For Quick Alerts
ALLOW NOTIFICATIONS  
For Daily Alerts

ಕುಶಾಲ್ ಕಂಡು ಸಪ್ಪಗಾದ ತನೀಶಾ, ಆಂಡಿ

By ಜೇಮ್ಸ್ ಮಾರ್ಟಿನ್
|

ಬಿಗ್ ಬಾಸ್ ಮನೆಯಿಂದ ಹೊರ ಬಿದ್ದಿರುವ ಕುಶಾಲ್ ಮತ್ತೆ ಮನೆಗೆ ರೀ ಎಂಟ್ರಿ ಕೊಟ್ಟಿದ್ದಾನೆ. ಪ್ರೀತಿಯ ಗೆಳತಿ ಗೌಹರ್ ಜತೆ ಕುಶಾಲ್ ಮತ್ತೆ ಸಮಯ ಕಳೆಯಲು ಬಿಗ್ ಬಾಸ್ ಅವಕಾಶ ಕಲ್ಪಿಸುವ ಮೂಲಕ ಹೊಸ ಟ್ವಿಸ್ಟ್ ನೀಡಿದ್ದಾರೆ. ಕುಶಾಲ್ ರೀ ಎಂಟ್ರಿಗೆ ನಿರೀಕ್ಷೆಯಂತೆ ಎಲ್ಲರಿಂದ ತುಂಬು ಹೃದಯದ ಸ್ವಾಗತ ಸಿಕ್ಕಿದೆ. ಆದರೆ, ತನೀಶಾ ಹಾಗೂ ಆಂಡಿ ಮಾತ್ರ ಓಹ್ ಇವ ಯಾಕೆ ಬಂದ ಎಂದು ಮುಖ ಸಿಂಡರಿಸಿದ್ದಾರೆ. ಸ್ಪರ್ಧಿಗಳ ಪ್ರತಿಕ್ರಿಯೆಗಲು ಭಾವನೆಗಳ ಚಿತ್ರಗಳ ರೂಪದಲ್ಲಿ ನಿಮ್ಮ ಮುಂದಿದೆ.

ಕುಶಾಲ್ ಎಂಟ್ರಿಗೂ ಮುನ್ನ ಕಳ್ಳ ಪೊಲೀಸ್ ಆಟದಲ್ಲಿ ಕೆಟ್ಟ ಪ್ರದರ್ಶನ ನೀಡಿದ ಎಲ್ಲಿ ಹಾಗೂ ಸಂಗ್ರಾಮ್ ಗೆ ಬಿಗ್ ಬಾಸ್ ಕುತೂಹಲಕಾರಿ ಟಾಸ್ಕ್ ನೀಡುತ್ತಾರೆ. ಆದರೆ, ಮನಸ್ಸಿಲ್ಲದ ಮನಸ್ಸಿನಿಂದ ಟಾಸ್ಕ್ ನಲ್ಲಿ ಪಾಲ್ಗೊಂಡ ಸಂಗ್ರಾಮ್ ಆಟದಲ್ಲಿ ಸೋಲುವ ಮೂಲಕ ಎಲ್ಲಿಯನ್ನು ಸೇಫ್ ಮಾಡುತ್ತಾನೆ. ಎಲ್ಲಿ ಗೆದ್ದರೂ ಸಂಭ್ರಮ ಪಡದೆ ಸಂಗ್ರಾಮ್ ತ್ಯಾಗದ ಬಗ್ಗೆ ಯೋಚಿಸುತ್ತಾಳೆ. ಅವನು ತ್ಯಾಗ ಮಾಡಿಲ್ಲ ಎಂದು ಇತರೆ ಸ್ಪರ್ಧಿಗಳು ಹೇಳಿದರೂ ಎಲ್ಲಿಗ್ಯಾಕೋ ಅನುಮಾನ.

ದಿನದ ಕೊನೆಗೆ ಕುಶಾಲ್ ಥಂಡನ್ ಎಂಟ್ರಿಯಾಗುತ್ತದೆ. ಎಲ್ಲರಿಗೂ ಉಡುಗೊರೆ ತಂದಿದ್ದ ಕುಶಾಲ್ ಎಲ್ಲರನ್ನು ತಬ್ಬಿಕೊಂಡು ಸಂಭ್ರಮ ಪಡುತ್ತಾನೆ. ಬಿಗ್ ಬಾಸ್ ನೀಡಿದ ಅಚ್ಚರಿಯಿಂದ ಗೌಹರ್ ಫುಲ್ ಖುಷ್ ಆಗುತ್ತಾಳೆ. ಜೋಡಿ ಹಕ್ಕಿ ಮತ್ತೊಮ್ಮೆ ಬಿಗ್ ಬಾಸ್ ಮನೆಯಲ್ಲಿ ತಮ್ಮ ಕಲರವ ಶುರು ಮಾಡಲು ರೆಡಿಯಾಗಿವೆ. ಇನ್ನಷ್ಟು ಕಥೆ ಮುಂದೆ ...

ಎಲ್ಲಿ ಸೇಫ್ ಮಾಡಿದ ಸಂಗ್ರಾಮ್

ಎಲ್ಲಿ ಸೇಫ್ ಮಾಡಿದ ಸಂಗ್ರಾಮ್

ಕಂಬವನ್ನು ತಬ್ಬಿಕೊಂಡು ಗಂಟೆಗಟ್ಟಲೇ ನಿಲ್ಲುವ ಟಾಸ್ಕ್ ಬಲಭೀಮ ಸಂಗ್ರಾಮ್ ಗೆ ಕಷ್ಟವೇನಲ್ಲ. ಆದರೆ, ಈ ಟಾಸ್ಕ್ ನಲ್ಲಿ ಸೋತವರು ನೇರವಾಗಿ ನಾಮಿನೇಟ್ ಆಗುತ್ತಾರೆ ಎಂಬ ಟ್ವಿಸ್ಟ್ ಇದ್ದುದ್ದರಿಂದ ಎಲ್ಲಿ ಸೇಫ್ ಮಾಡಲು ಸಂಗ್ರಾಮ್ ಸೋಲಿನ ನಾಟಕವಾಡಿದನು.

ಸಂಗ್ರಾಮ್ ನಿರ್ಣಯವನ್ನು ಮೆಚ್ಚಿದ ಆಂಡಿ, ಎಲ್ಲಿಗೆ ಕಾಡುತ್ತಿದ್ದ ಪಾಪಪ್ರಜ್ಞೆ ದೂರಮಾಡಲು ಯತ್ನಿಸಿದ

ಕುಶಾಲ ಬಂದಾಯ್ತು ಮುಂದೆ

ಕುಶಾಲ ಬಂದಾಯ್ತು ಮುಂದೆ

ಸಿನೀಮಿಯ ಮಾದರಿಯಲ್ಲಿ ಕುಶಾಲ್ ಹಾಗೂ ಗೌಹರ್ ಇಬ್ಬರು ಮನೆಯಿಂದ ಹೊರಬಿದ್ದಿದ್ದರು. ಕುಶಾಲ್ ಮಾಜಿ ಗೆಳತಿ ಕ್ಯಾಂಡಿ ಬ್ರಾರ್ ಇರುವ ತನಕ ಕುಶಾಲ್ ಮನೆಗೆ ಮತ್ತೆ ಪ್ರವೇಶಿಸುವುದು ಅಸಾಧ್ಯವಾಗಿತ್ತು. ಸಲ್ಮಾನ್ ಖಾನ್ ಕೂಡಾ ನನಗೆ ಸ್ಸಾರಿ ಎಂದಿದ್ದಾನೆ ಎಂದು ಕುಶಾಲ್ ಹೇಳಿಕೊಂಡು ತಿರುಗಾಡುತ್ತಿದ್ದ.

ಈಗ ಸಲ್ಮಾನ್ ಕೂಡಾ ರೀ ಎಂಟ್ರಿಗೂ ನನಗೂ ಸಂಬಂಧವಿಲ್ಲ ಎಂದ ಮೇಲೆ ಕುಶಾಲ್ ಮನೆ ಹೊಕ್ಕಿದ್ದಾನೆ. ಕುಶಾಲ್, ಕಾಮ್ಯಾ, ಗೌಹರ್ ಜೋಡಿ ಕೊನೆ ತನಕ ಉಳಿಯುವ ಎಲ್ಲಾ ಲಕ್ಷಣಗಳಿವೆ.ಸೇಫ್ ಎಂದು ತಿಳಿದಿದ್ದ ಆಂಡಿ, ತನೀಶಾಗೆ ಈಗ ಚಿಂತೆ ಶುರುವಾಗಿದೆ. ಇವರಿಬ್ಬರಲ್ಲಿ ಒಬ್ಬರನ್ನು ಹೊರ ಕಳಿಸಲು ಕುಶಾಲ್ ಬಂದಿದ್ದಾನೆ ಎನ್ನಬಹುದು.

ತನೀಶಾ ಮುಖ ನೋಡಿ

ತನೀಶಾ ಮುಖ ನೋಡಿ

ಅರ್ಮಾನ್ ಕೋಪದ ನಡುವೆಯೂ ನಗುನಗುತ್ತಾ ಇದ್ದ ತನೀಶಾ ಮುಖ ಬಾಡಿದೆ. ಕುಶಾಲ್ ನನ್ನ ಬಳಿ ಕುಶಾಲ್ ಕ್ಷಮೆಯಾಚಿಸಿಲ್ಲ. ಮನೆಗೆ ಬಂದರೆ ನಾನಿರುವುದಿಲ್ಲ ಎಂದು ತನೀಶಾ ನೇರವಾಗಿ ಹೇಳಿದ್ದಳು. ಈಗ ಅವಳ ಮಾತಿಗೆ ಬೆಲೆ ನೀಡದೆ ಬಿಗ್ ಬಾಸ್ ಆಡುತ್ತಿರುವ ಆಟದಿಂದ ಯಾರ ಸ್ಥಾನ ಪಲ್ಲಟವಾಗುತ್ತದೆ ಕಾದು ನೋಡಬೇಕಿದೆ

ವಿವಾದಿತ ಪ್ರಸಂಗ

ವಿವಾದಿತ ಪ್ರಸಂಗ

ಸ್ತ್ರೀರಕ್ಷಕ ಎಂದು ಬಿರುದು ಪಡೆದಿರುವ ಕುಶಾಲ್ ಅಂದು ಆಂಡಿ ಮೇಲೆ ಹಲ್ಲೆ ಮಾಡಿದ್ದಕ್ಕಾಗಿ ಮನೆಯಿಂದ ಹೊರಬಿದ್ದ. ಆದರೆ, ತನೀಶಾ ಜತೆ ಒರಟಾಟದ ನಂತರವೂ ಯಾವುದೇ ಕ್ಷಮೆಯಾಚಿಸಿರಲಿಲ್ಲ. ಬಿಗ್ ಬಾಸ್ ದ್ವಂದ್ವ ನೀತಿಗೆ ಪ್ರೇಕ್ಷಕರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಟಾಸ್ಕ್ ಗಳ ಕುತೂಹಲ

ಟಾಸ್ಕ್ ಗಳ ಕುತೂಹಲ

ಕುಶಾಲ್ ಎಂಟ್ರಿಯಿಂದ ಏಜಾಜ್, ಅರ್ಮಾನ್ ಕೋಪ ತಾಪಕ್ಕೆ ಬ್ರೇಕ್ ಬೀಳುವ ಸಾಧ್ಯತೆ ಹೆಚ್ಚಿದೆ. ಮೂವರು ಆರ್ಭಟಿಸಿದರೆ ಸ್ಪರ್ಧಿಗಳಿರಲಿ, ಪ್ರೇಕ್ಷಕರೇ ಟಿವಿ ಸೆಟ್ ನಿಂದ ದೂರವುಳಿಯುತ್ತಾರೆ ಎಂಬುದನ್ನು ಅರಿತಿರುವ ಬಿಗ್ ಬಾಸ್ ಈಗ ಕುತೂಹಲಕಾರಿ ಮಜಾವುಳ್ಳ ಟಾಸ್ಕ್ ನತ್ತ ಗಮನಹರಿಸಿದ್ದಾರೆ.

English summary
Bigg Boss 7 had a very exhilarating day with a competition between Sangram Singh and Elli Avram. Sangram competed with Elli in standing on the poll while icy cold water would be sprayed against them. Also, the day's highlight was when Kushal Tandon, the ex-contestant, entered the house and re-joined his "good-friend" Gauhar Khan.

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more