For Quick Alerts
  ALLOW NOTIFICATIONS  
  For Daily Alerts

  15 ಪ್ರಶಸ್ತಿ ಗೆದ್ದ 'ಭಾಘಾಶೇಖ್ರಿ' ಕಿರುಚಿತ್ರವನ್ನು ಫೀಚರ್ ಫಿಲ್ಮ್ ಮಾಡಲು ಮುಂದಾದ ತಂಡ

  By ಫಿಲ್ಮಿಬೀಟ್ ಡೆಸ್ಕ್
  |

  ಭಾಘಾ ಅನ್ನೋ ಬುಡಕಟ್ಟು ಜನಾಂಗದ ಹಿನ್ನೆಲೆಯನ್ನಿಟ್ಟುಕೊಂಡು ಕಿರುಚಿತ್ರವನ್ನು ಮಾಡಲಾಗಿದೆ. ಕಿರುಚಿತ್ರದಲ್ಲಿ ಭಾಘಾ ಜನಾಂಗಕ್ಕೆ ಸೇರಿದ ಶೇಖ್ರಿ ಅನ್ನೋ ಸ್ವಾತಂತ್ರ್ಯ ಹೋರಾಟಗಾರನ ಕಥೆಯನ್ನು ಇಟ್ಟುಕೊಂಡು ಈ ಕಿರುಚಿತ್ರ ಮಾಡಲಾಗಿದೆ.

  'ಭಾಘಾಶೇಖ್ರಿ' ಕೇವಲ ಒಂದು ಕಿರುಚಿತ್ರ ಅಷ್ಟೇ. ಆದರೆ, ಇದನ್ನೇ ಸಿನಿಮಾ ಮಾಡುವುದಕ್ಕೆ ಚಿತ್ರತಂಡ ರೆಡಿಯಾಗಿ ನಿಂತಿದೆ. ಅಂದ್ಹಾಗೆ ಶೇಖ್ರಿ ಅನ್ನೋ ಪಾತ್ರವನ್ನು ಬಲ ರಾಜ್ವಾಡಿ ನಿರ್ವಹಿಸಿದ್ದಾರೆ. ಹಾಗೇ ದಿನೇಶ್ ಮಂಗಳೂರು, 'ಟಗರು', 'ಜಮಾಲಿಗುಡ್ಡ' ಸಿನಿಮಾದಲ್ಲಿ ನಟಿಸಿರೋ ನಂದಕಿಶೋರ್, ಮನಮೋಹನ್ ರೈ ಹಾಗೂ ರಂಗಭೂಮಿ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

  ಈಗಾಗಲೇ 'ಭಾಘಾಶೇಖ್ರಿ' ಕಿರು ಚಿತ್ರದ ಒಂದು ಶೋ ಅನ್ನು ಸೆಲೆಬ್ರೆಟಿಗಳಿಗೆ ತೋರಿಸಲಾಗಿದೆ. ಅವರೂ ಈ ಸಿನಿಮಾವನ್ನು ನೋಡಿ ಮೆಚ್ಚಿಕೊಂಡಿದ್ದಾರೆ. ಅಲ್ಲದೆ, ಈಗಾಗಲೇ 15 ಪ್ರಶಸ್ತಿಗಳನ್ನು ಈ ಕಿರು ಚಿತ್ರ ಮುಡಿಗೇರಿಸಿಕೊಂಡಿದೆ. ಸದ್ಯ ಕಿರುಚಿತ್ರ ಆಗಿದ್ದ 'ಭಾಘಾಶೇಖ್ರಿ'ಯನ್ನು ಫೀಚರ್ ಫಿಲ್ಮ್ ಮಾಡಲು ಸಿನಿಮಾ ತಂಡ ಮುಂದಾಗಿದೆ. ಈಗಾಗಲೇ ಸಿನಿಮಾದ ಕಥೆ ರೆಡಿಯಾಗಿದ್ದು, ತಾರೆಯರು ಕೂಡ ಫಿಕ್ಸ್ ಆಗಿದ್ದಾರೆ. ಇನ್ನು ಕೆಲವು ದಿನಗಳಲ್ಲಿ ಈ ಬಗ್ಗೆ ಚಿತ್ರತಂಡ ಮಾಹಿತಿಯನ್ನು ನೀಡಲಿದೆ. ಈ ಬಗ್ಗೆ ನಿರ್ದೇಶಕ ಗೌಡೇಶ್ ಪಾಟೀಲ್ ಮಾಹಿತಿ ಹಂಚಿಕೊಂಡಿದ್ದಾರೆ.

  " ಭಾಘಾಶೇಖ್ರಿ ಅಂದ್ರೆ, ಭಾಗ ಅನ್ನೋದು ಒಂದು ಬುಡಕಟ್ಟು ಜನಾಂಗದ ಹೆಸರು. ಶೇಖ್ರಿ ಅನ್ನೋದು ಒಬ್ಬ ವ್ಯಕ್ತಿಯ ಹೆಸರು. ಇವೆರಡನ್ನೂ ಇಟ್ಟುಕೊಂಡು ಟೈಟಲ್ ಮಾಡಿದ್ದೇವೆ. ಈ ಸಿನಿಮಾದಲ್ಲಿ 'ಭಾಘಾಶೇಖ್ರಿ' ಅನ್ನೋನು ಒಬ್ಬ ಸ್ವಾತಂತ್ರ್ಯ ಹೋರಾಟಗಾರ ಆಗಿರುತ್ತಾನೆ. ಹಾಗಂತ ಈ ಪಾತ್ರ ರಿಯಲ್ ಆಗಿ ಇಲ್ಲ. ಬದಲಾಗಿ ಸಿನಿಮಾಗಾಗಿ ಸೃಷ್ಟಿ ಮಾಡಿಕೊಂಡ ಹೆಸರು ಇದು. ಹೀಗೆ ಕಾಲ್ಪನಿಕ ಹೆಸರು ತೆಗೆದುಕೊಂಡಿದ್ದಕ್ಕೆ ಕಾರಣ, ಅದೆಷ್ಟೋ ಬೆಳಕಿಗೆ ಬಾರದೆ ಇರೋ ಸ್ವಾತಂತ್ರ್ಯ ಹೋರಾಟಗಾರರು ಇದ್ದಾರೆ. ಅವರನ್ನು ಗುರುತಿಸಬೇಕು ಅನ್ನೋದಕ್ಕೆ ಈ ಸಿನಿಮಾ ಮಾಡಿದ್ದೇವೆ." ಎನ್ನುತ್ತಾರೆ.

  "ಮುದ್ದಣ್ಣ ಅನ್ನೋ ಒಬ್ಬ ವ್ಯಕ್ತಿ ಬ್ರಿಟಿಷ್ ಕಚೇರಿಯಲ್ಲಿ ಗುಮಾಸ್ತ ಆಗಿರುತ್ತಾನೆ. ಆ ವೇಳೆ ನಡೆದ ಘಟನೆಯನ್ನು ಅವರು ಪುಸ್ತಕ ರೂಪದಲ್ಲಿ ತಂದಿರುತ್ತಾನೆ. ಆ ಪುಸ್ತಕವನ್ನು ಸ್ವಾತಂತ್ರ್ಯ ನಂತರ ಪಠ್ಯ ಪುಸ್ತಕದಲ್ಲಿ ಸೇರಿಸಬೇಕು ಅಂತ ಹೋರಾಡುತ್ತಾನೆ. ಭಾಘಾಶೇಖ್ರಿ ಯಾರಿಗೂ ಗೊತ್ತಿಲ್ಲದೆ ಇರೋದ್ರಿಂದ ಯಾರೂ ಆಸಕ್ತಿ ತೋರುವುದಿಲ್ಲ. ಪುರಾವೆ ಇಲ್ಲದ ವ್ಯಕ್ತಿಯನ್ನು ಸಿಲಬಸ್‌ಗೆ ಸೇರಿಸುವುದಕ್ಕೆ ಒಪ್ಪುವುದಿಲ್ಲ. ಇಲ್ಲಿಂದ ಸಿನಿಮಾದ ಕಥೆ ಹೇಗೆ ಸಾಗುತ್ತೆ ಅನ್ನೋದೇ ಈ ಕಿರುಚಿತ್ರದ ಕಥೆ." ಎಂದು ಕಥೆ ಎಳೆಯನ್ನು ಬಿಟ್ಟುಕೊಟ್ಟಿದ್ದಾರೆ.

  Award Winning Kannada Short Film Bhagashekri Going to Shot As Feature Film

  'ಭಾಘಾಶೇಖ್ರಿ' ಕಿರು ಚಿತ್ರ ಈಗಾಗಲೇ 15 ಪ್ರಶಸ್ತಿಗಳನ್ನು ಗಿಟ್ಟಿಸಿಕೊಂಡಿದೆ. ಅದರ ಸಂಪೂರ್ಣ ಡಿಟೈಲ್ಸ್ ಇಲ್ಲಿದೆ.

  ಧನಬಾದ್ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್- ಬೆಸ್ಟ್ ಸ್ಟೋರಿ ಅವಾರ್ಡ್
  ಶಾರ್ಟ್ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ - ಬೇಸ್ಟ್ ಸ್ಟೋರಿ, ಬೆಸ್ಟ್ ಎಕ್ಸ್‌ಪೆರಿಮೆಂಟಲ್ ಫಿಲ್ಮ್ ಅವಾರ್ಡ್
  ಬೆಹಲ ಫಿಲ್ಮ್ ಫೆಸ್ಟಿವಲ್ -ಬೆಸ್ಟ್ ಫಿಕ್ಷನಲ್ ಫಿಲ್ಮ್ ಅವಾರ್ಡ್
  ಒನ್ ಲೀಫ್ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಬೆಸ್ಟ್ ಡೈರೆಕ್ಟರ್ ಅವಾರ್ಡ್, ಬೆಸ್ಟ್ ಆಕ್ಟರ್ (ಬಲ ರಾಜ್ವಾಡಿ) ಅವಾರ್ಡ್, ಬೆಸ್ಟ್ ಕನ್ನಡ ಶಾರ್ಟ್ ಫಿಲ್ಮ್ ಅವಾರ್ಡ್, ಬೆಸ್ಟ್ ಡ್ರಾಮಾ ಅವಾರ್ಡ್.
  ಸಂಗ್ರರ್ ಶಾರ್ಟ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಬೆಸ್ಟ್ ಶಾರ್ಟ್ ಫಿಲ್ಮ್ ಅವಾರ್ಡ್
  ಬೆಸ್ಟ್ ನರೇಟಿವ್ ಫಿಲ್ಮ್ ಅವಾರ್ಡ್
  ಬೆಸ್ಟ್ ಕನ್ನಡ ಶಾರ್ಟ್ ಫಿಲ್ಮ್ ಅವಾರ್ಡ್ ಕೂಡ ದೊರಕಿದೆ.
  ಇಂಡಿಯನ್ ಟ್ಯಾಲೆಂಟ್ಸ್ ಫಿಲ್ಮ್ ಫೆಸ್ಟಿವಲ್ ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ಕಥೆ, ಅತ್ಯುತ್ತಮ ರೂಪಕ ಚಿತ್ರ, ಅತ್ಯುತ್ತಮ ಕನ್ನಡ ಚಿತ್ರ ಪ್ರಶಸ್ತಿ ಲಭಿಸಿದೆ.
  ಸೆವೆನ್ ಸಿಸ್ಟರ್ಸ್ ನಾರ್ತ್ ಈಸ್ಟ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಬೆಸ್ಟ್ ಡೈರೆಕ್ಟರ್ ಬೆಸ್ಟ್ ಆಕ್ಟರ್(ದಿನೇಶ್ ಮಂಗಳೂರು),ಬೆಸ್ಟ್ ಡೈಲಾಗ್ ರೈಟರ್, ಬೆಸ್ಟ್ ಶಾರ್ಟ್ ಫಿಲ್ಮ್ ಅವಾರ್ಡ್ ದೊರಕಿದೆ.

  English summary
  Award Winning Kannada Short Film Bhagashekri Going to Shot As Feature Film, Know More.
  Friday, November 11, 2022, 23:59
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X