»   » ಪಕ್ಷಪಾತ ಮಾಡಿದ್ರು ಅಂತ ಸುದೀಪ್ ಮೇಲೆ ಉರಿದುಬಿದ್ದ ವೀಕ್ಷಕರು!

ಪಕ್ಷಪಾತ ಮಾಡಿದ್ರು ಅಂತ ಸುದೀಪ್ ಮೇಲೆ ಉರಿದುಬಿದ್ದ ವೀಕ್ಷಕರು!

Posted By:
Subscribe to Filmibeat Kannada

ಇಷ್ಟು ದಿನ ''ಸ್ಕ್ರಿಪ್ಟೆಡ್ ಶೋ.. ಡುಬಾಕ್ ಶೋ..'' ಎಂಬ ಕಾರಣಕ್ಕೆ ''ಬಿಗ್ ಬಾಸ್ ಗೆ ಡೌನ್ ಡೌನ್'' ಎನ್ನುತ್ತಿದ್ದ ವೀಕ್ಷಕರು ಈಗ ನೇರವಾಗಿ ಕಿಚ್ಚ ಸುದೀಪ್ ಮೇಲೆ ಮುನಿಸಿಕೊಂಡಿದ್ದಾರೆ. ಸುದೀಪ್ ವಿರುದ್ಧ ವೀಕ್ಷಕರು ಉರಿದುಬಿದ್ದಿದ್ದಾರೆ. ಅದಕ್ಕೆ ಕಾರಣ ಮಿಸ್ಟರ್ ಪ್ರಥಮ್.!

ಮೊನ್ನೆ ಶನಿವಾರ ಪ್ರಸಾರವಾದ 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ, ''ಪ್ರಥಮ್-ಸಂಜನಾ-ಭುವನ್ ತ್ರಿಕೋನ ಪ್ರೇಮಕಥೆಯ ವಿವಾದವನ್ನ ಇತ್ಯರ್ಥ ಮಾಡದೆ, ಪ್ರಥಮ್ ಇಮೇಜ್ ಡ್ಯಾಮೇಜ್ ಮಾಡಿದ್ದಾರೆ'' ಎಂಬ ಕಾರಣಕ್ಕೆ ಸುದೀಪ್ ಬಗ್ಗೆ ವೀಕ್ಷಕರು ಬೇಸರ ವ್ಯಕ್ತಪಡಿಸಿದ್ದಾರೆ. ಅದು ಬೇರೆಲ್ಲೂ ಅಲ್ಲ, 'ಕಲರ್ಸ್ ಕನ್ನಡ' ಅಫೀಶಿಯಲ್ ಫೇಸ್ ಬುಕ್ ಪೇಜ್ ನಲ್ಲಿಯೇ.!

'ಬಿಗ್ ಬಾಸ್' ಕಾರ್ಯಕ್ರಮವನ್ನ ಬಿಟ್ಟೂಬಿಡದೆ ನೋಡುವ ವೀಕ್ಷಕರು 'ಸುದೀಪ್ ಪಕ್ಷಪಾತ'ದ ಬಗ್ಗೆ ಅಸಮಾಧಾನಗೊಂಡು ಕಲರ್ಸ್ ಕನ್ನಡ ಫೇಸ್ ಬುಕ್ ಪೇಜ್ ನಲ್ಲಿ ಮಾಡಿರುವ ಕೆಲ ಕಾಮೆಂಟ್ ಗಳು ಇಲ್ಲಿವೆ ನೋಡಿ....

ಸುದೀಪ್ ಪಕ್ಷಪಾತ ಮಾಡಬಾರದು.!

''ನಿನ್ನೆಯ 'ವಾರದ ಕಥೆ ಕಿಚ್ಚನ ಜೊತೆ' ತೃಪ್ತಿ ಕೊಡಲಿಲ್ಲ. ಪ್ರಥಮ್ ಗೆ ನ್ಯಾಯ ಸಿಗಲಿಲ್ಲ. ಸುದೀಪ್ ಅವರು ಕ್ಲಾರಿಫೈ ಮಾಡಲಿಲ್ಲ. ವೈಯುಕ್ತಿಕವಾಗಿ ಗೌರವ ಕೊಡುವವರು ಒಳಗಡೆ ಇದ್ದಾರೆ ಅಂದ್ರೆ ಅಂಥವರು ಯಾಕೆ ಒಳಗಡೆ ಬರಬೇಕು. ಎಲ್ಲರನ್ನೂ ಸಮಾನವಾಗಿ ನೋಡಬೇಕು ಸುದೀಪ್ ಸರ್ ಪಕ್ಷಪಾತ ಮಾಡಬಾರದು'' ಅಂತ ವೀಕ್ಷಕರು ಬೇಸರದಿಂದ ಮಾಡಿರುವ ಕಾಮೆಂಟ್ ಇದು.[ಪ್ರಥಮ್-ಸಂಜನಾ-ಭುವನ್ ತ್ರಿಕೋನ ಪ್ರೇಮಕಥೆಗೆ ಕ್ಲೈಮ್ಯಾಕ್ಸ್ ಕೊಡದ ಕಿಚ್ಚ!]

ಇದಕ್ಕೆ ಉತ್ತರ ಕೊಡಿ ಸುದೀಪ್

''ಐ ಲವ್ ಯು, ಯು ಮಸ್ಟ್ ಲವ್ ಮಿ ಅಂತ ಪ್ರಥಮ್ ಹೇಳಿದಕ್ಕೆ ಒಂದು ಹುಡುಗಿಯನ್ನ ಯೂಸ್ ಮಾಡ್ಕೊಂಡಿದ್ದು, ಹೆಸರು ಡ್ಯಾಮೇಜ್ ಮಾಡಿದ್ದು ತಪ್ಪು. ಹಾಗಿದ್ರೆ ಬಾತ್ ರೂಮ್ ವಿಷಯವನ್ನ ಒಂದು ಎಪಿಸೋಡ್ ಪೂರ್ತಿ 17 ನಿಮಿಷ ಏನು ಮಾಡ್ತಾ ಇದ್ರಿ ಅಂತ ಕೇಳ್ತಾ ಇದ್ದದ್ದು ಅವಳ ಹೆಸರು ಡ್ಯಾಮೇಜ್ ಆಗಲಿಲ್ವಾ ಸುದೀಪ್ ಸರ್'' ಅಂತ ಸುದೀಪ್ ಗೆ ವೀಕ್ಷಕರೊಬ್ಬರು ಪ್ರಶ್ನೆ ಕೇಳಿದ್ದಾರೆ.

ಯಾಕೆ ಕ್ಲಾರಿಟಿ ಕೊಡಲಿಲ್ಲ ಅಂದ್ರೆ....

ಪ್ರಥಮ್ ಗೆ ಕ್ಲಾರಿಟಿ ಸಿಗದೆ ಇರೋದಕ್ಕೆ ಒಂದು ಕಾರಣ ಇದೆ. ಅದನ್ನ ವೀಕ್ಷಕರೇ ಊಹೆ ಮಾಡಿದ್ದಾರೆ. ಅದೇನು ಅಂತ ನೀವೇ ಓದ್ಕೊಳ್ಳಿ...

ಶೇಮ್ ಆನ್ ಯು!

''ನಿಮಗೆ ಇಷ್ಟ ಇಲ್ಲ ಅಂದ್ರೆ ಪ್ರಥಮ್ ನ ಎಲಿಮಿನೇಟ್ ಮಾಡಿ. ಯಾಕೆ ಅವರ ಬಗ್ಗೆ ಬ್ಯಾಡ್ ಇಮೇಜ್ ಕ್ರಿಯೇಟ್ ಮಾಡ್ತೀರಾ. ಇಡೀ ಬಿಗ್ ಬಾಸ್ ಮನೆ ಪ್ರಥಮ್ ನ ಟಾರ್ಗೆಟ್ ಮಾಡುತ್ತಿದೆ. ಎಷ್ಟೋ ಕೆಟ್ಟ ಪದಗಳ ಬಳಕೆಯನ್ನ ಮೋಹನ್ ಮಾಡಿದರು. ಆದ್ರೆ ನೀವು ಕೇಳಲಿಲ್ಲ. ಆದ್ರೆ ಪ್ರಥಮ್ ಏನಾದರೂ ಹೇಳಿದರೆ ಬೈಯ್ಯೋಕೆ ಕಾಯ್ತಿರ್ತೀರಾ. ಶೇಮ್ ಆನ್ ಯು'' ಎನ್ನುತ್ತಿದ್ದಾರೆ ವೀಕ್ಷಕರು.

ಸ್ವಾರ್ಥಿ ಯಾರು.?

ಪ್ರಥಮ್ ಅಥವಾ ಬಿಗ್ ಬಾಸ್ ಪೈಕಿ ಸ್ವಾರ್ಥಿ ಯಾರು.? ಈ ಪ್ರಶ್ನೆಗೆ ವೀಕ್ಷಕರೊಬ್ಬರು ಅಭಿಪ್ರಾಯ ತಿಳಿಸಿದ್ದಾರೆ ನೋಡಿ....

ಶೇಮ್ ಆನ್ ಯುವರ್ ಪಾರ್ಟ್!

''ಮುಂದಿನ ವಾರ ಪ್ರಥಮ್ ನ ಎಲಿಮಿನೇಟ್ ಮಾಡಿ. ನಿಮಗೆ ಬೇಕಾದ ಸೆಲೆಬ್ರಿಟಿಗಳನ್ನ ಕರೆಸಿಕೊಳ್ಳಿ. ಸುಮ್ನೆ ಯಾಕೆ ಒಳ್ಳೆ ಹುಡುಗನ ಇಮೇಜ್ ಡ್ಯಾಮೇಜ್ ಮಾಡ್ತೀರಾ? ಸುಮ್ನೆ ಅವನ ಸಕ್ಸಸ್ ನೋಡಿ ಅವನ ಬಗ್ಗೆ ಬ್ಯಾಡ್ ಇಮೇಜ್ ಕ್ರಿಯೇಟ್ ಮಾಡ್ತೀರಾ.? ಶೇಮ್ ಆನ್ ಯುವರ್ ಪಾರ್ಟ್'' ಅಂತ ವೀಕ್ಷಕರೊಬ್ಬರು ಕಾಮೆಂಟ್ ಮಾಡಿದ್ದಾರೆ.

ಸುದೀಪ್ ಕೂಡ ಟಾರ್ಗೆಟ್ ಮಾಡ್ತಿದ್ದಾರೆ.!

''ಪ್ರಥಮ್ ನ ನೆಗೆಟಿವ್ ಆಗಿ ತೋರಿಸಲು ಹೋಗಿ, ನಿಮ್ಮ ವಾಲ್ಯೂ ಕಳೆದುಕೊಳ್ಳುತ್ತಿದ್ದೀರಾ'' - ಹೀಗಂತ ನಾವ್ ಹೇಳ್ತಿಲ್ಲ, ವೀಕ್ಷಕರೇ ಹೇಳ್ತಿದ್ದಾರೆ ನೋಡಿ....

ಗೌರವ ಕಡಿಮೆ ಆಗ್ತಿದೆ.!

ವೀಕ್ಷಕರಿಗೆ ಸುದೀಪ್ ಮೇಲಿದ್ದ ಗೌರವ ಕಡಿಮೆ ಆಗ್ತಿದ್ಯಂತೆ. ಕಾರಣ ತಿಳಿಯಲು ಕಾಮೆಂಟ್ ಓದಿ...

ಕಲರ್ಸ್ ವಾಹಿನಿಗೆ ಓಪನ್ ಚಾಲೆಂಜ್

ವೀಕ್ಷಕರೊಬ್ಬರು ಕಲರ್ಸ್ ವಾಹಿನಿಗೆ ಓಪನ್ ಚಾಲೆಂಜ್ ಹಾಕಿದ್ದಾರೆ. ಅದು ವೋಟಿಂಗ್ ಲಿಸ್ಟ್ ಬಯಲು ಮಾಡುವ ಬಗ್ಗೆ.! ಯಾಕಂದ್ರೆ, ಸಂಜನಾ, ಭುವನ್, ಮೋಹನ್ ಮತ್ತು ಮಾಳವಿಕಾ ರವರಿಗೆ ಯಾರು ವೋಟ್ ಹಾಕ್ತಿದ್ದಾರೆ ಎಂಬ ಅನುಮಾನ ವೀಕ್ಷಕರಿಗೆ ಕಾಡುತ್ತಿದೆ.

ಸುದೀಪ್ ಬಗ್ಗೆ ಸಿಕ್ಕಾಪಟ್ಟೆ ಮುನಿಸು

ಕಿಚ್ಚ ಸುದೀಪ್ ಬಗ್ಗೆ ಸಿಕ್ಕಾಪಟ್ಟೆ ಮುನಿಸಿಕೊಂಡಿರುವ ವೀಕ್ಷಕರು ಕಾಮೆಂಟ್ ಮಾಡಿರುವುದು ಹೀಗೆ....

ಸುದೀಪ್ ಪಕ್ಷಪಾತ ಮಾಡಿದ್ರಾ.?

''ಟಿ.ಆರ್.ಪಿಗೆ ಪ್ರಥಮ್ ಬೇಕು, ಬಿಗ್ ಬಾಸ್ ಕನ್ಟೆನ್ಟ್ ಗೆ ಪ್ರಥಮ್ ಬೇಕು. ಆದ್ರೆ ವೀಕೆಂಡ್ ಬಂದಾಗ ಮಾತ್ರ ಮೋಹನ್ ಮತ್ತು ಕೀರ್ತಿಗೆ ಪ್ರಾಮುಖ್ಯತೆ. ಸುದೀಪ್ ಪಕ್ಷಪಾತ ಮಾಡುತ್ತಿದ್ದಾರೆ. ಅಭಿಮಾನಿಗಳನ್ನ ಸುದೀಪ್ ಕಳೆದುಕೊಳ್ಳುತ್ತಿದ್ದಾರೆ'' ಎಂಬುದು ವೀಕ್ಷಕರೊಬ್ಬರ ಅಭಿಪ್ರಾಯ.

ನೆಗೆಟಿವ್ ಕಾಮೆಂಟ್ಸ್ ಹೆಚ್ಚು

ಕೇವಲ ಒಂದು ಎಪಿಸೋಡ್ ನಿಂದಾಗಿ ಸುದೀಪ್ ಬಗ್ಗೆ ನೆಗೆಟಿವ್ ಕಾಮೆಂಟ್ ಗಳೇ ಹೆಚ್ಚಾಗಿವೆ.

ಸಾಲು ಸಾಲು ಕಾಮೆಂಟ್ಸ್

ಕಲರ್ಸ್ ಕನ್ನಡ ಫೇಸ್ ಬುಕ್ ಪೇಜ್ ನಲ್ಲಿ ಪ್ರಥಮ್ ರವರಿಗೆ ಸಪೋರ್ಟ್ ಮಾಡಿ ಕಾಮೆಂಟ್ ಮಾಡಿರುವವರ ಸಂಖ್ಯೆಯೇ ಹೆಚ್ಚು.

ಎಲ್ಲರಿಗೂ ಕ್ಲಾಸ್ ತೆಗೆದುಕೊಳ್ಳಬೇಕು.!

ಬರೀ ಪ್ರಥಮ್ ಗೆ ಮಾತ್ರ ಅಲ್ಲ. ಮೋಹನ್, ಮಾಳವಿಕಾ, ಶಾಲಿನಿ ಸೇರಿದಂತೆ ಎಲ್ಲರಿಗೂ ಸುದೀಪ್ ಕ್ಲಾಸ್ ತೆಗೆದುಕೊಳ್ಳಬೇಕು ಎಂಬುದು ವೀಕ್ಷಕರ ಆಗ್ರಹ.

ಸುದೀಪ್ ರನ್ನ ಟಾರ್ಗೆಟ್ ಮಾಡಬೇಡಿ.!

''ಸುದೀಪ್ ಒಳ್ಳೆಯ ನಿರೂಪಕ. ಅವರನ್ನ ಟಾರ್ಗೆಟ್ ಮಾಡಬೇಡಿ'' ಅಂತ ಹೇಳುವ ವೀಕ್ಷಕರೂ ಇದ್ದಾರೆ.

ನಿಮ್ಮ ಅಭಿಪ್ರಾಯ ಏನು.?

ಸುದೀಪ್ ಪಕ್ಷಪಾತ ಮಾಡಿದ್ರಾ? ಪ್ರಥಮ್ ನಡವಳಿಕೆ ಸರಿ ಇತ್ತಾ? ಸಂಜನಾ-ಭುವನ್ ಬಗ್ಗೆ ನಿಮ್ಮ ಅಭಿಪ್ರಾಯ ಏನು ಅಂತ ನಮಗೆ ತಿಳಿಸಿ... ಕೆಳಗಿರುವ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡಿ....

English summary
Bigg Boss Kannada 4 Viewers are unhappy against Kiccha Sudeep. Read the article to know the reason.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada