»   » ಬಿಗ್ ಬಾಸ್ ಮನೆಯಲ್ಲಿ ಶುರುವಾಯಿತು, ಪ್ರೀತಿ-ಪ್ರೇಮ!

ಬಿಗ್ ಬಾಸ್ ಮನೆಯಲ್ಲಿ ಶುರುವಾಯಿತು, ಪ್ರೀತಿ-ಪ್ರೇಮ!

Posted By:
Subscribe to Filmibeat Kannada

ಬಿಗ್ ಬಾಸ್ ಮನೆಯಲ್ಲಿ 'ಆಳು-ಅರಸ' ಎಂಬ ದೊಡ್ಡ ಮಳೆ ಸುರಿದು ನಿಂತು ಹೋದ ಮೇಲೆ, ಮನೆಯಲ್ಲಿ ಹೊಸ ಹೊಸ ಕಥೆಗಳು ಹುಟ್ಟಿಕೊಳ್ಳಲು ಆರಂಭವಾಗಿದೆ. ಹೊಸ ಸಂಬಂಧ, ಹೊಸ ಪ್ರೀತಿ ಎಲ್ಲವೂ ಹೊಸದಾಗಿ ಹುಟ್ಟಿಕೊಂಡಿದೆ.

ತಮ್ಮ ಫಸ್ಟ್ ಲವ್, ಲವ್ ಸ್ಟೋರಿ ಪ್ರಪೊಸಲ್, ಚಾಟಿಂಗ್ ಮುಂತಾದವುಗಳನ್ನು ಒಬ್ಬೊಬ್ಬರಾಗಿ ಬಿಚ್ಚಿಡಲು ಆರಂಭಿಸಿದ್ದಾರೆ. ಅದರಲ್ಲಿ ವಿಶೇಷವಾಗಿ ಅಯ್ಯಪ್ಪ, ಆರ್ ಜೆ ನೇತ್ರಾ ಮತ್ತು ಕೃತಿಕಾ ಅವರು ತಮ್ಮ ಪರ್ಸನಲ್ ವಿಷಯಗಳನ್ನು ತೆರೆದಿಟ್ಟಿದ್ದಾರೆ.

Bigg Boss Kannada 3 19th Day Higlights: contestants reveals their love

ಸೀಕ್ರೆಟ್ ಟಾಸ್ಕ್ ಎಂಬ ಹೊಸ ಟಾಸ್ಕ್ ಶುರುವಾದ ಸಂದರ್ಭದಲ್ಲಿ ಕ್ಯಾಪ್ಟನ್ ಆನಂದ್ ಅವರು ನಟಿ ಕೃತಿಕಾ ಅವರಿಗೆ ನೀವು ಒಬ್ಬರೆ ಕುಳಿತು 45 ನಿಮಿಷ ನಿಮಗೇನನ್ನಿಸುತ್ತೆ ಅದನ್ನು ಮಾತಾಡಬೇಕು, ಎಂದರು. ಈ ಸಂದರ್ಭದಲ್ಲಿ ಕೃತಿಕಾ ಅವರು ತನಗೆ ಯಾರು ಇಲ್ಲದ ಸಂದರ್ಭದಲ್ಲಿ ಬೆನ್ನುಲುಬಾಗಿ ನಿಂತ ಶಿವಾನಿ ಎಂಬವರನ್ನು ನೆನೆದು, ನಿಮ್ಮನ್ನು ನೋಡಬೇಕಿನಿಸುತ್ತಿದೆ, ಐ ಮಿಸ್ ಯು ಸೋ ಮಚ್ ಎಂದು ಹೇಳಿ ಕಣ್ಣೀರಿಟ್ಟರು.

ಆರ್ ಜೆ ನೇತ್ರಾ ಅವರು ತಮ್ಮ ಫಸ್ಟ್ ಲವ್ ಹಾಗೂ ಅದು ಮುಂದುವರೆದ ಬಗ್ಗೆ ಹಂಚಿಕೊಂಡರು. ಕಾಲೇಜು ದಿನಗಳಲ್ಲಿಯೇ ಪ್ರೀತಿಯಲ್ಲಿ ಬಿದ್ದ ನೇತ್ರಾ, ಅವರು ತಮ್ಮ ಲವರ್ ಜೊತೆ ಸುತ್ತಾಡದ ಜಾಗವೇ ಇಲ್ಲವಂತೆ.[ಈ ಬಾರಿ ಬಿಗ್ ಮನೆಯ ಕ್ಯಾಪ್ಟನ್ ಯಾರು ಗೊತ್ತಾ?]

ಆದರೆ ಈ ವಿಷಯ ಮನೆಯವರಿಗೆ ತಿಳಿದಿರಲಿಲ್ಲವಂತೆ. ಮನೆಯವರು ತೋರಿಸಿದ ಹುಡುಗನನ್ನು ಏನಾದರೂ ಕಾರಣ ಕೊಟ್ಟು ಬೇಡ ಎನ್ನುತ್ತಿದ್ದರಂತೆ. ಕೊನೆಗೆ ಧೈರ್ಯ ಮಾಡಿ ಮನೆಯಲ್ಲಿ ಹೇಳಿ ಎಲ್ಲರನ್ನು ಒಪ್ಪಿಸಿ ಮದುವೆಯಾಗುವಲ್ಲಿ ಯಶಸ್ವಿಯಾದರಂತೆ. ಈಗಂತೂ ಎಲ್ಲವೂ ಸುಖವಾಗಿದೆ ಎಂದರು.

ಇನ್ನು ಸಖತ್ ಬೌಲರ್ ಅಯ್ಯಪ್ಪ ಅವರ ಕಥೆ ಕೇಳಿದ್ರೆ ನೀವು ಹುಬ್ಬೇರಿಸೋದು ಗ್ಯಾರಂಟಿ. ಗಾರ್ಡನ್ ಏರಿಯಾದಲ್ಲಿ ರಾತ್ರಿ 12 ಘಂಟೆಗೆ ಚಂದನ್ ಜೊತೆ ತಮ್ಮ ಚಾಟಿಂಗ್ ಸ್ಟೋರಿಯನ್ನು ಬಿಚ್ಚಿಟ್ಟಿದ್ದರು.

Bigg Boss Kannada 3 19th Day Higlights: contestants reveals their love

ಅಂದಹಾಗೆ ಈಗ ಮನೆಯಲ್ಲಿ ಇರುವ ಒಬ್ಬ ಕಂಟೆಸ್ಟೆಂಟ್ ಜೊತೆ ಅಯ್ಯಪ್ಪ ಅವರು ಸಕತ್ ಚಾಟಿಂಗ್ ಮಾಡುತ್ತಿದ್ದರಂತೆ. ಮೊದಲ ಬಾರಿಗೆ ಏರ್‌ ಪೋರ್ಟ್ ನಲ್ಲಿ ಭೇಟಿಯಾದ ಅವರಿಬ್ಬರು ಮತ್ತೆ ಫೇಸ್ ಬುಕ್ಕಿನಲ್ಲಿ ಪರಿಚಯ ಮಾಡಿಕೊಂಡರಂತೆ, ನಂತರ ಹಗಲು-ರಾತ್ರಿ ಚಾಟಿಂಗ್ ಮಾಡುತ್ತಿದ್ದರಂತೆ.[19ನೇ ದಿನ ಬಿಗ್ ಬಾಸ್ ಮನೆಯಲ್ಲಿ ಏನೇಲ್ಲಾ ನಡೀತು ಗೊತ್ತಾ?]

ಕೊನೆಕೊನೆಗೆ ಅದು ಕಡಿಮೆಯಾಗಿತ್ತಂತೆ. ಆದರೆ ಇಲ್ಲಿ ಬಂದ ಮೇಲೆ ಇಬ್ಬರಿಗೂ ಶಾಕ್ ಆಯ್ತಂತೆ. ನಾನೇನು ಅವಳ ಜೊತೆ ಫ್ಲರ್ಟ್ ಮಾಡೋಕೆ ಹೊಗಲಿಲ್ಲ, ಆದ್ರೆ ಅವಳೇ ಬಂದಳು. ಆವಾಗ ನನ್ನ ಮೈಂಡ್ ಸೆಟ್ ಬೇರೆ ಇತ್ತು. ಮೊನ್ನೆ ಇಲ್ಲಿ ಬಂದಾಗ ಯು ಆರ್ ಎ ನೈಸ್ ಗೈ ಎಂದಳು. ಇವಳ ಸರ್ಟಿಫಿಕೆಟ್ ಕಟ್ಕೊಂಡು ನಾನೇನ್ ಮಾಡ್ಲಿ, ನನ್ನ ಬಗ್ಗೆ ನನಗೆ ಚೆನ್ನಾಗಿ ಗೊತ್ತು ಅಂತ ಹೇಳಿ ಇಬ್ಬರು ಜೋರಾಗಿ ನಕ್ಕುಬಿಟ್ಟರು. ಅಂದಹಾಗೆ ಅಯ್ಯಪ್ಪ ಇಷ್ಟು ಹೊತ್ತು ಚಂದನ್ ಜೊತೆ ಯಾರ ಬಗ್ಗೆ ಹೇಳಿದ್ದು ಅನ್ಕೊಂಡ್ರಿ, ಗೊತ್ತಾಗಿಲ್ವಾ?, ನಮಗೂ ಗೊತ್ತಿಲ್ಲ ಬಿಡಿ.

ಒಟ್ನಲ್ಲಿ ತೆರೆಮರೆಯಲ್ಲಿ ಅದೇನೇನೋ ನಡೀತಾ ಇದೆ ಅನ್ನೋದು ಮಾತ್ರ ಸತ್ಯ. ಆದರೆ ಏನು ಎತ್ತ ಅನ್ನೋದು ಮಾತ್ರ ಗೊತ್ತಿಲ್ಲ. ಕಾದು ನೋಡೋಣ. ನೀವೇನಂತೀರಾ?.

English summary
Bigg Boss Kannada 3: 19th Day Higlights and Controversies. Contestants reveals their love stories.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada