»   » ಪ್ರಥಮ್ 'ಸರ್ವಾಧಿಕಾರ'ವನ್ನ ಧಿಕ್ಕರಿಸಿದ ಮೋಹನ್

ಪ್ರಥಮ್ 'ಸರ್ವಾಧಿಕಾರ'ವನ್ನ ಧಿಕ್ಕರಿಸಿದ ಮೋಹನ್

Posted By:
Subscribe to Filmibeat Kannada

ಕಳೆದ ಒಂದು ವಾರದಿಂದ 'ಬಿಗ್ ಬಾಸ್' ಮನೆಯಲ್ಲಿ 'ಲಾರ್ಡ್ ಪ್ರಥಮ್ ಸರ್' ಅವರ ಸರ್ವಾಧಿಕಾರ ಚಾಲ್ತಿಯಲ್ಲಿದೆ. ಮನೆಯ ಎಲ್ಲ ಸದಸ್ಯರು ಪ್ರಥಮ್ ಅವರ ಆಡಳಿತದಲ್ಲಿ ವಾರದ ಎಲ್ಲಾ ಟಾಸ್ಕ್ ಗಳನ್ನ ಮಾಡುತ್ತಿದ್ದಾರೆ.

ಈ ಒಂದು ವಾರದಲ್ಲಿ 'ಪ್ರಥಮ್ ಸರ್ವಾಧಿಕಾರ'ವನ್ನ ಯಾರೊಬ್ಬರು ವಿರೋಧಿಸಿಲ್ಲ. ಕಷ್ಟವಾದರೂ, ಕಣ್ಣುಮುಚ್ಚಿಕೊಂಡು ಟಾಸ್ಕ್ ಕಂಪ್ಲೀಟ್ ಮಾಡುತ್ತಿದ್ದಾರೆ. ಆದ್ರೆ, ಈ ಮಧ್ಯೆ ಮೋಹನ್ ಅವರು ಅಶ್ಲೀಲವಾಗಿ ಕುಳಿತಿದ್ದಾರೆ ಎಂಬ ಮಾತು ಬಾರಿ ವಿವಾದಕ್ಕೆ ಕಾರಣವಾಗಿದೆ.

ಈ ಮಾತಿನಿಂದ ರೊಚ್ಚಿಗೆದ್ದ ಮೋಹನ್, ಶೀತಲ್, ಕೀರ್ತಿ, ಲಾರ್ಡ್ ಪ್ರಥಮ್ ಆಡಳಿತವನ್ನ ಧಿಕ್ಕರಿಸಿದ್ದಾರೆ. ಇದ್ರಿಂದ, 'ಬಿಗ್ ಬಾಸ್' ಮನೆಯಲ್ಲಿ 'ಪ್ರಥಮ್ ಸರ್ವಾಧಿಕಾರ'ದ ವಿರುದ್ದ ದಂಗೆ ಎಳುವಂತಾಗಿದೆ.[ಕಮಾಂಡೋ ಶಾಲಿನಿಗೆ 'ಲಾರ್ಡ್' ಪ್ರಥಮ್ ಕೊಟ್ಟ ಕಠೋರ ಶಿಕ್ಷೆ ]

ಅಶ್ಲೀಲ ಭಂಗಿಯಲ್ಲಿ ಮಲಗಿದ್ದರಂತೆ ಮೋಹನ್ !

'ಲಾರ್ಡ್ ಪ್ರಥಮ್ ಸರ್', ಅವರ ಮುಂದೆ ಅಸಭ್ಯ ಭಂಗಿಯಲ್ಲಿ ಮಲಗಿದ್ದರು ಎಂಬ ಕಾರಣಕ್ಕೆ ನಟ ಮೋಹನ್ ಅವರಿಗೆ ಪ್ರಥಮ್ ಅವರು ಎಚ್ಚರಿಕೆ ನೀಡಿದರು. ಇನ್ನೂ ಮುಂದೆ ಅಶ್ಲೀಲವಾಗಿ, ಅಸಭ್ಯವಾಗಿ ಎಲ್ಲಿ ಅಂದರೆ ಅಲ್ಲಿ ಮಲುಗುವಾಗಿಲ್ಲ, ಕುಳಿತುಕೊಳ್ಳುವ ಆಗಿಲ್ಲ ಎಂದು ಆಜ್ಞೆ ಹೊರಡಿಸಿದರು. ಒಂದು ಪಕ್ಷ ಹೀಗೆ ಆದರೆ, ಅಂತವರನ್ನ ಕೆರೆಗೆ ಎಸೆಯಿರಿ ಎಂದು ಕಮಾಂಡೋಗಳಿಗೆ ಲಾರ್ಡ್ ಪ್ರಥಮ್ ಸೂಚಿಸಿದರು.[ಪ್ರಥಮ್ ರನ್ನ ಅಂದು ಬೈಯುತ್ತಿದ್ದವರೇ, ಇಂದು ಕೊಂಡಾಡುತ್ತಿದ್ದಾರೆ ! ]

ಮೋಹನ್, ಶಾಲಿನಿ ನಡುವೆ ಮಾತಿನ ಚಿಕಮಕಿ

'ಲಾರ್ಡ್ ಪ್ರಥಮ್' ನೀಡಿದ ಸೂಚನೆ ಬಳಿಕ, ಮೋಹನ್ ಅವರು ಮಲಗಿದ್ದರು. ಅದನ್ನ ಅಸಭ್ಯವೆಂದು ಪರಿಗಣಿಸಿದ ಕಮಾಂಡೋ ಶಾಲಿನಿ, ಕಮಾಂಡೋ ರೇಖಾ, ಹಾಗೂ ಹಾನರಬಲ್ ಮೇಡಂ ಮಾಳವಿಕಾ, ಮೋಹನ್ ಅವರನ್ನ ಕೆರೆಗೆ ಎಸೆಯಲು ಮುಂದಾದರು. ಈ ವೇಳೆ ಮೋಹನ್ ಅವರು ನಾನು ಅಸಭ್ಯನಲ್ಲ, ನನ್ನ ಮೇಲೆ ಈ ಆರೋಪ ಮಾಡುವುದು ಸರಿಯಲ್ಲ. ಸುಮ್ಮನೆ ಮಲಗುವುದು ಅಸಭ್ಯ, ಅಶ್ಲೀಲ ಹೇಗಾಗುತ್ತೆ. ಇದು ಪರ್ಸನಲ್ ಅಟ್ಯಾಕ್ ಆಗುತ್ತೆ ಎಂದು ಆಕ್ರೋಶಗೊಂಡರು.[ಪ್ರಥಮ್ ಗೆ 'ಸರ್ವಾಧಿಕಾರ': 'ಬಿಗ್ ಬಾಸ್'ನ ಹೊಗಳಿ ಅಟ್ಟಕ್ಕೆ ಏರಿಸಿದ ವೀಕ್ಷಕರು.! ]

ಲಾರ್ಡ್ ಪ್ರಥಮ್ ಪಂಚಾಯಿತಿಯಲ್ಲಿ ದೂರು

ಮೋಹನ್ ವಿಚಾರವಾಗಿ 'ಲಾರ್ಡ್ ಪ್ರಥಮ್' ಅವರ ಪಂಚಾಯತಿಯಲ್ಲಿ ದೂರು ದಾಖಲಾಗಿ ವಿಚಾರಣೆ ನಡೆಯಿತು. ಈ ವಿಚಾರಣೆ, ಪ್ರಥಮ್ ಹಾಗೂ ಮೋಹನ್ ಅವರ ನಡುವೆ ದೊಡ್ಡ ಜಗಳಕ್ಕೆ ಕಾರಣವಾಯಿತು.[ಪ್ರಥಮ್ ಇಮ್ಯೂನಿಟಿ ಪಡೆಯಲು 'ಬಿಗ್ ಬಾಸ್' ನೀಡಿದ ವಿಚಿತ್ರ ಸವಾಲು]

ಮೋಹನ್ ತಪ್ಪು ಮಾಡಿದ್ದಾರೆ : ಲಾರ್ಡ್ ಪ್ರಥಮ್

ಕಮಾಂಡೋ ಹಾಗೂ ಹಾನರಬಲ್ ಮೇಡಂ ಮಾಳವಿಕಾ ನೀಡಿದ ದೂರಿನ ಅನ್ವಯ, ಮೋಹನ್ ಅವರು ತಪ್ಪು ಮಾಡಿದ್ದಾರೆ. ನನ್ನ ಗಮನಕ್ಕೂ ಬಂದಿದೆ ಎಂದು ಮಾತನಾಡುವಾಗ, ಕೋಪಗೊಂಡ ಮೋಹನ್ ಅವರು, ಪ್ರಥಮ್ ರನ್ನ ತರಾಟೆಗೆ ತೆಗೆದುಕೊಂಡರು.

ಶಿಕ್ಷೆ ಕೊಡೊಕೆ ನೀವ್ಯಾರು?: ಮೋಹನ್

''ನಾನು ತಪ್ಪು ಮಾಡಿದರೆ ಶಿಕ್ಷೆ ಕೊಡೋಕೆ ಬೇರೆಯವರು ಇದ್ದಾರೆ. ಶಿಕ್ಷೆ ಕೊಡೋಕೆ ನೀವ್ಯಾರು'' ? ಪರ್ಸನಲ್ ಆದ್ರೆ ಯಾವನ್ ಸುಮ್ಮನೆ ಇರುತ್ತಾನೆ. ನನ್ನ ಸ್ವಭಾವಕ್ಕೆ ಧಕ್ಕೆಯಾದ್ರೆ ಯಾರು ಮಾತು ಕೇಳಲ್ಲ. ನಿಮ್ಮ ಕಾನೂನು, ನಿಮ್ಮ ರಾಜ್ಯ ಅಂದ್ರೆ, ನೀವೆ ಎಂಜಾಯ್ ಮಾಡು ಹೋಗ್ರಿ'' ಅಂತ ಲಾರ್ಡ್ ಪ್ರಥಮ್ ಅವರ ಸರ್ವಾಧಿಕಾರವನ್ನ ಧಿಕ್ಕರಿಸಿದರು.

ಪಂಚಾಯಿತಿ ಬಿಟ್ಟು ಹೋದ ಮೋಹನ್

''ನಾನು ಬಂದಿರುವುದು ಬಿಗ್ ಬಾಸ್ ಮನೆಗೆ, ನಿಮ್ಮ ಮಾತು ಯಾಕೆ ಕೇಳಬೇಕು. ಇಷ್ಟು ದಿನ ಟಾಸ್ಕ್ ಅಂತ ಬಂದಾಗ, ನಿಮ್ಮ ಆಜ್ಞೆಯನ್ನ ಪಾಲಿಸಿದ್ದೇವೆ. ಆದ್ರೆ, ಪರ್ಸನಲ್ ಅಟ್ಯಾಕ್ ಆದರೆ, ಯಾರು ಮಾತು ಕೇಳಲ್ಲ ಹೋಗಿರಿ'' ಎಂದು ಮೋಹನ್ ಲಾರ್ಡ್ ಪ್ರಥಮ್ ಅವರ ಪಂಚಾಯತಿಯನ್ನ ಬಿಟ್ಟು ಹೋದರು.

ಲಾರ್ಡ್ ವಿರುದ್ದ ದಂಗೆ ಎದ್ದ ಶೀತಲ್-ಕೀರ್ತಿ

ಮೋಹನ್ ವಿಚಾರವನ್ನ ಪಂಚಾಯತಿ ಮಾಡುವಾಗ, ಶೀತಲ್ ಹೆಸರು ಪ್ರಸ್ತಾಪಿಸಲಾಯಿತು. 'ಬಿಗ್ ಬಾಸ್' ಮನೆಯಲ್ಲಿ ಶೀತಲ್ ಅವರನ್ನ 'ಅಶ್ಲೀತಲ್' ಎಂದು ಸುಮಾರು 60 ಬಾರಿ ಸಂಭೋಧಿಸಲಾಗಿದೆ. ಈ ರೀತಿ ಪದಬಳಕೆ ಮಾಡಬಾರದು ಎಂದು ಲಾರ್ಡ್ ಪ್ರಥಮ್ ಸೂಚಿಸಿದರು. ಇದ್ರಿಂದ ಶೀತಲ್, ಪ್ರಥಮ್ ವಿರುದ್ದ ಮಾತಿನ ಯುದ್ದ ಮಾಡಿದರು.

ಪ್ರಥಮ್ ವಿರುದ್ದ ಶೀತಲ್ ಆಕ್ರೋಶ

'ಬಿಗ್ ಬಾಸ್'ನಿಂದ ನಿಮ್ಮ ಪಾಲಿಸುವಂತೆ ನಮಗೆ ಆಜ್ಞೆ ಬಂದಿಲ್ಲ. ನಿಮ್ಮ ಸ್ವಯಂ ಘೋಷಿತ ನಾಯಕತ್ವವನ್ನ ಒಪ್ಪಿಕೊಂಡಿದ್ದು, ಅಪ್ಪಿಕೊಂಡು ನಾವು ಮಾಡುತ್ತಿದ್ದೇವೆ. ಕಳೆದ ವಾರ ಆಗಿದ್ದನ್ನ, ಈ ವಾರದಲ್ಲಿ ಮಾತನಾಡುವುದನ್ನ ತಪ್ಪು. ಅದು ನನ್ನ ಪರ್ಸನಲ್ ವಿಚಾರ ರೀ. ನೀವೇನ್ ನ್ಯಾಯ ಮಾಡ್ತೀರಾ. ಪ್ರತಿದಿನ ನಾವು ಕೂತ್ಕೊಂಡು ಕೇಳ್ತಿವಿ ಇದನ್ನ'' ಎಂದು ಆಕ್ರೋಶ ವ್ಯಕ್ತಪಡಿಸಿದರು.

ಡಿಕ್ಟೇಟರ್ ಪ್ರಥಮ್ ವಿರುದ್ದ ಕೀರ್ತಿ ಮಾತು

''ಲಾರ್ಡ್ ಪ್ರಥಮ್ ಸರ್ ಆದ್ಮೇಲೆ, ಅಲ್ಲಿಂದ ಇಲ್ಲಿಯವರೆಗೂ ನೀವು ಏನೇ ಹೇಳಿದರು ನಾವು ಕೇಳೋಕೆ ರೆಡಿಯಿದ್ದೀವಿ. ಹಿಂದಿನ ಯಾವುದೇ ಮಾತನ್ನ ಕೇಳುವುದಕ್ಕೆ ನಾವು ಸಿದ್ದವಿಲ್ಲ. ನಮ್ಮ ಪರ್ಸನಲ್ ಲೈಫ್ ವಿಚಾರದಲ್ಲಿ ಬಂದ್ರೆ, ಅಥವಾ ನಮ್ಮ ವ್ಯಕ್ತಿತ್ವ ಹರಣ ಆಗುವ ವಿಚಾರ ಬಂದ್ರೆ, ನಾವು ಕೇಳಲ್ಲ ಅಷ್ಟೇ''-ಕೀರ್ತಿ

English summary
Bigg Boss Kannada 4, Week 8: Actor Mohan spurned Pratham dictatorship in BiggBoss Kannada. and he also denied Lord Pratham's dictatorship rules.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada