»   » ಸುದೀಪ್ Insects (ಕೀಟಗಳು) ಅಂತ ಕರೆದಿದ್ದು ಯಾರಿಗೆ.? ಯಾಕೆ.?

ಸುದೀಪ್ Insects (ಕೀಟಗಳು) ಅಂತ ಕರೆದಿದ್ದು ಯಾರಿಗೆ.? ಯಾಕೆ.?

Posted By:
Subscribe to Filmibeat Kannada
ಬಿಗ್ ಬಾಸ್ ಕನ್ನಡ ಸೀಸನ್ 5 : ಸುದೀಪ್ ಕೀಟಗಳು ಅಂತ ಕರೆದಿದ್ದು ಯಾರಿಗೆ?

ಜನಸಾಮಾನ್ಯ ಸ್ಪರ್ಧಿಗಳನ್ನು ತುಳಿಯುತ್ತಿರುವುದು ಮೊದಲೇ ವೀಕ್ಷಕರಿಗೆ ಇಷ್ಟ ಆಗುತ್ತಿಲ್ಲ. ಈ ಮಧ್ಯೆ Insects (ಕೀಟಗಳು) ಎಂಬ ಪದ ಬಳಕೆ ಆಗಿರುವುದು ವೀಕ್ಷಕರಿಗೆ ಕೋಪ ತರಿಸಿದೆ.

'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಸುದೀಪ್ ಬಾಯಿಂದ Insects (ಕೀಟಗಳು) ಎಂಬ ಪದ ಹೊರಬಂದಿರುವುದರಿಂದ ವೀಕ್ಷಕರು ಬೇಸರಗೊಂಡಿದ್ದಾರೆ.

ಜನಸಾಮಾನ್ಯರಿಗೆ ಅವಮಾನ ಮಾಡಿದ್ರಾ ಸುದೀಪ್? ವೀಕ್ಷಕರಿಗೆ ಯಾಕೆ ಅಷ್ಟೊಂದು ಬೇಸರ?

ಅಷ್ಟಕ್ಕೂ, Insects (ಕೀಟಗಳು) ಬಗ್ಗೆ ಸುದೀಪ್ ಮಾತನಾಡಿದ್ದು ಯಾಕೆ.? Insects (ಕೀಟಗಳು) ಟಾಪಿಕ್ ಶುರು ಆಗಿದ್ದು ಎಲ್ಲಿಂದ ಎಂಬುದರ ಸಂಪೂರ್ಣ ವಿವರ ಇಲ್ಲಿದೆ. ಓದಿರಿ....

ನಿವೇದಿತಾ ಗೌಡಗೆ ಸುದೀಪ್ ಪ್ರಶ್ನೆ

''ಬಿಗ್ ಬಾಸ್' ಮನೆಯಲ್ಲಿ ಕಾಮನ್ ಮ್ಯಾನ್ ನ ಸೆಲೆಬ್ರಿಟಿಗಳು ತುಳಿಯುತ್ತಿದ್ದಾರಾ.?'' ಎಂಬ ಪ್ರಶ್ನೆಯನ್ನ ಸುದೀಪ್ ಎಲ್ಲರ ಮುಂದಿಟ್ಟರು. ಈ ಪ್ರಶ್ನೆಗೆ ಎಲ್ಲರೂ ಉತ್ತರ ಕೊಡುತ್ತಿರುವಾಗಲೇ, ನಿವೇದಿತಾ ಗೌಡ ಸರದಿ ಬಂತು. ಆಗ ಸುದೀಪ್, ''ಜಯಶ್ರೀನಿವಾಸನ್ ಅವರು ಸೆಲೆಬ್ರಿಟಿ ಆಗಿ ಹೋಗಿ ಒಳಗೆ ಕಾಮನ್ ಮ್ಯಾನ್ ತರಹ ಆಗಿದ್ರೆ, ತಾವು ಗಾರ್ಡನ್ ನಿಂದ ಹೋಗಿ ರೂಮಿಗೆ ಸೇರ್ಕೊಂಡಿದ್ದೀರಾ'' ಅಂತ ನಿವೇದಿತಾ ಗೌಡಗೆ ಕೇಳಿದರು.

'ಬಿಗ್ ಬಾಸ್' ಮನೆಯಲ್ಲಿ ಒಡಕು: ಸ್ಪರ್ಧಿಗಳು ಏನಂತಾರೆ.?

ನಿವೇದಿತಾ ಗೌಡ ಕೊಟ್ಟ ಉತ್ತರ ಏನು.?

''ಹೊರಗಡೆ ತುಂಬಾ Insects (ಕೀಟ) ಇರುತ್ತೆ. ನನಗೆ ಕೀಟಗಳು ಅಂದ್ರೆ ಅಲರ್ಜಿ'' ಎಂದು ಗಾರ್ಡನ್ ಏರಿಯದಲ್ಲಿ ಇರದ ಬಗ್ಗೆ ನಿವೇದಿತಾ ಗೌಡ ಉತ್ತರ ಕೊಟ್ಟರು.

ಅಂತೂ ದಿವಾಕರ್ ಬಳಿ ಕ್ಷಮೆ ಕೇಳಿದ ಸೆಲೆಬ್ರಿಟಿ ಸ್ಪರ್ಧಿಗಳು.!

ನಿವೇದಿತಾ ಹೇಳಿಕೆಯ ಅರ್ಥ ಏನು.?

ಸುದೀಪ್ : ''ಅಲ್ಲ ನಿವೇದಿತಾ ಅವರೇ, ಏನು ಸ್ಪರ್ಧಿಗಳನ್ನು Insects (ಕೀಟ) ಎನ್ನುತ್ತಿದ್ದೀರಾ ನೀವು.?''

ನಿವೇದಿತಾ ಗೌಡ : ''ಸರ್, ನಾನು ಸ್ಪರ್ಧಿಗಳ ಬಗ್ಗೆ ಮಾತನಾಡುತ್ತಿಲ್ಲ. ಹೊರಗಡೆ ತುಂಬಾ insects (ಕೀಟ) ಇವೆ''

'ಮ್ಯಾಚ್ ಫಿಕ್ಸಿಂಗ್' ಮಾಡಿಕೊಂಡು ಆಡಿದವರಿಗೆ ಮಾತಲ್ಲೇ ಪೆಟ್ಟು ಕೊಟ್ಟ ಸುದೀಪ್.!

ಮನೆ ಇಬ್ಭಾಗ ಆಗಿರುವ ಬಗ್ಗೆ ಸುದೀಪ್ ಮಾತು

ಇನ್ನೂ 'ಬಿಗ್ ಬಾಸ್' ಮನೆ ಇಬ್ಭಾಗ ಆಗಿರುವ ಬಗ್ಗೆ ಮಾತನಾಡುವಾಗ, ''ವೀಕ್ಷಕರ ಪ್ರಕಾರ, ಮನೆ ಇಬ್ಭಾಗ ಆಗಿದೆ. ಮನೆ ಒಳಗೆ ಇರುವವರು ಅಡುಗೆ ಮಾಡುತ್ತಾ, ಅಡುಗೆ ಮನೆಯನ್ನು ಕಂಟ್ರೋಲ್ ಮಾಡುತ್ತಾ, ಇಡೀ ಮನೆಯ ವ್ಯವಹಾರವನ್ನು ಕಂಟ್ರೋಲ್ ಮಾಡುತ್ತಿದ್ದಾರೆ. ಹೊರಗಡೆ ಕೂತಿರುವವರು ಒಳಗಿರುವವರ ಬಗ್ಗೆ ಬೇಜಾರು ಪಟ್ಟುಕೊಂಡು ನಿವೇದಿತಾ ಗೌಡ ಹೇಳಿದ ಹಾಗೆ Insects ಮಧ್ಯೆ ಇದ್ದೀರಾ. ಇದು ಹೊರಗಡೆ ಕಾಣುತ್ತಿರುವುದು. ಇದು ನನ್ನ ಅಭಿಪ್ರಾಯ ಅಲ್ಲ'' ಎಂದು ಸುದೀಪ್ ಹೇಳಿದರು.

ಸುದೀಪ್ ಕೊಟ್ಟ ಹೇಳಿಕೆ

ಇಷ್ಟೆಲ್ಲ ಆದ್ಮೇಲೆ YES/NO ರೌಂಡ್ ಗೆ ಸುದೀಪ್ ಚಾಲನೆ ಕೊಟ್ಟರು. ಅದರಲ್ಲಿ ''ಎಲ್ಲ ಸಮಸ್ಯೆಗಳಿಗೆ ಗಾರ್ಡನ್ ನಲ್ಲಿ ಇರುವ Insects ಕಾರಣ'' ಎಂಬ ಹೇಳಿಕೆಯನ್ನ ಸುದೀಪ್ ನೀಡಿದರು. ಅದಕ್ಕೆ ಸಿಹಿ ಕಹಿ ಚಂದ್ರು ನಕ್ಕುಬಿಟ್ಟು, ''Insects ಅನ್ನೋ ಪದವನ್ನು ನೀವು ಬಹಳ ಚೆನ್ನಾಗಿ ಬಳಸುತ್ತಿದ್ದೀರಾ. ಥ್ಯಾಂಕ್ಸ್ ಟು ನಿವೇದಿತಾ'' ಎಂದರು ಸಿಹಿ ಕಹಿ ಚಂದ್ರು.

ವೀಕ್ಷಕರಲ್ಲಿ ಮೂಡಿದೆ ಅಸಮಾಧಾನ

ಸುದೀಪ್ ಕೊಟ್ಟ ಈ ಒಂದು ಹೇಳಿಕೆಯೇ ಇದೀಗ ವೀಕ್ಷಕರ ಅಸಮಾಧಾನಕ್ಕೆ ಕಾರಣವಾಗಿದೆ.

English summary
Bigg Boss Kannada 5: Week 2: Why did Sudeep use the word Insects.? Here is the complete report.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada