»   » ಸುದೀಪ್ ಬಗ್ಗೆ 'ಬಿಗ್ ಬಾಸ್' ಹೇಳಿದ ಯಶಸ್ಸಿನ ಸತ್ಯಕಥೆ.!

ಸುದೀಪ್ ಬಗ್ಗೆ 'ಬಿಗ್ ಬಾಸ್' ಹೇಳಿದ ಯಶಸ್ಸಿನ ಸತ್ಯಕಥೆ.!

Posted By:
Subscribe to Filmibeat Kannada
Bigg Boss Director Parameshwar Gundkal speaks about Host Kiccha Sudeep | Filmibeat Kannada

ಹಿಂದಿ ಬಿಗ್ ಬಾಸ್ ಗೆ ಸಲ್ಮಾನ್ ಖಾನ್ ಹೇಗೋ, ಹಾಗೆ ಕನ್ನಡ ಬಿಗ್ ಬಾಸ್ ಗೆ ಕಿಚ್ಚ ಸುದೀಪ್. ಸುದೀಪ್ ಬದಲು ಈ ಜಾಗದಲ್ಲಿ ಬೇರೆ ನಟರನ್ನ ಊಹಿಸಿಕೊಳ್ಳುವುದು ಕೂಡ ಕಷ್ಟ. ಅಷ್ಟರಮಟ್ಟಿಗೆ ಸುದೀಪ್ ಕಾರ್ಯಕ್ರಮವನ್ನ ನಡೆಸಿಕೊಡುತ್ತಿದ್ದಾರೆ.

ಸತತ ನಾಲ್ಕು ಆವೃತ್ತಿ ಮುಗಿಸಿ 5ನೇ ಆವೃತ್ತಿಗೆ ಕಿಚ್ಚ ಸಿದ್ದವಾಗಿದ್ದಾರೆ. ತೆರೆಮೇಲೆ ನಾವು ನೋಡುವ ನಿರೂಪಕ ಸುದೀಪ್ ಅವರ ಇನ್ನೊಂದು ವ್ಯಕ್ತಿತ್ವವನ್ನ 'ಬಿಗ್ ಬಾಸ್' ಅಯೋಜಕ ಪರಮೇಶ್ವರ್ ಗುಂಡ್ಕಲ್ ಅವರು ಬಿಚ್ಚಿಟ್ಟಿದ್ದಾರೆ. 'ಬಿಗ್ ಬಾಸ್' ಯಶಸ್ಸಿನಲ್ಲಿ ಸುದೀಪ್ ಅವರ ಪಾತ್ರದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

ಹಾಗಿದ್ರೆ, ಸುದೀಪ್ ಬಗ್ಗೆ 'ಬಿಗ್ ಬಾಸ್' ಏನಂದ್ರು ಎಂದು ತಿಳಿಯಲು ಮುಂದೆ ಓದಿ.....

ಹೊಸ ಲುಕ್ ನಲ್ಲಿ ಸುದೀಪ್.!

''ಪ್ರತಿಯೊಂದು ಆವೃತ್ತಿಯಲ್ಲಿ ಸುದೀಪ್ ಅವರು ತುಂಬ ವಿಭಿನ್ನವಾಗಿ, ಸ್ಟೈಲಿಶ್ ಆಗಿ ಕಾಣಿಸಿಕೊಳ್ಳುತ್ತಾರೆ. ಈ ಸಲವೂ ಸುದೀಪ್ ಹೊಸ ಲುಕ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ'' ಎಂದು ಕಿಚ್ಚನ ಡೆಡಿಕೇಷನ್ ಬಗ್ಗೆ ಬಿಗ್ ಬಾಸ್ ನಿರ್ದೇಶಕರು ಖುಷಿಯಾಗಿದ್ದಾರೆ.

'ಬಿಗ್' ಮನೆಗೆ ಎಂಟ್ರಿ ಪಡೆಯುವ 'Common Men' ಸಂಖ್ಯೆ ಬಿಚ್ಚಿಟ್ಟ ಬಿಗ್ ಬಾಸ್ ಡೈರೆಕ್ಟರ್

ಈ ಬಾರಿಯ ಲುಕ್ 'ದಿ ಬೆಸ್ಟ್'.!

''ಕಳೆದ ನಾಲ್ಕು ಸೀಸನ್ ನಲ್ಲೂ ಸುದೀಪ್ ಒಂದೊಂದು ಹೇರ್ ಸ್ಟೈಲ್ ಮಾಡಿದ್ರು. ಆದ್ರೆ, ಈ ಸಲದ ಹೇರ್ ಸ್ಟೈಲ್ ನನಗೆ ವೈಯಕ್ತಿಕವಾಗಿ 'ದಿ ಬೆಸ್ಟ್' ಎನಿಸುತ್ತಿದೆ. ಈ ಒಂದು ವರ್ಷದಲ್ಲಿ ಸುದೀಪ್ ಅವರಿಗೆ 5 ವರ್ಷ ವಯಸ್ಸು ಕಡಿಮೆ ಆಗಿದೆ ಎನಿಸುತ್ತಿದೆ'' - ಪರಮೇಶ್ವರ್ ಗುಂಡ್ಕಲ್, ಬಿಗ್ ಬಾಸ್ ನಿರ್ದೇಶಕ

'ಬಿಗ್ ಬಾಸ್ ಕನ್ನಡ 5'ಗೆ ಪ್ರಥಮ್ ಪ್ರಕಾರ ಇವರು ಹೋಗ್ಬೇಕಂತೆ.!

ಅವರ ವ್ಯಕ್ತಿತ್ವಕ್ಕೆ ಫುಲ್ ಮಾರ್ಕ್ಸ್

''15 ಹೊಸ ಸ್ಪರ್ಧಿಗಳ ಜೊತೆಯಲ್ಲಿ ಪ್ರತಿ ಬಾರಿಯೂ ಕೆಲಸ ಮಾಡಬೇಕು. ಅದನ್ನ ಸುದೀಪ್ ಅವರ ಅತ್ಯುತ್ತಮವಾಗಿ ನಿಭಾಯಿಸುತ್ತಾರೆ. ಅವರಲ್ಲಿರುವ ಪ್ರಮಾಣಿಕತೆ, ಅವರು ಅರ್ಥ ಮಾಡಿಕೊಳ್ಳುವ ರೀತಿ, ವಿಶೇಷವಾದ ಜ್ಞಾನ, ಕೌಶಲ್ಯವನ್ನ ಶೋಗೆ ತರ್ತಾರೆ'' - ಪರಮೇಶ್ವರ್ ಗುಂಡ್ಕಲ್, ಬಿಗ್ ಬಾಸ್ ನಿರ್ದೇಶಕ

'ಬಿಗ್ ಬಾಸ್' ಶೋ ಕಲರ್ಸ್ ಸೂಪರ್ ಗೆ ಶಿಫ್ಟ್ ಆಗಲು 2 ಬಲವಾದ ಕಾರಣ

ಹಲವು ಅಂಶಗಳುಳ್ಳ ಒಂದೇ ವ್ಯಕ್ತಿ

''ನಾಲ್ಕು ವರ್ಷಗಳಲ್ಲಿ ಸುದೀಪ್ ಅವರಿಗೊಂದು ಯಶಸ್ಸಿನ ಜರ್ನಿ ಇದೆ. ಕನ್ನಡದ ನಟನಾಗಿ, ತೆಲುಗು, ತಮಿಳು, ಹಿಂದಿ ಈಗ ಹಾಲಿವುಡ್ ನಲ್ಲಿ ಅಭಿನಯಿಸ್ತಿದ್ದಾರೆ. ಕ್ರಿಕೆಟ್ ಆಡ್ತಾರೆ, ಹಾಡ್ತಾರೆ, ಸ್ವತಃ ಒಬ್ಬ ಡೈರೆಕ್ಟರ್, ಅವರದ್ದೇ ಆದ ವ್ಯಕ್ತಿತ್ವ ಇದೆ. 6.2 ಎತ್ತರ ಇದ್ದಾರೆ, ಇದರ ಜೊತೆ ಅದ್ಭುತವಾದ ಧ್ವನಿ ಇದೆ. ಇಷ್ಟೆಲ್ಲಾ ಒಬ್ಬರಲ್ಲೇ ಇರುವ ಒಬ್ಬ ನಿರೂಪಕನ ಜೊತೆ ಬಿಗ್ ಬಾಸ್ ನೋಡುವುದು ನಮ್ಮ ಸೌಭಾಗ್ಯ'' - ಪರಮೇಶ್ವರ್ ಗುಂಡ್ಕಲ್, ಬಿಗ್ ಬಾಸ್ ನಿರ್ದೇಶಕ

14 ಶನಿವಾರ ಸುದೀಪ್ ಬರ್ತಾರೆ

''ಸುದೀಪ್ ಅವರ ಈ ಬಿಜಿ ಶೆಡ್ಯೂಲ್ ನಲ್ಲಿ 14 ಶನಿವಾರ ನಮಗೆ ಗುತ್ತಿಗೆಗೆ ಕೊಟ್ಟಿದ್ದಾರೆ. ಪ್ರತಿ ಶನಿವಾರ 'ಬಿಗ್ ಬಾಸ್' ರೆಕಾರ್ಡಿಂಗ್ ಗೆ ಬರ್ತಾರೆ. ಶನಿವಾರ ರೆಕಾರ್ಡಿಂಗ್ ಅಂದ್ರೆ, ಶುಕ್ರವಾರ ರಾತ್ರಿ ನಿದ್ದೆಗೆಡಬೇಕು. ಯಾಕಂದ್ರೆ, ವಾರದಲ್ಲಿ ಏನಾಯ್ತು ಅಂತ ವಿಡಿಯೋ ನೋಡ್ಬೇಕು. ನಮ್ಮಷ್ಟೇ ಕುತೂಹಲ, ಕಾತುರ ಅವರಿಗೂ ಇದೆ. ಅವರು ಇಷ್ಟ ಪಟ್ಟು ಮಾಡುವ ಕೆಲಸದಲ್ಲಿ ಬಿಗ್ ಬಾಸ್ ಕೂಡ ಒಂದು. ಅಂತಹ ನಿರೂಪಕರ ಜೊತೆ ಕೆಲಸ ಮಾಡುವುದು ಹೊಸ ಉತ್ಸಾಹ ನೀಡುತ್ತೆ'' - ಪರಮೇಶ್ವರ್ ಗುಂಡ್ಕಲ್, ಬಿಗ್ ಬಾಸ್ ನಿರ್ದೇಶಕ

'ಬಿಗ್ ಬಾಸ್'ನಲ್ಲಿ ಈ ಬಾರಿ ಜನಸಾಮಾನ್ಯರಿಗೆ ಹೆಚ್ಚಿನ ಪ್ರಾಮುಖ್ಯತೆ.?

English summary
Colors Kannada Channel Business Head, Bigg Boss Director Parameshwar Gundkal speaks about Host Kiccha Sudeep and his new look.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada