For Quick Alerts
  ALLOW NOTIFICATIONS  
  For Daily Alerts

  'ಕನ್ನಡ ಬಿಗ್‌ಬಾಸ್‌ನಲ್ಲಿ ಮಹಿಳಾ ನಿರೂಪಕಿ': ಊಹಿಸಿಕೊಳ್ಳಲು ಸಾಧ್ಯವಿಲ್ಲ ಅಂತಿದ್ದಾರೆ ವೀಕ್ಷಕರು

  |

  ಬಿಗ್ ಬಾಸ್ ಹಿಂದಿ ಹೊರತು ಪಡಿಸಿ, ಕನ್ನಡ, ತೆಲುಗು ಹಾಗೂ ತಮಿಳಿನಲ್ಲಿ ಇದುವರೆಗೂ ಪೂರ್ಣ ಪ್ರಮಾಣದಲ್ಲಿ ಯಾವ ಮಹಿಳಾ ಸೆಲೆಬ್ರಿಟಿಯೂ ನಿರೂಪಣೆ ಮಾಡಿಲ್ಲ. ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಎರಡನೇ ಆವೃತ್ತಿ ಹೋಸ್ಟ್ ಮಾಡಿದ್ದರೆ, ನಿರ್ಮಾಪಕಿ ಫರಾ ಖಾನ್ ಏಂಟನೇ ಆವೃತ್ತಿ ಅರ್ಧ ಕಾರ್ಯಕ್ರಮ ನಿರೂಪಣೆ ಮಾಡಿದ್ದರು.

  ತೆಲುಗಿನಲ್ಲಿ ಮುಖ್ಯ ನಿರೂಪಕರ ಅಲಭ್ಯತೆ ಕಾರಣ ರಮ್ಯಾ ಕೃಷ್ಣ ಹಾಗೂ ಸಮಂತಾ ಅಕ್ಕಿನೇನಿ ಒಂದೆರಡು ಸಂಚಿಕೆ ಹೋಸ್ಟ್ ಮಾಡಿದ್ದಾರೆ. ಕನ್ನಡ ಬಿಗ್‌ಬಾಸ್‌ನಲ್ಲಿ ಇಂತಹ ಯಾವುದೇ ಅಪರೂಪದ ಕ್ಷಣ ಬಂದಿಲ್ಲ. ಒಂದು ವೇಳೆ ಸುದೀಪ್ ಅವರ ಅಲಭ್ಯರಾದ್ರೆ ಅಥವಾ ತುರ್ತು ನಿರೂಪಕಿಯಾಗಿ ಮಹಿಳಾ ಸೆಲೆಬ್ರಿಟಿ ಆಯ್ಕೆ ಸಾಧ್ಯನಾ ಎಂಬ ಪ್ರಶ್ನೆ ಸಹಜವಾಗಿ ಕಾಡಿದೆ.

  ಬಿಗ್‌ಬಾಸ್ ನಿರೂಪಣೆ ಮಾಡಲು ಸಮಂತಾ ಪಡೆಯುತ್ತಿದ್ದಾರೆ ಭಾರಿ ದೊಡ್ಡ ಮೊತ್ತ

  ಇಂತಹ ಆಯ್ಕೆ ಬಂದ್ರೆ ಯಾವ ಸೆಲೆಬ್ರಿಟಿ ಬಿಗ್ ಬಾಸ್ ನಿರೂಪಣೆ ಮಾಡಬಹುದು ಎಂದು ಫಿಲ್ಮಿಬೀಟ್ ಕನ್ನಡದಲ್ಲಿ ಪೋಲ್ ಕೇಳಲಾಗಿತ್ತು. ಆದ್ರೆ, ಶೇಕಡಾ 90ಕ್ಕೂ ಹೆಚ್ಚು ಜನರು ಸುದೀಪ್ ಇಲ್ಲ ಎನ್ನುವುದನ್ನೇ ಊಹಿಸಿಕೊಳ್ಳುವುದಕ್ಕೆ ಸಿದ್ಧವಿಲ್ಲ. ಮುಂದೆ ಓದಿ...

  ತೆಲುಗಿನಲ್ಲಿ ಬಂದ ಸನ್ನಿವೇಶ ಕನ್ನಡದಲ್ಲಿ ಬಂದಾಗ....

  ತೆಲುಗಿನಲ್ಲಿ ಬಂದ ಸನ್ನಿವೇಶ ಕನ್ನಡದಲ್ಲಿ ಬಂದಾಗ....

  ಫಿಲ್ಮೀಬೀಟ್ ಕನ್ನಡದಲ್ಲಿ ಕೇಳಲಾದ ಪೋಲ್‌ನ ಉದ್ದೇಶ ಸುದೀಪ್ ಅವರಿಗೆ ಬದಲಿ ನಿರೂಪಕ ಯಾರು ಎನ್ನುವುದಲ್ಲ. ಇತ್ತೀಚಿಗೆ ತೆಲುಗಿನಲ್ಲಿ ಆದಂತೆ (ಶೂಟಿಂಗ್ ನಿಮಿತ್ತ ನಾಗಾರ್ಜುನ ಒಂದು ವಾರ ಬಿಗ್ ಬಾಸ್ ನಿರೂಪಣೆ ಮಾಡಿಲ್ಲ. ಅವರ ಜಾಗದಲ್ಲಿ ಸಮಂತಾ ಅಕ್ಕಿನೇನಿ ಹೋಸ್ಟ್ ಮಾಡಿದ್ದರು) ಸನ್ನಿವೇಶ ಎದುರಾದ್ರೆ ಆ ಜಾಗದಲ್ಲಿ ಯಾವ ಮಹಿಳಾ ಸೆಲೆಬ್ರಿಟಿ ಬಂದರೆ ನೋಡುವುದಕ್ಕೆ ಖುಷಿ ಕೊಡುತ್ತದೆ ಎನ್ನುವುದು ಚರ್ಚೆಯಾಗಿತ್ತು.

  ಸುದೀಪ್ ಬಿಟ್ಟು ಬೇರೆ ಯಾರನ್ನು ಊಹಿಸಲು ಸಿದ್ಧರಿಲ್ಲ

  ಸುದೀಪ್ ಬಿಟ್ಟು ಬೇರೆ ಯಾರನ್ನು ಊಹಿಸಲು ಸಿದ್ಧರಿಲ್ಲ

  ಯಾವುದೇ ತುರ್ತು ಕಾರಣ ಅಥವಾ ಬೇರೆ ಯಾವುದೇ ಕಾರಣ ಇದ್ದರೂ ಸುದೀಪ್ ಅವರನ್ನು ಬಿಟ್ಟು ಬೇರೆ ಯಾವ ನಿರೂಪಕರನ್ನು ಊಹಿಸಿಕೊಳ್ಳಲು ವೀಕ್ಷಕರು ಸಿದ್ಧರಿಲ್ಲ. ಸುದೀಪ್ ಇಲ್ಲ ಅಂದ್ರೆ ಬಿಗ್ ಬಾಸ್ ಇಲ್ಲ ಎನ್ನುವಷ್ಟು ಅಭಿಮಾನಿ ಹೊಂದಿದ್ದಾರೆ.

  ಬಿಗ್ ಬಾಸ್ ಕನ್ನಡ 8ನೇ ಆವೃತ್ತಿ ಬಗ್ಗೆ ಅಪ್‌ಡೇಟ್ ಹೊರಬಿದ್ದಿದೆ!

  ಅಲ್ಲೊಂದು ಇಲ್ಲೊಂದು ಆಯ್ಕೆ

  ಅಲ್ಲೊಂದು ಇಲ್ಲೊಂದು ಆಯ್ಕೆ

  ತುರ್ತು ಸನ್ನಿವೇಶ ಸುದೀಪ್ ಅವರ ಅಲಭ್ಯತೆಯ ಕಾರಣ ಈ ನಟಿಯರು ನಿರೂಪಣೆ ಮಾಡಿದ್ರೆ ಚೆನ್ನಾಗಿರುತ್ತದೆ ಎಂದು ಕೆಲವರು ಆಯ್ಕೆಗಳನ್ನು ಸಹ ಹೇಳಿದ್ದಾರೆ. ನಟಿ ಪ್ರೇಮಾ, ರಾಧಿಕಾ ಪಂಡಿತ್, ತಾರಾ, ಶ್ರುತಿ, ಅಪರ್ಣ, ರಚಿತಾ ರಾಮ್ ಹೆಸರುಗಳು ಕಾಮೆಂಟ್‌ನಲ್ಲಿ ಬಂದಿವೆ.

  ಕನ್ನಡದಲ್ಲಿ ಬಿಗ್ ಬಾಸ್ ಯಾಕಿಲ್ಲ?

  ಕನ್ನಡದಲ್ಲಿ ಬಿಗ್ ಬಾಸ್ ಯಾಕಿಲ್ಲ?

  ಕೊರೊನಾ ಪರಿಣಾಮ ಕನ್ನಡದಲ್ಲಿ ಈ ವರ್ಷ ಬಿಗ್ ಬಾಸ್ ಪ್ರಸಾರವಾಗಿಲ್ಲ. ಆದ್ರೆ, ಹಿಂದಿ, ತೆಲುಗು, ತಮಿಳಿನಲ್ಲಿ ಬಿಗ್ ಬಾಸ್ ಆರಂಭವಾಗಿದೆ. ಕನ್ನಡದಲ್ಲಿ ಮಾತ್ರ ಏಕೆ ಮಾಡಿಲ್ಲ ಎಂಬ ಪ್ರಶ್ನೆಯನ್ನು ವೀಕ್ಷಕರು ಕೇಳುತ್ತಿದ್ದಾರೆ. ಸದ್ಯದ ಮಾಹಿತಿ ಪ್ರಕಾರ 2021ರ ಆರಂಭದಲ್ಲಿ ಬಿಗ್ ಬಾಸ್ ಆರಂಭವಾಗಬಹುದು.

  English summary
  Filmibeat Poll Result: Bigg boss Audience is not ready to replace any female anchor in place of sudeep.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X