»   » ಬಿಗ್ ಬಾಸ್: ಅಚ್ಚರಿ ಮೂಡಿಸಿದ ಮೊದಲ ನಾಮಿನೇಷನ್

ಬಿಗ್ ಬಾಸ್: ಅಚ್ಚರಿ ಮೂಡಿಸಿದ ಮೊದಲ ನಾಮಿನೇಷನ್

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಬಿಗ್ ಬಾಸ್ 9ರ ಮೊದಲ ದಿನದಿಂದಲೇ ಪ್ರೇಕ್ಷಕರಿಗೆ ಅಚ್ಚರಿ ಸನ್ನಿವೇಶಗಳು ಕಾಣ ಸಿಗುತ್ತಿದೆ. ಹೆಚ್ಚು ಕಿರಕ್ ಮಾಡದ, ಗುಂಪುಗಾರಿಕೆ ಗೊತ್ತಿರದ ಸ್ಪರ್ಧಿಗಳನ್ನು ಕಂಡು ಇದು ಬಿಗ್ ಬಾಸ್ ಶೋನೇನಾ ಎಂದು ಅನುಮಾನ ಬರುವಂತಿದೆ. ಅದರೆ, ಸ್ಪರ್ಧಿಗಳ ಪೈಕಿ ಸಾಫ್ಟ್, ಸೈಲಂಟ್ ಎನಿಸಿಕೊಂಡಿದ್ದ ಜೋಡಿಯನ್ನು ನಾಮಿನೇಟ್ ಮಾಡಿದ್ದು ಬಿಟ್ಟರೆ ಸಪ್ಪೆ ಸಪ್ಪೆ ಎಪಿಸೋಡುಗಳು ಮುಂದುವರೆದಿದೆ.

ಅರವಿಂದ್ ನೆಗ್ಡಾ ಗೊರಕೆ ರಗಳೆ, ರೇಜಿಗೆ ಹುಟ್ಟಿಸುವ ಅಂಕಿತ್ ಮಾತುಗಳ ನಡುವೆ ಸೈಲಂಟ್ ಪೇರ್ ಎನಿಸಿಕೊಂಡ ಯುವಿಕಾ ಚೌಧರಿ ಹಾಗೂ ವಿಕಾಸ್ ಭಲ್ಲಾ ಕೂಡಾ ನಾಮಿನೇಟ್ ಆಗಿದ್ದು ಪ್ರೇಕ್ಷಕರಿಗೆ ಕೊಂಚ ಅಚ್ಚರಿ ಮೂಡಿಸಿತು.[ಬಿಗ್ ಬಾಸ್ ಮನೆ ಹೊಕ್ಕ ಮೊದಲ ದಿನವೇ ಮದುವೆ ಫಿಕ್ಸ್]

Bigg Boss 9 First Nominations

ಈಗ ನಾಮಿನೇಟ್ ಆದ ಸ್ಪರ್ಧಿಗಳನ್ನು ಪ್ರೇಕ್ಷಕರೇ ತಮ್ಮ ಎಸ್ ಎಂಎಸ್ ಮೂಲಕ ಕಾಪಾಡಬೇಕಾಗುತ್ತದೆ. ಸಲ್ಮಾನ್ ಖಾನ್ ನಿರೂಪಣೆಯ ಬಿಗ್ ಬಾಸ್ ಶೋನಲ್ಲಿ ಅತಿ ಹೆಚ್ಚು ನಾಮಿನೇಷನ ಪಡೆದು ಅತಿ ಕಡಿಮೆ ಎಸ್ಎಂಎಸ್ ಮತ ಪಡೆದ ಸ್ಪರ್ಧಿ ಮನೆಯಿಂದ ಹೊರಕ್ಕೆ ಹೋಗಬೇಕಾಗುತ್ತದೆ.

ಸದ್ಯಕ್ಕೆ ಸುಯ್ಯಶ್-ರಿಮಿ ಸೇನ್, ದಿಗಂಗನಾ-ರೂಪಲ್ ತ್ಯಾಗಿ, ವಿಕಾಸ್ ಭಲ್ಲಾ ಹಾಗೂ ಯುವಿಕಾ, ಅರವಿಂದ್ ಹಾಗೂ ಅಂಕಿತ್ ಜೋಡಿ ಡೇಂಜರ್ ಜೋನ್ ನಲ್ಲಿದೆ. ಬಿಗ್ ಬಾಸ್ ನ ಡಬ್ಬಲ್ ಟ್ರಬಲ್ ನಿಂದ ಮೊಟ್ಟ ಮೊದಲು ಯಾವ ಸ್ಪರ್ಧಿ ಹೊರಬೀಳುತ್ತಾರೆ ಎಂಬುದನ್ನು ತಿಳಿಯಲು ವೀಕೆಂಡ್ ತನಕ ಕಾಯಬೇಕು. ಸಲ್ಮಾನ್ ಖಾನ್ ಜೊತೆ ವಿಕೇಂಡ್ ಮಸ್ತಿ ರಾತ್ರಿ 9ಕ್ಕೆ ಶುರುವಾಗಲಿದೆ. ಉಳಿದಂತೆ ಪ್ರತಿದಿನ 10.30ಕ್ಕೆ ಸ್ಪರ್ಧಿಗಳ ಆಟ ನೋಡಬಹುದು.

English summary
Bigg Boss 9 Double Trouble's latest episode saw its first nominations taking place. The contestants, who are living in pairs, got nominated in pairs as well. Whether they will get eliminated together or not, is yet to be seen in the weekend episode.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada