For Quick Alerts
  ALLOW NOTIFICATIONS  
  For Daily Alerts

  ವೈಲ್ಡ್ ಕಾರ್ಡ್ ಎಂಟ್ರಿ ಪಡೆದ 'ಮಸ್ತಾನ್' ಕಾರ್ ಡೀಲರ್ ಅಲ್ಲ, ಮತ್ಯಾರು?

  By Bharath Kumar
  |

  ಈ ವಾರ 'ಬಿಗ್ ಬಾಸ್' ಮನೆಯಿಂದ ಒಬ್ಬ ಸದಸ್ಯ ಹೊರ ಹೋಗಿದ್ದಾರೆ. ಆದ್ರೆ, ಮೂರು ಜನ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ 'ಬಿಗ್ ಬಾಸ್' ಮನೆಗೆ ಪ್ರವೇಶ ಮಾಡಿದ್ದಾರೆ.

  ಹೌದು, ಈ ವಾರ ನಿರಂಜನ್ ದೇಶಪಾಂಡೇ ಬಿಗ್ ಬಾಸ್'ನಿಂದ ಎಲಿಮಿನೇಟ್ ಆಗಿದ್ರೆ, ಕಾರುಣ್ಯ ರಾಮ್, ಸುಕೃತಾ ವಾಗ್ಲೆ, ಹಾಗೂ ಮಸ್ತಾನ್ ಎಂಬುವವರು 'ಬಿಗ್ ಬಾಸ್' ಮನೆಗೆ ಸರ್ಪ್ರೈಸ್ ಎಂಟ್ರಿ ಕೊಟ್ಟಿದ್ದಾರೆ.

  ನಟಿ ಕಾರುಣ್ಯ ರಾಮ್ ಆರನೇ ವಾರ 'ಬಿಗ್ ಬಾಸ್' ಮನೆಯಿಂದ ಎಲಿಮಿನೇಟ್ ಆಗಿ, ಸೆಕೆಂಡ್ ಚಾನ್ಸ್ ಪಡೆದು ಮತ್ತೆ ವಾಪಸ್ಸಾಗಿದ್ದಾರೆ. ನಟಿ ಸುಕೃತಾ ವಾಗ್ಲೆ ಸ್ಯಾಂಡಲ್ ವುಡ್ ಗೆ ಪರಿಚಯ. ಆದ್ರೆ ಈ ಮಸ್ತಾನ್ ಯಾರು ಎಂಬುದು ಯಾರಿಗೂ ಗೊತ್ತಿಲ್ಲ.['ಬಿಗ್ ಬಾಸ್' ಮನೆಯಲ್ಲಿ ಒಮ್ಮೆಲೆ 3 ವೈಲ್ಡ್ ಕಾರ್ಡ್ ಎಂಟ್ರಿ.!]

  ವೈಲ್ಡ್ ಕಾರ್ಡ್ ಮೂಲಕ ಈ ವಾರ ಎಂಟ್ರಿಯಾದ 'ಮಸ್ತಾನ್' ಬಗ್ಗೆ ಕಂಪ್ಲೀಟ್ ಸಮಾಚಾರ ಇಲ್ಲಿದೆ.

  ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದ 'ಮಸ್ತಾನ್'!

  ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದ 'ಮಸ್ತಾನ್'!

  ಈ ವಾರ ಬಿಗ್ ಬಾಸ್ ಮನೆಗೆ ಮೂರು ಜನ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದು, ಮಸ್ತಾನ್ ಎಂಬುವರೂ ಮೂರನೇ ಸ್ಪರ್ಧಿಯಾಗಿ ಕಣಕ್ಕೆ ಇಳಿದಿದ್ದಾರೆ.['ಬಿಗ್ ಬಾಸ್' ಮನೆಯಿಂದ 'RJ ನಿರಂಜನ್' ಔಟ್]

  ಯಾರಿದು 'ಮಸ್ತಾನ್'?

  ಯಾರಿದು 'ಮಸ್ತಾನ್'?

  'ಬಿಗ್ ಬಾಸ್' ಮನೆಯ ಸ್ಪರ್ಧಿಗಳ ಮುಂದೆ ಮಸ್ತಾನ್ ಹೇಳಿಕೊಂಡಿದ್ದ ಪ್ರಕಾರ, ಆತ ಬೆಂಗಳೂರಿನ ಶಿವಾಜಿನಗರದಲ್ಲಿ ಸೆಕೆಂಡ್ ಹ್ಯಾಂಡ್ ಕಾರ್ ಡೀಲರ್. ಆದ್ರೆ, ಮಸ್ತಾನ್ ಕಾರ್ ಡೀಲರ್ ಅಲ್ಲ.

  ಹಾಗಾದ್ರೆ, ಮಸ್ತಾನ್ ಯಾರು?

  ಹಾಗಾದ್ರೆ, ಮಸ್ತಾನ್ ಯಾರು?

  ಮಸ್ತಾನ್ ಕನ್ನಡ ಚಿತ್ರರಂಗದ ಯುವ ನಿರ್ದೇಶಕ. ಎರಡು ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿರುವ ಮಸ್ತಾನ್, ಕಾರ್ ಡೀಲರ್ ಅಂತ ಸುಳ್ಳು ಹೇಳಿದ್ದಾರೆ.

  ಮಸ್ತಾನ್ ಸುಳ್ಳು ಹೇಳಿದ್ದೇಕೆ?

  ಮಸ್ತಾನ್ ಸುಳ್ಳು ಹೇಳಿದ್ದೇಕೆ?

  'ಬಿಗ್ ಬಾಸ್' ಮನೆಯಲ್ಲಿ ತುರ್ತುಪರಿಸ್ಥಿತಿ ಚಾಲ್ತಿಯಿಲ್ಲಿದ್ದಾಗ, 'ಕಲರ್ ಬಾಂಬ್' ಹಿಡಿದು ಎಂಟ್ರಿ ಕೊಟ್ಟ 'ಮಸ್ತಾನ್'ಗೆ ಬಿಗ್ ಬಾಸ್ ಕೊಟ್ಟಿದ್ದ ಟಾಸ್ಕ್ ಅದು. 'ಮಸ್ತಾನ್' ಯಾರು ಎಂಬುದು ಕೀರ್ತಿ ಕುಮಾರ್ ಅವರಿಗೆ ಮಾತ್ರ ಗೊತ್ತಿತ್ತು. ಆದ್ರೆ, 'ಬಿಗ್ ಬಾಸ್' ಸೂಚನೆ ಬರುವವರಿಗೂ 'ಮಸ್ತಾನ್' ಯಾರು ಎಂಬುದು ಯಾರಿಗೂ ಗೊತ್ತಾಗಬಾರದಿತ್ತು.

  ಮಸ್ತಾನ್ ಪೂರ್ತಿ ಹೆಸರು 'ಮಸ್ತಾನ್ ಚಂದ್ರ'

  ಮಸ್ತಾನ್ ಪೂರ್ತಿ ಹೆಸರು 'ಮಸ್ತಾನ್ ಚಂದ್ರ'

  ಮಸ್ತಾನ್ ಎಂದು ಹೇಳಿಕೊಂಡಿದ್ದ ಅವರು ಪೂರ್ತಿ ಹೆಸರು ಮಸ್ತಾನ್ ಚಂದ್ರ. ಕನ್ನಡ ಚಿತ್ರರಂಗದ ಯುವ ನಿರ್ದೇಶಕ. ಈಗಾಗಲೇ ಒಂದು ಚಿತ್ರವನ್ನ ನಿರ್ದೇಶನ ಮಾಡಿದ್ದು, ಅದು ಅರ್ಧಕ್ಕೆ ನಿಂತಿದೆ. ಈಗ ಎರಡನೇ ಸಿನಿಮಾವನ್ನ ನಿರ್ದೇಶನ ಮಾಡುತ್ತಿದ್ದಾರೆ.

  'ದೇವಯಾನಿ' ಚಿತ್ರದ ನಿರ್ದೇಶಕ ಮಸ್ತಾನ್

  'ದೇವಯಾನಿ' ಚಿತ್ರದ ನಿರ್ದೇಶಕ ಮಸ್ತಾನ್

  ತಮ್ಮದೇ ಹೋಮ್ ಬ್ಯಾನರ್ ನಲ್ಲಿ 'ದೇವಯಾನಿ' ಎಂಬ ಚಿತ್ರವನ್ನ ಮಸ್ತಾನ್ ಅವರು ನಿರ್ದೇಶನ ಮಾಡಿದ್ದರು. ಅದ್ರ ಜೊತೆಗೆ ಈಗ ಎರಡನೇ ಚಿತ್ರದ ನಿರ್ದೇಶನದಲ್ಲೂ ತೊಡಗಿಕೊಂಡಿದ್ದಾರೆ. ಈ ಮಧ್ಯೆ ಬಿಗ್ ಬಾಸ್ ರಿಯಾಲಿಟಿ ಶೋಗೆ ಚಾನ್ಸ್ ಪಡೆದುಕೊಂಡಿದ್ದಾರೆ.

  English summary
  Bigg Boss Kannada 4 house has been increased with the wild card entries of three contestants – Masthan, Karunya Ram and Sukratha Wagle. Who is Masthan. here is the full details about mastan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X