»   » BB8: ಸಂಭಾವನಾ ಹೊರಕ್ಕೆ, ಗೌತಮ್ ಗೆಲ್ಲುವ ನಿರೀಕ್ಷೆ

BB8: ಸಂಭಾವನಾ ಹೊರಕ್ಕೆ, ಗೌತಮ್ ಗೆಲ್ಲುವ ನಿರೀಕ್ಷೆ

Posted By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಕಲರ್ಸ್ ವಾಹಿನಿಯ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ 8 ನಿಂದ ಸಲ್ಮಾನ್ ಖಾನ್ ಹೊರ ನಡೆದ ಮೇಲೆ ಮನೆಯೊಳಗೆ, ಮನೆ ಹೊರಕ್ಕೆ ಎಲ್ಲವೂ ಮಿತಿ ಮೀರುತ್ತಿದೆ. ವಾಹಿನಿಗೆ ಗೊತ್ತೋ ಗೊತ್ತಿಲ್ಲದೆ ವಯಸ್ಕರಿಗೇ ಮಾತ್ರ ಎಂಬ ಬೋರ್ಡ್ ಇಲ್ಲದ ಸೀನ್ ಗಳು ನುಸುಳುತ್ತಿವೆ. ಹಾಗೂ ಹೀಗೂ ಟಿಆರ್ ಪಿ ವಾರ್ ನಲ್ಲಿ ಬಿಗ್ ಬಾಸ್ 8 ಜೀವಂತ ಉಳಿದಿದೆ.

ನಟಿ, ನೃತ್ಯ ಸಂಯೋಜಕಿ, ನಿರ್ದೇಶಕಿ ಫರ್ಹಾಖಾನ್ ನಿರೂಪಣೆಯಲ್ಲಿ ವೀಕೆಂಡ್ ಕಾ ವಾಹ್ ಈಗ ಹಲ್ಲಾ ಬೋಲ್ ಡಲ್ ಆಗಿದೆ. ಕಳೆದ ವಾರದ ಎಲಿಮಿನೇಷನ್ ನಲ್ಲಿ ಸನಾ ಖಾನ್ ಅವರನ್ನು ಮನೆಯಿಂದ ಹೊರಕ್ಕೆ ಕರೆಸಿಕೊಳ್ಳಲಾಗಿತ್ತು. ಈಗ ವಾರದ ಮಧ್ಯದಲ್ಲಿ ಸಂಭಾವನಾ ಸೇಠ್ ಹೊರ ಬಂದಿದ್ದಾರೆ.

ನಾಟಕೀಯತೆಯಿಂದ ಎಲಿಮಿನೇಷನ್ ನಡೆದಿದ್ದು, ಆರ್ ಜೆ ಪ್ರೀತಂ, ಆಲಿ ಖುಲಿ ಮಿರ್ಜಾ ಒಟ್ಟಾಗಿ ಬಿಗ್ ಬಾಸ್ ಸ್ಪರ್ಧೆ ಗೆಲ್ಲುವ ನೆಚ್ಚಿನ ಕುದುರೆ ಗೌತಮ್ ಗುಲಾಟಿ ವಿರುದ್ಧ ಕತ್ತಿ ಮಸೆಯುತ್ತಿದ್ದಾರೆ. ಮಾತಿನ ಚಕಮಕಿ, ಕೈ ಕೈ ಮಿಲಾಯಿಸುವ ಹಂತಕ್ಕೂ ತಲುಪುತ್ತಿದೆ. ಏಣಿಯಾಟದಲ್ಲಿ ಈ ಮೂವರ ಜಟಾಜಟಿ ಬಯಲಾಗಿದೆ.[ಸನಾ ಖಾನ್ ಔಟ್, ಸಲ್ಮಾನ್ ರೀ ಎಂಟ್ರಿ!]

ಗ್ರ್ಯಾಂಡ್ ಫಿನಾಲೆಗೆ ಇನ್ನು ನಾಲ್ಕು ದಿನ ಮಾತ್ರ ಉಳಿದಿದ್ದು, ಗೌತಮ್, ಕರೀಷ್ಮಾ ತನ್ನಾ, ಅಲಿ ಡಿಂಪಿ ಮಹಾಜನ್, ಪ್ರೀತಂ ಅಂತಿಮ ಸುತ್ತಿನಲ್ಲಿದ್ದಾರೆ. ಈ ಪೈಕಿ ಕರೀಷ್ಮಾ, ಪ್ರೀತಂ ಹಾಗೂ ಗೌತಮ್ ನಡುವೆ ತ್ರಿಕೋನ ಸ್ಪರ್ಧೆ ಇರುವುದಂತೂ ನಿಜ.

ಟ್ವೀಟ್ ಮಾಡಿ ಸುದ್ದಿ ಕೊಟ್ಟ ಸಂಭಾವನಾ

"Yo people..Its me Sambhavna..im back frm bigg boss house..wow wt a feeling..last final chalenger in the house.thank u for all ur support.." ಎಂದು ಜ.28 ಬೆಳಗ್ಗೆ ಟ್ವೀಟ್ ಮಾಡಿದ್ದ ಸಂಭಾವನಾ.

ಚಾಲೆಂಜರ್ಸ್ ಆಗಿ ಮನೆ ಸೇರಿದ್ದ ಸಂಭಾವನಾ

ಚಾಲೆಂಜರ್ಸ್ ಆಗಿ ಮನೆ ಸೇರಿದ್ದ ರಾಹುಲ್ ಮಹಾಜನ್, ಮೇಹಕ್ ಚಾಹಲ್, ಏಜಾಜ್ ಖಾನ್, ಸನಾ ಖಾನ್ ಪೈಕಿ ಕೊನೆಯವರಾಗಿ ಸಂಭಾವನಾ ಮನೆಯಿಂದ ಹೊರನಡೆದಿದ್ದಾರೆ. ಗ್ರ್ಯಾಂಡ್ ಫಿನಾಲೆ ತನಕ ಸಂಭಾವನಾ ಉಳಿಯುತ್ತಾರೆ ಎಂಬ ನಿರೀಕ್ಷೆ ಹುಸಿಯಾಗಿದೆ

ಡಿಂಪಿ ಕಂಡರೆ ಉರಿದು ಬೀಳುತ್ತಿದ್ದ ಸಂಭಾವನಾ

ಡಿಂಪಿ ಮಹಾಜನ್ ಹಾಗೂ ಸಂಭಾವನಾ ಸೇಠ್ ನಡುವಿನ ಕಿತ್ತಾಟ ಅಸಹ್ಯ ಹುಟ್ಟಿಸುವಷ್ಟರ ಮಟ್ಟಿಗೆ ಪ್ರೇಕ್ಷಕರಿಗೂ ಬೋರ್ ಬರಿಸಿತ್ತು. ಇಬ್ಬರು ಬಳಸುತ್ತಿದ್ದ ಭಾಷೆಗೆ ಕಡಿವಾಣ ಹಾಕದ ವಾಹಿನಿ ಮೇಲೂ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು. ಹೀಗಾಗಿ ಸಂಭಾವನಾ ಗ್ರ್ಯಾಂಡ್ ಫಿನಾಲೆ ತನಕ ಉಳಿಯುವುದು ಅನುಮಾನ ಎಂಬುದು ಸ್ಪಷ್ಟವಾಯಿತು.

ತ್ರಿಕೋನ ಸ್ಪರ್ಧೆಯಲ್ಲಿ ಯಾರು ವಿಜೇತರು

ಗ್ರ್ಯಾಂಡ್ ಫಿನಾಲೆಗೆ ನಾಲ್ಕೇ ದಿನ ಇರುವಾಗ ಗೌತಮ್, ಕರೀಷ್ಮಾ ತನ್ನಾ, ಅಲಿ ಡಿಂಪಿ ಮಹಾಜನ್, ಪ್ರೀತಂ ಅಂತಿಮ ಸುತ್ತಿನಲ್ಲಿದ್ದಾರೆ. ಈ ಪೈಕಿ ಕರೀಷ್ಮಾ, ಪ್ರೀತಂ ಹಾಗೂ ಗೌತಮ್ ನಡುವೆ ತ್ರಿಕೋನ ಸ್ಪರ್ಧೆ ಇದೆ. ಈಗಾಗಲೆ ಗೌತಮ್ ಗುಲಾಟಿ ವಿಜೇತ ಎಂದು ಸುದ್ದಿ ಹಬ್ಬುತ್ತಿದೆ.

ಬೈಕ್ ಸವಾರರಿಂದ ಮನೆ ಪ್ರವೇಶ

ವಿಶೇಷ ರೀತಿ ಎಲಿಮಿನೇಷನ್ ಪ್ಲ್ಯಾನ್ ಮಾಡಲಾಗಿದ್ದು, ಬೈಕ್ ಸವಾರರು ಮನೆಯೊಳಗೆ ಬಂದು ಎಲ್ಲಾ ಸ್ಪರ್ಧಿಗಳನ್ನು ಬೈಕ್ ಏರುವಂತೆ ಹೇಳುತ್ತಾರೆ. ಹಾಗೆ ಎಲಿಮಿನೇಟ್ ಆಗುವ ಸ್ಪರ್ಧಿಯನ್ನು ಹೊರಕ್ಕೆ ಕರೆದೊಯ್ಯುತ್ತಾರೆ. ಆ ಬೈಕಿನಲ್ಲಿ ಸಂಭಾವನಾ ಇರುವ ಸಂಭಾವ್ಯತೆ ಬಗ್ಗೆ ಪ್ರೇಕ್ಷಕರಿಗೆ ಕೊನೆಗೆ ತಿಳಿಯುತ್ತದೆ.

ದೈಹಿಕ ಹಲ್ಲೆ, ಜಟಾಪಟಿ ಜೋರು

ಆರ್ ಜೆ ಪ್ರೀತಂ, ಆಲಿ ಖುಲಿ ಮಿರ್ಜಾ ಒಟ್ಟಾಗಿ ಬಿಗ್ ಬಾಸ್ ಸ್ಪರ್ಧೆ ಗೆಲ್ಲುವ ನೆಚ್ಚಿನ ಕುದುರೆ ಗೌತಮ್ ಗುಲಾಟಿ ವಿರುದ್ಧ ಕತ್ತಿ ಮಸೆಯುತ್ತಿದ್ದಾರೆ. ಮಾತಿನ ಚಕಮಕಿ, ಕೈ ಕೈ ಮಿಲಾಯಿಸುವ ಹಂತಕ್ಕೂ ತಲುಪುತ್ತಿದೆ. ಏಣಿಯಾಟದಲ್ಲಿ ಈ ಮೂವರ ಜಟಾಜಟಿ ಬಯಲಾಗಿದೆ.

ಗೌತಮ್ ಗೆಲ್ಲುವ ನಿರೀಕ್ಷೆಯಿದೆ

ಗೌತಮ್ ಗೆಲ್ಲುವ ನಿರೀಕ್ಷೆಯಿದೆ ಇದ್ದರೂ ಕೊನೆ ಕ್ಷಣದಲ್ಲಿ ಏನಾದರೂ ಸಂಭವಿಸಬಹುದು. ಗ್ರ್ಯಾಂಡ್ ಫಿನಾಲೆಗೂ ಮುನ್ನ ಸುದ್ದಿ ಲೀಕ್ ಆಗುವ ಎಲ್ಲಾ ಲಕ್ಷಣಗಳಿವೆ. ಅದರೆ, ಸಲ್ಮಾನ್ ಖಾನ್ ಗ್ರ್ಯಾಂಡ್ ಫಿನಾಲೆಗೆ ಬರುವುದರಿಂದ ಪ್ರೇಕ್ಷಕರು ತಪ್ಪದೇ ಶೋ ನೋಡುತ್ತಾರೆ ಎಂಬ ನಿರೀಕ್ಷೆ ಕಲರ್ಸ್ ವಾಹಿನಿಗಿದೆ.

English summary
Bigg Boss 8's upcoming episode will have Sambhavana Seth getting eliminated from the show most dramatically. Also, Gautam Gulati will be seen getting targeted by RJ Preetam and Ali Quli Mirza.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada