»   » 'ಬಿಗ್ ಬಾಸ್' ಬಗ್ಗೆ ತಪ್ಪು ಕಲ್ಪನೆ: ಕೈ ಮುಗಿದು ಕ್ಷಮೆ ಕೇಳಿದ 'ಕಿರಿಕ್' ಕೀರ್ತಿ

'ಬಿಗ್ ಬಾಸ್' ಬಗ್ಗೆ ತಪ್ಪು ಕಲ್ಪನೆ: ಕೈ ಮುಗಿದು ಕ್ಷಮೆ ಕೇಳಿದ 'ಕಿರಿಕ್' ಕೀರ್ತಿ

Posted By:
Subscribe to Filmibeat Kannada

'ಒಳ್ಳೆ ಹುಡುಗ' ಪ್ರಥಮ್ ಮತ್ತು 'ಕಿರಿಕ್' ಕೀರ್ತಿ ನಡುವೆ ಕಳೆದ ವಾರ ನಡೆದ ಕಿರಿಕ್ ನ ನೀವೆಲ್ಲ ನೋಡಿರಬಹುದು. ''ಅಯೋಗ್ಯ, ಅಪ್ರಯೋಜಕ, ಅನಾಗರೀಕ, ಥರ್ಡ್ ಕ್ಲಾಸ್'' ಅಂತ ಬಾಯಿಗೆ ಬಂದ್ಹಾಗೆಲ್ಲ ಕೀರ್ತಿ ಕುಮಾರ್ ಗೆ ಪ್ರಥಮ್ ನಿಂದಿಸಿದ್ರು.

ಇದು ಎಷ್ಟು ಸರಿ ಅಂತ 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಸುದೀಪ್ ಪಂಚಾಯತಿ ಮಾಡುತ್ತಿದ್ದಾಗ, 'ಬಿಗ್ ಬಾಸ್' ಕಾರ್ಯಕ್ರಮ ಹಾಗೂ 'ಕಲರ್ಸ್ ಕನ್ನಡ' ವಾಹಿನಿ ಬಗ್ಗೆ ಕೀರ್ತಿ ಮಾಡಿದ್ದ ಕೆಲವು ಕಾಮೆಂಟ್ ಗಳನ್ನ ಪ್ರಥಮ್ ಬಾಯ್ಬಿಟ್ಟರು. ['ಬಿಗ್ ಬಾಸ್' ಮನೆಯಲ್ಲಿ 'ಒಳ್ಳೆ ಹುಡುಗ' ಪ್ರಥಮ್ ಗೆ ಉಳಿಗಾಲ ಇಲ್ಲ.!]

ಸತ್ಯ ಗೊತ್ತಿಲ್ಲದೇ, ತಪ್ಪು ಕಲ್ಪನೆ ಮಾಡಿಕೊಂಡು 'ಬಿಗ್ ಬಾಸ್' ಹಾಗೂ 'ಕಲರ್ಸ್ ಕನ್ನಡ' ವಾಹಿನಿ ಬಗ್ಗೆ ಮಾತನಾಡಿದ್ದಕ್ಕೆ ಕೀರ್ತಿ ಕುಮಾರ್ ಕ್ಷಮೆ ಕೇಳಿದರು. 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಕೀರ್ತಿ-ಪ್ರಥಮ್-ಸುದೀಪ್ ನಡುವೆ ನಡೆದ ಸಂಭಾಷಣೆಯ ವಿವರ ಇಲ್ಲಿದೆ ಓದಿರಿ....

ಟಾಪಿಕ್ ತೆಗೆದ ಕಿಚ್ಚ ಸುದೀಪ್

''ಅಯೋಗ್ಯ, ಅಪ್ರಯೋಜಕ, ಥರ್ಡ್ ಕ್ಲಾಸ್, ಅನಾಗರೀಕ...ಶಬ್ದಗಳು, ಶಬ್ದಗಳ ಅರ್ಥ, ಪದ ಪ್ರಯೋಗ ಯಾವಾಗ.?'' ಅಂತ ಪ್ರಥಮ್ ಗೆ ಕಿಚ್ಚ ಸುದೀಪ್ ಕೇಳಿದರು. [BBK4: ಪ್ರಥಮ್ ಮೇಲೆ ಮನೆಯವರ ಕಂಪ್ಲೈಂಟ್, ಕ್ಲಾಸ್ ತೆಗೆದುಕೊಂಡ ಕಿಚ್ಚ]

ಪ್ರಥಮ್ ಕೊಟ್ಟ ಪ್ರತಿಕ್ರಿಯೆ

''ಮೊದಲನೇಯದ್ದಾಗಿ ಕ್ಷಮೆ ಕೇಳಿ ನಾನು ಮಾತು ಆರಂಭಿಸುತ್ತೇನೆ. ನಿಮಗೆ ಕೀರ್ತಿ ಮಾಡಿದ್ದು ಸರಿ ಅನ್ಸುತ್ತಾ.? ಕೀರ್ತಿಗೆ ಹುಚ್ಚ ವೆಂಕಟ್ ಗುರುಗಳಂತೆ. ನನ್ನ ಮುಂದೆ ಕೂತ್ಕೊಂಡು, ''ಹುಚ್ಚ ವೆಂಕಟ್ ಆ ತರಹ ಅಲ್ಲ ರೀ. ಹೋದ ಎಪಿಸೋಡ್ ನ ತೋರಿಸಲ್ಲ ಅವರು. ಕಳೆದ ಬಾರಿ ಅವರನ್ನೆಲ್ಲ ಎಲಿಮಿನೇಟ್ ಮಾಡ್ತಿರ್ಲಿಲ್ಲ. ಟಿವಿ ಚಾನೆಲ್ ನವರು ಇದ್ದರು ಎಂಬ ಕಾರಣಕ್ಕೆ ಎಲಿಮಿನೇಟ್ ಮಾಡಿದರು'' ಅಂತ ಕೀರ್ತಿ ನನ್ನ ಬಳಿ ಹೇಳಿದರು'' ಅಂತ ಪ್ರಥಮ್ ಬಾಯ್ಬಿಟ್ಟರು. [ಕಿಚ್ಚ ಸುದೀಪ್ ಮುಂದೆ ಅಳಲು ತೋಡಿಕೊಂಡ 'ಪ್ರಕೃತಿ ವಿಕೋಪ' ಪ್ರಥಮ್.!]

ಹೀಗೆ ಮಾತನಾಡಿದರೆ ಹೇಗೆ.?

''ನನ್ನನ್ನ ಇಲ್ಲಿ ಕರ್ಕೊಂಡ್ ಬಂದು ಬಿಟ್ಟವರು ಕಲರ್ಸ್ ಚಾನೆಲ್. ಈ ಚಾನೆಲ್ ನಿಂದ ಹೊರಗಡೆ ನಾನು ಪಾಪ್ಯುಲರ್ ಆಗಿದ್ದೀನಿ. ಚಾನೆಲ್ ವಿಚಾರವಾಗಿ ಈ ಮನುಷ್ಯ ಹೀಗೆ ಮಾತನಾಡುತ್ತಾನೆ ಅಂದ್ರೆ ನಾನು ಇನ್ನೇನು ಹೇಳಲು ಸಾಧ್ಯ.?'' - ಪ್ರಥಮ್

ಕೀರ್ತಿ ಮಾಡಿದ್ದು ಸರಿನಾ.?

''ಆತ ಹೇಳಿದ್ದು ಸರಿನಾ.? ಹೇಗೆ ಒಪ್ಪಿಕೊಳ್ಳಬೇಕು ಅದನ್ನ.? ನನ್ನನ್ನ ಕರ್ಕೊಂಡು ಬಂದು ಬಿಟ್ಟಿರೋ ಈ ಚಾನೆಲ್ ಗೆ ಗೌರವ ಕೊಡುವ ಪ್ರಯತ್ನ ನಾನು ಮಾಡ್ತಿದ್ದೇನೆ. ನಾನು ಆ ಪದಗಳನ್ನ ಬಳಸುವುದಕ್ಕೆ ಇದನ್ನೆಲ್ಲ ಹೇಳಿ ಸಮರ್ಥನೆ ಮಾಡಿಕೊಳ್ಳುತ್ತಿಲ್ಲ. ನನ್ನ ಮನಸ್ಸಿನಲ್ಲಿ ಇದ್ದದ್ದನ್ನ ಹೇಳಿದ್ದೇನೆ ಅಷ್ಟೆ. ತಪ್ಪಾಗಿದ್ದರೆ, ಶಿಕ್ಷೆ ಅನುಭವಿಸಲು ನಾನು ಸಿದ್ಧ. ಆದ್ರೆ ಅವರು ಮಾತನಾಡಿದ್ದು ಅಕ್ಷಮ್ಯ ಅಪರಾಧ. ಪ್ರಥಮ್ ಕನ್ಟೆಸ್ಟೆಂಟ್ ಆಗಿ ಸುಮ್ಮನಿರಬಹುದು, ಆದ್ರೆ ಕಿಚ್ಚ ಸುದೀಪ್ ಫ್ಯಾನ್ ಆಗಿ ಖಂಡಿತ ಸುಮ್ಮನಿರಲು ಸಾಧ್ಯವಿಲ್ಲ'' - ಪ್ರಥಮ್

ಕೀರ್ತಿ ಕೊಟ್ಟ ಸಬೂಬು ಏನು.?

''ಇದೇ ಚಾನೆಲ್ ನಲ್ಲಿ, ಇದೇ ವೇದಿಕೆಯಲ್ಲಿ ಹಿಂದಿನ ಬಾರಿ ಕಾರ್ಯಕ್ರಮವೊಂದಕ್ಕೆ ಕೆಲಸ ಮಾಡಿದ ಕ್ರೂ ನಾನು. ನನಗೆ ಗೊತ್ತಿದೆ ಈ ಚಾನೆಲ್ ಬಗ್ಗೆ, ಇಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರ ಬಗ್ಗೆ. ನಾನು ಹೇಳಿರುವ ಹೇಳಿಕೆಯನ್ನ ಕಂಪ್ಲೀಟ್ ಆಗಿ ಬೇರೆ ಆಂಗಲ್ ನಲ್ಲಿ ಪ್ರಥಮ್ ತೆಗೆದುಕೊಂಡಿದ್ದಾರೆ'' - ಕಿರಿಕ್ ಕೀರ್ತಿ [ಇವರೆಲ್ಲ 'ಬಿಗ್ ಬಾಸ್' ಕಾರ್ಯಕ್ರಮಕ್ಕೆ ಬಂದಿರುವ ಉದ್ದೇಶ ಏನು ಗೊತ್ತೇ.?]

ಮೊದಲು ಸಮಾಧಾನ ಮಾಡಿದ್ದು ನಾನು

''ಹುಚ್ಚ ವೆಂಕಟ್ ಬಂದು ಹೊಡೆದು ಹೋದ ತಕ್ಷಣ, ನಾನು ಮೊದಲು ಪ್ರಥಮ್ ಹೆಗಲ ಮೇಲೆ ಕೈಹಾಕಿಕೊಂಡು, ಟಾಸ್ಕ್ ನಲ್ಲಿ ಇದ್ವಿ... ಏನೂ ಮಾಡೋಕೆ ಆಗಲಿಲ್ಲ ಅಂತ ಹೇಳಿದ ಮೊದಲ ವ್ಯಕ್ತಿ ನಾನು. ಆದ್ರೆ ಪ್ರಥಮ್ ಅದನ್ನ ಹೇಳಲ್ಲ. ಆ ವ್ಯಕ್ತಿಗೆ ಗೊತ್ತು, ಯಾವುದನ್ನು ಹೇಳಬೇಕು, ಯಾವುದನ್ನ ಹೇಳಬಾರದು ಅಂತ'' - ಕಿರಿಕ್ ಕೀರ್ತಿ

ಟೆಲಿಕಾಸ್ಟ್ ಆಗಲ್ಲ ಅಂತ ಹೇಳಿದ್ದೆ

''ಪ್ರಥಮ್ ರನ್ನ ಸಮಾಧಾನ ಪಡಿಸುವ ಸಲುವಾಗಿ ನಾನು ಹೇಳಿದ್ದು, ''ಇದನ್ನೆಲ್ಲ ಟೆಲಿಕಾಸ್ಟ್ ಮಾಡಲ್ಲ. ಕಳೆದ ಬಾರಿ ಇದೇ ಇನ್ಸಿಡೆಂಟ್ ಆದಾಗ ಅದನ್ನೂ ಚಾನೆಲ್ ನವರು ಅವಾಯ್ಡ್ ಮಾಡುವ ಪ್ರಯತ್ನ ಮಾಡಿದ್ದರು. ಆದ್ರೆ ಮೀಡಿಯಾ ಇತ್ತು. ಈ ಸಲ ಆ ತರಹ ಯಾವುದೂ ಟೆಲಿಕಾಸ್ಟ್ ಆಗಲ್ಲ. ತಲೆ ಕೆಡಿಸಿಕೊಳ್ಳಬೇಡಿ'' ಅಂತ ಹೇಳಿದ್ದೆ'' - ಕಿರಿಕ್ ಕೀರ್ತಿ [ಹುಚ್ಚ ವೆಂಕಟ್ ಕ್ಷಮೆ ಕೇಳಿದರು, ಕಿಚ್ಚ ಸುದೀಪ್ ವಾಪಸ್ ಬಂದರು.!]

ಸುದೀಪ್ ಕೊಟ್ಟ ಸ್ಪಷ್ಟನೆ

''ಮಾಧ್ಯಮ ಅವತ್ತೂ ಇರಲಿಲ್ಲ, ಇವತ್ತೂ ಇರಲಿಲ್ಲ. ನಾವು ಏನೇ ಡಿಸಿಷನ್ ತೆಗೆದುಕೊಂಡಿದ್ದರೂ, ಮಾಧ್ಯಮ ಇದೇ ಅಂತಲ್ಲ. ಎಥಿಕ್ಸ್, ಗೇಮ್ ರೂಲ್ಸ್ ಮತ್ತು ಪ್ರಿನ್ಸಿಪಲ್ಸ್ ನಿಂದ'' - ಕಿರಿಕ್ ಕೀರ್ತಿ

ಹುಚ್ಚ ವೆಂಕಟ್ ಗೆ ಸೆಕೆಂಡ್ ಚಾನ್ಸ್ ಕೊಟ್ಟಿದ್ದು ಯಾಕೆ?

''ವೆಂಕಟ್ ಇಲ್ಲಿಗೆ ಬಂದು ಕ್ಷಮಾಪಣೆ ಕೇಳಿದ ಕೂಡಲೆ, ನನ್ನ ಕಣ್ಣಲ್ಲಿ ಅವರು ಒಂದು ಮಟ್ಟಕ್ಕೆ ಏರಿದರು. ಯಾಕಂದ್ರೆ, ಕ್ಷಮೆ ಕೇಳುವುದು ದೊಡ್ಡತನವೇ. ಹೊರಗೆ ಬಂದ ಘಳಿಗೆಯಿಂದ ವಾಪಸ್ ಹೋಗುವವರೆಗೂ, ಚಾನೆಲ್ ನವರ ಬಳಿ ವೆಂಕಟ್ ರಿಕ್ವೆಸ್ಟ್ ಮಾಡಿದ್ದಾರೆ, ''ನಾನಲ್ಲಿ ಏನನ್ನೋ ಕಳೆದುಕೊಂಡಿದ್ದೇನೆ. ವಾಪಸ್ ಪಡೆದುಕೊಳ್ಳಬೇಕು'' ಅಂದಾಗ ಮಾನವೀಯತೆ ದೃಷ್ಟಿಯಿಂದ ಸೆಕೆಂಡ್ ಕೊಟ್ವಿ. ಇನ್ಯಾವುದೋ ಸೆಕೆಂಡ್ ರೀಸನ್ ನಿಂದ ಒಳಗೆ ಬರಲಿಲ್ಲ'' - ಕಿರಿಕ್ ಕೀರ್ತಿ

ಕ್ಷಮೆ ಕೇಳಿದ ಕಿರಿಕ್ ಕೀರ್ತಿ

''ನನಗೆ ಒಂದು ತಪ್ಪು ಕಲ್ಪನೆ ಇತ್ತು. ಅದನ್ನ ನೀವು ಇವತ್ತು ಸ್ಪಷ್ಟ ಪಡಿಸಿದ್ರಿ. ಅದಕ್ಕೆ ನಾನು ಕ್ಷಮೆ ಕೇಳುತ್ತೇನೆ. ನಾನು ಅವತ್ತಿನ ದಿನ ಬೇರೆ ಮಾಧ್ಯಮದಲ್ಲಿ ಕೆಲಸ ಮಾಡುತ್ತಿದ್ದೆ. ನನಗೆ ಬಂದ ಇನ್ಫರ್ಮೇಷನ್ ಅವತ್ತಿನ ದಿನಕ್ಕೆ ರಾಂಗ್ ಆಗಿ ಇರಬಹುದು ಎಂಬ ಕಾರಣಕ್ಕೆ ಕ್ಷಮೆ ಕೇಳುತ್ತೇನೆ'' - ಕಿರಿಕ್ ಕೀರ್ತಿ

English summary
Bigg Boss Kannada 4: Week 6: Kirik Keerthi apologized Colors Kannada Channel and Kiccha Sudeep during 'Varada Kathe Kicchana Jote' show.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada