»   » ಬಿಗ್ ಬಾಸ್ : ಸಲ್ಮಾನ್ ಮೇಲೆ ಬಿತ್ತು ಎಫ್ ಐಆರ್

ಬಿಗ್ ಬಾಸ್ : ಸಲ್ಮಾನ್ ಮೇಲೆ ಬಿತ್ತು ಎಫ್ ಐಆರ್

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಸ್ವರ್ಗ ನರಕ ಕಲ್ಪನೆ ಹೊರ ತಂದ ಕಲರ್ಸ್ ವಾಹಿನಿಯ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಈಗ ಕೋರ್ಟ್ ಮೆಟ್ಟಿಲೇರಿದೆ. ಈಗಾಗಲೇ ಹಲವಾರು ಕೇಸುಗಳನ್ನು ಕೊರಳಿಗೆ ಸುತ್ತಿಕೊಂಡಿರುವ ನಿರೂಪಕ ಸಲ್ಮಾನ್ ಖಾನ್ ಅವರ ಮೇಲೆ ಹೊಸದಾಗಿ ದೂರು ದಾಖಲಾಗಿದೆ. ಮುಸ್ಲಿಂ ಭಾವನೆಗಳಿಗೆ ಸಲ್ಮಾನ್ ಖಾನ್ ಅವರು ಧಕ್ಕೆ ತಂದಿದ್ದಾರೆ ಎಂಬ ಆರೋಪದ ಮೇಲೆ ದೂರು ನೀಡಲಾಗಿದ್ದು, ಸಲ್ಮಾನ್ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ.

ಸಲ್ಮಾನ್ ಖಾನ್ ಹಾಗೂ ಬಿಗ್ ಬಾಸ್ 7 ಅಧಿಕಾರಿಗಳು ಹಾಗೂ ಕಲರ್ಸ್ ವಾಹಿನಿ ವಿರುದ್ಧ ವಕೀಲ ಎಂಎ ಕ್ವಾವಿ ಅಬ್ಬಾಸಿ ಎಂಬುವರು ದೂರು ದಾಖಲಿಸಿದ್ದಾರೆ. ಜನ್ನತ್ ಹಾಗೂ ಜಹನ್ನೂಮ್ ಎಂಬ ಕಲ್ಪನೆಯನ್ನು ಇಸ್ಲಾಂ ಧರ್ಮ ಪರಿಪಾಲಿಸುವ ಸಲ್ಮಾನ್ ನಿರೂಪಿಸುವುದು ಸರಿಯಿಲ್ಲ. ಜತೆಗೆ ಬಿಗ್ ಬಾಸ್ ನಲ್ಲಿರುವ ಮುಸ್ಲಿಂ ಸ್ಪರ್ಧಿಗಳ ಮೇಲೂ ಈ ಭಾವನೆಗಳನ್ನು ಹೇರುವುದು ಧಾರ್ಮಿಕ ಕಾನೂನು ಉಲ್ಲಂಘನೆಯಾಗಿದೆ ಎಂದು ದೂರಲಾಗಿದೆ.

16ನೇ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಮುಂದೆ ಪ್ರಕರಣ ಬಂದಿದ್ದು, ಎಫ್ ಐಆರ್ ದಾಖಲಿಸಲು ಪೊಲೀಸರಿಗೆ ಸೂಚನೆ ಸಿಕ್ಕಿದೆ ಎಂದು ದೂರುದಾರರಲ್ಲಿ ಒಬ್ಬರಾದ ಫಾಸಿಹುದ್ದೀನ್ ಹೇಳಿದ್ದಾರೆ. ಸಲ್ಮಾನ್ ಅವರು ತಮ್ಮ ವಕೀಲರ ಜತೆ ಕೋರ್ಟಿಗೆ ಹಾಜರಾಗಬೇಕಿದೆ.

Bigg Boss 7 puts Salman Khan in fresh legal trouble

ಬಿಗ್ ಬಾಸ್ ನ ಸ್ಪರ್ಧಿ ಅರ್ಮಾನ್ ಕೊಹ್ಲಿ ವಿರುದ್ಧ ಮತ್ತೊಬ್ಬ ಸ್ಪರ್ಧಿ ಬ್ರಿಟಿಷ್ ತಾರೆ ಹಾಗೂ ಗಾಯಕಿ ಸೋಫಿಯಾ ಹಯಾತ್ ದೂರು ನೀಡಿದ್ದರು. ಇದಕ್ಕೆ ಪ್ರತಿಯಾಗಿ ಕೊಹ್ಲಿ ಸೀನಿಯರ್ ರಾಜಕುಮಾರ್ ಅವರು ಸೋಫಿಯಾ ಮೇಲೆ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಮನೆಯಿಂದ ಹೊರಬಿದ್ದ ನಂತರ ಅರ್ಮಾನ್ ಕೊಹ್ಲಿ ವಿರುದ್ಧ ಬುಧವಾರ ಮುಂಬೈನ ಸಾಂತಾಕ್ರೂಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಅರ್ಮಾನ್ ಕೊಹ್ಲಿ ಬಂಧನವಾಗಿ ನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದೆ. ಈಗ ಅರ್ಮಾನ್ ಮತ್ತೆ ಲೋನಾವಾಲದಲ್ಲಿರುವ ಬಿಗ್ ಬಾಸ್ ಮನೆ ಸೇರಿದ್ದಾರೆ. [ಅರ್ಮಾನ್ ಗೆ ಕೊಳೆತ ಮೊಟ್ಟೆ ಎಸೆದು ಸ್ವಾಗತ]

ಸ್ಪರ್ಧಿಗಳಿಗೆ ಬಿಗ್ ಬಾಸ್ ನೀಡುವ ಸ್ಪರ್ಧೆಗಳು ಅಮಾನವೀಯವಾಗಿದೆ. ಕುರ್ಚಿಯಲ್ಲಿ ಕುಳಿತು ಎಲೆಕ್ಟ್ರಿಕ್ ಶಾಕ್ ನೀಡುವುದು, ಸಗಣಿಯಲ್ಲಿ ಸ್ನಾನ ಮಾಡುವುದು, 12 ಗಂಟೆ ಕುಳಿತ ಕಡೆ ಕುಳಿತಿರುವ ಶಿಕ್ಷೆ, ಸ್ಪರ್ಧಿಗಳಿಗೆ ವಿಚಿತ್ರ ಕೇಶ ವಿನ್ಯಾಸ ನೀಡುವುದು, ಸ್ಪರ್ಧಿಗಳನ್ನು ಉಪವಾಸ ಕೂರಿಸುವುದು ಇವೆ ಮುಂತಾದ ಶಿಕ್ಷೆಗಳು ಆಕ್ಷೇಪಾರ್ಹ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಕಲರ್ಸ್ ವಾಹಿನಿಗೆ ಲೀಗಲ್ ನೋಟಿಸ್ ಜಾರಿ ಮಾಡಿತ್ತು

ಆದರೆ, ಬಿಗ್ ಬಾಸ್ ಕಾರ್ಯಕ್ರಮ 7 ವರ್ಷ ವಯಸ್ಕರಿಂದ 70 ವರ್ಷ ವಯಸ್ಕರು ನೋಡುವಂತೆ ರೂಪಿಸಲಾಗಿದೆ. ಮಾಹಿತಿ ಮತ್ತು ಪ್ರಸಾರ ಸಚಿವಾಲಯ, Broadcasting Content Complaints Council ನಿರ್ದೇಶನದಂತೆ ಕಾರ್ಯಕ್ರಮ ಪ್ರಸಾರವಾಗುತ್ತಿದೆ. ಕುಟುಂಬಸ್ಥರು ಕುಳಿತು ನೋಡುವಂತೆ ಕಾರ್ಯಕ್ರಮವನ್ನು ಕಾಯ್ದುಕೊಳ್ಳಲಾಗಿದೆ ಎಂದು ವಾಹಿನಿ ಹೇಳಿದೆ.

English summary
Bollywood actor Salman Khan, who has been gheraoed by several legal cases against him, has landed in another legal soup for hosting Bigg Boss 7. A fresh FIR has been filed against the actor and Colors TV channel.
Please Wait while comments are loading...