»   » ಬಿಗ್ ಬಾಸ್ 8: ಸನಾ ಖಾನ್ ಔಟ್, ಸಲ್ಮಾನ್ ರೀ ಎಂಟ್ರಿ!

ಬಿಗ್ ಬಾಸ್ 8: ಸನಾ ಖಾನ್ ಔಟ್, ಸಲ್ಮಾನ್ ರೀ ಎಂಟ್ರಿ!

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಕಲರ್ಸ್ ವಾಹಿನಿಯ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ 8 ನಿಂದ ಸಲ್ಮಾನ್ ಖಾನ್ ಹೊರ ನಡೆದಿದ್ದು ಎಲ್ಲರಿಗೂ ಗೊತ್ತೇ ಇದೆ. ನಟಿ, ನೃತ್ಯ ಸಂಯೋಜಕಿ, ನಿರ್ದೇಶಕಿ ಫರ್ಹಾಖಾನ್ ನಿರೂಪಣೆಯಲ್ಲಿ ವೀಕೆಂಡ್ ಕಾ ವಾಹ್ ಈಗ ಹಲ್ಲಾ ಬೋಲ್ ಆಗಿ ಕಂಡು ಬಂದಿದ್ದು, ಎಲಿಮಿನೇಷನ್ ನಲ್ಲಿ ಸನಾ ಖಾನ್ ಅವರನ್ನು ಮನೆಯಿಂದ ಹೊರಕ್ಕೆ ಕರೆಸಿಕೊಳ್ಳಲಾಗಿದೆ. ಈ ನಡುವೆ ಸಲ್ಮಾನ್ ಖಾನ್ ಅವರು ಗ್ರ್ಯಾಂಡ್ ಫಿನಾಲೆ ನಡೆಸಿಕೊಡುವ ಭರವಸೆ ನೀಡಿದ್ದಾರಂತೆ.

ಜನವರಿಯಿಂದ ಗ್ರ್ಯಾಂಡ್ ಫಿನಾಲೆ ತನಕ ಫರ್ಹಾಖಾನ್ ಅವರು ಸಲ್ಮಾನ್ ಸ್ಥಾನವನ್ನು ತುಂಬಲಿದ್ದಾರೆ.ಬಜರಂಗಿ ಭಾಯಿಜಾನ್ ಚಿತ್ರದಲ್ಲಿ ನಿರತರಾಗಿರುವುದರಿಂದ ಬಿಗ್ ಬಾಸ್ ಶೋನಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದು ಕಲರ್ಸ್ ವಾಹಿನಿ ವಾಹಿನಿ ಘೋಷಿಸಿತ್ತು.

ಈಗ ಸಲ್ಮಾನ್ ಖಾನ್ ಅವರು ವಿಡಿಯೋ ಸಂದೇಶ ಕಳಿಸಿ ಗ್ರ್ಯಾಂಡ್ ಫಿನಾಲೆಗೆ ಹಾಜರಿರುತ್ತೇನೆ ಹಾಗೂ ಮುಂದಿನ ಸರಣಿ ಬಿಗ್ ಬಾಸ್ 9ರಲ್ಲಿ ನಿರೂಪಣೆ ಮಾಡುತ್ತೇನೆ ಎಂದಿದ್ದಾರೆ. ಇದರಿಂದ ಸಲ್ಲೂ ಅಭಿಮಾನಿಗಳು ಸಹಜವಾಗೇ ಖುಷಿಯಾಗಿದ್ದಾರೆ. [ರಿಯಾಲಿಟಿ ಶೋ 'ಸಂಭಾವನೆ,' ಸಲ್ಲೂ ಬಿಗ್ ಬಾಸ್]

ಸಿನಿಮಾ ಶೂಟಿಂಗ್ ಜೊತೆಗೆ ಬಿಗ್ ಬಾಸ್ ಜೊತೆ ತಗಲಾಕಿಕೊಂಡಿದ್ದ ವಿವಾದಗಳಿಂದ ಸಲ್ಮಾನ್ ಗೆ ಬೇಸರವಾಗಿತ್ತು. ವಾರದ ಪೂರ್ತಿ ಎಪಿಸೋಡು ನೋಡುವಷ್ಟು ಸಮಯ, ತಾಳ್ಮೆ ಇಲ್ಲದ್ದಾಗಿತ್ತು. ಹೀಗಾಗಿ ಸದ್ಯಕ್ಕೆ ಬೇರೆ ನಿರೂಪಕರನ್ನು ಹುಡುಕೊಳ್ಳುವಂತೆ ಸಲ್ಮಾನ್ ಅವರು ಸಲಹೆ ನೀಡಿದ್ದರು.

ಅದರಂತೆ, ಅಕ್ಷಯ್ ಕುಮಾರ್, ರಣವೀರ್ ಸಿಂಗ್ ಅವರನ್ನು ಓಲೈಸಲು ಯತ್ನಿಸಿದ ಕಲರ್ಸ್ ವಾಹಿನಿ ಕೊನೆಗೆ ಫರ್ಹಾ ಖಾನ್ ಅವರಿಗೆ ಜವಾಬ್ದಾರಿ ವಹಿಸಿದೆ. ಸಲ್ಮಾನ್ ಮತ್ತೊಮ್ಮೆ ತಮ್ಮ ಮನಸ್ಸು ಬದಲಿಸಿ ಶೋಗೆ ಬರುತ್ತಿರುವುದರಿಂದ ಕಲರ್ಸ್ ವಾಹಿನಿ ಕೂಡಾ ಟಿಆರ್ ಪಿ ಗೇಮ್ ನಲ್ಲಿ ಮುಂದೆ ಜಿಗಿಯುವ ಕನಸು ಕಾಣುತ್ತಿದೆ..

ಸನಾ ಖಾನ್ ಹೊರಕ್ಕೆ ರಾಹುಲ್ ಮಹಾಜನ್ ಸೇಫ್

ಕನ್ನಡದ ಕೂಲ್ ಚಿತ್ರದಲ್ಲಿ ನಟಿಸಿರುವ ಸಲ್ಮಾನ್ ಆಪ್ತ ಬಳಗಕ್ಕೆ ಸೇರಿರುವ ಸನಾ ಖಾನ್ ಪ್ರೇಕ್ಷಕರ ಕೃಪೆ ಸಿಗದೆ ಮನೆ ತೊರೆದಿದ್ದಾರೆ. ಸಂಭಾವಾನ, ರಾಹುಲ್ ಮಹಾಜನ್ ಹಾಗೂ ಏಜಾಜ್ ಖಾನ್ ಹಾಗೂ ಮೇಹಕ್ ಚಾಹಲ್ ಅವರು ಈ ಮೂಲಕ ಸೇಫ್ ಆಗಿದ್ದಾರೆ.

ಅದರೆ,ವಾರದ ಚಾಂಪಿಯನ್ ಎನಿಸಿರುವ ಸನಾ ಗ್ರ್ಯಾಂಡ್ ಫಿನಾಲೆ ಗೆ ಇಮ್ಯೂನಿಟಿ ಸಿಕ್ಕಿತ್ತು. ಹೀಗಾಗಿ ಬಯಸಿದರೆ ಮತ್ತೆ ರೀಎಂಟ್ರಿ ಪಡೆಯುವುದು ಸುಲಭ.

ಸಲ್ಮಾನ್ ಖಾನ್ ಹೊರ ಹೋಗಲು ಕಾರಣ

* ಬಜರಂಗಿ ಭೈಜಾನ್ ಸೇರಿದಂತೆ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿ.
* ಬಿಗ್ ಬಾಸ್ 8ರಲ್ಲಿನ ವಿವಾದಗಳಿಂದ ಮನನೊಂದಿದ್ದ ಸಲ್ಮಾನ್ ಖಾನ್
* ಆರೋಗ್ಯ ಹಾಗೂ ಕೋರ್ಟ್ ಕೇಸಿನಿಂದ ಬಿಗ್ ಬಾಸ್ ಕಡೆ ಸರಿಯಾದ ಏಕಾಗ್ರತೆ ನೀಡಲು ಆಗುತ್ತಿರಲಿಲ್ಲ. ಹೀಗಾಗಿ ಕೆಲಕಾಲ ಶೋನಿಂದ ಹೊರ ಉಳಿದಿದ್ದರು.

ಕುಸಿದ ಟಿಆರ್ ಪಿ, ಸಲ್ಮಾನ್ ಗೆ ಬುಲಾವ್

ಲಭ್ಯ ಮಾಹಿತಿ ಪ್ರಕಾರ ವೀಕೆಂಡ್ ನಲ್ಲಿ ರಾಕೆಟ್ ನಂತೆ ಏರಬೇಕಿದ್ದ ಟಿಆರ್ ಪಿ ಕುಸಿಯ ತೊಡಗಿದ್ದು, ಕಲರ್ಸ್ ವಾಹಿನಿಯನ್ನು ತಲ್ಲಣಗೊಳಿಸಿದೆ. ಸಲ್ಮಾನ್ ಬದಲಿಗೆ ಫರ್ಹಾ ಬಿಗ್ ಬಾಸ್ ಹಲ್ಲಾ ಬೋಲ್ ನಡೆಸಿದರೂ ಪ್ರೇಕ್ಷಕರು ಕ್ಯಾರೆ ಎಂದಿಲ್ಲ. ಹೀಗಾಗಿ ಮತ್ತೆ ಸಲ್ಮಾನ್ ಗೆ ಬುಲಾವ್ ಕಳಿಸಲಾಗಿದೆಯಂತೆ

ಮನೆಯಲ್ಲಿ ಉಳಿದ 9 ಜನ ಸ್ಪರ್ಧಿಗಳು

ಸನಾ ಖಾನ್ ನಿರ್ಗಮನದ ನಂತರ ಶೋನಲ್ಲಿ ಗೌತಮ್ ಗುಲಾಟೀ, ಕರಿಷ್ಮಾ ತನ್ನಾ, ಆರ್ ಜೆ ಪ್ರೀತಂ, ಅಲಿ ಮಿರ್ಜಾ, ಡಿಂಪಿ ಮಹಾಜನ್, ಮೆಹಕ್ ಛಾಹಲ್, ಸಂಭವನಾ ಸೇಠ್ ಹಾಗೂ ರಾಹುಲ್ ಮಹಾಜನ್ ಮನೆಯಲ್ಲಿ ಉಳಿದಿದ್ದಾರೆ. ಇವೆರೆಲ್ಲರ ಜೊತೆ ಉಪೇನ್ ಪಟೇಲ್ ಕೂಡಾ ಪ್ರಮುಖ ಸ್ಪರ್ಧಿಯಾಗಿದ್ದಾರೆ.

ಬಿಗ್ ಬಾಸ್ ಗ್ಯ್ರಾಂಡ್ ಫಿನಾಲೆ ನಂತರ ಏನು?

ಬಿಗ್ ಬಾಸ್ ಗ್ಯ್ರಾಂಡ್ ಫಿನಾಲೆ ಭರ್ಜರಿಯಾಗಿ ಮುಗಿಸುವುದರ ಜೊತೆಗೆ ಮುಂಬರುವ ಚಕ್ರವರ್ತಿ ಅಶೋಕ್ ಸಾಮ್ರಾಟ್ ಸೀರಿಯಲ್ ಗೆ ಒಳ್ಳೆ ಬಿಲ್ಡ್ ಅಪ್ ಕೊಡಲು ಕಲರ್ಸ್ ವಾಹಿನಿ ಸಜ್ಜಾಗಿದೆ. ಬಿಗ್ ಬಾಸ್ 30 ಎಪಿಸೋಡ್ ಮತ್ತೆ ವಿಸ್ತರಣೆಗೊಂಡಿದ್ದರಿಂದ ಅಶೋಕ ಬರುವುದು ತಡವಾಗಿದೆ. ಹೀಗಾಗಿ ಕಲರ್ಸ್ ವಾಹಿನಿ ಭಾರಿ ಒತ್ತಡದಲ್ಲಿದೆ.

ಸಲ್ಲೂ ಬಂದರೆ ಇನ್ನಿಲ್ಲ ತೊಂದರೆ : ಫ್ಯಾನ್ಸ್ ಖುಷಿ

#BiggBossHallaBol #News Confirmed : Salman Khan will host Bigg Boss 9 & he will attend the Grand Finale on 31st Jan (Sources). ಎಂಬ ಟ್ವೀಟ್ ಗಳು ಹರಿದಾಡತೊಡಗಿದಂತೆ ಸಲ್ಮಾನ್ ಖಾನ್ ಆಗಮನದ ಸುದ್ದಿ ಪ್ರೇಕ್ಷಕರಿಗೆ ಖುಷಿ ತಂದಿದೆ.

ಮನೆ ಮಕ್ಕಳಿಗೆ ಪಾಠ ಮಾಡಿದ ಮಹೇಶ್ ಭಟ್

ಬಿಗ್ ಬಾಸ್ 8 ಸ್ಪರ್ಧಿಗಳಿಗೆ ಪಾಠ ಮಾಡಿದ ನಿರ್ದೇಶಕ ಮಹೇಶ್ ಭಟ್, ಹಲ್ಲಾ ಬೋಲ್ ಎಪಿಸೋಡ್ ನಲ್ಲೂ ಕಾಣಿಸಿಕೊಂಡರು.

English summary
Bigg Boss 8's latest elimination has Sana Khan getting evicted from the show. Bigg Boss Weekend ka Halla Bol had Farah Khan asking Sana to join her on stage, announcing the end of her Bigg Boss journey yet again.Salman will be reportedly returning back to Halla Bol Bigg Boss 8 Grand Finale. The other good news is said to be Salman hosting the next season - Bigg Boss 9!
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada