For Quick Alerts
  ALLOW NOTIFICATIONS  
  For Daily Alerts

  ಈ ವೀಕೆಂಡ್ ನಲ್ಲಿ ಸುದೀಪ್ V/S ದರ್ಶನ್! ನಿಮ್ಮ ಆಯ್ಕೆ ಯಾವುದು?

  By Harshitha
  |

  ಇದುವರೆಗೂ ಕಲರ್ಸ್ ಕನ್ನಡ ಮತ್ತು ಜೀ ವಾಹಿನಿ ನಡುವೆ ನಡೆದದ್ದು ಟಿ.ಆರ್.ಪಿ ಯುದ್ಧವಲ್ಲ. ಈ ವಾರ ನಡೆಯುವುದು ನಿಜವಾದ ವಾರ್.!

  ವೀಕ್ಷಕರೆಲ್ಲರೂ ಕುತೂಹಲದಿಂದ ಕಾಯುತ್ತಿರುವ ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್-3' ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆ ನಡೆಯುವುದು ಈ ವಾರಾಂತ್ಯದಲ್ಲಿ. [ವೀಕೆಂಡ್ ವಿತ್ ರಮೇಶ್ ಅಥವಾ ಸುದೀಪ್? ನಿಮ್ಮ ಆಯ್ಕೆ ಯಾವುದು?]

  'ಬಿಗ್ ಬಾಸ್-3' ಕಾರ್ಯಕ್ರಮದ ವಿನ್ನರ್ ಯಾರು ಅನ್ನೋ ಕುತೂಹಲಕ್ಕೆ ಕಿಚ್ಚ ಸುದೀಪ್ ಶನಿವಾರ ರಾತ್ರಿ ತೆರೆ ಎಳೆಯಲಿದ್ದಾರೆ (ರೆಕಾರ್ಡಿಂಗ್ ನಡೆಯುವುದು ಶನಿವಾರ). ಇನ್ನೂ ಇದೇ ಹೊತ್ತಿಗೆ ಜೀ ಕನ್ನಡ ವಾಹಿನಿ ಟ್ಯೂನ್ ಮಾಡಿದ್ರೆ, ನಿಮಗೆಲ್ಲಾ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಬದುಕಿನ ನಿಜವಾದ ದರ್ಶನವಾಗುತ್ತೆ.

  ಹೌದು, 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದ ಈ ವಾರ ಅತಿಥಿ 'ದಾಸ' ದರ್ಶನ್. ಶನಿವಾರ ಮತ್ತು ಭಾನುವಾರ ದರ್ಶನ ಬದುಕಿನ ಕಷ್ಟದ ಕಥೆ ರಮೇಶ್ ರವರ ಮುಂದೆ ಅನಾವರಣವಾಗಲಿದೆ. [ರಿಯಾಲಿಟಿ ಶೋಗೆ ಬರಲ್ಲ ಅಂದಿದ್ದ ದರ್ಶನ್ ವೀಕೆಂಡ್ ಗೆ ಬಂದ್ರು]

  ಒಂದ್ಕಡೆ ಕಿಚ್ಚ ಸುದೀಪ್, ಇನ್ನೊಂದ್ಕಡೆ ದರ್ಶನ್. ಕಲರ್ಸ್ ಕನ್ನಡ ವಾಹಿನಿಯಲ್ಲಿ 'ಬಿಗ್ ಬಾಸ್-3' ವಿನ್ನರ್ ನೋಡುವ ಕಾತರ, ಜೀ ಕನ್ನಡ ವಾಹಿನಿಯಲ್ಲಿ ದರ್ಶನ್ ಬದುಕಿನ ಬಗ್ಗೆ ತಿಳಿದುಕೊಳ್ಳುವ ಆತುರ. ಈ ಎರಡರಲ್ಲಿ ನಿಮ್ಮ ಆಯ್ಕೆ ಯಾವುದು?

  ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ ಪ್ರಸಾರವಾಗುವ ಕಿಚ್ಚ ಸುದೀಪ್ ನಿರೂಪಣೆಯ 'ಬಿಗ್ ಬಾಸ್-3' ಗ್ರ್ಯಾಂಡ್ ಫಿನಾಲೆ ನೋಡ್ತೀರೋ, ಇಲ್ಲಾ ರಮೇಶ್ ಅರವಿಂದ್ ನಡೆಸಿಕೊಡುವ 'ವೀಕೆಂಡ್ ವಿತ್ ರಮೇಶ್' ನೋಡ್ತೀರಾ ಅಂತ ನಮಗೆ ತಿಳಿಸಿ, ಕೆಳಗಿರುವ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡಿ.....

  English summary
  Weekend With Ramesh season 2, Challenging Star Darshan special will telecast on Saturday and Sunday in Zee Kannada Channel at 9 PM. Since, Bigg Boss-3 Grand Finale will also be aired in Colors Kannada Channel at the same time, which show will you watch? Comment and share your views.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X