»   »  ಸಾಕ್ಷಿ ಸಮೇತ ಚರಿತ್ರೆ ಬಿಚ್ಚಿಡುತ್ತಾರಂತೆ ಮೋಹನ್: ಯಾರದ್ದು ಗೊತ್ತಾ?

ಸಾಕ್ಷಿ ಸಮೇತ ಚರಿತ್ರೆ ಬಿಚ್ಚಿಡುತ್ತಾರಂತೆ ಮೋಹನ್: ಯಾರದ್ದು ಗೊತ್ತಾ?

Posted By:
Subscribe to Filmibeat Kannada

ಬಿಗ್ ಬಾಸ್ ಮನೆಯಲ್ಲಿ ಪ್ರಥಮ್ ಸರ್ವಾಧಿಕಾರವನ್ನ ಧಿಕ್ಕರಿಸಿದ ಮೋಹನ್, ಸಿಕ್ಕಾಪಟ್ಟೆ ಗರಂ ಆದರು.

ಲಾರ್ಡ್ ಪ್ರಥಮ್, ಹಾನರಬಲ್ ಮೇಡಂ ಮಾಳವಿಕಾ, ಹಾಗೂ ಕಮಾಂಡೋಗಳ ವಿರುದ್ದ ಸೆನ್ಸಾರ್ ಲೆಸ್ ಮಾತುಗಳನ್ನಾಡಿದ್ದಾರೆ.[ಪ್ರಥಮ್ 'ಸರ್ವಾಧಿಕಾರ'ವನ್ನ ಧಿಕ್ಕರಿಸಿದ ಮೋಹನ್]

ಅಷ್ಟೇ ಅಲ್ಲದೇ, ಕೆಲವರ ಖಾಸಗಿ ವಿಚಾರಗಳನ್ನ ಬಹಿರಂಗಪಡಿಸುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಶೀತಲ್ ಜೊತೆ ಈ ವಿಚಾರವಾಗಿ ಮಾತನಾಡಿದ ಮೋಹನ್ ತಮ್ಮ ಕೋಪವನ್ನ ಹೊರಹಾಕಿದ್ರು.

ನಾನು ಯಾವನಿಗೂ ಕೇರ್ ಮಾಡಲ್ಲ

''ಅಶ್ಲೀಲ ಎಂಬ ಮಾತು ನನ್ನಂತವನಿಗೆ ಅಲ್ಲ. ಸರ್ವಾಧಿಕಾರಿಯಾದರೆ ಅವರ ಮನೆಯಲ್ಲಿಟ್ಟುಕೊಳ್ಳಲಿ. ನೋಡೋವಷ್ಟು ನೋಡ್ತೀವಿ. ಯಾವನಿಗೂ ಕೇರ್ ಮಾಡಲ್ಲ''

ನನಗೆ ತುಂಬಾ ದೊಡ್ಡ ಇಮೇಜ್ ಇದೆ

' ಬೇರೆ ಏನೇ ಅಂದ್ರು ಪರವಾಗಿಲ್ಲ. ಅಶ್ಲೀಲ ಅಂದ್ರೆ ಯಾವನ್ ಸುಮ್ಮನೆ ಇರ್ತಾನೆ. ಈಗ ನನ್ನ ನೀರಿಗೆ ಎಸೆದರೆ ಹೌದು, ನಾನು ಅಶ್ಲೀಲ ಅಂತ ಪ್ರೂವ್ ಆಗಲ್ವಾ. ಹೊರಗಡೆ ನನಗೆ ತುಂಬಾ ದೊಡ್ಡ ಇಮೇಜ್ ಇದೆ. ಚಿಕ್ಕ ಹುಡುಗರ ಹತ್ರ ಚಿಕ್ಕವರು ತರಹ ಇರ್ತೀನಿ''

ಅವಳ ಬಗ್ಗೆ ನಾನು ಹೇಳ್ಲಾ?

''ಅವಳು ನನ್ನ ಕಿವಿಯಲ್ಲಿ ಪ್ರಥಮ್ ಬಗ್ಗೆ ಸಾವಿರ ಹೇಳಿದ್ಳು, ನಾನ್ ಹೇಳ್ಲ ಈಗ ಅವನಿಗೆ. ಬಂದು ಅವನು ಕೊಟ್ಬಿಡ್ತಾನಂತೆ ಶಿಕ್ಷೆ. ಅವನು ಯಾವನ್ ನನಗೆ ಶಿಕ್ಷೆ ಕೊಡೋಕೆ''

ಬೋರ್ಡ್ ಯಾರಿಗೆ ಹಾಕ್ತಾರೆ?

''ಅವತ್ತು ನಿದ್ದೇ ಬಂದಾಕ್ಷಣ ಕೈ ಎತ್ತದೆ. ಶಿಕ್ಷೆ ಕೊಡಿ ಅಂತ. ನಾನು ತಪ್ಪಿಸಿಕೊಂಡು ಹೋದ್ನಾ. ಸರ್ವಾಧಿಕಾರ ಮಾಡಲಿ. ಅಶ್ಲೀಲ, ಅಸಭ್ಯ ಅಂತ ಬೋರ್ಡ್ ಹಾಕ್ತೀನಿ ಅಂತಾನೇ ಹೆಗಲಿಗೆ''

ಸಾಕ್ಷಿ ಸಮೇತ ಚರಿತ್ರೆ ಬಿಚ್ಚಿಡ್ತೀನಿ

''ಅದಕ್ಕೆ ಅವಳು ಕೇಳ್ತಾಳೆ, ಬೋರ್ಡ್ ಹಾಕ್ಬೇಕಾ, ನೀರಿಗೆ ಎಸಿಬೇಕಾ ಅಂತ. ನಾನು ಹಾಕ್ಬೀಡ್ತೀನಿ ಚರಿತ್ರೆಗಳನ್ನ ತೆಗೆದು ಬೋರ್ಡ್ ಅಮೇಲೆ. ವಿತ್ ಫ್ರೂಫ್, ವರ್ಷಗಳು ಎಷ್ಟೆಷ್ಟು? ಎಲ್ಲಿಲ್ಲಿ ಅಂತ. ನಿಯತ್ತಾಗಿ ಎದೆತಟ್ಟಿಕೊಂಡು ಬದುಕಿರುವವರು ನಾವು. ಇದನ್ನ ಹಾಳಿ ಮಾಡಿರುವುದು ಅವಳೆ''

ಮೋಹನ್ ಯಾರಿಗೆ ಹೇಳಿದ್ದು?

ಹೀಗೆ, ಲಾರ್ಡ್ ಪ್ರಥಮ್ ಅವರ ಪಂಚಾಯತಿ ಆದ್ಮೇಲೆ, ಸೀತಲ್ ಬಳಿ ಕೂತು ಮೋಹನ್ ಅವರು ಫುಲ್ ಕ್ಲಾಸ್ ತಗೊಂಡ್ರು. ಆದ್ರೆ, ಇಲ್ಲಿ ಯಾರ ಹೆಸ್ರು ಪ್ರಸ್ತಾಪ ಮಾಡಿಲ್ಲ. ಆದ್ರೆ, ಇದೆಲ್ಲಾ ಯಾರಿಗೆ ಹೇಳಿದ್ರೂ ಅಂತ ನಮ್ಗಂತೂ ಗೊತ್ತಿಲ್ಲ. ನೀವೇನಾದ್ರೂ ಈ ಕಾರ್ಯಕ್ರಮ ನೋಡಿದ್ರೆ, ಯೋಚನೆ ಮಾಡಿ.

English summary
Bigg Boss Kannada 4, Day 55: Check out the conversation between Sheethal Shetty and Mohan.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada