Don't Miss!
- Finance
ಜೂ.29ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
- Sports
ಟಿ20 ವಿಶ್ವಕಪ್ ಭಾರತದ ಸಂಭಾವ್ಯ ತಂಡದಲ್ಲಿ ಈ ಸ್ಟಾರ್ ವೇಗಿಗೆ ಸ್ಥಾನವಿಲ್ಲ; ವರದಿ
- News
ಕನ್ನಯ್ಯ ಲಾಲ್ ಕೊಲೆ: ದೇಶದಲ್ಲಿ ಮದರಾಸಗಳನ್ನು ಬ್ಯಾನ್ ಮಾಡಬೇಕೆಂದ ಈಶ್ವರಪ್ಪ
- Lifestyle
ಗರ್ಲ್ಸ್ ಪುರುಷರ ಈ ಸೀಕ್ರೆಟ್ ತಿಳಿದುಕೊಂಡ್ರೆ ರಿಲೇಷನ್ಶಿಪ್ನಲ್ಲಿ ಸಮಸ್ಯೆನೇ ಬರಲ್ಲ
- Automobiles
ಸುರಕ್ಷತಾ ಮಾನದಂಡಗಳನ್ನು ರಾಜಿ ಮಾಡಿಕೊಳ್ಳಲು ಕಾರು ಕಂಪನಿಗಳ ಸಭೆ ಕರೆದ ನಿತಿನ್ ಗಡ್ಕರಿ
- Education
IWST Recruitment 2022 : 13 ಪ್ರಾಜೆಕ್ಟ್ ಫೆಲೋ ಮತ್ತು ಪ್ರಾಜೆಕ್ಟ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಅಮೆಜಾನ್ ಫ್ಯಾಬ್ ಫೋನ್ಸ್ ಫೆಸ್ಟ್ ಸೇಲ್ನಲ್ಲಿ ಈ ಫೋನ್ಗಳಿಗೆ ಬಿಗ್ ಆಫರ್!
- Travel
ದೇವಿ ಮೂಕಾಂಬಿಕೆಯ ದೈವಿಕ ಸನ್ನಿಧಿಯ ಸ್ಥಳ - ಕೊಲ್ಲೂರು
ಸೀರಿಯಲ್ ನಟಿ ಸುಷ್ಮಾ ಶೇಖರ್ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ!
ಕಿರುತೆರೆಯಲ್ಲಿ ನಿತ್ಯ ಒಬ್ಬರಲ್ಲ ಒಬ್ಬರು ಹೊಸ ಪ್ರತಿಭೆಗಳು ಕಾಣಿಸಿಕೊಳ್ಳುತ್ತಲೇ ಇರುತ್ತಾರೆ. ಕೆಲವರು ತಮ್ಮ ಮುಂದಿನ ಬದುಕನ್ನೂ ಇಲ್ಲೇ ಕಂಡುಕೊಳ್ಳುತ್ತಾರೆ. ಆದರೆ ಕೆಲವರು ಹೆಸರು ಮಾಡಿ ನಾಪತ್ತೆಯಾಗಿ ಬಿಡುತ್ತಾರೆ.
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ 'ಯಾರೇ ನೀ ಮೋಹಿನಿ' ಧಾರಾವಾಹಿಯಲ್ಲಿ ಬೆಳ್ಳಿ ಪಾತ್ರಕ್ಕೆ ಜೀವ ತುಂಬಿದ್ದ ನಟಿ ಚೆಂದುಳ್ಳಿ ಚೆಲುವೆ ಈಗ ಹೇಗಿದ್ದಾರೆ ಗೊತ್ತಾ.? ರಿಯಲ್ ಹೆಸರು ಸುಷ್ಮಾ ಶೇಖರ್. ತಮ್ಮ ಮುಗ್ಧತೆಯಿಂದಲೇ ಜನರ ಮನ ಗೆದ್ದರು. ನಟಿಸಿದ್ದು ಕೆಲವೇ ಸೀರಿಯಲ್ ಆದರೂ, ಈಗಲೂ ಇವರಿಗೆ ಅಭಿಮಾನಿಗಳಿದ್ದಾರೆ.
ಸಾಕಷ್ಟು
ನಟ-ನಟಿಯರಿಗೆ
ಬಟ್ಟೆ
ಡಿಸೈನ್
ಮಾಡುವುದು
ಇವರೇ
ನೋಡಿ
'ಲಕುಮಿ' ಹಾಗೂ 'ಬೆಳ್ಳಿ' ಪಾತ್ರದ ಮೂಲಕ ಜನ ಮನ ಗೆದ್ದ ಸುಷ್ಮಾ ಶೇಖರ್ ಸದಾ ಲಂಗ-ದಾವಣಿ ಧರಿಸಿ ಮುಗ್ಧ ನಗು ಮೂಲಕ ಎಲ್ಲರ ಮನ ಸೆಳೆದಿದ್ದರು. ಕಿರುತೆರೆ ಪ್ರೇಕ್ಷಕರ ಮುದ್ದು ಮಗಳಾಗಿದ್ದರು ಕೂಡ. ಜೀ ಕನ್ನಡ ಕುಟುಂಬ ಅವಾರ್ಡ್ ಕಾರ್ಯಕ್ರಮದಲ್ಲಿ ಸುಷ್ಮಾ, ಬೆಸ್ಟ್ ಮಗಳು ಎಂಬ ಅವಾರ್ಡ್ ಅನ್ನು ಕೂಡ ಪಡೆದಿದ್ದರು.

ಸುಷ್ಮಾ ಹುಟ್ಟಿದ್ದು ಬೆಳೆದಿದ್ದೆಲ್ಲಾ ಬೆಂಗಳೂರಲ್ಲಿ!
ಸುಷ್ಮಾ ಶೇಖರ್ ಹುಟ್ಟಿದ್ದು, ಬೆಳೆದ್ದು ಎಲ್ಲವೂ ಬೆಂಗಳೂರಿನಲ್ಲೇ. ಅಪ್ಪ ಶೇಖರ್, ಅಮ್ಮ ಭಾಗೀರಥಿ. ಓದುತ್ತಿರುವಾಗಲೇ ಸುಷ್ಮಾಗೆ ನಟಿಸುವ ಅವಕಾಶ ಒದಗಿ ಬಂತು. ಸುಷ್ಮಾ ಅಕ್ಕ ಅಂಕಿತಾ ನಯನಾ ಎಂಬುವರು ಧಾರಾವಾಹಿಗಳಲ್ಲಿ ನಟಿಸುತ್ತಿದ್ದರು. 'ಮಕ್ಕಳ ಲೋಕ' ಎಂಬ ಧಾರಾವಾಹಿಯಲ್ಲಿ ಅಂಕಿತಾ ನಯನಾ ನಟಿಸಬೇಕಿತ್ತು. ಆದರೆ ಅವರಿಗೆ ಪರೀಕ್ಷೆ ಇದ್ದಿದ್ದರಿಂದ ಸುಷ್ಮಾ ಆ ಧಾರಾವಾಹಿಯಲ್ಲಿ ನಟಿಸಬೇಕಾಗ ಬಂತು. ಇದಾದ ಬಳಿಕ ಸುಷ್ಮಾ ಒಂದೊಂದೇ ಸೀರಿಯಲ್‌ನಲ್ಲಿ ನಟಿಸಲು ಪ್ರಾರಂಭಿಸಿದರು.
'ಲಕುಮಿ'ಯ ಸೀರಿಯಲ್ ಜರ್ನಿ!
ನಟನೆಯ ಬಗ್ಗೆ ಗಂಧ-ಗಾಳಿ ಗೊತ್ತಿರದ ಸುಷ್ಮಾಗೆ 'ಮಕ್ಕಳ ಲೋಕ' ಧಾರಾವಾಹಿಯಲ್ಲಿ ನಟಿಸಿದ ಮೇಲೆ ಅಭಿನಯಿಸುವ ಮನಸಾಯಿತು. ಹೀಗಾಗಿ ಓದಿನ ಜೊತೆ ಜೊತೆಗೆ ನಟನೆ ಮಾಡಲು ಶುರು ಮಾಡಿದರು. 'ಮಕ್ಕಳ ಲೋಕ'ಧಾರಾವಾಹಿಯ ಬಳಿಕ 'ವೆಂಕಟೇಶ ಕಲ್ಯಾಣ' ಧಾರಾವಾಹಿಯಲ್ಲಿ ನಟಿಸಿದರು. ಈ ಧಾರಾವಾಹಿ ಕನ್ನಡ ಹಾಗೂ ತೆಲುಗು ಎರಡರಲ್ಲೂ ಪ್ರಸಾರವಾಗಿತ್ತು. ಸುಷ್ಮಾ ಶೇಖರ್ ಈ ಮೂಲಕ ತೆಲುಗು ಹಾಗೂ ಕನ್ನಡದಲ್ಲೂ ಅಭಿಮಾನಿಗಳನ್ನು ಹೊಂದಿದ್ದಾರೆ.
ನಟಿಸುತ್ತಲೇ ಅಭಿನಯ ಕಲಿತ ಬೆಳ್ಳಿ!
ನಂತರ ಒಂದೇ ಒಂದು ಧಾರಾವಾಹಿಯಲ್ಲಿ ನಟಿಸುವ ಅವಕಾಶಗಳು ಒದಗಿ ಬಂತು. 'ಕುಸುಮಾಂಜಲಿ', 'ಅಮೃತವಾಣಿ', 'ಪುಣ್ಯಕೋಟಿ', 'ಕನಕ' ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದರು. ಆದರೆ ಸುಷ್ಮಾಗೆ ಹೆಸರು ತಂದ ಧಾರಾವಾಹಿ ಸ್ಟಾರ್ ಸುವರ್ಣದಲ್ಲಿ ಮೂಡಿ ಬಂದ 'ಲಕುಮಿ' ಹಾಗೂ ಜೀ ಕನ್ನಡದಲ್ಲಿ ಪ್ರಸಾರವಾದ 'ಯಾರೇ ನೀ ಮೋಹಿನಿ' ಧಾರಾವಾಹಿ. ಈಗಲೂ ಸುಷ್ಮಾ ಅವರನ್ನು 'ಲಕುಮಿ' ಹಾಗೂ 'ಬೆಳ್ಳಿ' ಎಂಬ ಹೆಸರಿನಲ್ಲೇ ಗುರುತಿಸುತ್ತಾರೆ. 'ಯಾರೇ ನೀ ಮೋಹಿನಿ' ಧಾರಾವಾಹಿಯಲ್ಲಿ ಮಾಮಾ ಮಾಮಾ ಎಂದು ಮುದ್ದಾಗಿ ಕರೆಯುತ್ತಲೇ ಸುಷ್ಮಾ ಪ್ರೇಕ್ಷಕರ ಮನಗೆದ್ದಿದ್ದರು.
ಡ್ಯಾನ್ಸ್ ಅಂದರೆ ಹುಚ್ಚು ಪ್ರೀತಿ!
ನಟಿಸುತ್ತಲೇ ಓದು ಮುಗಿಸಿದ ಸುಷ್ಮಾಗೆ ಸಿಎ ಮಾಡುವ ಆಸೆ ಇದೆಯಂತೆ. ಇದರೊಂದಿಗೆ ಸುಷ್ಮಾಗೆ ಡ್ಯಾನ್ಸ್ ಎಂದರೆ ತುಂಬಾ ಇಷ್ಟವಂತೆ. ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರುವ ಸುಷ್ಮಾ ಆಗಾಗ ರೀಲ್ಸ್ ಮಾಡುತ್ತಿರುತ್ತಾರೆ. ಭರತನಾಟ್ಯ ಕಲಿತಿರುವ ಸುಷ್ಮಾಗೆ ಡ್ಯಾನ್ಸ್ ಎಂದರೆ ಬಹಳ ಇಷ್ಟ. ಇನ್ನು ಸುಷ್ಮಾ ನಟನೆಗೆ ಅವರ ತಂದೆ-ತಾಯಿಯ ಫುಲ್ ಸಪೋರ್ಟ್ ಇದ್ಯಂತೆ. ಸದ್ಯಕ್ಕೆ ನಟನೆಯಿಂದ ಬ್ರೇಕ್ ಪಡೆದಿರುವ ಸುಷ್ಮಾರನ್ನು ನೋಡಲು ಅಭಿಮಾನಿಗಳು ಸೋಶಿಯಲ್ ಮೀಡಿಯಾ ಮೊರೆ ಹೋಗಿದ್ದಾರೆ.