»   » 'ಬಿಗ್ ಬಾಸ್' ಫೈನಲ್ ತಲುಪಿದ ಪ್ರಥಮ್ ಕಣ್ಣಲ್ಲಿ ನೀರು.! ಯಾಕೆ.?

'ಬಿಗ್ ಬಾಸ್' ಫೈನಲ್ ತಲುಪಿದ ಪ್ರಥಮ್ ಕಣ್ಣಲ್ಲಿ ನೀರು.! ಯಾಕೆ.?

Posted By:
Subscribe to Filmibeat Kannada

'ಬಿಗ್ ಬಾಸ್' ಮನೆ ಸದಸ್ಯರಿಂದ ಪ್ರತಿ ವಾರ ಟಾರ್ಗೆಟ್ ಆದರೂ ವೀಕ್ಷಕರು ಮಾತ್ರ ಪ್ರಥಮ್ ಗೆ ಬೆನ್ನೆಲುಬಾಗಿದ್ದರು. ಅದರ ಪ್ರತಿಫಲ.. ಪ್ರಥಮ್ 'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆ ಹಂತ ತಲುಪಿದ್ದಾರೆ.

ಪ್ರತಿ ಬಾರಿ ಸೇಫ್ ಆದಾಗ ''ಇದು ನನ್ನ ಗೆಲುವಲ್ಲ, ಕನ್ನಡಿಗರ ಗೆಲುವು'' ಅಂತ ಸಂಭ್ರಮ ಪಡುತ್ತಿದ್ದ ಪ್ರಥಮ್, ಈ ಬಾರಿ ಹಾಗೆ ಮಾಡಲಿಲ್ಲ. ನಿಜ ಹೇಳ್ಬೇಕು ಅಂದ್ರೆ ಪ್ರಥಮ್ ಗೆ ಮಾತುಗಳೇ ಹೊರಡಲಿಲ್ಲ. ಬದಲಾಗಿ ಭಾವುಕರಾಗಿ ಕಣ್ಣೀರಿಟ್ಟರು.!

ಫಿನಾಲೆ ಹಂತಕ್ಕೆ ಪ್ರಥಮ್

ನಟ ಭುವನ್ ಪೊನ್ನಣ್ಣ ರವರ ಆಯ್ಕೆಯ ಅನುಸಾರ ನಟ ಮೋಹನ್ ನೇರ ಫಿನಾಲೆ ಹಂತ ತಲುಪಿದ್ದರು. ಮೋಹನ್ ಬಿಟ್ಟು ಉಳಿದ ಎಲ್ಲರೂ ಡೇಂಜರ್ ಝೋನ್ ನಲ್ಲಿದ್ದರು. ವೀಕ್ಷಕರ ಆಯ್ಕೆ ಅನುಸಾರ ಮೊದಲು ರೇಖಾ ಸೇಫ್ ಆದರೆ ನಂತರ ಪ್ರಥಮ್ 'ಫೈನಲಿಸ್ಟ್' ಆದರು.['ಒಳ್ಳೆ ಹುಡುಗ' ಪ್ರಥಮ್ ಕನ್ನಡ ಪ್ರೇಮ ಎಂಥದ್ದು ಅಂತೀರಾ.?]

ಭಾವುಕರಾದ ಪ್ರಥಮ್

'ಪ್ರಥಮ್ ಸುರಕ್ಷಿತ' ಅಂತ ಘೋಷಿತವಾದ ಕೂಡಲೆ.. ''ಬಿಗ್ ಬಾಸ್' ನಿಜವಾಗಲೂ ಎಕ್ಸ್ ಪೆಕ್ಟ್ ಮಾಡಿರಲಿಲ್ಲ. ಏನೂ ಇಲ್ಲದೇ ಇರುವ ನನ್ನನ್ನ...'' ಅಂತ ಹೇಳುತ್ತಿದ್ದಂತೆಯೇ ಪ್ರಥಮ್ ಭಾವುಕರಾದರು [ಪ್ರಥಮ್ ಬಗ್ಗೆ ಶಿವರಾಜ್ ಕುಮಾರ್ ಏನು ಹೇಳಿದ್ದಾರೆ ಗೊತ್ತಾ.?]

ಪ್ರಥಮ್ ಕಣ್ಣಲ್ಲಿ ನೀರು

''ಮೊದಲನೇ ವಾರ ಉಳಿದುಕೊಂಡರೆ ಸಾಕು ಅಂತ ಇತ್ತು. ಆಮೇಲೆ ಹತ್ತು ವಾರದ ನಂತರ ನಾನು ಫೈನಲಿಸ್ಟ್ ಆಗಬೇಕು ಎಂಬ ಹಠ ಬಂದಿದ್ದು. ಈಗ ನನಗೆ ಹಠ ಇಲ್ಲ. ನನ್ನ ಕಣ್ಣಲ್ಲಿ ನೀರು ಬರುತ್ತಿದೆ'' ಎಂದರು ಪ್ರಥಮ್[ಪ್ರಥಮ್ ಬಳಿ 'ಕ್ಷಮೆ' ಕೇಳಿದ ಕೀರ್ತಿ: ಡ್ಯಾಮೇಜ್ ಕಂಟ್ರೋಲ್ ಪಾರ್ಟ್-2!]

ಎಲ್ಲರೂ ನನಗಿಂತ ಉತ್ತಮರು.!

''ಈ ಮೂರು ಜನರಲ್ಲಿ ಯಾರೇ ಹೋದರೂ, ನಿಜವಾಗಲೂ ನೋವಾಗುತ್ತೆ. ನನಗೆ ತುಂಬಾ ದಿನ ಊಟ ಹಾಕಿದ್ದಾರೆ. ನನ್ನನ್ನ ತಡೆದುಕೊಂಡಿದ್ದಾರೆ. ಸಾಮಾನ್ಯವಾಗಿ ನನ್ನನ್ನ ಯಾರೂ ತಡೆದುಕೊಳ್ಳಲ್ಲ. ನನ್ನ ನಡವಳಿಕೆ ಇರೋದೇ ಹಾಗೆ. ಇವರೆಲ್ಲ ನನ್ನನ್ನ ತಡೆದುಕೊಂಡಿದ್ದಾರೆ. ಎಲ್ಲರೂ ನನಗಿಂತಲೂ ಉತ್ತಮರು.. ಅದಕ್ಕೆ ಕಣ್ಣಲ್ಲಿ ನೀರು ಬರುತ್ತಿದೆ'' - ಪ್ರಥಮ್['ಬಿಗ್ ಬಾಸ್' ಗೆದ್ರೆ ಕನ್ನಡಿಗರಿಗಾಗಿ ಪ್ರಥಮ್ ಏನ್ ಮಾಡ್ಬಹುದು.?]

ಧನ್ಯವಾದ ಅರ್ಪಿಸಿದ ಪ್ರಥಮ್

''ಮೊದಲನೇ ವಾರ ಹೋಗಬೇಕಾದವನು ನಾನು. ಹದಿನಾರು ವಾರ ಉಳಿಸಿದ್ದೀರಾ. ಫೈನಲಿಸ್ಟ್ ಆಗಿ ಮಾಡಿದ್ದೀರಾ. ತುಂಬ ಧನ್ಯವಾದಗಳು...'' - ಪ್ರಥಮ್

ಪ್ರಥಮ್ ಗೆ ವೋಟ್ ಮಾಡ್ತೀರಾ.?

ಅಂತೂ ಇಂತೂ ಪ್ರಥಮ್ ಫಿನಾಲೆ ಹಂತ ತಲುಪಿದ್ದಾರೆ. ಪ್ರಥಮ್ ರವರನ್ನ ಗೆಲ್ಲಿಸುವುದು, ಬಿಡುವುದು ನಿಮ್ಮ ಕೈಯಲ್ಲೇ ಇದೆ.

English summary
Bigg Boss Kannada 4: Week 16: 'Olle Huduga' Pratham enters Finale, Becomes emotional.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada