twitter
    For Quick Alerts
    ALLOW NOTIFICATIONS  
    For Daily Alerts

    ಹೇಮಶ್ರೀ ಆಡಿಯೋ ಜಪ್ತಿಗೆ ಮುಂದಾದ ಪೊಲೀಸ್

    By Rajendra
    |

    ಕಿರುತೆರೆ ನಟಿ ಹೇಮಶ್ರೀ ಮೃತಪಡುವುದಕ್ಕೂ ಮುನ್ನ ತನ್ನ ಫ್ರೆಂಡ್ ಜೊತೆ ಸಂಭಾಷಿಸಿದ್ದ ಧ್ವನಿಮುದ್ರಿತ ಟೇಪನ್ನು ಪೊಲೀಸರು ಜಪ್ತಿ ಮಾಡಿಕೊಳ್ಳಲು ಮುಂದಾಗಿದ್ದಾರೆ. ಸುಮಾರು ಎರಡು ಗಂಟೆಗಳ ಕಾಲಾವಧಿಯ ಈ ಧ್ವನಿಮುದ್ರಿತ ಟೇಪ್ ಟಿವಿ ಚಾನಲ್ ಗಳ ಕೈ ಸೇರಿ ಪ್ರಸಾರಗೊಂಡಿತ್ತು.

    ಹೇಮಶ್ರೀ ಅವರು ಮೃತಪಡುವುದಕ್ಕೂ ಮುನ್ನ ತನ್ನ ಫ್ರೆಂಡ್ ಜೊತೆ ಸಂಭಾಷಣೆ ಮಾಡಿದ್ದರು. ಅದರಲ್ಲಿ ಅವರ ತನ್ನ ತಾಯಿ ಹಾಗೂ ತನ್ನ ಪತಿ ಸುರೇಂದ್ರ ಬಾಬು ಸೇರಿ ತಮಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಹೇಮಶ್ರೀ ಹೇಳಿಕೊಂಡಿದ್ದರು.

    ಹೇಮಶ್ರೀ ಯಾರೊಂದಿಗೆ ಸಂಭಾಷಣೆ ಮಾಡಿದ್ದಾರೆ ಎಂಬುದನ್ನು ಇನ್ನೂ ಬಹಿರಂಗವಾಗಿಲ್ಲ. ಆದರೆ ಈ ಧ್ವನಿಮುದ್ರಿಕೆಯಲ್ಲಿರುವ ಧ್ವನಿ ಎಷ್ಟರ ಮಟ್ಟಿಗೆ ನಿಜ ಎಂಬುದನ್ನು ಪೊಲೀಸರ ತನಿಖೆಯ ಬಳಿಕವಷ್ಟೇ ಗೊತ್ತಾಗಲಿದೆ.

    ಸದ್ಯಕ್ಕೆ ಈ ಆಡಿಯೋ ಟೇಪ್ ಮೂಲವನ್ನು ಪೊಲೀಸರು ಜಾಲಾಡುತ್ತಿದ್ದಾರೆ. ಹೇಮಶ್ರೀ ಈ ಧ್ವನಿಮುದ್ರಿಕೆಯಲ್ಲಿ ಮಾತನಾಡುತ್ತಾ "ಆಂಟಿ" ಎಂದು ಸಂಬೋಧಿಸಿದ್ದಾರೆ. ನನ್ನ ಗಂಡನಿಂದ ನನಗೆ ಜೀವ ಬೆದರಿಕೆ ಇದೆ. ನನ್ನ ಹಿಂದೆ ಮೂರು ಮಂದಿ ರೌಡಿಗಳನ್ನು ಬಿಟ್ಟು ನನ್ನ ಚಲನವಲನಗಳ ಮೇಲೆ ಕಣ್ಣಿಟ್ಟಿದ್ದಾನೆ ಎಂದು ಹೇಮಶ್ರೀ ಹೇಳಿಕೊಂಡಿದ್ದಾರೆ.

    ಮರಣೋತ್ತರ ಪರೀಕ್ಷೆ ವರದಿ ಏನು ಹೇಳುತ್ತದೆ?
    ವಿಕ್ಟೋರಿಯಾ ಆಸ್ಪತ್ರೆ ವೈದ್ಯರು ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿಯನ್ನು ಪೊಲೀಸರಿಗೆ ಲಕೋಟೆಯಲ್ಲಿ ಕಳುಹಿಸಿದ್ದಾರೆ. ಕ್ಲೋರೋಫಾರಂನ ಓವರ್ ಡೋಸ್ ನಿಂದ ಹೇಮಶ್ರೀ ಮೃತಪಟ್ಟಿರುವ ಸಾಧ್ಯತೆಗಳಿವೆ ಎಂದು ವರದಿಯಲ್ಲಿ ಅನುಮಾನ ವ್ಯಕ್ತಪಡಿಸಲಾಗಿದೆ.

    ಹೆಚ್ಚಿನ ಮಾಹಿತಿಗಾಗಿ ಶ್ವಾಸಕೋಶದ ಹಾಗೂ ಕರುಳಿನ ಅಂಗಾಂಶಗಳನ್ನು ಪೊಲೀಸರು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಅಲ್ಲಿಂದ ವರದಿ ಬರಲು ಒಂದು ವಾರವಾಗಬಹುದು. ಏತನ್ಮಧ್ಯೆ ಸುರೇಂದ್ರ ಬಾಬು ಅವರನ್ನು ಪೊಲೀಸರು ರಹಸ್ಯ ಸ್ಥಳದಲ್ಲಿ ವಿಚಾರಣೆ ನಡೆಸುತ್ತಿದ್ದಾರೆ. (ಏಜೆನ್ಸೀಸ್)

    English summary
    Bangalore police to seize an audio tape that contains a purported conversation between television actor Hemashree and her friend. The electronic media has been playing the two-hour- long tape of the conversation which allegedly took place a day before Hemashree died under mysterious circumstances.
    Saturday, October 13, 2012, 12:14
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X