊಳಗೆ ಹೋಗುವ ಮುನ್ನ ಹುಚ್ಚ ವೆಂಕಟ್ ಗೆ ಕಿಚ್ಚ ಸುದೀಪ್ ''ನೀವು ನೀವಾಗೇ ಇರಿ'' ಅಂದಿದ್ದರು. ಅದು ಹುಚ್ಚ ವೆಂಕಟ್ ಸುದೀಪ್ ರವರಿಗೆ ಏಕವಚನ ಪ್ರಯೋಗ ಮಾಡಿದ್ದಕ್ಕೆ! ಇದನ್ನ ಉದ್ದೇಶಿಸಿ ಹುಚ್ಚ ವೆಂಕಟ್, ''ಅವರು ನೀವು ನೀವಾಗಿರಿ, ನಾನು ನಾನಾಗೇ ಇರ್ತಿನಿ ಅಂತ ಹೇಳಿದ್ರು. ಅದಕ್ಕೆ ನಾನು ನಾನಾಗೇ ಇದ್ದೀನಿ ಅಂತ ತೋರ್ಸ್ದೆ'' ಅಂತ ಹುಚ್ಚ ವೆಂಕಟ್ ತಮ್ಮನ್ನ ತಾವು ಸಮರ್ಥಿಸಿಕೊಂಡರು.

ಅಭಿಮಾನಿಗಳ ಪ್ರತಿಭಟನೆ ಶುರುವಾಯ್ತು.!

ಟಿವಿ9 ವಾಹಿನಿಯಲ್ಲಿ ಸುದೀಪ್ ಗೆ ಹುಚ್ಚ ವೆಂಕಟ್ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಂತೆ ಸುದೀಪ್ ಅಭಿಮಾನಿಗಳು ರೊಚ್ಚಿಗೆದ್ದರು. ಕೂಡಲೆ ಹುಚ್ಚ ವೆಂಕಟ್ ಕ್ಷಮೆ ಕೇಳ್ಬೇಕು ಅಂತ ಒತ್ತಾಯಿಸಿದರು.

ಯಾರಿಗೂ ಬಗ್ಗದ ಹುಚ್ಚ ವೆಂಕಟ್.!

ಯಾರಿಗೂ ಜಗ್ಗದ-ಬಗ್ಗದ ಹುಚ್ಚ ವೆಂಕಟ್, ''ಸುದೀಪ್ ನಿನಗೇನಾದ್ರೂ ಬೇಜಾರಾಗಿದ್ರೆ ಸಾರಿ. ಬೇಜಾರಾಗಿದ್ರೆ.....'' ಅಂತ ಮತ್ತೆ ಏಕವಚನ ಪ್ರಯೋಗಿಸಿದರು.

ಅಭಿಮಾನಿಗಳಿಗೆ ಸಾರಿ ಕೇಳಲ್ಲ.!

''ಅಭಿಮಾನಿಗಳಿಗೆ ಯಾಕೆ ಸಾರಿ ಕೇಳ್ಬೇಕು. ಅವನಿಗೆ ಕೇಳ್ತೀನಿ. ಸಾರಿ ಕಣೋ.'' - ಹುಚ್ಚ ವೆಂಕಟ್.

ಬಹುವಚನ ಅಂದುಕೊಳ್ತೀನಿ.!

''ಮತ್ತೆ ನಾನು ''ಅವರನ್ನ'' ಭೇಟಿ ಮಾಡಲ್ಲ. ಇದು ಮಾತನಾಡಿದ್ದು ಬಹುವಚನ ಅಂತ ಅಂದುಕೊಳ್ತೀನಿ. ಇನ್ಮುಂದೆ ಸುದೀಪ್ ಗೆ ಹಾಗೆ ಕರೆಯಲ್ಲ.'' ಅಂತ ಕೊನೆಗೆ ಪೊಗರು ಪಕ್ಕಕ್ಕಿಟ್ಟು ಹುಚ್ಚ ವೆಂಕಟ್ ಹೇಳಿದರು.

ವೇದಿಕೆಯಲ್ಲಿ ಬಿಸಿ ಮುಟ್ಟಿಸಿದ್ದ ಕಿಚ್ಚ ಸುದೀಪ್.!

''ಅವರು ಹೇಗೆ ಮಾತಾಡ್ತಾರೆ ಅನ್ನೋದು ಅವರಿಗೆ ಬಿಟ್ಟಿದ್ದು. ನಾವ್ಯಾಕೆ ಥಿಂಕ್ ಮಾಡ್ಬೇಕು. Respecting everyone is my character. ಗೌರವ ಕೊಡೋದ್ರಿಂದ ಸಂಪಾದಿಸುತ್ತೇವೆ ಹೊರತು ಕಳೆದುಕೊಳ್ಳೋದೇನೂ ಇಲ್ಲ'' - ಸುದೀಪ್

ವೇದಿಕೆಯಲ್ಲಿ ಹುಚ್ಚ ವೆಂಕಟ್ - ಸುದೀಪ್ ಸಂಭಾಷಣೆ

ಸುದೀಪ್ - ''ಮಿಸ್ಟರ್ ವೆಂಕಟ್''
ಹುಚ್ಚ ವೆಂಕಟ್ - ''ಹೇಳು ಸುದೀಪ್''
ಸುದೀಪ್ - ''ಹೇಳ್ತಾಯಿದ್ದೀನಿ ವೆಂಕಟ್ ಸರ್. ಕೈ ಎತ್ತಕ್ಕಿನ್ನ ಮುಂಚೆ ಸ್ವಲ್ಪ ಯೋಚನೆ ಮಾಡಿ. ನನ್ನ ಶೋ ಒಳಗೆ ನನ್ನ Contestants ನನ್ನ ಫ್ಯಾಮಿಲಿ ಇದ್ದ ಹಾಗೆ. ನನಗೆ ಏಕವಚನದಲ್ಲಿ ಕರೀರಿ. ನಾನು ಮಾತಾಡ್ತೀನಿ ಪರ್ವಾಗಿಲ್ಲ. ನಾನು ತಲೆ ಬಗ್ಗಿಸ್ತೀನಿ ನಿಮಗೆ. ನಾನ್ ಚಿಕ್ಕವನಾಗಲ್ಲ. ರೆಸ್ಪೆಕ್ಟ್ ಬೇಕಾದವರು ಮೊದಲು ರೆಸ್ಪೆಕ್ಟ್ ಕೊಡೋದನ್ನ ಕಲೀಬೇಕು''

ಸಾಮಾಜಿಕ ಜಾಲತಾಣಗಳಲ್ಲಿ ಯುದ್ಧ

ಹುಚ್ಚ ವೆಂಕಟ್ ರವರ ಈ ನಡವಳಿಕೆ ಕಂಡು ಕಿಚ್ಚನ ಅಭಿಮಾನಿಗಳು ಕೆರಳಿದ್ದಾರೆ. ಹುಚ್ಚ ವೆಂಕಟ್ ವಿರುದ್ಧ ಕಿಡಿಕಾರುತ್ತಿದ್ದಾರೆ.

English summary
Huccha Venkat doesn't feel sorry for using singular tense for Actor, Director Kiccha Sudeep. Infact, Huccha Venkat is defending himself for his act.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X