For Quick Alerts
  ALLOW NOTIFICATIONS  
  For Daily Alerts

  ಬಿಗ್ ಬಾಸ್ ವಿನ್ನರ್ ಅಭಿಜಿತ್ ಗೆ ಸರ್ಪ್ರೈಸ್ ಗಿಫ್ಟ್ ನೀಡಿದ ಕ್ರಿಕೆಟಿಗ ರೋಹಿತ್ ಶರ್ಮಾ

  |

  ಕಿರುತೆರೆಯ ಖ್ಯಾತ ರಿಯಾಲಿಟಿ ಶೋಗಳಲ್ಲಿ ಬಿಗ್ ಬಾಸ್ ಕೂಡ ಒಂದು. ಹಿಂದಿ, ತೆಲುಗು, ತಮಿಳು ಕನ್ನಡ ಸೇರಿದಂತೆ ಬಹುತೇಕ ಭಾಷೆಗಳಲ್ಲಿ ಬಿಗ್ ಬಾಸ್ ಶೋ ಪ್ರಸಿದ್ಧಿ ಪಡೆದಿದೆ. ಈಗಾಗಲೇ ತೆಲುಗಿನಲ್ಲಿ ಬಿಗ್ ಬಾಸ್ 4ನೇ ಆವೃತ್ತಿ ಯಶಸ್ವಿಯಾಗಿ ಮುಕ್ತಾಯವಾಗಿದೆ.

  ತೆಲುಗು ಖ್ಯಾತ ನಟ ಅಕ್ಕಿನೇನಿ ನಾಗಾರ್ಜುನ್ ನಡೆಸಿಕೊಟ್ಟಿದ್ದಾರೆ. ಈ ಬಾರಿ ಬಿಗ್ ಬಾಸ್ ನ ವಿನ್ನರ್ ಆಗಿ ನಟ ಅಭಿಜಿತ್ ಹೊರಹೊಮ್ಮಿದ್ದಾರೆ. ಕಿರುತೆರೆ ಪ್ರೇಕ್ಷಕರ ನೆಚ್ಚಿನ ಸ್ಪರ್ಧಿಯಾಗಿದ್ದ ಅಭಿಜಿತ್ ನಿರೀಕ್ಷೆಯಂತೆ ಗೆದ್ದು ಬೀಗಿದ್ದಾರೆ. ಬಿಗ್ ಮನೆಯಲ್ಲಿದ್ದು, ಅಭಿಮಾನಿಗಳನ್ನು ರಂಜಿಸಿದ್ದ ಅಭಿಜಿತ್ ಗೆ ಸಾಕಷ್ಟು ಉಡುಗೊರೆಗಳು ಸಿಕ್ಕಿವೆ. ಇದೀಗ ಅಭಿಜಿತ್ ಗೆ ಮತ್ತೊಂದು ವಿಶೇಷ ಉಡುಗೊರೆ ಸಿಕ್ಕಿದೆ. ಈ ಗಿಫ್ಟ್ ನೋಡಿ ಅಭಿಜಿತ್ ಫುಲ್ ಖುಷ್ ಆಗಿದ್ದಾರೆ.

  Bigg Boss Telugu 4; ಈ ಬಾರಿ 'ಬಿಗ್ ಬಾಸ್' ಗೆದ್ದು ಬೀಗಿದ ನಟ ಅಭಿಜಿತ್

  ರೋಹಿತ್ ಶರ್ಮಾ ಕಡೆಯಿಂದ ಸಿಕ್ಕಿದೆ ವಿಶೇಷ ಗಿಫ್ಟ್

  ರೋಹಿತ್ ಶರ್ಮಾ ಕಡೆಯಿಂದ ಸಿಕ್ಕಿದೆ ವಿಶೇಷ ಗಿಫ್ಟ್

  ಇದೀಗ ಅಭಿಜಿತ್ ಗೆ ಸಿಕ್ಕಿರುವ ಸರ್ಪ್ರೈಸ್ ಉಡುಗೊರೆಯೊಂದು ಅಭಿಜಿತ್ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದೆ. ಹೌದು, ಟೀಂ ಇಂಡಿಯಾದ ಆರಂಭಿಕ ಆಟಗಾರ ಹಿಟ್ ಮ್ಯಾನ್ ರೋಹಿತ್ ಶರ್ಮಾ ವಿಶೇಷ ಉಡುಗೊರೆ ಕಳುಹಿಸಿಕೊಟ್ಟಿದ್ದಾರೆ. ಉಡುಗೊರೆ ಮಾತ್ರವಲ್ಲದೆ ದೂರವಾಣಿ ಕರೆಮಾಡಿ ಮಾತನಾಡಿದ್ದಾರೆ.

  ಸಾಮಾಜಿಕ ಜಾಲತಾಣದಲ್ಲಿ ಸಂತಸ ಹಂಚಿಕೊಂಡ ಅಭಿಜಿತ್

  ಸಾಮಾಜಿಕ ಜಾಲತಾಣದಲ್ಲಿ ಸಂತಸ ಹಂಚಿಕೊಂಡ ಅಭಿಜಿತ್

  ಈ ಸಂತಸವನ್ನು ಅಭಿಜಿತ್ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. ಅಂದಹಾಗೆ ರೋಹಿತ್ ಶರ್ಮಾ ಪ್ರೀತಿಯಿಂದ ತನ್ನ ಹಸ್ತಾಕ್ಷರವುಳ್ಳ ಟೀಂ ಇಂಡಿಯಾ ಜರ್ಸಿಯನ್ನು ಕಳುಹಿಸಿಕೊಟ್ಟಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ರೋಹಿತ್ ಕಳುಹಿಸಿರುವ ಜರ್ಸಿಯನ್ನು ಅಭಿಜಿತ್ ಶೇರ್ ಮಾಡಿ, ದೀರ್ಘವಾಗಿ ಬರೆದುಕೊಂಡಿದ್ದಾರೆ.

  ತೆಲುಗು ಬಿಗ್‌ಬಾಸ್ ಗೆದ್ದ ಅಭಿಜೀತ್‌ಗೆ ಬಹುಮಾನಕ್ಕಿಂತ ಸಂಭಾವನೆಯೇ ಹೆಚ್ಚು!

  ರೋಹಿತ್ ಗಿಫ್ಟ್ ಗೆ ಅಭಿಜಿತ್ ಫುಲ್ ಖುಷ್

  ರೋಹಿತ್ ಗಿಫ್ಟ್ ಗೆ ಅಭಿಜಿತ್ ಫುಲ್ ಖುಷ್

  'ಹಿಟ್ ಮ್ಯಾನ್ ರೋಹಿತ್ ಶರ್ಮಾ ಆಸ್ಟ್ರೇಲಿಯಾದಿಂದ ಹೆಲೋ ಹೇಳಿದ್ದಾರೆ. ಈ ಅದ್ಭುತವಾದ ಉಡುಗೊರೆಗೆ ಧನ್ಯವಾದಗಳು. ಹನುಮ ವಿಹಾರಿ ಬೇಗ ಚೇತರಿಸಿಕೊಳ್ಳಿ' ಎಂದಿದ್ದಾರೆ. ಅಂದಹಾಗೆ ಅಭಿಜಿತ್, ರೋಹಿತ್ ಶರ್ಮಾ ದೊಡ್ಡ ಅಭಿಮಾನಿ ಎಂದು ಹನುಮ ವಿಹಾರಿ ತಿಳಿಸಿದ್ದಾರೆ. ಬಳಿಕ ರೋಹಿತ್ ಅಭಿಜಿತ್ ಗೆ ಸರ್ಪ್ರೈಸ್ ಗಿಫ್ಟ್ ಕಳುಹಿಸಿದ್ದಾರೆ.

  ರೋಹಿತ್ ಶರ್ಮಾ ಅವರ ದೊಡ್ಡ ಅಭಿಮಾನಿ

  ರೋಹಿತ್ ಶರ್ಮಾ ಅವರ ದೊಡ್ಡ ಅಭಿಮಾನಿ

  'ಈ ಬಗ್ಗೆ ನಾನೇನು ಹೇಳಲಿ. ಹಿಟ್ ಮ್ಯಾನ್ ಬ್ಯಾಟಿಂಗ್ ಮಾಡುತ್ತಿದ್ದಾಗ ನಾನು ಏನೆ ಕೆಲಸ ಮಾಡುತ್ತಿದ್ದರು ಅದನ್ನು ಬಿಟ್ಟು ಅವರ ಬ್ಯಾಟಿಂಗ್ ನೋಡುತ್ತೇನೆ. ಇದು ಬ್ಯಾಟಿಂಗ್ ಅಲ್ಲ, ಶುದ್ಧ ಕಲಾತ್ಮಕತೆ. ಎಂಥ ಫ್ಯಾನ್ ಬಾಯ್ ಕ್ಷಣ. ಧನ್ಯವಾದಗಳು ರೋಹಿತ್' ಎಂದಿದ್ದಾರೆ.

  ಕ್ರಿಕೆಟಿಗನಾಗುವ ಕನಸು ಕಂಡಿದ್ದರು ಅಭಿಜಿತ್

  ಕ್ರಿಕೆಟಿಗನಾಗುವ ಕನಸು ಕಂಡಿದ್ದರು ಅಭಿಜಿತ್

  'ನಾನು ಬಾಲ್ಯದಲ್ಲಿದ್ದಾಗ ನನಗೆ ಕ್ರಿಕೆಟಿಗನಾಗಬೇಕೆಂದು ಬಯಸಿದ್ದೆ. ಆದರೆ ಅದು ಸಾಧ್ಯವಾಗಿಲ್ಲ. ಆದರೆ ಇಂದಿಗೂ ಕ್ರಿಕೆಟ್ ನನ್ನಲ್ಲಿರುವ ಆ ಪುಟ್ಟ ಮಗುವನ್ನು ಹೊರತರುತ್ತೆ ಎಂದು ದೀರ್ಘವಾಗಿ ಬರೆದುಕೊಳ್ಳುವ ಮೂಲಕ ರೋಹಿತ್ ಶರ್ಮಾಗೆ ಧನ್ಯವಾದ ತಿಳಿಸಿ ಕ್ರಿಕೆಟ್ ಬಗ್ಗೆ ಇದ್ದ ಆಸಕ್ತಿಯನ್ನು ಬಹಿರಂಗ ಪಡಿಸಿದ್ದಾರೆ.

  English summary
  Bigg Boss-4 Telugu winner Abhijeet gets a surprise gift Hit Man Rohit Sharma.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X