For Quick Alerts
  ALLOW NOTIFICATIONS  
  For Daily Alerts

  ಬಿಗ್ ಬಾಸ್ ಮನೆಗೆ ಏಳು ಜೋಡಿ, ಸಲ್ಮಾನ್ ಮತ್ತೆ ಮೋಡಿ

  By ಜೇಮ್ಸ್ ಮಾರ್ಟಿನ್
  |

  ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ 9ನೇ ಆವೃತ್ತಿ ಕಲರ್ಸ್ ವಾಹಿನಿಯಲ್ಲಿ ಭರ್ಜರಿಯಾಗಿ ಆರಂಭಗೊಂಡಿದೆ. ಹೊಸ ಲುಕ್ ನಲ್ಲಿ ಬಿಗ್ ಬಾಸ್ ಮನೆ ಕಣ್ಮನ ಸೆಳೆಯುತ್ತಿದೆ. ಸಲ್ಮಾನ್ ಖಾನ್ ಅವರು 'ಡಬ್ಬಲ್ ಟ್ರಬಲ್' ಗೇಮ್ ಆಡಲು ಏಳು ಜೋಡಿಗಳನ್ನು ಮಾಡಿ ಮನೆಯೊಳಗೆ ಕಳಿಸಿಕೊಟ್ಟಿದ್ದಾರೆ. ಎಂದಿನಂತೆ ಸಲ್ಮಾನ್ ಲವಲವಿಕೆಯ ನಿರೂಪಣೆ ಮೂಲಕ ಗಮನ ಸೆಳೆದಿದ್ದಾರೆ.

  ನಿರೀಕ್ಷೆಯಂತೆ ಅಂಕಿತ್ ಗೇರಾ, ರೂಪಲ್ ತ್ಯಾಗಿ, ದಿಗಂಗನಾ ಸೂರ್ಯವಂಶಿ, ರೊಶೆಲ್ ಮಾರಿಯಾ ರಾವ್ ಹಾಗೂ ಅಮನ್ ವರ್ಮ ಅವರು ಮನೆ ಸೇರಿದ್ದಾರೆ. ರಿಷಬ್ ಸಿನ್ಹಾ, ನಜೀಂ ಖಾನ್, ನಕ್ಷತ್ರಾ ಬಾಗ್ವೆ ಹೆಸರು ಕೇಳಿ ಬಂದರೂ ರಿಮಿ ಸೇನ್, ವಿಜೆ ಕೀತ್ ಎಂಟ್ರಿ ಅಚ್ಚರಿ ಮೂಡಿಸಿದೆ.[ಬಿಗ್ ಬಾಸ್ ಗೆ ನೀಲಿ ತಾರೆ ಬರ್ತಿಲ್ಲ? ಮತ್ತೇ ಇನ್ಯಾರು ಎಂಟ್ರಿ?]

  ಸ್ಟಾರ್ ಆದ ಪ್ರಿನ್ಸ್ ನರುಲಾ: ಸಾಲು ಸಾಲು ಮಹಿಳಾ ಸ್ಪರ್ಧಿಗಳು ನರುಲಾರನ್ನು ರಿಜೆಕ್ಟ್ ಮಾಡಲು ಅವರ ಇಂಟ್ರೋ ವಿಡಿಯೋದಲ್ಲಿದ್ದ ಅವರ ಬಿರುಸಾದ ದನಿ ಕಾರಣ ಇರಬಹುದು ಎಂದು ಸಲ್ಮಾನ್ ತಮ್ಮ ದನಿಯಲ್ಲಿ ನಿರೂಪಿಸಿದರು. ಈ ರೀತಿ ಮೆದು ದನಿಯಲ್ಲಿ ತಮ್ಮ ಬಗ್ಗೆ ಹೇಳಿದ್ದರೆ ಅವರನ್ನು ಮೊದಲೇ ಯಾರಾದರೂ ಆಯ್ಕೆ ಮಾಡುತ್ತಿದ್ದರು ಎಂದರು.

  ಕಲರ್ಸ್ ವಾಹಿನಿಯಲ್ಲಿ ಅಕ್ಟೋಬರ್ 11ರಿಂದ ಬಿಗ್ ಬಾಸ್ 9 ಪ್ರಸಾರ ಅಧಿಕೃತವಾಗಿ ಆರಂಭಗೊಂಡಿದೆ. ಸಲ್ಮಾನ್ ಜೊತೆ ವಿಕೇಂಡ್ ಶೋ ರಾತ್ರಿ 9 ಗಂಟೆಗೆ ಆರಂಭಗೊಳ್ಳಲಿದೆ. ಇನ್ನೂ ಸ್ಪರ್ಧಿಗಳು ಜೋಡಿಯಾಗಿ ಮನೆಯೊಳಗೆ ಹೇಗೆ ಇರುತ್ತಾರೆ ಎಂಬ ಆಟವನ್ನು ಪ್ರತಿದಿನ ರಾತ್ರಿ 10.30 ರ ನಂತರ ಕಾಣಬಹುದು...

  ಕುತೂಹಲ ಮೂಡಿಸಿದ ಸ್ಪರ್ಧಿಗಳ ಎಂಟ್ರಿ

  ಕುತೂಹಲ ಮೂಡಿಸಿದ ಸ್ಪರ್ಧಿಗಳ ಎಂಟ್ರಿ

  ಆರಂಭದಲ್ಲೇ ಸಲ್ಮಾನ್ ಖಾನ್ ಈ ಸೀಸನ್ ನಿರೂಪಣೆ ಬಗ್ಗೆ ಇದ್ದ ಡೌಟ್ ಕ್ಲಿಯರ್ ಮಾಡಿದರು. ನಂತರ ಮನೆಯ ಹೊಸಲುಕ್, ಬಾಲ್ಕನಿ ನೋಡಿ ಆನಂದಿಸಿದರು. ನಂತರ ಡೈಶಿ ಶಾ, ಕಳೆದ ಬಾರಿ ಸ್ಪರ್ಧಿ ಎಲ್ಲಿ ಅವ್ರಾಮ್ ಜೊತೆ ಹೆಜ್ಜೆ ಹಾಕಿದರು. ಈ ಬಾರಿ ಸ್ಪರ್ಧಿಗಳಿಗೆ ತಮ್ಮ ಜೋಡಿ ಆಯ್ಕೆಯ ಅವಕಾಶವಿತ್ತು. ಎಲ್ಲವನ್ನು ಮಾಧ್ಯಮ ಪ್ರತಿನಿಧಿಗಳು ವೀಕ್ಷಿಸಿ ತಕ್ಷಣವೇ ಪ್ರಶ್ನಿಸುವ ಅವಕಾಶವನ್ನು ಕಲ್ಪಿಸಲಾಗಿತ್ತು.

  ದಿಗಂಗನಾ ಸೂರ್ಯವಂಶಿ ಹಾಗೂ ರೂಪಲ್ ತ್ಯಾಗಿ

  ದಿಗಂಗನಾ ಸೂರ್ಯವಂಶಿ ಹಾಗೂ ರೂಪಲ್ ತ್ಯಾಗಿ

  ಸ್ವಲ್ಪ ಹೆಚ್ಚಾಗೇ ಇಂಟ್ರೋ ಪಡೆದುಕೊಂಡ ಪ್ರಿನ್ಸೆಸ್ ದಿಗಂಗನಾ ಸೂರ್ಯವಂಶಿಗೆ ಸಪ್ನೆ ಸುಹಾನೆ ಲಡಕ್ ಪನ್ ಕೆ ಖ್ಯಾತಿಯ ರೂಪಲ್ ತ್ಯಾಗಿ ಜೋಡಿಯಾದರು. ಆದ್ರೆ, ಇಬ್ಬರು ಕೂಡಾ ಎಂಟಿವಿ ರೋಡಿಸ್ ಎಸ್ಕಕ್ಸ್ 2 ವಿನ್ನರ್ ಪ್ರಿನ್ಸ್ ನರೂಲಾರನ್ನು ರಿಜೆಕ್ಟ್ ಮಾಡಿದ್ದರು.

  ಅಮನ್ ವರ್ಮ ಹಾಗೂ ಕಿಶ್ವಾರ್ ಮರ್ಚೆಂಟ್

  ಅಮನ್ ವರ್ಮ ಹಾಗೂ ಕಿಶ್ವಾರ್ ಮರ್ಚೆಂಟ್

  ಬಾಯ್ ಫ್ರೆಂಡ್ ಸುಯಾಶ್ ರಾಯ್ ಜೊತೆ ಬಂದ ಕಿಶ್ವಾರ್ ಗೆ ಬೇರೆ ಒಬ್ಬ ಸ್ಪರ್ಧಿಯನ್ನು ಜೋಡಿಯಾಗಿ ಪಡೆಯುವಂತೆ ಸಲ್ಲೂ ಸೂಚಿಸಿದರು. ಕಿಶ್ವಾರ್ ಕೂಡಾ ಪ್ರಿನ್ಸ್ ನರುಲಾರನ್ನು ರಿಜೆಕ್ಟ್ ಮಾಡಿ ಹಿರಿಯ ಕಿರುತೆರೆ ನಟ ಅಮನ್ ವರ್ಮರನ್ನು ಆಯ್ಕೆ ಮಾಡಿಕೊಂಡರು. ಈ ನಡುವೆ ಸುಯ್ಯಾಶ್ ತನ್ನ ಸರದಿಗಾಗಿ ಕಾಯುತ್ತಾ ಕೂರಬೇಕಾಯಿತು. ಜೋಡಿಗಳ ಪೈಕಿ ಅಮನ್ ಹಾಗೂ ಕಿಶ್ವಾರ್ ಅಗತ್ಯಕ್ಕಿಂತ ಹೆಚ್ಚು ಪ್ರಬುದ್ಧರಂತೆ, ಹಾಸ್ಯಪ್ರಜ್ಞೆ ಉಳ್ಳವರಂತೆ ವರ್ತಿಸುತ್ತಿದ್ದರು ಅಥವಾ ನಾಟಕ ಶುರು ಮಾಡಿಕೊಂಡಿದ್ದರು.

  ಸುಯ್ಯಾಶ್ ರಾಯ್ ಹಾಗೂ ರಿಮಿ ಸೇನ್

  ಸುಯ್ಯಾಶ್ ರಾಯ್ ಹಾಗೂ ರಿಮಿ ಸೇನ್

  ಕುಣಿತದೊಂದಿಗೆ ಎಂಟ್ರಿಕೊಟ್ಟ ನಟಿ ರಿಮಿ ಸೇನ್ ಕೂಡಾ ಪ್ರಿನ್ಸ್ ನರುಲಾರನ್ನು ತಿರಸ್ಕರಿಸಿದ ಮೇಲೆ ಇದ್ದ ಮತ್ತೊಬ್ಬ ಸ್ಪರ್ಧಿ ಸುಯ್ಯಾಶ್ ರಾಯ್ ಅವರನ್ನು ಆಯ್ಕೆ ಮಾಡಿಕೊಂಡರು. ನಟನೆಯಿಂದ ದೂರವುಳಿದಿದ್ದ ರಿಮಿಗೆ ಸುಯ್ಯಾಶ್ ಹಾಗೂ ಪ್ರಿನ್ಸ್ ಇಬ್ಬರೂ ಅನಾಮಿಕರಾಗಿದ್ದು, ರಿಯಾಲಿಟಿ ಶೋನಲ್ಲಿ ಹೇಗೆ ಆಟವಾಡುತ್ತಾರೆ ಕಾದುನೋಡಬೇಕಿದೆ.

  ಯುವಿಕಾ ಚೌಧರಿ ಹಾಗೂ ವಿಕಾಶ್ ಭಲ್ಲಾ

  ಯುವಿಕಾ ಚೌಧರಿ ಹಾಗೂ ವಿಕಾಶ್ ಭಲ್ಲಾ

  ಈ ಜೋಡಿಯ ಮಂದಹಾಸಕ್ಕೆ ಎಲ್ಲರೂ ಮಾರು ಹೋದರು. ಕನ್ನಡಲ್ಲಿ ಗಣೇಶ್ ಜೊತೆ 'ಈ ಸನಿಹಕ್ಕೆ ಬಂದರೆ ಹೃದಯದ ಗತಿಯೇನು...' ಎಂದು ಮಳೆಯಲಿ ಜೊತೆಯಲಿ ಚಿತ್ರದಲ್ಲಿ ನಟಿಸಿದ್ದ ಯುವಿಕಾ ಚೌಧರಿ ಹಾಗೂ ಮಾಜಿ ಗಾಯಕ ವಿಕಾಸ್ ಭಲ್ಲಾ ಜೋಡಿ ಎಲ್ಲರ ಗಮನ ಸೆಳೆಯಿತು. ಯುವಿಕಾ ಕೂಡಾ ಪ್ರಿನ್ಸ್ ನರುಲಾರನ್ನು ರಿಜೆಕ್ಟ್ ಮಾಡಿದ್ದರು.

  ರೊಶೆಲ್ ರಾವ್-ಪ್ರಿನ್ಸ್ ನರುಲಾ

  ರೊಶೆಲ್ ರಾವ್-ಪ್ರಿನ್ಸ್ ನರುಲಾ

  ಮಂದನಾ ಕರಿಮಿ ಹಾಗೂ ರೊಶೆಲ್ ರಾವ್ ಒಟ್ಟಿಗೆ ಬಂದರೂ ಇಬ್ಬರೂ ನರುಲಾರನ್ನು ಮತ್ತೆ ರಿಜೆಕ್ಟ್ ಎಂದರೂ ಬೇರೆ ವಿಧಿ ಇಲ್ಲದ್ದಂಥ ಪರಿಸ್ಥಿತಿ ರೊಶೆಲ್ ಗೆ ಸಿಕ್ಕಿತು. ಈ ಬಾರಿ ನರುಲಾಗೆ ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡುವ ಅವಕಾಶವನ್ನು ಸಲ್ಮಾನ್ ನೀಡಿದರು. ರೊಶೆಲ್ ರನ್ನು ನರುಲಾ ಆಯ್ಕೆ ಮಾಡಿಕೊಂಡರು. ಸಹಜವಾಗಿ ರೊಶೆಲ್ ಗೆ ಇದು ಇಷ್ಟವಾಗಲಿಲ್ಲ.

  ಮಂದನಾ ಕರಿಮಿ ಹಾಗೂ ಕೀತ್ ಸಿಕ್ವೇರಾ

  ಮಂದನಾ ಕರಿಮಿ ಹಾಗೂ ಕೀತ್ ಸಿಕ್ವೇರಾ

  ಪ್ರಿನ್ಸ್ ಜೋಡಿಯಾಗಲು ಒಪ್ಪದ ಮಂದನಾಗೆ ವಿಜೆ ಕೀತ್ ಸಿಕ್ವೇರಾ ಸಿಕ್ಕರೂ ಒಪ್ಪಿಗೆಯಾಗಿರಲಿಲ್ಲ. ಈಗಾಗಲೇ ಮನೆ ಪ್ರವೇಶಿಸಿದ್ದ ನಿರೂಪಕಿ ರೊಶೆಲ್ ಅವರ ಮಾಜಿ ಪ್ರಿಯಕರ ಕೀತ್ ಜೊತೆ ಮನೆ ಪ್ರವೇಶಿಸಬೇಕಾಗಿತ್ತು. ನನಗೆ ನನ್ನ ಎತ್ತರಕ್ಕಿಂತ ಕುಳ್ಳಗಿರುವ ಸ್ಪರ್ಧಿಗಳಿದ್ದರೆ ಚೆನ್ನ ಎಂದು ಮಂದನಾ ಹೇಳಿದ್ದನ್ನು ಆಜ್ ತಕ್, ಇಂಡಿಯಾ ಟಿವಿ ಪ್ರತಿನಿಧಿಗಳು ಪ್ರಶ್ನಿಸಿದರು. ಆದರೆ, ಇದಕ್ಕೆ ತಕ್ಕ ಉತ್ತರ ಮಂದನಾ ನೀಡಿದರು.

  ಅಂಕಿತ್ ಗೇರಾ ಹಾಗೂ ಅರವಿಂದ್ ವೆಗ್ಡಾ

  ಅಂಕಿತ್ ಗೇರಾ ಹಾಗೂ ಅರವಿಂದ್ ವೆಗ್ಡಾ

  ಈ ಬಾರಿಯ 'ಕ್ಯಾಸನೋವಾ' ಎಂದೇ ಕರೆಯಲ್ಪಡುತ್ತಿರುವ ನಟ ಅಂಕಿತ್ ಗೇರಾರಿಗೆ ಸಲ್ಮಾನ್ ಸರಿಯಾದ ಟಾಂಗ್ ನೀಡಿದರು. ಶೋಗೂ ಮುನ್ನ ಮೂರ್ನಾಲ್ಕು ಹುಡುಗಿಯರ ಜೊತೆ ಡೇಟಿಂಗ್ ಮುಗಿಸಿಕೊಂಡು ಇಲ್ಲಿ ಫ್ಲರ್ಟ್ ಮಾಡಲು ಹೊಸಬರಿಗಾಗಿ ಕಾದಿದ್ದ ಅಂಕಿತ್ ಗೆ ಸಿಕ್ಕಿದ್ದು ಬೋಳು ತಲೆಯ ಗಾಯಕ ಅರವಿಂದ್. ಅಂಕಿತ್ ಗೆ ಮಾಧ್ಯಮದವರು ಇದೇ ಪ್ರಶ್ನೆಯನ್ನು ಕೇಳಿದಾಗ, ರಿಯಾಲಿಟಿ ಶೋಗೆ ಬಂದ ಮೇಲೆ ಬೇರೆಯದ್ದೇ ಆಟ ಆಡುವುದಾಗಿ ಹೇಳಿದರು.

  English summary
  Bigg Boss 9 Double Trouble has finally started and our host has revealed the final 14 contestants who will be in the house competing for this season's trophy.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X