Just In
- 1 hr ago
ಬಾಯ್ ಫ್ರೆಂಡ್ ನನ್ನು ತಬ್ಬಿಕೊಂಡಿದ್ದಾರಾ ಕತ್ರಿನಾ ಕೈಫ್; ಇದು ಆ ಸ್ಟಾರ್ ನಟನೇ ಎನ್ನುತ್ತಿದ್ದಾರೆ ನೆಟ್ಟಿಗರು
- 3 hrs ago
ತಮನ್ನಾ ಮತ್ತು ವಿರಾಟ್ ಕೊಹ್ಲಿಗೆ ಕೇರಳ ಹೈಕೋರ್ಟ್ ನೋಟಿಸ್
- 3 hrs ago
ಕಿಶೋರ್ ಮತ್ತು ಹರಿಪ್ರಿಯಾ ನಟನೆಯ 'ಅಮೃತಮತಿ' ಚಿತ್ರಕ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿ
- 12 hrs ago
ಡ್ರಗ್ಸ್ ಪ್ರಕರಣ: ಇಂದ್ರಜಿತ್ ಲಂಕೇಶ್ ಗೆ ಮತ್ತೆ ಬುಲಾವ್ ನೀಡಿದ ಸಿಸಿಬಿ
Don't Miss!
- News
ನಾಗರಹೊಳೆಯಲ್ಲಿ ಆರು ಹೊಸ ಜಾತಿಯ ಪಕ್ಷಿಗಳು ಪತ್ತೆ
- Automobiles
ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಮೊದಲ ಬಾರಿಗೆ ಪ್ರದರ್ಶನಗೊಂಡ ಟಾಟಾ ನೆಕ್ಸಾನ್ ಇವಿ
- Finance
ಗರಿಷ್ಠ ಮಟ್ಟದಿಂದ 7500 ರು. ದೂರದಲ್ಲಿರುವ ಚಿನ್ನದ ಬೆಲೆ ಸತತ 5ನೇ ದಿನ ಇಳಿಕೆ
- Sports
ಆಲ್ರೌಂಡರ್ ವಿಜಯ್ ಶಂಕರ್ ದಾಂಪತ್ಯದ ಇನ್ನಿಂಗ್ಸ್ ಆರಂಭ
- Lifestyle
ಕರ್ನಾಟಕ ಶೈಲಿಯ ಅವರೆಕಾಳು ಚಿತ್ರಾನ್ನ ನಿಮಗಾಗಿ
- Education
BEL Recruitment 2021: 22 ಸರಂಕ್ಷಣೆ ಅಧಿಕಾರಿ, ಕಿರಿಯ ಮೇಲ್ವಿಚಾರಕರು ಮತ್ತು ಹವಿಲ್ದಾರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬಿಗ್ ಬಾಸ್ ಕನ್ನಡ 7ನೇ ಆವೃತ್ತಿಯಲ್ಲಿ ಇವರೆಲ್ಲ ಇದ್ದರೆ ಚೆಂದವಂತೆ.!
ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್. ಕಳೆದ ಆರು ಆವೃತ್ತಿಯಲ್ಲಿ ಯಶಸ್ವಿಯಾಗಿ ಮುಗಿಸಿರುವ ಕಲರ್ಸ್ ಕನ್ನಡ ಈಗ ಏಳನೇ ಆವೃತ್ತಿಯ ತಯಾರಿಯಲ್ಲಿದೆ. ಶೋ ಆರಂಭಕ್ಕೆ ತುಂಬಾ ಸಮಯವಿದೆ. ಆದರೆ ಈಗಲೇ ಸ್ಪರ್ಧಿಗಳ ಬಗ್ಗೆ ಚರ್ಚೆ, ಕುತೂಹಲ ಶುರುವಾಗಿದೆ.
ಈ ಸಲ ಬಿಗ್ ಬಾಸ್ ಮನೆಯೊಳಗೆ ಯಾರೆಲ್ಲ ಹೋಗಬಹುದು ಎಂಬ ಚರ್ಚೆ ಸಾಮಾಜಿಕಾ ಜಾಲತಾಣದಲ್ಲಿ ಹೆಚ್ಚಾಗುತ್ತಿದೆ. ಈ ಸಲ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಸ್ಟಾರ್ ಗಳು ಹುಟ್ಟಿಕೊಂಡಿದ್ದು ಇವರೆಲ್ಲ ಬಿಗ್ ಮನೆಗೆ ಹೋದರೆ ಮನರಂಜನೆ ಗ್ಯಾರೆಂಟಿ ಎಂಬ ಅಭಿಪ್ರಾಯ ಬರುತ್ತಿದೆ.
ಬಿಗ್ ಬಾಸ್ ಮನೆಗೆ ತೆಲುಗು ಸೂಪರ್ ಸ್ಟಾರ್ ನಟನ ಪತ್ನಿ.!
ಈ ವರ್ಷ ಬೇಡದ ವಿಷ್ಯಗಳಿಗೆ, ಕಾಂಟ್ರವರ್ಸಿ ಮಾಡಿ ಸದ್ದು ಮಾಡಿದ ಕೆಲವು ಸೆಲೆಬ್ರಿಟಿಗಳ ಬಗ್ಗೆಯೂ ಜನರು ಒಲವು ವ್ಯಕ್ತಪಡಿಸಿದ್ದಾರೆ. 'ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಯಾರನ್ನ ನೋಡಲು ಬಯಸುತ್ತೀರಾ' ಎಂದು ಈ ಬಗ್ಗೆ ಫಿಲ್ಮಿಬೀಟ್ ಫೇಸ್ ಬುಕ್ ಪೇಜ್ ನಲ್ಲಿ ಪ್ರಶ್ನಿಸಲಾಗಿತ್ತು. ಅದಕ್ಕೆ ನೂರಾರು ಕಾಮೆಂಟ್ ಗಳು ಬಂದಿದೆ. ಅದರಲ್ಲಿ ಗಮನಿಸಿದಾಗ ಇವರ ಬಗ್ಗೆ ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ ಜನ. ಹಾಗಿದ್ರೆ, ಬಿಗ್ ಶೋನಲ್ಲಿ ಯಾರೆಲ್ಲ ಇರಬೇಕು? ಮುಂದೆ ಓದಿ.....

ನಿಖಿಲ್ ಕುಮಾರ್ ಇಲ್ಲೂ ಟ್ರೆಂಡಿಂಗ್
ಮಂಡ್ಯ ಲೋಕಸಭೆ ಅಖಾಡದಲ್ಲಿ ಸ್ಪರ್ಧಿಸಿದ್ದ ನಿಖಿಲ್ ಕುಮಾರ್ ಕಳೆದ ನಾಲ್ಕೈದು ತಿಂಗಳಿನಿಂದ ಭಾರಿ ಸುದ್ದಿಯಲ್ಲಿದ್ದಾರೆ. ಅದರಲ್ಲೂ ನಿಖಿಲ್ ಎಲ್ಲಿದ್ದೀಯಪ್ಪಾ ಟ್ರೆಂಡ್ ಆದ್ಮೇಲಂತೂ ವಿಶ್ವ ಖ್ಯಾತಿ ಗಳಿಸಿಕೊಂಡರು. ಈ ಸಲ ಬಿಗ್ ಬಾಸ್ ಮನೆಯಲ್ಲಿ ನಿಖಿಲ್ ಕುಮಾರ್ ಅವರನ್ನ ನೋಡುವ ಆಸೆ ವೀಕ್ಷಕರಿಗಿದೆ.

ಪತ್ರಕರ್ತೆ ರಾಧಾ ಹಿರೇಗೌಡರ್
ಕಳೆದ ಕೆಲವು ಆವೃತ್ತಿಗಳಿಂದ ಪತ್ರಕರ್ತೆ ರಾಧಾ ಹಿರೇಗೌಡರ್ ಅವರ ಹೆಸರು ಬಿಗ್ ಬಾಸ್ ಪಟ್ಟಿಯಲ್ಲಿ ಚರ್ಚೆಯಾಗುತ್ತಲೇ ಇದೆ. ಈ ಸಲವೂ ಈ ಹೆಸರು ಸದ್ದು ಮಾಡ್ತಿದೆ. ಜರ್ನಲಿಸ್ಟ್ ವಿಭಾಗದಲ್ಲಿ ಸುದ್ದಿ ನಿರೂಪಕಿ ರಾಧಾ ಹಿರೇಗೌಡರ್ ಅವರನ್ನ ಕರೆಸಿ ಎಂದು ಮನವಿ ಮಾಡುವ ವೀಕ್ಷಕರು ಇದ್ದಾರೆ.
ಬಿಗ್ ಬಾಸ್ ರಿಯಾಲಿಟಿ ಶೋ ನಡೆಸಿಕೊಡಲಿದ್ದಾರೆ ಅನುಷ್ಕಾ ಶೆಟ್ಟಿ?

ಕುರಿಪ್ರತಾಪ್
ಪ್ರತಿ ಬಾರಿಯೂ ಬಿಗ್ ಬಾಸ್ ಪಟ್ಟಿ ಚರ್ಚೆಯಾದಾಗ ನಟ ಕುರಿ ಪ್ರತಾಪ್ ಅವರ ಹೆಸರು ಇದ್ದೇ ಇರುತ್ತೆ. ಈ ಬಾರಿಯೂ ಅವರನ್ನ ನೋಡುವ ಆಸೆ ವೀಕ್ಷಕರದ್ದು. ಮಜಾ ಟಾಕೀಸ್ ಮೂಲಕ ಕೋಟ್ಯಾಂತರ ಕನ್ನಡಿಗರನ್ನ ನಕ್ಕು ನಗಿಸುತ್ತಿರುವ ಕುರಿ ಪ್ರತಾಪ್ ಬಿಗ್ ಬಾಸ್ ಶೋಗೆ ಬಂದ್ರೆ ಸಖತ್ ಎಂಟರ್ ಟೈನ್ಮೆಂಟ್ ಸಿಗಲಿದೆ ಎಂಬ ನಿರೀಕ್ಷೆ.
ಕೌಸಲ್ಯಾ ಜೊತೆ 'ಬಿಗ್ ಬಾಸ್ ಸೀಸನ್ 6' ವಿನ್ನರ್ ಶಶಿ ಕಲ್ಯಾಣ

ಕಾಮಿಡಿ ಕಿಂಗ್ ಚಿಕ್ಕಣ್ಣ
ಕುರಿ ಪ್ರತಾಪ್ ಮಾತ್ರವಲ್ಲ ಸದ್ಯ ಕನ್ನಡ ಚಿತ್ರರಂಗದಲ್ಲಿ ಭಾರಿ ಬೇಡಿಕೆ ಹೊಂದಿರವ ಚಿಕ್ಕಣ್ಣ ಅವರ ಹೆಸರು ಕೂಡ ಹೇಳುತ್ತಿದ್ದಾರೆ. ಆದರೆ ಸತತ ಸಿನಿಮಾಗಳಲ್ಲಿ ಬ್ಯುಸಿ ಇರುವ ಚಿಕ್ಕಣ್ಣ ಈ ಶೋಗೆ ಬರೋದು ಕಷ್ಟ. ಆದರೂ ವೀಕ್ಷಕರ ಆಸೆ ಮಾತ್ರ ಕಮ್ಮಿ ಆಗಿಲ್ಲ.

ಮಂಡ್ಯ ರಮೇಶ್
ಕನ್ನಡ ಚಿತ್ರರಂಗದ ಹಿರಿಯ ನಟ ಹಾಗೂ ಮಜಾ ಟಾಕೀಸ್ ನಲ್ಲಿ ಕಾಣಿಸಿಕೊಳ್ಳುತ್ತಿರುವ ಮಂಡ್ಯ ರಮೇಶ್ ಅವರನ್ನ ನೋಡುವ ಆಸೆಯೂ ವೀಕ್ಷಕರಿಗಿದೆ. ಕಳೆದ ಆವೃತ್ತಿಯಲ್ಲಿ ಇವರ ಹೆಸರು ಚರ್ಚೆಯಲ್ಲಿತ್ತು.
ನುಡಿದಂತೆ ನಡೆದ 'ಬಿಗ್ ಬಾಸ್' ವಿನ್ನರ್ ಶಶಿ ಕುಮಾರ್.!

ಸುಮನ್ ರಂಗನಾಥ್
ಸ್ಯಾಂಡಲ್ ವುಡ್ ನ ಎವರ್ ಗ್ರೀನ್ ಚೆಲುವೆ ಸುಮನ್ ರಂಗನಾಥ್ ಅವರು ಈ ಸಲನಾದರೂ ಬಿಗ್ ಬಾಸ್ ಗೆ ಹೋಗ್ತಾರಾ ಗೊತ್ತಿಲ್ಲ. ಆದರೆ ಅಭಿಮಾನಿಗಳು ಮಾತ್ರ ಇವನರನ್ನ ಬಿಗ್ ಬಾಸ್ ಮನೆಯಲ್ಲಿ ನೋಡುವ ಬಯಕೆ ವ್ಯಕ್ತಪಡಿಸುತ್ತಿದ್ದಾರೆ. ಇತ್ತೀಚಿಗಷ್ಟೆ ಮದುವೆಯಾದ ಸುಮನ್ ರಂಗನಾಥ್ ಇದಕ್ಕೆ ಒಪ್ಪುವುದು ಅನುಮಾನ.

ಪ್ರೇಕ್ಷಕನೊಬ್ಬನ ಪಟ್ಟಿ ಹೀಗಿದೆ ನೋಡಿ
1) ಚಿಕ್ಕಣ್ಣ 2)ಶಂಕರ್ ಅಶ್ವಥ್ 3)ಶ್ರುತಿ ಮಗಳು 4)ಮಂಡ್ಯ ರಮೇಶ್ 5)ಆರ್ಯವರ್ಧನ್ ಗುರೂಜಿ 6)ಸುಮನ್ ರಂಗನಾಥ್ 7) ರಾಧಾ ಹಿರೇಗೌಡರ್ 8)ವಿನಯ ಪ್ರಸಾದ್ 9)ನಾರಾಯಣ ಗೌಡ 10)ಸುನಿಲ್ ಜೋಶಿ 11)ರಂಗಾಯಣ ರಘು 12) ನಿಖಿಲ್ ಕುಮಾರಸ್ವಾಮಿ 13)ದರ್ಶನ್ ಪುಟ್ಟಣಯ್ಯ 14)ಕವಿತಾ ಲಂಕೇಶ್ 15)ಕಾಮನ್ ಮ್ಯಾನ್

ಸೋಶಿಯಲ್ ಮೀಡಿಯಾ ಸ್ಟಾರ್ಸ್
ಸಾಮಾಜಿಕ ಜಾಲತಾಣದಲ್ಲಿ ಟಿಕ್ ಟಾಕ್ ಮಾಡಿ ಫೇಮಸ್ ಆಗಿರುವವರನ್ನ ಕರೆಸಿ ಎಂದು ಕೇಳುವವರೂ ಇದ್ದಾರೆ. ಕಳೆದ ಬಾರಿ ಸುದ್ದಿಯಲ್ಲಿದ್ದ ತುಳಸಿ ಪ್ರಸಾದ್, ಈ ಸಲ ಟ್ರೆಂಡ್ ಆದ ಯಾಕಣ್ಣ ಮಹಿಳೆ, ಕನ್ನಡ ಹೋರಾಟಗಾರ ರೂಪೇಶ್ ರಾಜಣ್ಣ, ಸಾಮಾಜಿಕ ಹೋರಾಟಗಾರ ಚಕ್ರವರ್ತಿ ಸೂಲಿಬೆಲೆ ಅವರ ಹೆಸರು ಕೂಡ ಕೆಲವರು ಹೇಳಿದ್ದಾರೆ.

ವಿದ್ಯಾರ್ಥಿಗಳಿಗೆ ಅವಕಾಶ ಕೊಡಿ
ಈಗತಾನೆ ಡಿಗ್ರಿ ಮುಗಿಸಿರುವ 5 ಜನ ಯುವಕರಿಗೆ ಅವಕಾಶ ಕೊಡಿ. ಏಕೆಂದರೆ ಅವರಿಗೆ ಹಣ.. ಸಮಯ...ಜೀವನದ ಅರಿವಿಲ್ಲ.... ಹಾಗಯೇ ಇನ್ನು 5 ಜನ ರಾಜಕಾರಣಿಗಳು....ಏಕೆಂದರೆ ಅವರ ನಿಜ ಬಣ್ಣ ಬಯಲು ಮಾಡಲು...'' ಎಂದು ಬಿಗ್ ಬಾಸ್ ವೀಕ್ಷಕನೊಬ್ಬ ಕಾಮೆಂಟ್ ಮಾಡಿದ್ದಾನೆ. ಇದೆಲ್ಲ ಸದ್ಯಕ್ಕೆ ಬಿಗ್ ಬಾಸ್ ವೀಕ್ಷಕರ ಅಭಿಪ್ರಾಯ. ಕಾದು ನೋಡೋಣ. ಯಾರ ಹೆಸರು ಮುಂದಿನ ದಿನದಲ್ಲಿ ಸದ್ದು ಮಾಡುತ್ತೆ ಎಂದು.