For Quick Alerts
  ALLOW NOTIFICATIONS  
  For Daily Alerts

  ಬಿಗ್ ಬಾಸ್ ನಿಂದ ಅಪೂರ್ವ ಅಗ್ನಿಹೋತ್ರಿ ಔಟ್

  By ಜೇಮ್ಸ್ ಮಾರ್ಟಿನ್
  |

  ಕಲರ್ಸ್ ವಾಹಿನಿಯ ರಿಯಾಲಿಟಿ ಶೋ ಬಿಗ್ ಬಾಸ್ ನಲ್ಲಿ ಅತಿಯಾದ ಆಪ್ತತೆಯಿಂದ ಇರುತ್ತಿದ್ದ ಲವ್ ಬರ್ಡ್ಸ್ ನಂತೆ ಕಾಣುತ್ತಿದ್ದ ಗೌಹರ್ ಕುಶಾಲ್ ಜೋಡಿ ಅಚ್ಚರಿಯ ರೀತಿಯಲ್ಲಿ ಮನೆಯಿಂದ ಹೊರ ನಡೆದಿದ್ದಾರೆ. ಇಬ್ಬರು ಕೈ ಕೈ ಹಿಡಿದು ಕೊಂಡು ಹೊರ ಹೋಗಿದ್ದು ಆಯ್ತು, ಗೌಹರ್ ಮತ್ತೆ ಬಿಗ್ ಬಾಸ್ ಮನೆ ಸೇರಿದ್ದು ಆಯ್ತು.

  ಈಗ ತನೀಶಾ ಕುಶಾಲ್ ಆಂಡಿ ಕಿತ್ತಾಟದ ನಂತರ ಅರ್ಮಾನ್ ಹಾಗೂ ಹೊಸ ಎಂಟ್ರಿ ಇಜಾಜ್ ಖಾನ್ ವಾಗ್ದಾಳಿ ನಡೆಯಿತು. ಜತೆಗೆ ಆಂಡಿ ಹಾಗೂ ಕ್ಯಾಂಡಿ ಮನೆಯೊಳೆಗೆ ಅಧಿಕೃತ ಪ್ರವೇಶ ಪಡೆದಿದ್ದಾರೆ. ದೀಪಾವಳಿ ನಂತರ ಕುಶಾಲ್ ಕೂಡಾ ಮನೆಯೊಳಗೆ ಬರುವುದು ಖಾತ್ರಿಯಾಗಿದೆ.

  ಆದರೆ, ತನ್ನ ಪತ್ನಿಯನ್ನು ಮನೆಯಿಂದ ಹೊರಕ್ಕೆ ಕಳಿಸಿದ ಎರಡು ವಾರದ ನಂತರ ಸೌಮ್ಯ ಸ್ವಭಾವದ ಎಲ್ಲರ ಮೆಚ್ಚುಗೆಯ ಸ್ಪರ್ಧಿಅಪೂರ್ವ ಮನೆ ತೊರೆದಿದ್ದಾರೆ. ಪ್ರತ್ಯೂಷಾ ಬ್ಯಾನರ್ಜಿ, ಎಲ್ಲಿ ಅವ್ರಾಮ್, ಅಪೂರ್ವ ಅಗ್ನಿಹೋತ್ರಿ ಹಾಗೂ ಕಾಮ್ಯಾ ಪಂಜಾಬಿ ಎಲ್ಲರೂ ನಾಮಿನೇಟ್ ಆಗಿ ಡೇಂಜರ್ ಜೋನ್ ನಲ್ಲಿದ್ದರು. ಆದರೆ, ಅಪೂರ್ವ ಅವರನ್ನು ಮನೆ ತೊರೆಯುವಂತೆ ಸಲ್ಮಾನ್ ಖಾನ್ ಅವರು ವಾರಾಂತ್ಯದ ಎಪಿಸೋಡಿನಲ್ಲಿ ಘೋಷಿಸಿದ್ದಾರೆ.

  ಏಳು ವಾರಗಳ ಬಿಗ್ ಬಾಸ್ ಮನೆಯಲ್ಲಿದ್ದ ಅಪೂರ್ವ ಅವರು ಇತರೆ ಸ್ಪರ್ಧಿಗಳ ಜತೆ ಅಲ್ಲದೆ ಪ್ರೇಕ್ಷಕರ ಮನ ಗೆದ್ದಿದ್ದರು. ಅಫೂರ್ವ ಅವರ ಎಲಿಮಿನೇಟ್ ಆಗಿದ್ದು ಅನ್ಯಾಯ ಎಂಬ ಕೂಗು ಸಾಮಾಜಿಕ ಜಾಲ ತಾಣಗಳಲ್ಲಿ ಎದ್ದಿದೆ.

  ಮಧ್ಯರಾತ್ರಿ ಅಚ್ಚರಿಯ ಎಂಟ್ರಿ ಕೊಟ್ಟಿದ್ದ ದೂರದೇಶದ ಸೂಪರ್ ಮಾಡೆಲ್ ಆಸೀಫ್ ಮನೆಯಲ್ಲಿ ಆರಂಭದಿಂದಲೂ ಸ್ವಲ್ಪ ಸೈಲಂಟ್ ಆಗಿದ್ದು ಎಲ್ಲರೊಡನೆ ಬೆರೆಯಲು ಸ್ವಲ್ಪ ಹೆಚ್ಚು ಸಮಯ ವ್ಯಯಿಸಿದ್ದ. ಈ ಪರಿಸ್ಥಿತಿ ಜತೆ ಯಾರೊಟ್ಟಿಗೂ ಜಗಳವಾಡದ ಅಪೂರ್ವ ಜತೆ ಕೆಟ್ಟ ಪದ ಬಳಸಿ ಕಿತ್ತಾಟವಾಡಿದ್ದ. ಅದು ಬಿಟ್ಟರೆ ಅಪೂರ್ವ ಎಲ್ಲಾ ಟಾಸ್ಕ್ ಗಳಲ್ಲೂ ಗೆದ್ದಿದ್ದ. ಮೊಹ್ವಕ್ ಹೇರ್ ಸ್ಟೈಲ್ ಇದಕ್ಕೆ ಉದಾಹರಣೆ. ಆದರೆ, ಮೊನ್ನೆ ಅರ್ಮಾನ್ ತನೀಶಾರನ್ನು ಬಲೆಗೆ ಕೆಡವಲು ಆಂಡಿ, ಕಾಮ್ಯಾ, ಪ್ರತ್ಯೂಷಾ ಮಾಡಿದ ಸಂಚಿನಲ್ಲಿ ಪಾಲ್ಗೊಂಡು ಅಚ್ಚರಿ ಮೂಡಿಸಿದ. ನಾನು ಚಹಾ ಕುಡಿಯುತ್ತೇನೆ(ಮನೆಯಿಂದ ಹೊರಕ್ಕೆ ಹೋಗುತ್ತೇನೆ) ಎಂದಿದ್ದ. ಹೀಗಾಗಿ ಈ ವಾರ ಪ್ರತ್ಯೂಷಾ ಅಥವಾ ಅಪೂರ್ವ ಮನೆಯಿಂದ ಹೊರ ಬೀಳುವುದು ಖಾತ್ರಿಯಾಗಿತ್ತು.

  English summary
  The latest in the Bigg Boss 7 house is Apoorva Agnihotri's elimination. With lot of dhamakas happening in the Bigg Boss show, like Tanisha-Kushal-Andy's fight; Andy getting into Caravan; Kushal and Gauhar going out of Bigg Boss house, and then later Gauhar's entry; today we will see one more bomb that will be dropped on Apoorva Agnihotri!

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X