»   » ತೂಗುಗತ್ತಿಯ ಮೇಲೆ ಚಂದ್ರಿಕಾ, ನಿಖಿತಾ, ಜಯ

ತೂಗುಗತ್ತಿಯ ಮೇಲೆ ಚಂದ್ರಿಕಾ, ನಿಖಿತಾ, ಜಯ

Posted By:
Subscribe to Filmibeat Kannada

ಶುಕ್ರವಾರ ಮತ್ತೆ ಬಂದಿದೆ.. ವಾರದ ಕಥೆ ಕಿಚ್ಚನ ಜೊತೆ ಎನ್ನುತ್ತಾ ಸುದೀಪ್ ಮತ್ತೊಮ್ಮೆ ಈಟಿವಿ ಕನ್ನಡ ವಾಹಿನಿಯ ಬಿಗ್ ಬಾಸ್ ರಿಯಾಲಿಟಿ ಶೋ ನಡೆಸಿಕೊಡಲಿದ್ದಾರೆ. ಈ ವಾರ ಮತ್ತೊಮ್ಮೆ ಮಹಿಳಾ ಸ್ಪರ್ಧಿಗಳೇ ಟಾರ್ಗೆಟ್ ಆಗಿದ್ದಾರೆ. ಎಲಿಮಿನೇಟ್ ತೂಗುಗತ್ತಿಯ ಮೇಲೆ ಚಂದ್ರಿಕಾ, ನಿಖಿತಾ ಹಾಗೂ ಜಯಲಕ್ಷ್ಮಿ ನಿಂತಿದ್ದಾರೆ.

ಚಂದ್ರಿಕಾ: ಇತರೆ ಸ್ಪರ್ಧಿಗಳು ಹಾಗೂ ಪ್ರೇಕ್ಷಕರ ಅವಕೃಪೆಗೆ ಅನೇಕ ಬಾರಿ ಒಳಗಾದರೂ ಮನೆಯಲ್ಲಿ ಉಳಿದುಕೊಂಡಿದ್ದಾರೆ. ಈ ಬಾರಿ ಅನುಶ್ರೀ ತನ್ನ ವಿಶೇಷ ಶಕ್ತಿ ಬಳಸಿ ಚಂದ್ರ್ರಿಕಾ ಅವರನ್ನು ನೇರವಾಗಿ ನಾಮಿನೇಟ್ ಮಾಡಿದ್ದರು. ಇದರಿಂದ ಚಂದ್ರಿಕಾ ಹಾಗೂ ಅನುಶ್ರೀ ಮಧ್ಯೆ ಕಂದಕ ಇನ್ನಷ್ಟು ಹೆಚ್ಚಾಗಿತ್ತು.

ನರ್ಸ್ ಜಯಲಕ್ಷ್ಮಿ: ಬಿಗ್ ಬಾಸ್ ಗೆ ಪುನಃ ಎಂಟ್ರಿ ಕೊಟ್ಟ ಮೇಲೆ ಸಪ್ಪೆ ಪ್ರದರ್ಶನ ನೀಡಿದ್ದ ಜಯಲಕ್ಷ್ಮಿ ವಾರದ ಕೊನೆ ವೇಳೆಗೆ ಅದರಲ್ಲೂ ರಿಷಿಕಾ ಸಿಂಗ್ ಜೊತೆ ಕಿತ್ತಾಡುವ ಮೂಲಕ ಗಮನ ಸೆಳೆದಿದ್ದಾರೆ. ಆದರೆ, ಇತರೆ ಸ್ಪರ್ಧಿಗಳಲ್ಲಿ ಆಕೆ ಬಗ್ಗೆ ಯಾವುದೇ ಸಹಾನುಭೂತಿ ಇಲ್ಲ. ನರೇಂದ್ರ ಶರ್ಮ ಜೊತೆಗಿನ ಗೆಳೆತನ ಕೂಡಾ ಹೆಚ್ಚಾಗಿರಲಿಲ್ಲ. ಈ ಬಾರಿ ಪ್ರೇಕ್ಷಕರ ಮುನಿಸಿಗೂ ಜಯಕ್ಕ ಒಳಗಾಗುತ್ತಾರಾ? ಮುಂದೆ ಓದಿ....

ಮತ್ತೆ ಮಹಿಳಾ ಸ್ಪರ್ಧಿ ಇನ್ ಡೇಂಜರ್

ನಿಖಿತಾ ತುಕ್ರಲ್ : ನರೇಂದ್ರ ಬಾಬು ಶರ್ಮ ಜೊತೆಗಿನ ಆಪ್ತತೆ, ಪ್ರತಿ ಹಂತದಲ್ಲೂ ನಿಖಿತಾ ತೋರುವ ಮುಗ್ಧತೆ, ಪ್ರತಿ ಸ್ಪರ್ಧಿಗಳ ಜೊತೆ ಜಗಳ, ಒಲಿಂಪಿಕ್ಸ್ ಆಟದಲ್ಲಿ ತೊರಿದ ಪ್ರದರ್ಶನ ಎಲ್ಲವೂ ಪ್ರೇಕ್ಷಕರಿಗೆ ತಕ್ಕಮಟ್ಟಿಗೆ ಇಷ್ಟವಾಗಿದೆ. ಹಾಗಾಗಿ ಮೂವರಲ್ಲಿ ಈ ಬಾರಿ ನಿಖಿತಾ ಸೇಫ್ ಆಗುವ ಸಾಧ್ಯತೆ ನೂರಕ್ಕೆ ನೂರರಷ್ಟಿದೆ.

ಮತ್ತೆ ಮಹಿಳಾ ಸ್ಪರ್ಧಿ ಇನ್ ಡೇಂಜರ್

ಜಯಲಕ್ಷ್ಮಿ ಪಾಲಿಗೆ ರಿಷಿಕಾ ಮಗ್ಗಲ ಮುಳ್ಳಾಗಿದ್ದು, ಆಟಗಳಲ್ಲಿ ಜಯ ತೋರಿದ ಉತ್ಸಾಹ ಜಗಳದಲ್ಲೂ ಮುಂದುವರೆದಿದೆ. ರಿಷಿಕಾ ಗೆ ಏಕ ವಚನದ ಉತ್ತರ ಶಟ್ ಯುವರ್ ಮೌತ್ ಎಂದಿದ್ದು ಬಿಗ್ ಬಾಸ್ ಗಷ್ಟೇ ಅಲ್ಲ ಜನತೆಗೂ ಗಟ್ಟಿಯಾಗಿ ಕೇಳಿಸಿದೆ. ಇದೇ ಕಾರಣಕ್ಕೆ ಮನೆಯಿಂದ ಹೊರಕ್ಕೆ ಹೋಗುವ ಸಾಧ್ಯತೆಯೂ ಹೆಚ್ಚಿದೆ.

ಮತ್ತೆ ಮಹಿಳಾ ಸ್ಪರ್ಧಿ ಇನ್ ಡೇಂಜರ್

ರಿಷಿಕಾ ಹಾಗೂ ಜಯಕ್ಕ ಕದನ ಇನ್ನಷ್ಟು ಮುಂದುವರೆಯಲಿ ಎಂದು ಪ್ರೇಕ್ಷಕರು ಇಷ್ಟಪಡುವ ಸಾಧ್ಯತೆಯೂ ಹೆಚ್ಚಿದೆ. ಈ ಹಿಂದೆ ಕೂಡಾ ಅರುಣ್ ಸಾಗರ್ ಗುರೂಜಿ, ಅನುಶ್ರೀ ಗುರೂಜಿ ಗಲಾಟೆ, ಚಂದ್ರಿಕಾ ಗುರೂಜಿ ಕದನದಲ್ಲೂ ಇದೇ ರಿಪೀಟ್ ಆಗಿತ್ತು. ಸೋ ಜಯಕ್ಕ ಉಳಿದರೂ ಅಚ್ಚರಿಯೇನಿಲ್ಲ

ಮತ್ತೆ ಮಹಿಳಾ ಸ್ಪರ್ಧಿ ಇನ್ ಡೇಂಜರ್

ಈಗಾಗಲೇ ಬಿಗ್ ಬಾಸ್ ಮನೆಯಿಂದ ಮನಸ್ಸನ್ನು ಹೊರಗೆ ಇಟ್ಟಿರುವ ಚಂದ್ರಿಕಾ ಅವರಿಗೆ ಜೊತೆಗಾರ ಇಲ್ಲದ ಕೊರತೆ ಕಾಡುತ್ತಿದೆ. ತಿಲಕ್ ಔಟ್ ಆದ ನಂತರ ಒಂಟಿಯಾಗಿರುವ ಚಂದ್ರಿಕಾ ಇನ್ನಷ್ಟು ಹಠ ತೋರುತ್ತಿದ್ದಾರೆ. ಆಟ ಪಾಠದಲ್ಲಿ ಮನಸ್ಸಿಲ್ಲದೆ ಸ್ಪರ್ಧಿಸುತ್ತಿದ್ದಾರೆ.

ನಿಖಿತಾ ಜೊತೆ ಫೈಟ್ ವೈಯಕ್ತಿಕವಾಗಿ ತೆಗೆದುಕೊಂಡು ಗೆದ್ದಿದ್ದಾರೆ. ಅದರೆ, ಪ್ರೇಕ್ಷಕರ ಮನಸ್ಸಿನಿಂದ ನಿಧಾನವಾಗಿ ಸೋಲು ಕಾಣುತ್ತಿದ್ದಾರೆ. ಮನೆಯಲ್ಲಿ ಸ್ಪರ್ಧೆ ಮಾಡದಿರುವ ಅಭ್ಯರ್ಥಿ ಏಕೆ ಎಂದು ಹೊರ ದೂಡಲು ವೀಕ್ಷಕರು ರೆಡಿಯಾಗಿದ್ದಾರೆ, ಚಂದ್ರಿಕಾ ಔಟ್ ಬಹುತೇಕ ಖಚಿತವಾಗಿದೆ.

ಮತ್ತೆ ಮಹಿಳಾ ಸ್ಪರ್ಧಿ ಇನ್ ಡೇಂಜರ್

ಗುರೂಜಿ ಮತ್ತೊಮ್ಮೆ ನಿಯಮ ಮುರಿದಿದ್ದಾರೆ. ಚಡ್ಡಿ ಹಾಕಿಕೊಂಡು ಕುಸ್ತಿ ಮಾಡಲಾರೆ ಎಂದು ಕೈ ಕಟ್ಟಿ ಕೂತಿದ್ದಾರೆ. ರೋಹನ್ ನನಗೆ ಬುದ್ಧಿ ಹೇಳಿದ ಎಂದು ನೊಂದಿದ್ದ ಗುರೂಜಿ ಮತ್ತೊಮ್ಮೆ ಚಿಕನ್ ಬೇಯಿಸುವುದನ್ನು ಕಂಡು ಕಣ್ಣೀರಿಟ್ಟಿದ್ದಾರೆ.

ಮನೆಯಿಂದ ಹೊರಗೆ ಕಳಿಸೋ ಎಂದು ಬಿಗ್ ಬಾಸ್ ಮನೆ ಕೆಮೆರಾಗಳ ಮುಂದೆ ಗೋಳಾಡಿದ್ದಾರೆ. ಆದರೆ, ಮನೆಯಿಂದ ಹೊರಗೆ ಕಳಿಸಲು ಪ್ರೇಕ್ಷಕ ಇನ್ನೂ ತಯಾರಿಲ್ಲ. ಹಾಗಾಗಿ ನರೇಂದ್ರ ಗುರೂಜಿ ಸೇಫ್

ಮತ್ತೆ ಮಹಿಳಾ ಸ್ಪರ್ಧಿ ಇನ್ ಡೇಂಜರ್

ಮುಂದೆ ಪ್ರಮುಖ ಸ್ಪರ್ಧಿ ವಿಜಯ ರಾಘವೇಂದ್ರ ಜೊತೆ ಕೂಡಾ ರಿಷಿಕಾ ಕಿತ್ತಾಡಿದ್ದು ನೋಡಬಹುದು. ರಿಷಿಕಾ ಜಗಳವಾಡುವುದಕ್ಕೆ ಎಂಟ್ರಿ ಕೊಟ್ರ್ತಾ ಎಂಬ ಅನುಮಾನ ಕಾಡಿದರೂ ತಾಂತ್ರಿಕವಾಗಿ ಆಕೆ ಹೇಳುವುದೆಲ್ಲ ಸರಿಯಾಗೇ ಇದೆ. ಹೀಗಾಗಿ ರಿಷಿಕಾ ಇನ್ನಷ್ಟು ಕಾಲ ಮನೆಯಲ್ಲಿ ಎಲ್ಲರಿಗೂ ಚುರುಕು ಮುಟ್ಟಿಸುವುದು ಖಂಡಿತ.

English summary
Friday is the day of new announcement and elimination in Bigg Boss. As Sudeep comes for the special episode Varadakathe Kicchana Jothe (A week's story with Kiccha), people curiously wait to see who will be eliminated from the house.
Please Wait while comments are loading...