For Quick Alerts
  ALLOW NOTIFICATIONS  
  For Daily Alerts

  ಬಿಗ್ ಬಾಸ್ : ಅದಲು ಬದಲಿನ ಅತಿ ದೊಡ್ಡ ಟ್ವಿಸ್ಟ್

  By ಜೇಮ್ಸ್ ಮಾರ್ಟಿನ್
  |

  ಕಲರ್ಸ್ ವಾಹಿನಿಯ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ 7 ನಲ್ಲಿ ಪ್ರಪ್ರಥಮ ಬಾರಿಗೆ ಸ್ವರ್ಗ ನರಕವಾಸಿಗಳ ನಡುವೆ ಭಾರಿ ಅದಲು ಬದಲು ಕಾರ್ಯಕ್ರಮಕ್ಕೆ ಬಿಗ್ ಬಾಸ್ ಮುಂದಾಗಿದ್ದಾರೆ.

  ಬುಧವಾರ ಅಪೂರ್ವ ಹಾಗೂ ಸಂಗ್ರಾಮ್ ಗೆ mohawk ಹೇರ್ ಸ್ಟೈಲ್ ನೀಡಿ ಎಲ್ಲರನ್ನು ದಂಗುಬಡಿಸಿದ್ದ ಬಿಗ್ ಬಾಸ್ ನಂತರ ಪ್ರತ್ಯೂಷಾಗೆ ಕರೆಂಟ್ ಶಾಕ್ ನೀಡಿದ್ದು ಎಲ್ಲರಿಗೂ ಶಾಕ್ ಆಯಿತು. ಈಗ ಅದಲು ಬದಲು ಕಾರ್ಯಕ್ರಮ ಬಿಗ್ ಬಾಸ್ ನ ಹೊಸ ಟ್ವಿಸ್ಟ್ ಆಗಿದೆ.ಕುಶಾಲ್ ಹಾಗೂ ಕಾಮ್ಯಾ ಕನ್ಪೇಷನ್ ರೂಮ್ ಗೆ ತೆರಳಿ ಅಪೂರ್ವ ಬೆಸ್ಟ್ ಆಟಗಾರ ಹಾಗೂ ಎಲ್ಲಿ ವೀಕ್ ಸ್ಪರ್ಧಿ ಎಂದರು. ಸ್ವರ್ಗವಾಸಿಗಳು ಶಿಲ್ಪಾ ಹಾಗೂ ಆಸೀಫ್ ಹೆಸರು ತೆಗೆದುಕೊಂಡರು.

  ಅದರೆ, ಬಿಗ್ ಬಾಸ್ ಮುಂದಿನ ಎಲ್ಲರಿಗೂ ಅಚ್ಚರಿ ಮೂಡಿಸಿತು. ಎಲ್ಲಿ ನರಕದಲ್ಲಿ ಹಾಗೂ ಶಿಲ್ಪ ಸ್ವರ್ಗದಲ್ಲಿ ಇರುವುದು ಖಾತ್ರಿಯಾಗಿದೆ. ಉಳಿದವರು ಅದಲು ಬದಲಾಗಿ ಎಂದು ಬಿಗ್ ಬಾಸ್ ಹೇಳಿದರು.

  ಈ ನಿರ್ಣಯದಿಂದ ಕಾಮ್ಯಾ, ಪ್ರತ್ಯೂಷಾ, ಅಪೂರ್ವ ಮೊದಲ ಬಾರಿಗೆ ಸ್ವರ್ಗ ನೋಡಿ ಖುಷಿಯಾದರು. ಅಪೂರ್ವ, ಸಂಗ್ರಾಮ್, ಪ್ರತ್ಯೂಷಾ ಸ್ವಿಮ್ಮಿಂಗ್ ಪೂಲ್ ಗೆ ಹಾರಿ ಆನಂದಿಸಿದರು. ಮಿಕ್ಕಿದ್ದು ಗುರುವಾರದ ಎಪಿಸೋಡ್ ನಲ್ಲಿ ನೋಡಿ

  ಹೊಸ ಲವ್ ಕಥೆ ಕುತೂಹಲ : ಗೌಹರ್ ನಂಬಿಕೊಂಡು ಹಿಂದೆ ಬಿದ್ದಿರುವ ಕುಶಾಲ್ ಗೆ ಗೌಹರ್ ನಾಟಕರಾಣಿ ಎಂಬುದು ಅರಿವಿಲ್ಲ. ಆದರೆ, ಇಬ್ಬರೂ ನಿಜವಾಗಿಯೂ ಆಪ್ತ ಗೆಳೆಯರಂತೆ ವರ್ತಿಸುತ್ತಿದ್ದಾರೆ. ಇದರಿಂದ ಇತರರಿಗೆ ಮುಜುಗರವಾದರೂ ಪ್ರೇಕ್ಷಕರಿಗೆ ಒಂದಷ್ಟು ಮಜಾ ಸಿಗುತ್ತಿದೆ. ತನೀಶಾ ಕೂಡಾ ಆಸಿಫ್ ಗೆ ಹತ್ತಿರವಾಗುತ್ತಿದ್ದಾಳೆ. ನಾಟಕೀಯತೆ, ಜಗಳಗಳ ನಡುವೆ ಬಿಗ್ ಬಾಸ್ ಸದ್ಯಕ್ಕಂತೂ ಸಹ್ಯವಾಗಿದೆ.

  English summary
  Bigg Boss 7 for the first time on the show had inmates from Hell and Heaven swap their places. Shilpa and Apurva Agnihotri most happy and Elli Avram sad.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X