'ಬೆಣ್ಣೆ ದೋಸೆ'ಯಲ್ಲಿ ಡಿಸ್ಕವರಿ ಮಾಡೋಕೆ ಹೊರಟ 'ವಾಸ್ಕೋಡಿಗಾಮ'
ನಿರ್ದೇಶಕ ಮಧುಚಂದ್ರ ಅವರ ಆಕ್ಷನ್-ಕಟ್ ನಲ್ಲಿ ಮೂಡಿಬಂದಿದ್ದ 'ವಾಸ್ಕೋಡಿಗಾಮ' ಟೀಮ್ 'ಬೆಂಗಳೂರು ಬೆಣ್ಣೆ ದೋಸೆ'ಯಲ್ಲಿ ಮಸ್ತ್ ಮಜಾ ಮಾಡಿ ಕುಣಿದು ಕುಪ್ಪಳಿಸಿದರು. ಈ ವಿಭಿನ್ನ ರೀತಿಯ ರಿಯಾಲಿಟಿ ಶೋ ನಲ್ಲಿ ಈ ಸಂಚಿಕೆ ಬಹಳಷ್ಟು ಮಜಾ ಕೊಡಲಿದೆ.
ಪೋರ್ಚುಗೀಸ್ ದೊರೆ 'ವಾಸ್ಕೋಡಗಾಮ' ದೇಶವನ್ನು ಪತ್ತೆ ಹಚ್ಚಲು ಹೋದರೆ, ಈ 'ವಾಸ್ಕೋಡಿಗಾಮ' ತಂಡ ಕುಂಬಳಕಾಯಿಯನ್ನು ಪತ್ತೆಹಚ್ಚಲು ಹೋಗುತ್ತಾರೆ. ಡಿಸ್ಕವರಿ ಮಾಡಲು ಹೊರಟ ನಟಿ ಪಾರ್ವತಿ ಅವರ ಕೈಗೆ ಸಿಕ್ಕ ಹಾವನ್ನು ನೋಡಿ ಎಲ್ಲರೂ ಹೌಹಾರಿದ ಕಾಮಿಡಿ ಘಟನೆ ಈ ವಾರದ 'ಬೆಣ್ಣೆದೋಸೆ' ಸಂಚಿಕೆಯಲ್ಲಿ ಮೂಡಿಬಂದಿದೆ.['ಬೆಣ್ಣೆ ದೋಸೆ' ಹೋಟೆಲ್ ನಲ್ಲಿ ಮಾಲಾಶ್ರೀ ಆಟೋ ಸವಾರಿ]

ಈಗಾಗಲೇ ಜನರ ಪ್ರೀತಿ ಹಾಗೂ ಮೆಚ್ಚುಗೆಯನ್ನು ಗಳಿಸಿರುವ ನಟ ಕಿಶೋರ್ ಅವರು ವಿವಿಧ ರೀತಿಯ ಡೈಲಾಗ್ ಹೊಡೆದು ಈ ವಿಭಿನ್ನ ಶೋ ನ ಗಮನ ಸೆಳೆದರು. ವಿಶೇಷವಾಗಿ 'ಮುಂಗಾರು ಮಳೆ' ಚಿತ್ರದ ಸಂಭಾಷಣೆಯನ್ನು ಕಿಶೋರ್ ಅವರು 'ಬೆಣ್ಣೆದೋಸೆ' ವೇದಿಕೆ ತಂದಿದ್ದರು, ಜೊತೆಗೆ ನಟಿ ಪಾರ್ವತಿ ನಾಯರ್ ಅವರು 'ಶರಪಂಜರ' ಚಿತ್ರದ ಕಲ್ಪನ ಪಾತ್ರಕ್ಕೆ ಜೀವ ತುಂಬಿದ್ದಾರೆ.
ಇನ್ನು ಈ ಕಾರ್ಯಕ್ರಮದ ಮತ್ತೊಂದು ವಿಶೇಷವೆಂದರೆ ಚಿತ್ರದ ನಿರ್ದೇಶಕ ಮಧುಚಂದ್ರ ಅವರು 'ಬೆಂಗ್ಳೂರ್ ಬೆಣ್ಣೆದೋಸೆ'ಯಲ್ಲಿ ಸಖತ್ ಸ್ಟೆಪ್ ಹಾಕಿ ಎಲ್ಲರ ಮನರಂಜಿಸಿದ್ದಾರೆ.[ಬೆಣ್ಣೆ ದೋಸೆ ತಿರಸ್ಕರಿಸಿದ 'ಪೂಜಾರಿ' ಬೆಡಗಿ ]

ಬಹುಭಾಷಾ ನಟ ಕಿಶೋರ್ ಹಾಗೂ ನಟಿ ಪಾರ್ವತಿ ಅವರ ಡಬ್ ಸ್ಮಾಷ್ ಹಾಗೂ 'ವಾಸ್ಕೋಡಿಗಾಮ' ಚಿತ್ರತಂಡ, ಬೆಣ್ಣೆದೋಸೆ ಶೋನ ರೂವಾರಿ ನಟ ಅರುಣ್ ಸಾಗರ್ ಜೊತೆ ಮಾಡಿದ ಮೋಜು-ಮಸ್ತಿ ನೋಡಲು ಈ ವಾರದ (ನವೆಂಬರ್ 1, ರಾತ್ರಿ 9ಕ್ಕೆ) 'ಬೆಣ್ಣೆದೋಸೆ' ಮಿಸ್ ಮಾಡ್ಕೋಬೇಡಿ


Click it and Unblock the Notifications











